Homeಮುಖಪುಟಬಿಹಾರ: ಉದ್ಯೋಗ ನೀಡುವ ನೆಪದಲ್ಲಿ ತಿಂಗಳುಗಟ್ಟಲೆ ಮಹಿಳೆಯರ ಬಂಧನ; ಚಿತ್ರಹಿಂಸೆ ನೀಡಿ ಅತ್ಯಾಚಾರ

ಬಿಹಾರ: ಉದ್ಯೋಗ ನೀಡುವ ನೆಪದಲ್ಲಿ ತಿಂಗಳುಗಟ್ಟಲೆ ಮಹಿಳೆಯರ ಬಂಧನ; ಚಿತ್ರಹಿಂಸೆ ನೀಡಿ ಅತ್ಯಾಚಾರ

- Advertisement -
- Advertisement -

ಬಿಹಾರದ ಮುಜಾಫರ್‌ಪುರದಲ್ಲಿ ಹಲವಾರು ಮಹಿಳೆಯರನ್ನು ಟೆಲಿಮಾರ್ಕೆಟಿಂಗ್ ಮತ್ತು ನೆಟ್‌ವರ್ಕಿಂಗ್ ಕಂಪನಿಯೊಂದರಿಂದ ನೇಮಕ ಮಾಡಿದ ನಂತರ ತಿಂಗಳುಗಳ ಕಾಲ ಸೆರೆಯಲ್ಲಿಟ್ಟು, ಚಿತ್ರಹಿಂಸೆ ಮತ್ತು ಅತ್ಯಾಚಾರವೆಸಗಲಾಗಿದೆ ಎಂದು ಆರೋಪಿಸಲಾಗಿದೆ, ಈ ಪ್ರಕರಣವು 2018 ರಲ್ಲಿ ವರದಿಯಾದ ಮುಜಫರ್‌ಪುರ್ ಬಾಲಿಕಾ ಗೃಹ ಶೆಲ್ಟರ್ ಹೋಮ್ ದೌರ್ಜನ್ಯವನ್ನು ಹೋಲುತ್ತದೆ.

ಇತ್ತೀಚಿನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಲ್ಲಿ ಒಬ್ಬನನ್ನು ಮಂಗಳವಾರ ಬಂಧಿಸಲಾಗಿದೆ. ಅಪರಾಧವು ರಹಸ್ಯವಾಗಿ ಮುಂದುವರಿದಿದ್ದು, ಈ ವರ್ಷದ ಆರಂಭದಲ್ಲಿ ಸ್ಥಳೀಯ ನ್ಯಾಯಾಲಯವನ್ನು ಸಂಪರ್ಕಿಸಲು ಧೈರ್ಯಮಾಡಿದ ಸಂತ್ರಸ್ತೆಯೊಬ್ಬಳು ಜೂನ್ 2 ರಂದು ಅಹಿಯಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಸಂತ್ರಸ್ತೆಯು ಈ ಪ್ರಕರಣದಲ್ಲಿ ಕ್ರಮಕ್ಕಾಗಿ ಕಾಯುತ್ತಿರುವಾಗ, ಬಾಲಕಿಯರ ಚಿತ್ರಹಿಂಸೆ ಮತ್ತು ದೌರ್ಜನ್ಯವನ್ನು ತೋರಿಸುವ ವೀಡಿಯೊ ಕ್ಲಿಪ್ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆಗೆ ಸಾರ್ವಜನಿಕರಿಂದ ವ್ಯಾಪಕ ಖಂಡನೆಗೆ ಕಾರಣವಾಯಿತು. ನಂತರ ಪೊಲೀಸರು ತಿಲಕ್ ಕುಮಾರ್ ಸಿಂಗ್ ಅವರನ್ನು ಉತ್ತರ ಪ್ರದೇಶದ ಗೋರಖ್‌ಪುರದಿಂದ ಬಂಧಿಸಿದ್ದರು.

“ನಾವು ಗೋರಖ್‌ಪುರದಿಂದ ತಿಲಕ್ ಕುಮಾರ್ ಸಿಂಗ್ ಎಂಬಾತನನ್ನು ಬಂಧಿಸಿದ್ದೇವೆ. ಪ್ರಕರಣದ ಒಂಬತ್ತು ಆರೋಪಿಗಳಲ್ಲಿ ಒಬ್ಬನಾಗಿದ್ದು, ಮುಜಾಫರ್‌ಪುರಕ್ಕೆ ಕರೆತರಲಾಗುತ್ತಿದೆ. ಇತರ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ” ಎಂದು ಮುಜಫರ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ತಿಳಿಸಿದ್ದಾರೆ.

ಇತರ ಆರೋಪಿಗಳಲ್ಲಿ ಮನೀಶ್ ಪ್ರತಾಪ್ ಸಿಂಗ್, ಇನಾಮುಲ್ ಅನ್ಸಾರಿ, ಅಹ್ಮದ್ ರಜಾ, ವಿಜಯ್ ಗಿರಿ, ಕನ್ಹಯ್ಯಾ ಕುಶ್ವಾಹ, ಹೃದಯಾನಂದ್ ಸಿಂಗ್, ಹರೇರಾಮ್ ಕುಮಾರ್ ಮತ್ತು ಇರ್ಫಾನ್ ಸೇರಿದ್ದಾರೆ. ಮನೀಶ್ ನೋಯ್ಡಾ ಮೂಲದವರಾಗಿದ್ದರೆ, ಇತರರು ಬಿಹಾರದ ವಿವಿಧ ಭಾಗಗಳಿಂದ ಬಂದವರು.

ಬದುಕುಳಿದವರು ಟೆಲಿಮಾರ್ಕೆಟಿಂಗ್ ಮತ್ತು ನೆಟ್‌ವರ್ಕಿಂಗ್ ಕಂಪನಿ ಡಿಬಿಆರ್‌ ಯುನಿಕ್ ಅನ್ನು ಜೂನ್ 2022 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾತನ್ನು ವೀಕ್ಷಿಸಿದ ನಂತರ ಮಹಿಳೆಯರು ಸೇರಿಕೊಂಡರು ಎಂದು ಆರೋಪಿಸಿದ್ದಾರೆ. ಹರೇರಾಮ್ ಕುಮಾರ್ ಆಕೆಯನ್ನು ಸಂಪರ್ಕಿಸಿ ತಿಂಗಳಿಗೆ ₹15,000 ವೇತನ ನೀಡುವುದಾಗಿ ಭರವಸೆ ನೀಡಿದ್ದರು. ಆಕೆಯು ಪ್ರಸ್ತಾಪವನ್ನು ಒಪ್ಪಿಕೊಂಡ ನಂತರ, ತರಬೇತಿಗಾಗಿ ₹20,500 ಠೇವಣಿ ಮಾಡಲು ಕೇಳಿದ್ದಾರೆ; ನಂತರ, ಆಕೆ ತನ್ನ ಚಿಕ್ಕಮ್ಮನಿಂದ ಸಾಲವನ್ನು ಪಡೆದು ಹಣ ನೀಡಿದ್ದಾರೆ.

“ನಾನು ಮುಜಾಫರ್‌ಪುರದ ಕಂಪನಿಗೆ ಸೇರಿಕೊಂಡೆ; ಇನ್ನೂ ಹಲವಾರು ಹುಡುಗಿಯರಿದ್ದರು. ನಮ್ಮನ್ನು ಒಂದು ಕೋಣೆಯಲ್ಲಿ ಇರಿಸಲಾಯಿತು. ಫೋನ್ ಮೂಲಕ ಗ್ರಾಹಕರನ್ನು ಹೇಗೆ ಮನವರಿಕೆ ಮಾಡುವುದು, ಹೆಚ್ಚಿನ ಜನರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಉದ್ಯೋಗಗಳಿಗಾಗಿ ಕಂಪನಿಯತ್ತ ಅವರನ್ನು ಆಕರ್ಷಿಸುವುದು ಹೇಗೆ ಎಂಬುದರ ಕುರಿತು ತರಗತಿಗಳನ್ನು ನಡೆಸಲಾಯಿತು. 15 ದಿನಗಳ ತರಬೇತಿಯ ನಂತರ ನಮ್ಮ ಕೆಲಸ ಪ್ರಾರಂಭವಾಯಿತು” ಎಂದು ಸಂತ್ರಸ್ತೆಯೊಬ್ಬರು ತಿಳಿಸಿದರು.

“ನಮ್ಮನ್ನು ಮುಜಾಫರ್‌ಪುರ, ಹಾಜಿಪುರ (ವೈಶಾಲಿ ಜಿಲ್ಲೆ) ಮತ್ತು ಇತರ ಸ್ಥಳಗಳಲ್ಲಿ ಕೊಠಡಿಗಳಲ್ಲಿ ಇರಿಸಲಾಯಿತು ಮತ್ತು ಹೆಚ್ಚಿನ ಹುಡುಗಿಯರನ್ನು ಕೆಲಸಕ್ಕೆ ನೇಂಇಸುವಂತೆ ಒತ್ತಾಯಿಸಲಾಯಿತು. ಕೆಲಸ ಮಾಡಲು ನಿರಾಕರಿಸಿದ ಮತ್ತು ಬಿಡಲು ಬಯಸಿದವರಿಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ಎಸಗಲಾಯಿತು. ನಮ್ಮನ್ನೆಲ್ಲ ಬಂಧಿಯಾಗಿಟ್ಟರು; ಹುಡುಗಿಯರಿಗೆ ಒಮ್ಮೆ ಮನೆಗೆ ಕರೆ ಮಾಡಲು ಅವಕಾಶ ನೀಡಲಾಯಿತು. ಆದರೆ, ಕಂಪನಿಯ ಜನರ ಸಮ್ಮುಖದಲ್ಲಿ ಮಾತ್ರ” ಎಂದು ಅವರು ಹೇಳಿದರು.

21 ಹುಡುಗಿಯರನ್ನು ಕಂಪನಿಗೆ ಸಂಪರ್ಕಿಸಿದ ನಂತರ ಆಕೆ ಇನ್ನು ಮುಂದೆ ಕೆಲಸ ಮಾಡಲು ನಿರಾಕರಿಸಿದಳು ಎಂದು ಸಂತ್ರಸತೆಯಿಬ್ಬರು ಹೇಳಿದದ್ದಾರೆ. ಆಕೆಗೆ ಚಿತ್ರಹಿಂಸೆ ನೀಡಲಾಯಿತು, ಅತ್ಯಾಚಾರ ಮಾಡಲಾಯಿತು ಮತ್ತು ಗರ್ಭಪಾತಕ್ಕೆ ಒಳಗಾಗಬೇಕಾಯಿತು ಎಂದು ಅವರು ಹೇಳಿದರು. ಬದುಕುಳಿದವರ ಪ್ರಕಾರ, ಹಲವಾರು ಇತರ ಹುಡುಗಿಯರು ಅದೇ ಸ್ಥಿತಿ ಅನುಭವಿಸಿದರು. ಕಂಪನಿಯಲ್ಲಿ ಸುಮಾರು 200 ಹುಡುಗಿಯರು ಕೆಲಸ ಮಾಡುತ್ತಿದ್ದರು. ಆರೋಪಿಗಳು ತನ್ನನ್ನು ಮತ್ತು ಇತರ ಹುಡುಗಿಯರನ್ನು ವಶಪಡಿಸಿಕೊಳ್ಳಲು ಮದುವೆಯಾಗುವುದಾಗಿ ಭರವಸೆ ನೀಡಿದರು ಎಂದು ಅವರು ಹೇಳಿದರು.

ಎಸ್‌ಎಸ್‌ಪಿ ರಾಕೇಶ್ ಕುಮಾರ್, ಈ ವಿಷಯವು ಬಿಂಬಿಸಲಾಗುತ್ತಿರುವ ರೀತಿಯದ್ದಲ್ಲ ಎಂದು ಈ ಪತ್ರಿಕೆಗೆ ತಿಳಿಸಿದ್ದಾರೆ. ಏಕೆಂದರೆ, ಇದುವರೆಗೆ ಯಾವುದೇ ಹುಡುಗಿಯರು ಇದೇ ರೀತಿಯ ಆರೋಪಕ್ಕೆ ಮುಂದಾಗಿಲ್ಲ ಎಂದು ಹೇಳಿದ್ದಾರೆ.

“ಈ ಹಂತದಲ್ಲಿ ನಾವು ಏನನ್ನೂ ನಿರಾಕರಿಸುವುದಿಲ್ಲ ಮತ್ತು ಪ್ರಸಾರವಾದ ವೀಡಿಯೊವನ್ನು ನಾವು ಸತ್ಯವೆಂದು ಒಪ್ಪಿಕೊಳ್ಳುತ್ತೇವೆ. ಆದರೆ, ಈ ಪ್ರಕರಣವು ವಂಚನೆ, ದೈಹಿಕ ಸಂಬಂಧ ಮತ್ತು ಗರ್ಭಪಾತಕ್ಕೆ ಪ್ರವೇಶಿಸಲು ಮದುವೆಯ ಭರವಸೆಯನ್ನು ತೋರುತ್ತದೆ. ಸಂತ್ರಸ್ತ ಮಹಿಳೆಗೆ ಗರ್ಭಪಾತದ ವಿವರಗಳನ್ನು ಮತ್ತು ಆಕೆ ಚಿಕಿತ್ಸೆ ಪಡೆದುಕೊಂಡ ಕ್ಲಿನಿಕ್ ವಿವರ ಒದಗಿಸುವಂತೆ ನಾವು ಕೇಳಿದ್ದೇವೆ. ಆದರೆ, ಸ್ಥಳೀಯ ಔಷಧಿಗಳ ಸಹಾಯದಿಂದ ಇದನ್ನು ಮಾಡಲಾಗಿದೆ ಎಂದು ಅವರು ಹೇಳಿದರು” ಎಸ್ಎಸ್‌ಪಿ ಹೇಳಿದರು.

50 ಕ್ಕೂ ಹೆಚ್ಚು ಪುರುಷರು ಮತ್ತು ಯಾವುದೇ ಮಹಿಳೆಯರು ಕೆಲಸ ಮಾಡದ ಮುಜಾಫರ್‌ಪುರದ ಕಂಪನಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಎಸ್‌ಎಸ್‌ಪಿ ಹೇಳಿದರು. “ಅವರು ಕೆಲವೊಮ್ಮೆ ಥಳಿಸಿದರು. ಆದರೆ, ಹುಡುಗಿಯರ ಅತ್ಯಾಚಾರವನ್ನು ನಿರಾಕರಿಸಿದರು” ಎಂದು ಅವರು ಹೇಳಿದರು.

ಕಂಪನಿಯ ದಾಖಲೆಗಳು ಕಳಪೆಯಾಗಿವೆ ಮತ್ತು ಅದರ ವಿರುದ್ಧ ವಿವಿಧ ಜಿಲ್ಲೆಗಳಲ್ಲಿ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮುಜಾಫರ್‌ಪುರ ಪೊಲೀಸರು ಸೇರಿಸಿದ್ದಾರೆ. “ಒಂದು ಪ್ರಕರಣ – ಎಫ್‌ಐಆರ್ ಸಂಖ್ಯೆ 607/23 – ಕಳೆದ ವರ್ಷ ಅದೇ ಅಹಿಯಾಪುರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ವಂಚನೆ ಮತ್ತು ಸುಲಿಗೆ ಆರೋಪವನ್ನು ದಾಖಲಿಸಿದ್ದಾರೆ. ಈ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ” ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.

ಇದನ್ನೂ ಓದಿ; ಕುವೈತ್‌ಗೆ ತೆರಳಲು ಕೇರಳ ಸಚಿವರಿಗೆ ಅನುಮತಿ ನಿರಾಕರಣೆ; ಪ್ರಧಾನಿಗೆ ಪತ್ರ ಬರೆದ ಪಿಣರಾಯಿ ವಿಜಯನ್ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...