ಇಂದು ಬಿಹಾರದಲ್ಲಿ ಮೂರನೇ ಮತ್ತು ಕೊನೆಯ ಹಂತದ ವಿಧಾನಸಭಾ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಪಕ್ಷಗಳಿಗೆ ಸ್ಪಷ್ಟ ಬಹುಮತ ಲಭಿಸಲಿವೆ ಎಂದು ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಗಳು ತಿಳಿಸಿವೆ. ಆರ್‌ಜೆಡಿ ಮತ್ತು ಎಡ ಪಕ್ಷಗಳು ಒಟ್ಟು 124 ಸ್ಥಾನಗಳಲ್ಲಿ ಗೆಲ್ಲಲಿದ್ದು, ಎನ್‌ಡಿಎ ಮತ್ತು ನಿತೀಶ್‌ಕುಮಾರ್ ಅವರ ಪಕ್ಷ 110 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಬಹತೇಕ ಎಲ್ಲಾ ಸಮೀಕ್ಷೆಗಳೂ ಹೇಳಿವೆ.
ಟೈಮ್ ನೌ-ಸಿ ಸಮೀಕ್ಷೆ ಪ್ರಕಾರ, ಎನ್‌ಡಿಎಗೆ 116 ಮತ್ತು ಪ್ರತಿಪಕ್ಷದ ಮಹಾಘಟಬಂಧನ್‌ಗೆ 120 ಸ್ಥಾನಗಳಲ್ಲಿ ಗೆಲುವಿನ ಭರವಸೆ ನೀಡಿದ್ದು, ತೇಜಸ್ವಿ ಯಾದವ್ ಮೈತ್ರಿಪಕ್ಷಕ್ಕೆ ಸ್ವಲ್ಪ ಮುನ್ನಡೆ ನೀಡಿದೆ. ಚಿರಾಗ್ ಪಾಸ್ವಾನ್‌ರ ಲೋಕ ತಾಂತ್ರಿಕ್ ಜನಶಕ್ತಿ ಪಕ್ಷಕ್ಕೆ (ಎಲ್‌ಜೆಪಿ) ಒಂದು ಸ್ಥಾನದಲ್ಲಿ ಗೆಲುವು ಸಿಗಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ದೇಶದ ರಾಜಕೀಯಕ್ಕೆ ತಿರುವು ನೀಡುವುದೇ ಬಿಹಾರ ಚುನಾವಣೆ?
ರಿಪಬ್ಲಿಕ್ ಟಿವಿ-ಜಾನ್ ಕಿ ಬಾತ್ ಸಮೀಕ್ಷೆ, ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ 118 ರಿಂದ 138 ಸ್ಥಾನಗಳನ್ನು ಮತ್ತು ಆಡಳಿತಾರೂಢ ಎನ್‌ಡಿಎಗೆ 91-117 ಸ್ಥಾನಗಳನ್ನು ನೀಡಿದೆ. ಚಿರಾಗ್ ಪಾಸ್ವಾನ್ ಅವರ ಪಕ್ಷ 5-8 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಈರುಳ್ಳಿ ಎಸೆದು ಆಕ್ರೋಶ!
ನವೆಂಬರ್ 10 ರಂದು ಬಿಹಾರದ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಲಾಗುವುದು. 243 ಸ್ಥಾನಗಳ ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ ಯಾವುದೇ ಪಕ್ಷ ಅಥವಾ ಒಕ್ಕೂಟಕ್ಕೆ 122 ಸ್ಥಾನಗಳಲ್ಲಿ ಗೆಲ್ಲುವ ಅಗತ್ಯವಿದೆ.
ರಾಜ್ಯದಲ್ಲಿರುವ ಎಲ್ಲಾ ಪಕ್ಷಗಳು ಚುನಾವಣಾ ಪೂರ್ವದಲ್ಲಿ ಸಾಕಷ್ಟು ಪ್ರಚಾರ ನಡೆಸಿವೆ. ಬಿಜೆಪಿ ಮತ್ತು ನಿತೀಶ್ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡುವ ಮತ್ತು 19 ಲಕ್ಷ ಉದ್ಯೋಗಗನ್ನು ನೀಡುವ ಭರವಸೆ ನೀಡಿದೆ. ಆದರೂ ನಿತೀಶ್ ಕುಮಾರ್ ಅವರ ಮೇಲೆ ರಾಜ್ಯದ ಜನತೆ ಮುನಿಸಿಕೊಂಡಿರುವಂತೆ ಕಾಣುತ್ತಿದೆ. ಚಿರಾಗ್ ಪಾಸ್ವಾನ್ ಕೂಡ ನಿತೀಶ್ ಮೇಲಿನ ಮುನಿಸಿನಿಂದ ಮೈತ್ರಿಯಿಂದ ಹೊರಬಂದು ಅವರ ವಿರುದ್ಧ ಪ್ರಚಾರ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ: #BiharRejectsModi ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್!
ಇನ್ನು ತೇಜಸ್ವಿ ಯಾದವ್ ನೇತೃತ್ವದ ಕಾಂಗ್ರೆಸ್ ಮತ್ತು ಇತರ ಎಡ ಪಕ್ಷಗಳು ಒಟ್ಟಾಗಿದ್ದು, ಇವರ ಪರವಾದ ಒಲವು ರಾಜ್ಯದಲ್ಲಿ ಎದ್ದು ಕಾಣುತ್ತಿದೆ. ಇದಕ್ಕೆ ಸಾಕ್ಷಿ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಗಳು ಮತ್ತು ಚುನಾವಣಾ ಪೂರ್ವದಲ್ಲಿ ಅವರು ನಡೆಸಿದ ರ್ಯಾಲಿಗಳು. ಹಾಗಾಗಿ ಬಿಹಾರದ ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂದು ಕಾದುನೋಡಬೇಕಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಚಿರಾಗ್ ಪಾಸ್ವಾನ್ ಪರ ನಿಂತ ತೇಜಸ್ವಿ ಯಾದವ್ – ನಿತೀಶ್ ಕುಮಾರ್‌ಗೆ ತಲೆನೋವು!



ಮಹಾಘಟಬಂದನ್ ಬಂದನದಲ್ಲಿಯೇ ಉಳಿಯುತ್ತೇ ಬಿಹಾರದ ಲ್ಲಿ ಬಿಕಾರಿಯಾಗಿ