Homeಮುಖಪುಟಬಿಲ್ಕಿಸ್ ಪ್ರಕರಣ - ಹದ್ದುಬಸ್ತುಗಳಿಲ್ಲವೇ ಅಮಾನವೀಯತೆಗೆ? : ಡಿ.ಉಮಾಪತಿ

ಬಿಲ್ಕಿಸ್ ಪ್ರಕರಣ – ಹದ್ದುಬಸ್ತುಗಳಿಲ್ಲವೇ ಅಮಾನವೀಯತೆಗೆ? : ಡಿ.ಉಮಾಪತಿ

- Advertisement -
- Advertisement -

ಗರ್ಭಿಣಿಯಾದ ಆಕೆಯ ಮೇಲೆ ಬಿಟ್ಟೂಬಿಡದೆ 22 ಬಾರಿ ಅತ್ಯಾಚಾರ ನಡೆಯುತ್ತದೆ. ಮೂರು ವರ್ಷದ ಮಗಳ ತಲೆಯನ್ನು ನೆಲಕ್ಕೆ ಅಪ್ಪಳಿಸಿ ಕೊಲ್ಲಲಾಗುತ್ತದೆ. ಆಕೆಯ ತಾಯಿಯೂ ಸೇರಿದಂತೆ ಕುಟುಂಬದ ಇತರೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಚ್ಚಿ ಹಾಕಲಾಗುತ್ತದೆ.ಕಣ್ಣೆದುರಿಗೇ ಕುಟುಂಬದ 14 ಹೆಣಗಳು ಉರುಳುತ್ತವೆ. ಈ ಅಪರಾಧವನ್ನು ಹೀನಾತಿಹೀನ ಎಂದು ಒಪ್ಪಿಕೊಳ್ಳಲು ತಯಾರಿಲ್ಲ ಗುಜರಾತ್ ಸರ್ಕಾರ.

ಕೋಮುವಾದಿ ಹಿಂಸೆಯ ದಳ್ಳುರಿಯ ನಡುವೆ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಬಡ ಹೆಣ್ಣುಮಗಳೊಬ್ಬಳಿಗೆ 50 ಲಕ್ಷರೂಪಾಯಿ ಪರಿಹಾರ ನೀಡುವಂತೆ ಸುಪ್ರೀಮ್‍ ಕೋರ್ಟ್‍ತೀರ್ಪು ನೀಡಿ ನಾಲ್ಕು ತಿಂಗಳುಗಳೇ ಉರುಳಿವೆ. ಈ ಮುನ್ನತನಗೆ ನ್ಯಾಯ ಬೇಡಿ 17 ವರ್ಷಗಳ ಕಾಲ ಕೋರ್ಟುಗಳ ಕಂಬ ಸುತ್ತಿದ್ದಳು ಆಕೆ.

ಬಿಲ್ಕಿಸ್‍ ಗುಜರಾತ್ ಸರ್ಕಾರದ ವಿರುದ್ಧ ಸಲ್ಲಿಸಿದ್ದ ನ್ಯಾಯಾಲಯ ನಿಂದನೆ ಮೊಕದ್ದಮೆ ಕಳೆದ ವಾರ ಸುಪ್ರೀಮ್‍ಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು. ಪರಿಹಾರದ ಆದೇಶದ ವಿರುದ್ಧ ಮರುವಿಮರ್ಶೆಅರ್ಜಿ ಸಲ್ಲಿಸುವ ಇರಾದೆ ತನಗಿರುವ ಕಾರಣ ಪರಿಹಾರವನ್ನು ನೀಡಿಲ್ಲ ಎಂದು ಗುಜರಾತ್ ಸರ್ಕಾರ ಹೇಳಿಕೊಂಡಿತು. ಒಂದು ಪ್ರಕರಣದಲ್ಲಿ 50 ಲಕ್ಷ ನೀಡಿದರೆ ಇತರೆ ಪ್ರಕರಣಗಳ ಪಾಲಿಗೆ ಅದು ಪೂರ್ವನಿದರ್ಶನ ಆಗುತ್ತದೆಂಬುದು ಗುಜರಾತ್ ಸರ್ಕಾರದ ಬಾಧೆ.

2002ರ ಫೆಬ್ರವರಿ 27ರ ಮುಂಜಾನೆ ಗುಜರಾತಿನ ಗೋಧ್ರಾ ಬಳಿ ಸಾಬರಮತಿ ಎಕ್ಸ್ ಪ್ರೆಸ್‍ನ ಕರಸೇವಕರಿದ್ದ ಬೋಗಿಗೆ ಬೆಂಕಿ ಬಿದ್ದು 59 ಮಂದಿ ಆಹುತಿಯಾಗಿದ್ದರು. ಆಗ ಹೊತ್ತಿಕೊಂಡ ಕೋಮು ಗಲಭೆಗಳ ದಳ್ಳುರಿ ಗುಜರಾತಿನ ಉದ್ದಗಲಕ್ಕೆ ಅಲ್ಪಸಂಖ್ಯಾತರ ಮಾರಣ ಹೋಮಕ್ಕೆ ಕಾರಣವಾಯಿತು.

ಅಹ್ಮದಾಬಾದ್ ನಿಂದ 200 ಕಿ.ಮೀ. ದೂರದ ದಾಹೋದ್ ನ ಒಂದು ಹಳ್ಳಿ ರಾಧಿಕಾಪುರ ಬಿಲ್ಕಿಸ್ ಬಾನುವಿನ ಹುಟ್ಟೂರು. ನೆರೆ ಹೊರೆಯವರು ಮುಸಲ್ಮಾನರಎಲ್ಲ 60 ಮನೆಗಳಿಗೆ ಬೆಂಕಿ ಇಟ್ಟಿದ್ದರು. ಬಿಲ್ಕಿಸ್ ಮತ್ತು ಆಕೆಯ ಕುಟುಂಬ ಬೆದರಿ ಹೊಲಗಳತ್ತ ಪರಾರಿಯಾಗಿತ್ತು. ಒಂದೆಡೆಯಿಂದ ಇನ್ನೊಂದೆಡೆಗೆ ಪರಾರಿಯಾಗುತ್ತಲೇ ತಲೆಮರೆಸಿಕೊಂಡಿದ್ದಾಗ ಆಕೆಯ ರಕ್ತಸಂಬಂಧಿ ಶಮೀಮ್ ಹೆಣ್ಣುಮಗುವನ್ನು ಪ್ರಸವಿಸಿದ್ದಳು.

ಸುತ್ತಮುತ್ತಲ ಅಡವಿಯ ಗಿಡಮರಗಳ ನೆರಳುಗಳಲ್ಲಿ ಅಡಗಿಕೊಳ್ಳುತ್ತಿದ್ದ ಅವರು ಹೇಗಾದರೂ ಮಾಡಿ ಮುಸ್ಲಿಂ ಬಾಹುಳ್ಯದ ವಸತಿಯನ್ನು ತಲುಪಬೇಕಿತ್ತು. ಹೆದ್ದಾರಿಗಳನ್ನು ಹಿಡಿಯುವಂತಿರಲಿಲ್ಲ. ಒಳನಾಡಿನ ಕಚ್ಚಾದಾರಿಗಳಲ್ಲೇ ಸಾಗಬೇಕಿತ್ತು. ಭೀತಿಯ ಪಯಣದಲ್ಲಿಕರುಣೆ ಸಹಾನುಭೂತಿಯುಳ್ಳ ಜನ ಅವರನ್ನು ಕಾಪಾಡಿದ್ದುಂಟು.

ಪನ್ನಿವೇಲ್ ಎಂಬ ಹಳ್ಳಿ ಸೇರಿದ್ದರೆ ಈ ಕುಟುಂಬದ ಪ್ರಾಣಗಳು ಉಳಿಯುತ್ತಿದ್ದವು. ಆದರೆ ಹಾಗಾಗಲಿಲ್ಲ. ಈ ಕುಟುಂಬ ಪಯಣಿಸುತ್ತಿದ್ದ ಟ್ರಕ್‍ನ್ನು ಎರಡು ಟ್ರಕ್‍ಗಳು ಅಡ್ಡ ಹಾಕಿದ್ದವು. 20- 30 ಮಂದಿಯ ಕೈಗಳಲ್ಲಿ ಹಿರಿದಿದ್ದಕತ್ತಿ ಕುಡುಗೋಲುಗಳು. ಬಿಲ್ಕಿಸ್‍ ಅಪ್ಪನಿಗೆ ಚಿಕಿತ್ಸೆ ನೀಡಿದ್ದ, ಅದೇ ಬೀದಿಯ ಎದುರಿಗಿದ್ದ ವೈದ್ಯನ ಮಗ, ಬಳೆ ಅಂಗಡಿ ನಡೆಸುತ್ತಿದ್ದ ವ್ಯಕ್ತಿ, ಹೊಟೇಲು ಇಟ್ಟು ಕೊಂಡಿದ್ದಾತ, ಗ್ರಾಮಪಂಚಾಯಿತಿ ಸದಸ್ಯೆಯಗಂಡ… ಇವರೆಲ್ಲ ಬಿಲ್ಕಿಸ್ ಗೆ ಚಿರ ಪರಿಚಿತರೇ. ಬಾಲ್ಯದಿಂದತನ್ನನ್ನು ಬಲ್ಲವರೇಆದರೂತನ್ನನ್ನು ಎಷ್ಟು ಕ್ರೌರ್ಯದಿಂದ ಉಲ್ಲಂಘಿಸಿದರಲ್ಲ ಎಂಬುದು ಆಕೆಯನ್ನು ಬಹುಕಾಲ ಅಲ್ಲಾಡಿಸಿದ ಕಟು ವಾಸ್ತವ.

ಬಗಲಲ್ಲಿ ಮೂರು ವರ್ಷದ ಮಗಳು ಸಾಲೇಹ. ಅವಳನ್ನು ಕಸಿದುಕೊಂಡು ತಲೆಯನ್ನು ನೆಲಕ್ಕೆ ಅಪ್ಪಳಿಸಿ ಅರೆನಿಮಿಷದಲ್ಲೇಕೊಂದು ಹಾಕಿದನೊಬ್ಬ. ತನ್ನದೇ ಹಳ್ಳಿಯ ಮೂವರು ಪುರುಷರು ಆಕೆಯನ್ನು ಎಳೆದುಕೊಂಡು ಬಟ್ಟೆಗಳನ್ನು ಹರಿದೆಸೆದರು. ಗರ್ಭಿಣಿಯೆಂದು ಆಕೆ ಅಲವತ್ತು ಕೊಂಡಳು. ನೀವೆಲ್ಲ ನನ್ನ ಅಣ್ಣಂದಿರು, ಚಿಕ್ಕಪ್ಪಂದಿರಿದ್ದಂತೆ ಎಂದರೂ ಬಿಡದೆ ಅತ್ಯಾಚಾರ ನಡೆಸಿದರು.

ಹತ್ಯೆಅತ್ಯಾಚಾರದ ಅಮಾನುಷತೆಯ ವಿಕೃತ ವಿಜೃಂಭಣೆಗೆ 14 ಮಂದಿ ಬಲಿಯಾದರು. ಹಿಂದಿನ ದಿನವಷ್ಟೇ ಹೆಣ್ಣುಮಗುವನ್ನು ಹಡೆದಿದ್ದ ಶಮೀಮ್‍ಳನ್ನು ಅವಳ ಹಸುಳೆಯ ಸಹಿತ ಹತ್ಯೆ ಮಾಡಲಾಗಿತ್ತು.ಮೂರ್ಛೆ ಹೋಗಿದ್ದ ಬಿಲ್ಕಿಸ್ ಸತ್ತೇ ಹೋಗಿದ್ದಾಳೆಂದು ಭಾವಿಸಿದ ದಾಳಿಕೋರರು ಮಾರಣಹೋಮದತಾಣವನ್ನುತೊರೆದಿದ್ದರು.

ಎಚ್ಚ ಬಂದಾಗ ಪೂರ್ಣ ಬೆತ್ತಲಾಗಿದ್ದದ್ದು ತಿಳಿಯಿತು. ಸುತ್ತಮುತ್ತಕೊಚ್ಚಿ ಹಾಕಲಾಗಿದ್ದತನ್ನದೇಕುಟುಂಬದ ರಕ್ತಸಿಕ್ತ ಕಳೇಬರಗಳು. ಪೆಟ್ಟಿಕೋಟಿನಿಂದ ಮೈ ಮುಚ್ಚಿಕೊಂಡು ಪಕ್ಕದಲ್ಲಿದ್ದ ಗುಡ್ಡ ಹತ್ತಿ ಅಲ್ಲಿಯೇದುಃಖ ಭೀತಿಯಲ್ಲಿ ಮುಳುಗಿ ಇರುಳು ಕಳೆದಳು. ಮರುದಿನ ನೀರಿಗಾಗಿ ಅರಸುತ್ತಿದ್ದವಳನ್ನು ಕೊಳವೆ ಬಾವಿಯೊಂದರ ಬಳಿ ಕಂಡ ಆದಿವಾಸಿ ಹೆಣ್ಣುಮಗಳು ಬಟ್ಟೆಗಳನ್ನಿತ್ತಳು. ಪೊಲೀಸ್‍ ಅಧಿಕಾರಿಯೊಬ್ಬನನ್ನು ಸಂಪರ್ಕಿಸಿದಳು. ಆತ ಆಕೆಯನ್ನು ತನ್ನ ವಾಹನದಲ್ಲಿ ಲಿಮ್ಖೇಡ ಪೊಲೀಸ್‍ಠಾಣೆಗೆ ಕರೆದೊಯ್ದ.

ಎಂಟು ಸಾಮೂಹಿಕ ಅತ್ಯಾಚಾರಗಳು ಮತ್ತು 14 ಹತ್ಯೆಗಳನ್ನು ನೋಡಿದ ನಂತರವೂ ಪ್ರಾಣಸಹಿತ ಉಳಿದಿದ್ದ ಏಕೈಕ ಸಾಕ್ಷಿ ಬಿಲ್ಕಿಸ್ ಬಾನು.ಆದರೆ ಪೊಲೀಸರುದೂರು ದಾಖಲಿಸಿಕೊಳ್ಳುವುದಿಲ್ಲ. ಒತ್ತಾಯಿಸಿದರೆ ವಿಷದ ಸೂಜಿಮದ್ದು ನೀಡಿಕೊಲ್ಲುವ ಬೆದರಿಕೆ ಹಾಕಲಾಗುತ್ತದೆ. ಪರಿಹಾರ ಶಿಬಿರವೊಂದಕ್ಕೆ ಆಕೆಯನ್ನು ಸಾಗ ಹಾಕಲಾಗುತ್ತದೆ. ಅಲ್ಲಿತನ್ನ ಪತಿಯಾಕೂಬ್‍ರಸೂಲನನ್ನು ಸೇರಿಕೊಳ್ಳುತ್ತಾಳೆ.

ಬಿಲ್ಕಿಸ್‍ ಕುಟುಂಬದ ಹತ್ಯೆ ನಡೆದಎರಡು ದಿನಗಳ ನಂತರಎಂಟು ಶವಗಳನ್ನು ಕಂಡವರು ಕೆಲ ಸ್ಥಳೀಯ ಛಾಯಾ ಚಿತ್ರಕಾರರು. ಪೊಲೀಸರು ಕಾರ್ಯಪ್ರವೃತ್ತರಾಗುತ್ತಾರೆ. ಅತ್ಯಾಚಾರಜರುಗಿದ ನಾಲ್ಕು ದಿನಗಳ ನಂತರ ಗೋಧ್ರಾ ಸಿವಿಲ್ ಆಸ್ಪತ್ರೆಯಲ್ಲಿ ಆಕೆಯ ವೈದ್ಯಕೀಯ ಪರೀಕ್ಷೆ ನಡೆಯಿತು.

ಕಳೇಬರಗಳ ಮಹಜರು ನಡೆಯುವುದಿಲ್ಲ. ಕೊಳೆಯಲು ಬಿಡಲಾಗುತ್ತದೆ. ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಮಹತ್ವದ ಸಾಕ್ಷ್ಯ ಪುರಾವೆಗಳಾಗಬೇಕಿದ್ದ ರಕ್ತ ಮತ್ತು ಇತರೆ ಜೈವಿಕ ಸ್ಯಾಂಪಲ್ ಗಳನ್ನು ಸಂಗ್ರಹಿಸಲಿಲ್ಲ. ಶವಗಳನ್ನು ಸಾಮೂಹಿಕವಾಗಿ ದಫನು ಮಾಡಲಾಗುತ್ತದೆ. ಎರಡು ವರ್ಷಗಳ ನಂತರ 2004ರಲ್ಲಿ ಸಿಬಿಐ ಈ ತನಿಖೆಯನ್ನುಕೈಗೆತ್ತಿಕೊಂಡಾಗ ಹೂತಿದ್ದ ಶವಗಳನ್ನು ಹೊರತೆಗೆದಾಗಯಾವ ಶವಕ್ಕೂ ರುಂಡವಿರುವುದಿಲ್ಲ. ಮರಣೋತ್ತರ ಪರೀಕ್ಷೆಯ ನಂತರಗುರುತು ಸಿಗದಿರಲೆಂದು ರುಂಡಗಳನ್ನು ಬೇರ್ಪಡಿಸಲಾಗಿತ್ತು. ಶವಗಳು ಬೇಗನೆ ಕೊಳೆತು ಹೋಗಲೆಂದು ಅವುಗಳ ಮೇಲೆ ಉಪ್ಪು ಸುರಿದು ಹುಗಿಯಲಾಗಿರುತ್ತದೆ.

ಹನ್ನೊಂದು ಮಂದಿ ಅಪರಾಧಿಗಳಿಗೆ ಅಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಮುಂಬಯಿ ಹೈಕೋರ್ಟ್ 2017ರ ಮೇ 4ರಂದು ಎತ್ತಿ ಹಿಡಿದಿತ್ತು. ಮಹತ್ವದ ಸಾಕ್ಷ್ಯ ಪುರಾವೆಗಳನ್ನು ತಿದ್ದಿದ ಮತ್ತು ನಾಶ ಮಾಡಿದ ಏಳು ಮಂದಿ ಪೊಲೀಸರು ಹಾಗೂ ವೈದ್ಯರಖುಲಾಸೆಯ ಆದೇಶವನ್ನು ತಳ್ಳಿ ಹಾಕಿತ್ತು.

ಮನುಷ್ಯಳಾಗಿ, ನಾಗರಿಕಳಾಗಿ, ಮಹಿಳೆಯಾಗಿ, ತಾಯಿಯಾಗಿ ತನ್ನ ಹಕ್ಕುಗಳನ್ನು ಅತ್ಯಂತ ಪಾಶವೀತನದಿಂದ ಉಲ್ಲಂಘಿಸಲಾಗಿದೆ ಎಂದು ಬಿಲ್ಕಿಸ್ ಬಾನು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಂಡಿದ್ದಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...