- Advertisement -
- Advertisement -
ನಿನ್ನೆ ತಾನೇ 20ಕ್ಕೂ ಹೆಚ್ಚು ಕಾಂಗ್ರೆಸ್ ಸದಸ್ಯರ ಜೊತೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಪಾಳಯ ಸೇರಿದ್ದ ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾಗೆ ಬಿಜೆಪಿ ನಿರೀಕ್ಷೆಯಂತೆ ರಾಜ್ಯಸಭಾ ಟಿಕೆಟ್ ಘೋಷಿಸಿದೆ.
ಇಂದು ಸಂಜೆ ಹಲವು ರಾಜ್ಯಗಳ ಟಿಕೆಟ್ ಘೋಷಣೆ ಮಾಡಿದ ಸಂದರ್ಭದಲ್ಲಿ ಮಧ್ಯಪ್ರದೇಶದಿಂದ ಜ್ಯೋತಿರಾದಿತ್ಯ ಸಿಂಧಿಯಾ ಹೆಸರು ಉಲ್ಲೇಖಿಸಲಾಗಿದೆ.


19 ವರ್ಷ ಕಾಂಗ್ರೆಸ್ ಪಕ್ಷದಲ್ಲಿದ್ದ ಸಿಂಧಿಯಾ ಎರಡು ಬಾರಿ ಕೇಂದ್ರ ಸಚಿವರಾಗಿದ್ದರು. 2018-19ರ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಮೋದಿ ವಿರುದ್ಧ ಹರಿಹಾಯ್ದಿದ್ದ ಅವರು ಬಿಜೆಪಿ ಸೇರಿದ ಕೂಡಲೇ ಮೋದಿ ಕೈಯಲ್ಲಿ ಭಾರತ ಸುರಕ್ಷಿತವಾಗಿದೆ ಎಂದು ವರಸೆ ಬದಲಾಯಿಸಿದ್ದರು.
ನಾನು ಅಧಿಕಾರಕ್ಕಾಗಿ ಬಿಜೆಪಿ ಸೇರುತ್ತಿಲ್ಲ, ಭಾರತದ ಅಭಿವೃದ್ಧಿಗಾಗಿ ಸೇರುತ್ತಿದ್ದೇನೆ ಎಂದು ಭಾಷಣ ಮಾಡಿದ್ದ ಅವರಿಗೆ ತಕ್ಷಣವೇ ರಾಜ್ಯಸಭಾ ಟಿಕೆಟ್ ಸಿಕ್ಕಿರುವುದು ಅವರ ನಡೆಯನ್ನು ಪ್ರಶ್ನಿಸುವಂತೆ ಮಾಡಿದೆ.


