Homeಕರ್ನಾಟಕ'ಖರ್ಗೆ ಕುಟುಂಬವನ್ನು ಸಾಫ್ ಮಾಡ್ತೀನಿ' ಎಂದಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡಗೆ ಬಂಧನದ ಭೀತಿ

‘ಖರ್ಗೆ ಕುಟುಂಬವನ್ನು ಸಾಫ್ ಮಾಡ್ತೀನಿ’ ಎಂದಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡಗೆ ಬಂಧನದ ಭೀತಿ

- Advertisement -
- Advertisement -

ಖರ್ಗೆ ಕುಟುಂಬವನ್ನು ಸಾಫ್ ಮಾಡ್ತೀನಿ ಎಂದು ಜೀವ ಬೆದರಿಕೆ ಹಾಕಿರುವ ಮಣಿಕಂಠ ರಾಠೋಡರದ್ದು ಎನ್ನಲಾದ ಆಡಿಯೋ ಕುರಿತ ವಿಚಾರಣೆಗೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಜುಲೈ 15ರಂದು ಬಂಧಿಸಿ, ವಿಚಾರಣೆ ನಡೆಸಲಾಯಿತು. ಬಳಿಕ ಅವನನ್ನು ಬಿಡುಗಡೆ ಮಾಡಲಾಗಿದೆ. ಪೊಲೀಸರು ಮತ್ತೆ ಬಂಧಿಸುವ ಭೀತಿ ರಾಠೋಡಗೆ ಎದುರಾಗಿದೆ.

ಮಣಿಕಂಠ ರಾಠೋಡ ವಿರುದ್ಧ ವಿವಿಧ ಪ್ರಕರಣಗಳು ಸೇರಿದಂತೆ ಖರ್ಗೆ ಕುಟುಂಬಕ್ಕೆ ಬೆದರಿಕೆ ಹಾಕಿರುವ ಪ್ರಕರಣವು ದಾಖಲಾಗಿದೆ. 2014ರಿಂದ ಇಲ್ಲಿಯವರೆಗೆ ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ, ಬೆಂಗಳೂರು ಹಾಗೂ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣದಲ್ಲಿ ದಾಖಲಾದ ಒಟ್ಟು 46 ಪ್ರಕರಣಗಳನ್ನು ಉಲ್ಲೇಖಿಸಿ ಪಿಎಸ್‌ಐ ಚೇತನ್‌ ಅವರು ದಂಡಾಧಿಕಾರಿಗೆ ಸಲ್ಲಿಸಿದ್ದಾರೆ.

”46 ಪ್ರಕರಣಗಳು ದಾಖಲಾಗಿದ್ದರೂ ಮಣಿಕಂಠ ತನ್ನ ಪ್ರವೃತ್ತಿಯಲ್ಲಿ ಬದಲಾವಣೆ ತೋರದೆ ಪದೇ ಪದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ, ಶಾಂತಿ ಕದಡಲು ಯತ್ನಿಸುವ ಪ್ರವೃತ್ತಿಯವರಾಗಿದ್ದಾರೆ. ಮುಂದೆ ಚಿತ್ತಾಪುರದಲ್ಲಿ ಜಾತಿ- ಜಾತಿಗಳ ಮಧ್ಯ ವೈರತ್ವ ಬೆಳೆಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿ, ಸಮಾಜದ ಶಾಂತಿ ಕದಡುವ ಸಾಧ್ಯತೆ ಹೆಚ್ಚಾಗಿದೆ. ಅವರನ್ನು ಹಾಜರು ಪಡಿಸಿಕೊಂಡು ಸನ್ನಡತೆಗಾಗಿ ಅವರಿಂದ ಹೆಚ್ಚಿನ ಬಾಂಡ್ ಬರೆಸಿಕೊಳ್ಳಬೇಕು” ಎಂದು ಪಿಎಸ್‌ಐ ತಾಲ್ಲೂಕು ದಂಡಾಧಿಕಾರಿಗೆ ಮನವಿ ಮಾಡಿದ್ದಾರೆ.

ಜುಲೈ 15ರಂದು ಸಂಜೆ ರಾಠೋಡ ಅವರನ್ನು ಬಂಧಿಸಿದ್ದ ಚಿತ್ತಾಪುರ ಪೊಲೀಸರು ವಿಚಾರಣೆ ನಡೆಸಿ, ಧ್ವನಿ ಮಾದರಿ ಸಂಗ್ರಹಿಸಿಕೊಂಡು ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದರು. 16ರಂದು ಮತ್ತೆ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಕಳುಹಿಸಿದ್ದರು. ಆದರೆ, ಮಣಿಕಂಠ ವಿಚಾರಣೆಗೆ ಠಾಣೆಗೆ ಹಾಜರಾಗದೆ ಜಾಮೀನು ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರಿಗೆ ಮತ್ತೆ ನೋಟಿಸ್ ಜಾರಿ ಮಾಡಿ, ವಶಕ್ಕೆ ಪಡೆದು ತಾಲ್ಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಕುಟುಂಬವನ್ನು ಕೊಲೆ ಮಾಡಲು ಬಿಜೆಪಿ ಮುಖಂಡರಿಂದ ಸಂಚು: ಕಾಂಗ್ರೆಸ್ ಆರೋಪ

ಖರ್ಗೆ ಕುಟುಂಬದ ವಿರುದ್ಧ ಜೀವಬೆದರಿಕೆ ಪ್ರಕರಣ

ಹಲವು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಚಿತ್ತಾಪುರದ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್‌ ಅವರದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿತ್ತು. ಅದರಲ್ಲಿ ”ಖರ್ಗೆ ಮತ್ತು ಅವರ ಹೆಂಡ್ತಿನಾ, ಇಡೀ ಕುಟುಂಬವನ್ನು ಸಾಫ್ ಮಾಡ್ತೀನಿ” ಅನ್ನುವುದು ದಾಖಲಾಗಿದೆ.

ಈ ಬಗ್ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಮಾತನಾಡಿ, ”ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರನ್ನು ಹತ್ಯೆ ಮಾಡಲು ಬಿಜೆಪಿ ನಾಯಕರು ಸಂಚು ರೂಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಮತ್ತು ಸಿಎಂ ಬೊಮ್ಮಾಯಿ ಅವರ ನೀಲಿ ಕಣ್ಣಿನ ಹುಡುಗ ಚಿತ್ತಾಪುರದ ಬಿಜೆಪಿ ಅಭ್ಯರ್ಥಿಯ ರೆಕಾರ್ಡಿಂಗ್‌ನಿಂದ ಇದು ಈಗ ಸ್ಪಷ್ಟವಾಗಿದೆ” ಎಂದದು ಹೇಳಿದ್ದರು.

ರವಿ ಎಂಬ ಬಿಜೆಪಿ ಕಾರ್ಯಕರ್ತನೊಬ್ಬ ಮಣಿಕಂಠ ರಾಥೋಡ್‌ರವರಿಗೆ ಫೋನ್ ಮಾಡಿ ನಿಮ್ಮ ಮೇಲೆ 40  ಕೇಸುಗಳಿವೆ ಅನ್ನುತ್ತಾರೆ. ಈ ಕುರಿತು ಖರ್ಗೆಯವರನ್ನು ಪ್ರಶ್ನೆ ಮಾಡ್ತೀನಿ ಅವರ ನಂಬರ್ ಕೊಡಿ ಅಣ್ಣ ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸುವ ಮಣಿಕಂಠ ರಾಥೋಡ್‌, ”ನನ್ನ ಬಳಿ ಅವರ ಫೋನ್ ನಂಬರ್ ಇದ್ರೆ ಅವರ ಹೆಂಡ್ರು ಮಕ್ಕಳು ಎಲ್ಲರನ್ನು ಸಾಫ್ ಮಾಡ್ತೀನಿ. ಅದಕ್ಕೆ ನನ್ನ ಬಳಿ ನಂಬರ್ ಇಲ್ಲ” ಎಂದು ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ.

”ಯಾರ ಹೆಂಡ್ರ ಮಕ್ಕಳನ್ನು ಸಾಫ್ ಮಾಡ್ತೀರಿ?” ಎಂದು ರವಿ ಪ್ರಶ್ನಿಸಿದಾಗ, ಈಗ ನೀನು ಯಾರ ಹೆಸ್ರು ತಗೊಂಡೆ ಎಂದು ಕೇಳಿ ಆನಂತರ ”ಖರ್ಗೆಯವರ ನಂಬರ್ ಇದ್ರೆ ಅವರಿಗೆ ಬಾಯಿಗೆ ಬಂದಾಂಗೆ ಬೈಯ್ಯುತ್ತಿದ್ದೆ” ಎಂದು ಸಮಜಾಯಿಸಿ ಕೊಡುವುದು ಸಹ ವೈರಲ್ ವಿಡಿಯೋದಲ್ಲಿ ದಾಖಲಾಗಿದೆ.

ಬಿಜೆಪಿ ಅಭ್ಯರ್ಥಿಯೊಬ್ಬ ಖರ್ಗೆ ಕುಟುಂಬವನ್ನು ಕೊಲ್ಲುವ ಬೆದರಿಕೆಯೊಡ್ಡಿದ್ದಾರೆ. ಆತ ಬಿಜೆಪಿ ಪಕ್ಷದ ನೀಲಿ ಕಣ್ಣಿನ ಹುಡುಗನಾಗಿದ್ದಾನೆ. ಈ ಕುರಿತು ಪ್ರಧಾನಿ ಮೋದಿಯವರು ಪ್ರತಿಕ್ರಿಯಿಸುವರೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಟ್ವೀಟ್ ಮಾಡಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ನಿಧನ

ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರು ಭಾನುವಾರ (ಏ.12) ನಿಧನರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯ ಡಾ. ಪ್ರತೀತ್ ಸಮ್ದಾನಿ...

‘ಸಂವಿಧಾನವನ್ನು ಕೊನೆಗೊಳಿಸುವುದು ಆರ್‌ಎಸ್‌ಎಸ್-ಬಿಜೆಪಿಯ ಮುಖ್ಯ ಉದ್ದೇಶ’: ರಾಹುಲ್ ಗಾಂಧಿ ಆರೋಪ

ನವದೆಹಲಿ: ಆರ್‌ಎಸ್‌ಎಸ್ - ಬಿಜೆಪಿ ವಿರುದ್ಧ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದಲ್ಲಿ ಎಲ್ಲರನ್ನೂ ಸಮಾನರು ಎಂದು ಪರಿಗಣಿಸಲು ಬಯಸದ ಕಾರಣ ಸಂವಿಧಾನವನ್ನು ಕೊನೆಗೊಳಿಸುವುದು ಅವರ ಮುಖ್ಯ...

ಗಾಝಾಗೆ ಜೀವರಕ್ಷಕ ನೆರವಿಗಾಗಿ ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ ನೌಕಾಯಾನ; ನಾಗರಿಕರ ರಕ್ಷಣೆಗೆ ಕರೆ ನೀಡಿದ ಯುನೈಟೆಡ್ ಸ್ಟಾಫ್ ಫಾರ್ ಗಾಝಾ

ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ ಭಾನುವಾರ ನೌಕಾಯಾನ ಮಾಡಲು ಸಿದ್ಧವಾಗುತ್ತಿದ್ದಂತೆ, ಗಾಝಾದ ಯುನೈಟೆಡ್ ಸ್ಟಾಫ್ ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕಾರ್ಯಾಚರಣೆಯಲ್ಲಿರುವ ನಾಗರಿಕರ ರಕ್ಷಣೆಗಾಗಿ ಕರೆ ನೀಡಿತು ಮತ್ತು ಗಾಝಾಗೆ ಮಾನವೀಯ ನೆರವು ಪ್ರಯತ್ನಗಳಿಗೆ ಬೆಂಬಲವನ್ನು...

ಲೆಬನಾನ್ ಮೇಲೆ ದಾಳಿ ಮುಂದುವರಿಸಿದ ಇಸ್ರೇಲ್ : 2 ಸಾವಿರ ದಾಟಿದ ಮೃತರ ಸಂಖ್ಯೆ

ಮಾರ್ಚ್ 2ರಿಂದ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 2,020 ಜನರು ಸಾವನ್ನಪ್ಪಿದ್ದಾರೆ ಮತ್ತು 6,436 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಸಾವನ್ನಪ್ಪಿದವರಲ್ಲಿ 165 ಮಕ್ಕಳು, 248 ಮಹಿಳೆಯರು ಮತ್ತು 85...

ಪ. ಬಂಗಾಳ ಚುನಾವಣೆ | ಭವಾನಿಪುರದಲ್ಲಿ ನನ್ನ ನಾಮಪತ್ರ ರದ್ದತಿಗೆ ಪಿತೂರಿ ನಡೆದಿತ್ತು : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ನಾಮಪತ್ರವನ್ನು ರದ್ದುಗೊಳಿಸಲು ಉದ್ದೇಶಪೂರ್ವಕ ಪಿತೂರಿ ನಡೆದಿತ್ತು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. "ನಮ್ಮ ಹೋರಾಟ ಬಿಜೆಪಿ ವಿರುದ್ಧವಲ್ಲ; ವ್ಯವಸ್ಥೆಯಲ್ಲಿರುವ ದೋಷಗಳ ವಿರುದ್ಧ. ನನ್ನ ಸ್ವಂತ...

ಇಸ್ರೇಲ್‌ನಾದ್ಯಂತ ಯುದ್ಧ ವಿರೋಧಿ ಪ್ರತಿಭಟನೆ : ನೆತನ್ಯಾಹು ಆಡಳಿತ ವಿರುದ್ಧ ಬೀದಿಗಿಳಿದ ಜನ

ಗಾಝಾದಲ್ಲಿ ಸುಮಾರು 80 ಸಾವಿರದಷ್ಟು ಜನರನ್ನು ಹತ್ಯೆಗೈದ ಬಳಿಕ, ಈಗ ಲೆಬನಾನ್ ಮತ್ತು ಇರಾನ್ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್‌ನ ಬೆಂಜಮಿನ್ ನೆತನ್ಯಾಹು ಸರ್ಕಾರದ ವಿರುದ್ದ ಅಲ್ಲಿನ ನಾಗರಿಕರು ಬೀದಿಗಿಳಿದಿದ್ದಾರೆ. ನೆತನ್ಯಾಹು ಆಡಳಿತದ...

Islamabad Talks | ಅಮೆರಿಕದ ಷರತ್ತುಗಳನ್ನು ತಿರಸ್ಕರಿಸಿದ ಇರಾನ್‌ : ಯಾವುದೇ ಒಪ್ಪಂದವಿಲ್ಲದೆ ವಾಪಸ್ ಹೋದ ಜೆಡಿ ವ್ಯಾನ್ಸ್ ನಿಯೋಗ

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಆಯೋಜಿಸಿರುವ ಅಮೆರಿಕ-ಇರಾನ್‌ ನಡುವಿನ ಮಹತ್ವದ ಶಾಂತಿ ಮಾತುಕತೆ ವಿಫಲವಾದಂತೆ ಗೋಚರಿಸುತ್ತಿದೆ. ಅಮೆರಿಕದ ಪರವಾಗಿ ಮಾತುಕತೆಗೆ ಆಗಮಿಸಿದ್ದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ನಿಯೋಗ, ಇರಾನ್‌ ಜೊತೆ ಯಾವುದೇ ಒಪ್ಪಂದ ಸಾಧ್ಯವಾಗದೆ...

ಹರಿಯಾಣದ ಮೋಸ್ಟ್ ವಾಂಟೆಡ್ ‘ಗ್ಯಾಂಗ್‌ಸ್ಟರ್’ ಸಾಹಿಲ್ ಚೌಹಾಣ್ ಥೈಲ್ಯಾಂಡ್ ನಿಂದ ಗಡೀಪಾರು; ದೆಹಲಿಯಲ್ಲಿ ವಶಕ್ಕೆ ಪಡೆಯಲಿರುವ ಎಸ್‌ಟಿಎಫ್

ಭಾರತೀಯ ಭದ್ರತಾ ಸಂಸ್ಥೆಗಳಿಗೆ ಒಂದು ಪ್ರಮುಖ ಪ್ರಗತಿಯಲ್ಲಿ, ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್‌ನನ್ನು ಥೈಲ್ಯಾಂಡ್‌ನಿಂದ ಗಡೀಪಾರು ಮಾಡಿದ ನಂತರ ಭಾರತಕ್ಕೆ ಕರೆತರಲಾಗುತ್ತಿದೆ. ಅಧಿಕಾರಿಗಳ ಪ್ರಕಾರ, ಚೌಹಾಣ್ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ...

ಛತ್ತೀಸ್‌ಗಢ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಜೀವಂತ ಇರುವಾಗಲೇ ಗೋಣಿಚೀಲದಲ್ಲಿ ತುಂಬಿ ಬಾವಿ ಬಳಿ ಎಸೆದಿದ್ದ ಆರೋಪಿ ಬಂಧನ

ಛತ್ತೀಸ್‌ಗಢದ ದುರ್ಗ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿ, ನಂತರ ಮಗು ಜೀವಂತ ಇರುವಾಗಲೇ ಗೋಣಿಚೀಲದಲ್ಲಿ ಹಾಕಿ ಬಾವಿಯ ಬಳಿ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಉತೈ...

ಉತ್ತರಪ್ರದೇಶ: ಪ್ರೇಮ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಪ್ರತೀಕಾರ: ಮನೆಗೆ ನುಗ್ಗಿ 23ವರ್ಷದ ಯುವತಿ ಮತ್ತು ತಾಯಿಯ ಮೇಲೆ ಆಸಿಡ್ ದಾಳಿ; ಯುವತಿ ಸಾವು

ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ 23 ವರ್ಷದ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡು ಆಕೆಯ ತಾಯಿ ಗಂಭೀರವಾಗಿ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುರುವಾರ ರಾತ್ರಿ...