Homeಕರ್ನಾಟಕಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷರ ವಿರುದ್ಧ ಬಿಜೆಪಿ ಮುಖಂಡ ರಮೇಶ್‌ ದೂರು; ಶಾಂತಾರಾಮ್ ಪ್ರತಿಕ್ರಿಯೆ

ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷರ ವಿರುದ್ಧ ಬಿಜೆಪಿ ಮುಖಂಡ ರಮೇಶ್‌ ದೂರು; ಶಾಂತಾರಾಮ್ ಪ್ರತಿಕ್ರಿಯೆ

- Advertisement -
- Advertisement -

ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶಾಂತಾರಾಮ್ ಅವರ ವಿರುದ್ಧ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್‌.ಆರ್‌.ರಮೇಶ್ ಅವರು ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕೆ (ಸಕ್ಕರೆ) ಇಲಾಖೆ ಅಧೀನ ಕಾರ್ಯದರ್ಶಿಯೂ ಆಗಿರುವ ಶಾಂತಾರಾಮ್‌, ಒಪಿಎಸ್‌ (ಹಳೆಯ ಪಿಂಚಣಿ ಯೋಜನೆ) ಜಾರಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ‘ವೋಟ್‌ ಫಾರ್‌ ಒಪಿಎಸ್‌’ ಅಭಿಯಾನದಲ್ಲಿ ಸಕ್ರಿಯವಾಗಿದ್ದಾರೆ.

“ನಿರ್ದಿಷ್ಟ ರಾಜಕೀಯ ಪಕ್ಷಗಳ ಪರವಾಗಿ ಮತದಾನ ಮಾಡುವಂತೆ ಪ್ರೇರೇಪಿಸುವ ಹೇಳಿಕೆ ನೀಡಿ, ಚುನಾವಣಾ ನೀತಿ ನಿಯಮಗಳನ್ನು ಉಲ್ಲಂಘಿಸಿರುವ ಶಾಂತಾರಾಮ್‌ ಅವರನ್ನು ಅಮಾನತುಗೊಳಿಸಿ ಶಿಸ್ತುಕ್ರಮ ಕೈಗೊಳ್ಳಬೇಕು” ಎಂದು ಎನ್‌.ಆರ್‌.ರಮೇಶ್ ಒತ್ತಾಯಿಸಿದ್ದಾರೆ.

“ಕರ್ನಾಟಕದಲ್ಲಿ ಪ್ರಸ್ತುತ ಚುನಾವಣಾ ಪ್ರಕ್ರಿಯೆಗಳು ಚಾಲನೆಯಲ್ಲಿವೆ. ಚುನಾವಣಾ ನೀತಿ ನಿಯಮಗಳಿಗೆ ವಿರುದ್ಧವಾಗಿ ಶಾಂತರಾಮ್‌ ಅವರು ತಮ್ಮ ಲೆಟರ್‌ ಹೆಡ್‌ನಲ್ಲಿ ಹೇಳಿಕೆಗಳನ್ನು ದಾಖಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ, ಶಾಸಕಾಂಗಕ್ಕೆ ಇರುವ ಸಾಂವಿಧಾನಿಕ ಹಕ್ಕುಗಳನ್ನು ಶಾಂತಾರಾಮ್ ಪ್ರಶ್ನಿಸುವ ಜೊತೆಗೆ ಸಹೋದ್ಯೋಗಿಗಳನ್ನು ಪ್ರೇರೇಪಿಸುತ್ತಿದ್ದಾರೆ. ನಿರ್ದಿಷ್ಟ ಪಕ್ಷದ ಪರ ಮತ ಚಲಾಯಿಸುವಂತೆ ಹೇಳಿಕೆ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಶಾಂತಾರಾಮ್ ಅವರ ನಡವಳಿಕೆಯು ಪ್ರಜಾಪ್ರತಿನಿಧ್ಯ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಸರ್ಕಾರಿ ನೌಕರರು ಮುಂಬರುವ ವಿಧಾನಸಭಾ ಚುನಾವಣೆಯ ಕರ್ತವ್ಯಕ್ಕೆ ನೇಮಕಗೊಳ್ಳಲಿದ್ದು, ಶಾಂತಾರಾಮ ಅವರ ಪ್ರಚೋದಿತ ಹೇಳಿಕೆಗಳಿಂದ ಚುನಾವಣಾ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶಾಂತಾರಾಮ್ ಅವರನ್ನು ಕೂಡಲೇ ಅಮಾನತು ಮಾಡಿ ಶಿಸ್ತುಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ಕೋರಲಾಗಿದೆ.

ಶಾಂತಾರಾಮ್ ಪ್ರತಿಕ್ರಿಯೆ

ಬಿಜೆಪಿ ಮುಖಂಡ ರಮೇಶ್ ಅವರು ನೀಡಿರುವ ದೂರಿಗೆ ಸಂಬಂಧಿಸಿದಂತೆ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿರುವ ಶಾಂತಾರಾಮ್‌, “ರಮೇಶ್ ಅವರ ಮೇಲೆ ಗೌರವವಿದೆ. ಭ್ರಷ್ಟಾಚಾರದ ವಿರುದ್ಧ ಜನಪರವಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಅವರಾಗಿದ್ದಾರೆ. ನೌಕರರಿಗೆ ಪಿಂಚಣಿ ಇಲ್ಲವಾದರೆ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂಬುದನ್ನು ಅವರು ಗಮನಿಸಬೇಕಿದೆ. ಅವರು ನಡೆಸುತ್ತಿರುವ ಹೋರಾಟದ ಭಾಗವಾಗಿಯೇ ನಾವು ಕೂಡ ನಡೆಯುತ್ತಿದ್ದೇವೆ” ಎಂದರು.

“ಸರ್ಕಾರಿ ನೌಕರರ ವಿಷಯದ ಕುರಿತು ಇವರಿಗೆ ಯಾರೋ ತಪ್ಪು ಸಂದೇಶ ನೀಡಿದಂತಿದೆ. ಎನ್‌ಪಿಎಸ್‌ (ಹೊಸ ಪಿಂಚಣಿ ಯೋಜನೆ) ರದ್ದುಗೊಳಿಸಿ, ಒಪಿಎಸ್‌ (ಹಳೆಯ ಪಿಂಚಣಿ ಯೋಜನೆ) ಜಾರಿಗೊಳಿಸಿ ಎಂದು ಕಳೆದ ಎಂಟು ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದೇವೆ. ನಿವೃತ್ತಿಯಾದವರಿಗೆ ಒಂದು ಬದುಕು ಕಟ್ಟಿಕೊಡಿ ಎಂದು ಕೇಳುತ್ತಿದ್ದೇವೆ. ನಾವು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುತ್ತಿಲ್ಲ. ಸರ್ಕಾರಿ ನೌಕರರಾದ ನಮಗೆ ನಮ್ಮ ಜವಾಬ್ದಾರಿಗಳು ತಿಳಿದಿವೆ” ಎಂದು ಸ್ಪಷ್ಟಪಡಿಸಿದರು.

“‘ವೋಟ್‌ ಫಾರ್‌ ಒಪಿಎಸ್‌’ ಎಂಬ ಅಭಿಯಾನವು ರಾಷ್ಟ್ರೀಯ ಕಾರ್ಯಕ್ರಮದ ಭಾಗವಾಗಿದೆ. ಅದನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುತ್ತಿದ್ದೇವೆ. ಸರ್ಕಾರಿ ನೌಕರರಿಗೆ ರಮೇಶ್ ಅವರ ಮೇಲೆ ಗೌರವವಿದೆ. ಅದನ್ನು ಹಾಳು ಮಾಡಿಸಬೇಕೆಂದು ಅವರಿಂದ ಈ ರೀತಿ ದೂರನ್ನು ಯಾರೋ ಕೊಡಿಸಿದ್ದಾರೆ. ಯಾರೋ ಮಿಸ್‌‌ಲೀಡ್‌ ಮಾಡಿದ್ದಾರೆ” ಎಂದು ತಿಳಿಸಿದರು.

“ನಮ್ಮ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ವೋಟ್‌ ಫಾರ್‌ ಒಪಿಎಸ್‌ ಹೋರಾಟಕ್ಕೆ ರಮೇಶ್ ಸೇರಿದಂತೆ ಎಲ್ಲರ ಸಹಕಾರ ಬೇಕಿದೆ. ಎನ್‌ಪಿಎಸ್‌ ಹೋರಾಟದ ಹಿನ್ನೆಲೆಯೇನು ಎಂಬುದು ರಮೇಶ್‌ ಅವರಿಗೆ ತಿಳಿದಿಲ್ಲ ಅನಿಸುತ್ತಿದೆ” ಎಂದು ವಿಷಾದಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೃಹ ಬಳಕೆಯ ಎಲ್‌ಪಿಜಿ ದರ 60 ರೂ. ಹೆಚ್ಚಳ : 11 ತಿಂಗಳಲ್ಲಿ ಎರಡನೇ ಬಾರಿ ಬೆಲೆ ಏರಿಕೆ

ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ (ಮಾ.7) ದೇಶದಲ್ಲಿ ಗೃಹ ಬಳಕೆಯ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕ್ರಮವಾಗಿ ರೂ. 60 ಮತ್ತು ರೂ. 115 ಹೆಚ್ಚಿಸಿವೆ. ಈ ಹೆಚ್ಚಳದ ನಂತರ ರಾಷ್ಟ್ರ ರಾಜಧಾನಿ...

ಟಿವಿ ನ್ಯೂಸ್ ಚಾನೆಲ್‌ಗಳಲ್ಲಿ ಅನಗತ್ಯ ಯುದ್ಧೋನ್ಮಾದ, ಸುಳ್ಳು ವರದಿ : ನಾಲ್ಕು ವಾರ TRP ಸ್ಥಗಿತಕ್ಕೆ ಕೇಂದ್ರ ಆದೇಶ

ಅಮೆರಿಕ, ಇಸ್ರೇಲ್, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ಸಂಘರ್ಷದ ಕುರಿತು ಟಿವಿ ನ್ಯೂಸ್‌ ಚಾನೆಲ್‌ಗಳು ಅನಗತ್ಯ ಯುದ್ಧೋನ್ಮಾದ ಸೃಷ್ಟಿಸುತ್ತಿರುವ ಹಾಗೂ ಸುಳ್ಳು ವರದಿಗಳನ್ನು ಪ್ರಸಾರ ಮಾಡುತ್ತಿರುವ ಹಿನ್ನೆಲೆ, ಮುಂದಿನ ನಾಲ್ಕು ವಾರಗಳ ಕಾಲ...

‘ಮಿಯಾ ಮುಸ್ಲಿಮರು ನಮ್ಮ ಶತ್ರುಗಳಲ್ಲ..’; ಚುನಾವಣೆ ಸನಿಹದಲ್ಲಿ ಮಾತು ಬದಲಿಸಿದ ಅಸ್ಸಾಂ ಸಿಎಂ

ಭಾರತೀಯ ಜನತಾ ಪಕ್ಷವು (ಬಿಜೆಪಿ) ಅಸ್ಸಾಂನಲ್ಲಿರುವ ಬಂಗಾಳಿ ಮೂಲದ ಮುಸ್ಲಿಂ ಸಮುದಾಯವಾದ ಮಿಯಾ ಮುಸ್ಲಿಮರನ್ನು ತನ್ನ ಶತ್ರುಗಳೆಂದು ಪರಿಗಣಿಸುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಹೇಳಿದ್ದಾರೆ. ಇದೇ ವರ್ಷದ...

ಜೈಲಿನಲ್ಲಿರುವ ಪಿಎಫ್‌ಐ ನಾಯಕ ಇ ಅಬೂಬಕರ್ ಆರೋಗ್ಯ ಸ್ಥಿತಿ ಗಂಭೀರ

ಸುಮಾರು ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸ್ಥಾಪಕ ಅಧ್ಯಕ್ಷ ಎರಪ್ಪುಂಗಲ್ ಅಬೂಬಕರ್ ಅವರ ಆರೋಗ್ಯ ಹದಗೆಟ್ಟ ನಂತರ ಬುಧವಾರದಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾ...

‘ಭಾರತ ನಮ್ಮನ್ನು ಹಿಂದುಕ್ಕುವುದಕ್ಕೆ ಬಿಡಲ್ಲ; ಅಮೆರಿಕದ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ..’; ಕ್ರಿಸ್ಟೋಫರ್ ಲ್ಯಾಂಡೌ

ನಮ್ಮ ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಲು ಚೀನಾಗೆ ಮಾಡಿಕೊಟ್ಟ ಆರ್ಥಿಕ ಅನುಕೂಲಗಳನ್ನು ನಾವು ಭಾರತಕ್ಕೆ ನೀಡುವುದಿಲ್ಲ ಎಂದು ಯುನೈಟೆಡ್ ಸ್ಟೇಟ್ಸ್‌ (ಯುಎಸ್‌) ಉಪ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ಗುರುವಾರ ಹೇಳಿದ್ದಾರೆ. ಅಮೆರಿಕ ಮತ್ತು ಭಾರತ...

ರೋಹಿತ್ ಆ್ಯಕ್ಟ್| ಸರ್ಕಾರದ ನಿರ್ಧಾರ ಸ್ವಾಗತಿಸಿದ ಹೋರಾಟಗಾರರು; ಕಾಯ್ದೆ ಪರಿಣಾಮಕಾರಿ ಜಾರಿಗೆ ಆಗ್ರಹ

“ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳ ಮೇಲೆ ನಡೆಯುವ ʻಶೈಕ್ಷಣಿಕ ಮತ್ತು ಸಾಮಾಜಿಕ ದೌರ್ಜನ್ಯʼವನ್ನು ನಿಲ್ಲಿಸಲು ʻರೋಹಿತ್ ವೇಮುಲ ಕಾಯ್ದೆʼಯನ್ನು ಜಾರಿಗೆ ತರಲಾಗುವುದು” ಎಂದು...

Karnataka Budget 2026| ಸಮಾಜ ಕಲ್ಯಾಣ ಇಲಾಖೆಯಡಿ ‘ಬೌದ್ಧ ಅಭಿವೃದ್ಧಿ ನಿಗಮ’ ಸ್ಥಾಪನೆ

ಸಮಾಜ ಕಲ್ಯಾಣ ಇಲಾಖೆಯಡಿ 'ಬೌದ್ಧ ಅಭಿವೃದ್ಧಿ ನಿಗಮ' ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನ 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದರು. "ನಮ್ಮ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ...

Karnataka Budget 2026| ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಮೀಸಲು; ದೇವದಾಸಿ-ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಅರಿಯಲು ಸಮೀಕ್ಷೆ

2026-27 ಸಾಲಿನ ಆಯವ್ಯಯ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಾಕಷ್ಟು ಅನುದಾನ ಘೋಷಣೆ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಮೀಸಲಿಡಲಾಗಿದ್ದು, ಮಾಜಿ ದೇವದಾಸಿ ಮಹಿಳೆಯರು...

ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ವಿಧಾನಸಭಾ ಚುನಾವಣೆಗೆ ಮುನ್ನ ರಾಜೀನಾಮೆ; ರಾಜಕೀಯ ಒತ್ತಡದ ಆರೋಪ

ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಸುಮಾರು ಮೂರುವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದ ನಂತರ ಗುರುವಾರ ರಾಜೀನಾಮೆ ನೀಡಿದ್ದಾರೆ. ಈ ಕ್ರಮವು ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ...

Karnataka Budget 2026| ವಿಕ್ಟೋರಿಯಾ ಹೆಸರು ಬದಲಾವಣೆ; ʻಶಾಂತವೇರಿ ಗೋಪಾಲಗೌಡ ಆಸ್ಪತ್ರೆʼ ಎಂದು ಮರುನಾಮಕರಣ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯನ್ನು ʻಶಾಂತವೇರಿ ಗೋಪಾಲಗೌಡ ಆಸ್ಪತ್ರೆʼ ಎಂದು ಮರುನಾಮಕರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಬಜೆಟ್‌ ಭಾಷಣದಲ್ಲಿ ಘೋಷಿಸಿದರು. ತಮ್ಮ ಆಯವ್ಯಯದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಘೋಷಣೆಗಳನ್ನು ಮಾಡಿದ...