Homeಮುಖಪುಟರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ನಿಲುವಳಿ ಸೂಚನೆ ಸಲ್ಲಿಕೆ; ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹ

ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ನಿಲುವಳಿ ಸೂಚನೆ ಸಲ್ಲಿಕೆ; ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹ

- Advertisement -
- Advertisement -

ಲೋಕಸಭೆ ಅಧಿವೇಶನದಲ್ಲಿ ಗುರುವಾರ (ಫೆ.12) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಿಲುವಳಿ ಸೂಚನೆ ಸಲ್ಲಿಸಿದ್ದು, ಅವರ ಸಂಸತ್ತಿನ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಇದು ವಿಶೇಷ ಹಕ್ಕುಚ್ಯುತಿ ನೋಟಿಸ್ ಅಲ್ಲ. ನಾನು ಒಂದು ಪ್ರಮುಖ ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ ಎಂದಿದ್ದಾರೆ. ರಾಹುಲ್ ಗಾಂಧಿ ದೇಶದ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿರುವ ದುಬೆ, ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು ಮತ್ತು ಚುನಾವಣೆಗೆ ಸ್ಪರ್ಧಿಸದಂತೆ ಅವರಿಗೆ ಜೀವಿತಾವಧಿ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.

ರಾಹುಲ್ ಗಾಂಧಿ ಅವರು ಜಾರ್ಜ್ ಸೊರೊಸ್ ಫೌಂಡೇಶನ್, ಫೋರ್ಡ್ ಫೌಂಡೇಶನ್ ಮತ್ತು ಯುಎಸ್ಐಐಡಿನಂತಹ ವಿದೇಶಿ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದು, ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಮತ್ತು ಕೇಂದ್ರ ಬಜೆಟ್ ಬಗ್ಗೆ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ, ಸರ್ಕಾರ ರಾಷ್ಟ್ರೀಯ ಹಿತಾಸಕ್ತಿಗಳನ್ನು ಬಿಟ್ಟುಕೊಟ್ಟಿದೆ ಎಂದು ಆರೋಪಿಸಿದ್ದರು. ಈ ಭಾಷಣದ ಬೆನ್ನಲ್ಲೇ ನಿಲುವಳಿ ಸೂಚನೆ ಮಂಡನೆಯಾಗಿದೆ.

ಇದು ಸಾಮಾನ್ಯ ಹಕ್ಕುಚ್ಯುತಿ ನಿರ್ಣಯಕ್ಕಿಂತ ಗಂಭೀರವಾದದ್ದು ಎಂದು ದುಬೆ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಬೈನಲ್ಲಿ ವಿತರಣಾ ಟೆಂಪೋದಿಂದ 27 ಎಲ್‌ಪಿಜಿ ಸಿಲಿಂಡರ್‌ಗಳು ಕಳವು; ತನಿಖೆ 

ಮುಂಬೈನಲ್ಲಿ ವಿತರಣಾ ವಾಹನದಿಂದ ಐದು ತುಂಬಿದ ಎಲ್‌ಪಿಜಿ ಸಿಲಿಂಡರ್‌ಗಳು ಸೇರಿದಂತೆ ಇಪ್ಪತ್ತೇಳು ಎಲ್‌ಪಿಜಿ ಸಿಲಿಂಡರ್‌ಗಳು ಕಳವಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಅನಿಲ ಪೂರೈಕೆಯ...

No Kings : ಅಮೆರಿಕದಾದ್ಯಂತ ಟ್ರಂಪ್ ವಿರುದ್ಧ ಬೃಹತ್ ಪ್ರತಿಭಟನೆ; ಬೀದಿಗಿಳಿದ ಲಕ್ಷಾಂತರ ಜನರು

ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಅಮೆರಿಕದಾದ್ಯಂತ ಶನಿವಾರ (ಮಾ. 28) ದೊಡ್ಡ ಮಟ್ಟದ 'ನೋ ಕಿಂಗ್ಸ್' ಪ್ರತಿಭಟನೆಗಳು ನಡೆದಿವೆ. ಟ್ರಂಪ್ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜನರು ಲಕ್ಷಾಂತರ ಸಂಖ್ಯೆಯಲ್ಲಿ...

ಈ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನಿಸಿದ್ದೇವೆ : ಸಿಎಂ ಸಿದ್ದರಾಮಯ್ಯ

ಈ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೃತೀಯ ಭಾಷೆ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು (ಮಾ.28) ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಜಾರಿ ಮತ್ತು...

ಇರಾನ್‌ನ ಸರ್ವೋಚ್ಚ ನಾಯಕನನ್ನು ‘ನಿರ್ಮೂಲನೆ’ ಮಾಡಲಾಗಿದೆ; ನಮ್ಮ ಮುಂದಿನ ಗುರಿ ಕ್ಯೂಬಾ: ಡೊನಾಲ್ಡ್‌ ಟ್ರಂಪ್

ಪಶ್ಚಿಮ ಏಷ್ಯಾದಾದ್ಯಂತ ಯುದ್ಧ ಮುಂದುವರೆದಿದ್ದರೂ ಮತ್ತು ರಾಜತಾಂತ್ರಿಕ ಪ್ರಯತ್ನಗಳು ಅನಿಶ್ಚಿತವಾಗಿದ್ದರೂ ಸಹ, ಇರಾನ್‌ನ ಉನ್ನತ ನಾಯಕರು ಮತ್ತು ಅದರ ಹೆಚ್ಚಿನ ಮಿಲಿಟರಿ ಸಾಮರ್ಥ್ಯ ನಾಶವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಿಯಾಮಿಯಲ್ಲಿ ಸೌದಿ...

ತೆಲಂಗಾಣ| ನಿಗದಿತ ವೇತನ-ಉದ್ಯೋಗ ಭದ್ರತೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

ಹೈದರಾಬಾದ್‌ನ ಧರಣಾ ಚೌಕ್‌ನಲ್ಲಿ ಇಂದು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಅವರನ್ನು ಬಂಧಿಸಲಾಯಿತು. ಸರ್ಕಾರವು 18,000 ರೂ.ಗಳ ಮಾಸಿಕ ನಿಗದಿತ ವೇತನ ಮತ್ತು ಉದ್ಯೋಗ ಭದ್ರತೆಯ ಚುನಾವಣಾ...

2001-2006 ರ ಚುನಾವಣೆ ಗೆಲ್ಲಲು ವಿ.ಡಿ. ಸತೀಸನ್ ಆರ್‌ಎಸ್‌ಎಸ್ ಬೆಂಬಲ ಕೋರಿದ್ದರು: ಸಂಘದ ನಾಯಕನಿಂದ ಆರೋಪ

ಕೇರಳದ ಯುಡಿಎಫ್ ಅಧ್ಯಕ್ಷ ವಿ ಡಿ ಸತೀಸನ್ 2001 ಮತ್ತು 2006 ರಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಗೆಲ್ಲಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರ ಬೆಂಬಲ ಕೋರಿದ್ದರು ಎಂದು ಸಂಘ ಪರಿವಾರದ ಹಿರಿಯ ನಾಯಕ...

ಚರ್ಚ್‌ಗಳಲ್ಲಿ ಧರ್ಮಾಧ್ಯಕ್ಷರಾಗಲು ಕನ್ನಡ ಕಲಿತು ಬರಬೇಕು: ಡಾ.ಎಲ್.ಹನುಮಂತಯ್ಯ

ಬೆಂಗಳೂರು, ಮಾ.28: ಇತರೇ ರಾಜ್ಯಗಳಿಂದ ಕರ್ನಾಟಕದ ಚರ್ಚ್‌ಗಳಲ್ಲಿ ಧರ್ಮಾಧ್ಯಕ್ಷರಾಗಲು ಬರುವವರು ಕಡ್ಡಾಯವಾಗಿ ಕನಿಷ್ಠ ಆರು ತಿಂಗಳು ವ್ಯಾವಹಾರಿಕ ಕನ್ನಡವನ್ನು ಕಲಿತು ಬರಬೇಕು. ಇಲ್ಲದಿದ್ದರೆ ಇಲ್ಲಿನ ಧರ್ಮಾಧ್ಯಕ್ಷರ ಸ್ಥಾನಕ್ಕೆ ಗೌರವ ಉಳಿಯುವುದಿಲ್ಲ ಎಂದು ಸಾಹಿತಿ...

‘ಮಾನವಶಕ್ತಿ ಕೊರತೆಯಿಂದಾಗಿ ಇಸ್ರೇಲ್ ರಕ್ಷಣಾ ಪಡೆಗಳು ಒತ್ತಡ ಎದುರಿಸಬಹುದು..’; ಸೇನಾ ಮುಖ್ಯಸ್ಥರಿಂದ ಸರ್ಕಾರಕ್ಕೆ ಎಚ್ಚರಿಕೆ

ಹೆಚ್ಚುತ್ತಿರುವ ಮಾನವಶಕ್ತಿ ಕೊರತೆಯಿಂದಾಗಿ ಇಸ್ರೇಲ್ ರಕ್ಷಣಾ ಪಡೆಗಳು ಕಾರ್ಯಾಚರಣೆಯ ಗಂಭೀರ ಒತ್ತಡವನ್ನು ಎದುರಿಸಬಹುದು ಎಂದು ಸೇನಾ ಮುಖ್ಯಸ್ಥ ಇಯಾಲ್ ಜಮೀರ್ ಭದ್ರತಾ ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ ಎಂದು ಇಸ್ರೇಲ್ ಮಾಧ್ಯಮ ವರದಿಗಳನ್ನು...

ಯೆಮೆನ್‌ನಿಂದ ಹಾರಿದ ಮೊದಲ ಕ್ಷಿಪಣಿ ಎದುರಿಸಿದ ಇಸ್ರೇಲ್; ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಹೌತಿ ಪ್ರವೇಶ?

ಕಳೆದ ತಿಂಗಳು ಮಧ್ಯಪ್ರಾಚ್ಯದಲ್ಲಿ ಯುದ್ಧ ಭುಗಿಲೆದ್ದ ನಂತರ, ಮಾರ್ಚ್ 28 ರಂದು ಯೆಮೆನ್‌ನಿಂದ ಹಾರಿಸಲಾದ ಕ್ಷಿಪಣಿಯೊಂದನ್ನು ಇಸ್ರೇಲ್ ಮೊದಲಬಾರಿಗೆ ಎದುರಿಸಿದೆ. ಕಳೆದ ತಿಂಗಳು ಮಧ್ಯಪ್ರಾಚ್ಯದಲ್ಲಿ ಯುದ್ಧ ಭುಗಿಲೆದ್ದ ನಂತರ ಯೆಮೆನ್‌ನಿಂದ ಮೊದಲ ಬಾರಿಗೆ...

ಬಿಜೆಪಿಗೆ ಮತ ಹಾಕುವುದು ವ್ಯರ್ಥ; ಬದಲಿಗೆ ಕಾಂಗ್ರೆಸ್‌ಗೆ ಹಾಕಿ: ಸಂಸದ ಶಶಿ ತರೂರ್

ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ಹಾಕುವುದು ವ್ಯರ್ಥ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಕೇರಳದಲ್ಲಿ ಹೇಳಿದ್ದಾರೆ. ರಾಜ್ಯದ ಚುನಾವಣಾ ಸ್ಪರ್ಧೆ ಪ್ರಾಥಮಿಕವಾಗಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತು ಎಡ...