“ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗಲೆಲ್ಲ, ದೇಶದಲ್ಲಿ ಏನಾದರು ಒಂದು ಕೆಟ್ಟದ್ದು ನಡೆಯುತ್ತದೆ” ಎಂದು ಕರ್ನಾಟಕ ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಇತ್ತೀಚೆಗೆ ರಾಹುಲ್ ಗಾಂಧಿ ಅಮೆರಿಕದ ಬೋಸ್ಟನ್ ನಗರಕ್ಕೆ ಭೇಟಿ ನೀಡಿದ್ದರು. ಈ ಬೆನ್ನಲ್ಲೇ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿರುವುದನ್ನು ಉದ್ದೇಶಿಸಿ ಬಿಜೆಪಿ ಈ ಪೋಸ್ಟ್ ಹಾಕಿದೆ.
Every time @RahulGandhi leaves the country, something sinister unfolds back home.#PahalgamTerroristAttack #Hindus pic.twitter.com/MHirELV2zd
— BJP Karnataka (@BJP4Karnataka) April 23, 2025
ಆದರೆ, ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅನೇಕ ಜನರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಬಂದಾಗ ದೇಶದಲ್ಲಿ ಕೆಟ್ಟದ್ದು ನಡೆಯುವುದಾದರೆ, ಪ್ರಧಾನಿ ನರೇಂದ್ರ ಮೋದಿ ಇವತ್ತು ಬೆಳಿಗ್ಗೆಯಷ್ಟೇ ಸೌದಿಯಿಂದ ಬಂದಿರಲ್ಲ, ಈ ಬಗ್ಗೆ ಏನು ಹೇಳುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಎರಡು ದಿನಗಳ ಭೇಟಿಗೆ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಪಹಲ್ಗಾಮ್‌ನಲ್ಲಿ ದಾಳಿ ನಡೆದ ಹಿನ್ನೆಲೆ, ಯಾತ್ರೆ ಮೊಟಕುಗೊಳಿಸಿ ಇಂದು ಬೆಳಿಗ್ಗೆ ಅವರು ಭಾರತಕ್ಕೆ ಆಗಮಿಸಿದ್ದಾರೆ. ಸೌದಿಯಲ್ಲಿ ಅಲ್ಲಿನ ಉನ್ನತಧಿಕಾರಿಗಳನ್ನು ಮೋದಿ ಭೇಟಿಯಾಗಿದ್ದಾರೆ.
Landed in Jeddah, Saudi Arabia. This visit will strengthen the friendship between India and Saudi Arabia. Eager to take part in the various programmes today and tomorrow. pic.twitter.com/Y1HNt9J4nG
— Narendra Modi (@narendramodi) April 22, 2025
ಈ ಕುರಿತ ಫೋಟೋಗಳನ್ನು ಹಂಚಿಕೊಂಡಿರುವ ಎಕ್ಸ್ ಬಳಕೆದಾರರೊಬ್ಬರು “ಇವರಿಗೂ ನಿಮ್ಮ ಪೋಸ್ಟ್ ಅನ್ವಯಿಸುತ್ತಾ?” ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

“ಭದ್ರತಾ ವೈಫಲ್ಯಕ್ಕೆ ಅಧಿಕಾರದಲ್ಲಿರುವವರನ್ನು ದೂಷಿಸುವ ಬದಲು, ನೀವು ಬೇರೆ ಯಾರನ್ನೋ ದೂಷಿಸುತ್ತಿದ್ದೀರಿ. ಹೊಣೆ ಹೊತ್ತುಕೊಳ್ಳುವುದಕ್ಕಿಂತ ರಾಹುಲ್ ಗಾಂಧಿಯನ್ನು ದೂಷಿಸುವುದು ಭಯೋತ್ಪಾದನೆಗಿಂತ ಕೆಟ್ಟದ್ದು” ಎಂದು ಮತ್ತೊಬ್ಬರು ಹೇಳಿದ್ದಾರೆ.

“ಮೋದಿ ಕೂಡ ಹೊರ ದೇಶಕ್ಕೆ ಹೋಗಿದ್ದರು. ಮೋದಿ ಇಸ್ಲಾಮಿಕ್ ದೇಶಕ್ಕೆ ಹೋಗಿದ್ದರು, ಕಾರಣ ಏನಿರಬಹುದು? ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಎಂದು ಅನೇಕರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.”

“ಮಣಿಪುರ ಹೊತ್ತಿ ಉರಿಯಿತು, ಬಂಗಾಳದಲ್ಲಿ ಗಲಭೆ ಆಯಿತು, ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಆಯಿತು. ನಿಮ್ಮ ಪ್ರಧಾನಿ ಎಲ್ಲಿದ್ದಾರೆ. ಒಂದೆಡೆ ಅವರು ಶೇಖ್ ಸಲ್ಮಾನ್ ಜೊತೆ ಮೈತ್ರಿಕೊಂಡರೆ, ಮತ್ತೊಂದೆಡೆ ಮುಸ್ಲಿಮರನ್ನು ವಿಷಯವನ್ನು ತಿರುಗಿಸಲು ಮುಸ್ಲಿಮರನ್ನು ಗುರಿಯಾಗಿಸುತ್ತಿದ್ದಾರೆ” ಎಂದು ಮತ್ತೊಬ್ಬರು ಎಕ್ಸ್ ಬಳಕೆದಾರರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

“ರಾಹುಲ್ ಗಾಂಧಿ ಮತ್ತು ನೆಹರೂ ವಂಶಸ್ಥರನ್ನು ದೂಷಿಸುವುದನ್ನು ನಿಲ್ಲಿಸಿ. ನೀವು ಮತ್ತು ನಿಮ್ಮ ನೇತಾರರು ಏನು ಮಾಡುತ್ತಿದ್ದೀರಿ ???? ನಿಮಗೆ ನಿಜವಾಗಿಯೂ ನಾಯಕರಿದ್ದಾರೆಯೇ ?? ಉಚಿತ ಕೊಡುಗೆಗಳು, ಯೋಜನೆಗಳು, ಮೀಸಲಾತಿಗಳನ್ನು ವಿತರಿಸುವ, ತೆರಿಗೆಗಳ ಹೆಸರಿನಲ್ಲಿ ನಮ್ಮ ಹಣವನ್ನು ಕಸಿದುಕೊಳ್ಳುವ ನೇತಾರರು ಮಾತ್ರ. ಮೋದಿ ರಾಜೀನಾಮೆ ನೀಡಬೇಕೆಂದು ಕೇಳಿ. ನಮಗೆ ಯೋಗಿ ಜೀ ಪ್ರಧಾನಿಯಾಗಬೇಕು” ಎಂದು ಇನ್ನೊಬ್ಬರು ಎಕ್ಸ್ ಬಳಕೆದಾರರು ಅಸಮಧಾನ ವ್ಯಕ್ತಪಡಿಸಿದ್ದಾರೆ.
“ನಾನು ರಾಹುಲ್ ಗಾಂಧಿಗೆ ಮತ ಹಾಕಿಲ್ಲ. ನಾನು ಮೋದಿ ಜಿಗೆ ಮತ ಹಾಕಿದ್ದೇನೆ. ಅವರು ಏನು ಮಾಡುತ್ತಿದ್ದಾರೆ? ಅವರು ಯಾಕೆ ಇಷ್ಟೊಂದು ಶಕ್ತಿಹೀನ ಮತ್ತು ಭಯಭೀತರಾಗಿದ್ದಾರೆ? ಅವರು ಹಿಂದೂಗಳ ಜೀವನದ ಬಗ್ಗೆ ಏಕೆ ತಲೆಕೆಡಿಸಿಕೊಳ್ಳುತ್ತಿಲ್ಲ? ಅವರನ್ನು ರಾಜೀನಾಮೆ ನೀಡಿ ಯೋಗಿ ಜಿ ಅಧಿಕಾರ ವಹಿಸಿಕೊಳ್ಳಲಿ. ಪ್ರಧಾನಿಯಾಗಿದ್ದಾಗಲೂ ಇನ್ನೊಬ್ಬರನ್ನು ದೂರುವುದು ಎಷ್ಟು ಸರಿ?” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಪಹಲ್ಗಾಮ್ ದಾಳಿ | ಜಮ್ಮು ಕಾಶ್ಮೀರ ಬಂದ್‌ಗೆ ಗ್ರ್ಯಾಂಡ್ ಮುಫ್ತಿ ಸೇರಿದಂತೆ ಮುಸ್ಲಿಂ ಧಾರ್ಮಿಕ ಸಂಘಟನೆಗಳ ಬೆಂಬಲ


