ಬಿಜೆಪಿಯ ತಮಿಳುನಾಡು ಘಟಕದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾರವರ ಕುರಿತು ಕೀಳುಮಟ್ಟದ ಟ್ವೀಟ್ ಮಾಡಿದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೀರೊಧವನ್ನು ಎದುರಿಸುತ್ತಿದೆ.
ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾರವರು ಕಳೆದ ಆರು ತಿಂಗಳಿಂದ ಗೃಹಬಂಧನದಲ್ಲಿದ್ದಾರೆ. ಕಳೆದ ವಾರ ಅವರು ಉದ್ದ ಗಡ್ಡ ಬಿಟ್ಟಿದ್ದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದನ್ನು ಗುರಿಯಾಗಿಸಿಕೊಂಡು ಬಿಜೆಪಿಯ ತಮಿಳುನಾಡು ಘಟಕದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಶೇವಿಂಗ್ ಕಿಟ್ ಕಳಿಸಿಕೊಡುತ್ತೇವೆ ಎಂದು ಕೀಳು ಮಟ್ಟದ ಟ್ರೋಲ್ ಮಾಡಿದೆ.
“ಆತ್ಮೀಯ ಓಮರ್ ಅಬ್ದುಲ್ಲಾ ನಿಮ್ಮ ಭ್ರಷ್ಟ ಸ್ನೇಹಿತರಲ್ಲಿ ಹೆಚ್ಚಿನವರು ಸ್ವತಂತ್ರವಾಗಿ ಹೊರಗಿನ ಜೀವನವನ್ನು ಆನಂದಿಸುತ್ತಿರುವಾಗ ನಿಮ್ಮನ್ನು ಈ ರೀತಿ ನೋಡುವುದು ತುಂಬಾ ಬೇಸರ ತರಿಸಿದೆ. ಹಾಗಾಗಿ ನಮ್ಮ ಪ್ರಾಮಾಣಿಕ ಕೊಡುಗೆಯನ್ನು ದಯೆಯಿಂದ ಸ್ವೀಕರಿಸಿ, ಯಾವುದೇ ಸಹಾಯದ ಸಂದರ್ಭದಲ್ಲಿ ಈ ವಿಷಯದಲ್ಲಿ ಹೆಚ್ಚಿನ ಸಹಾಯಕ್ಕಾಗಿ ನಿಮ್ಮ ಕಾಂಗ್ರೆಸ್ ಪಕ್ಷವನ್ನು ಮುಕ್ತವಾಗಿ ಸಂಪರ್ಕಿಸಿ ಎಂದು ಟ್ರೋಲ್ ಮಾಡಲಾಗಿದೆ.”
Official handle of the BJP’s Tamil Nadu unit. This is their attempt to make light of the “preventive” detention of the former Chief Minister and other leaders for almost 6 months now, with no charges against them https://t.co/LiSJrbT28k
— Nidhi Razdan (@Nidhi) January 28, 2020
ಇದಕ್ಕೆ ಪತ್ರಕರ್ತೆ ನಿಧಿ ರಾಜ್ದನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಇತರ ನಾಯಕರನ್ನು ಸುಮಾರು 6 ತಿಂಗಳುಗಳ ಕಾಲ ಬಂಧನದಲ್ಲಿಟ್ಟಿರುವುದನ್ನು ಬೆಳಕಿಗೆ ತರುವ ಅವರ ಪ್ರಯತ್ನಕ್ಕಾಗಿ ಆ ಫೋಟೊ ಹಾಕಲಾಗಿತ್ತು. ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ. ಆದರೆ ಬಿಜೆಪಿಯ ತಮಿಳುನಾಡು ಘಟಕದ ಅಧಿಕೃತ ಹ್ಯಾಂಡಲ್ ಈ ರೀತಿ ಟ್ವೀಟ್ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.
ಯಾರಾದರೂ ಇಷ್ಟು ಅಸೂಕ್ಷ್ಮ ಮತ್ತು ದ್ವೇಷಪೂರಿತರಾಗಲು ಹೇಗೆ ಸಾಧ್ಯ? ಇದು ನಮ್ಮ ದೇಶದ ಅತಿದೊಡ್ಡ ರಾಷ್ಟ್ರೀಯ ರಾಜಕೀಯ ಪಕ್ಷವು ತಮಗೆ ಆಗದವರ ಬಗ್ಗೆ ಅಪಪ್ರಚಾರ ಮಾಡಲು ಯಾವ ಮಟ್ಟಕ್ಕಿಳಿದಿದೆ ಎಂಬುದನ್ನು ನೋಡಿ ದಿಗಿಲುಗೊಂಡೆ! ನಾಚಿಕೆಯಾಗಬೇಕು ಎಂದು ಮತ್ತೊಬ್ಬ ಪತ್ರಕರ್ತ ರಿಷಿ ಸೂರಿ ಎಂಬುವವರು ಟ್ವೀಟ್ ಮಾಡಿದ್ದಾರೆ.
ಟ್ರೋಲ್ ಮಾಡುವವರನ್ನು ಪ್ರಧಾನಿಯವರ ಫಾಲೋ ಮಾಡುತ್ತಿರುವಾಗ ಬಿಜೆಪಿಯ ಟ್ರೋಲ್ ಬಗ್ಗೆ ನೀರಿಕ್ಷಿಸುವುದೇನಿದೆ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊನ್ನೆ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತದ ಸಂವಿಧಾನವನ್ನು ಗಿಫ್ಟ್ ಮಾಡಿತ್ತು. ಆತ್ಮೀಯ ಪ್ರಧಾನಿಗಳೇ, ಸಂವಿಧಾನವು ಶೀಘ್ರದಲ್ಲೇ ನಿಮ್ಮನ್ನು ತಲುಪುತ್ತಿದೆ. ದೇಶವನ್ನು ವಿಭಜಿಸುತ್ತಿರುವ ನಿಮಗೆ ಸಮಯ ಸಿಕ್ಕಾಗ, ದಯವಿಟ್ಟು ಅದನ್ನು ಓದಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಅದಕ್ಕೆ ಕೋಪಗೊಂಡು ತಮಿಳುನಾಡು ಬಿಜೆಪಿ ಈ ಟ್ರೋಲ್ ಮಾಡಿದೆ ಎನ್ನಲಾಗುತ್ತಿದೆ.
Dear PM,
The Constitution is reaching you soon. When you get time off from dividing the country, please do read it.
Regards,
Congress. pic.twitter.com/zSh957wHSj— Congress (@INCIndia) January 26, 2020


