ಬೆಂಗಳೂರಿನ ರಾಮೇರ್ಶವರಂ ಕೆಫೆ ಸ್ಫೋಟದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿರುವ ಬಿಜೆಪಿ ವಿರುದ್ಧ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ. ‘ಅವರು ಕನ್ನಡಿಗರನ್ನು ನೋಡಬೇಕು’ ಎಂದು ಹೇಳಿದ್ದಾರೆ.
“ಅವರಿಗೆ ಯರ ರಾಜೀನಾಮೆ ಬೇಕೇ? ಯಾರು ಬೇಕಾದರೂ ರಾಜೀನಾಮೆ ಕೊಡುತ್ತೇವೆ. ಅವರು ಕೇವಲ ರಾಜಕೀಯ ಮಾಡಿ ಬೆಂಗಳೂರಿನ ಇಮೇಜ್ ಹಾಳು ಮಾಡುತ್ತಿದ್ದಾರೆ. ಅವರ ಕಾಲದಲ್ಲಿ ಕರ್ನಾಟಕದಲ್ಲಿ ಏನಾಗಿದೆ, ಅವರು ಕನ್ನಡಿಯನ್ನು ನೋಡಬೇಕು. ಅವರು ಕರ್ನಾಟಕಕ್ಕೆ ನೋವುಂಟುಮಾಡಿದರೆ, ಬಿಜೆಪಿ ಹೈಕಮಾಂಡ್ ದೇಶ ಮತ್ತು ತಮ್ಮನ್ನು ನೋಯಿಸುತ್ತಿದೆ’ ಎಂದು ಶಿವಕುಮಾರ್ ಕಿಡಿಕಾರಿದ್ದಾರೆ.
ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೇಂದ್ರ ಅಪರಾಧ ದಳ ಶನಿವಾರ ನಾಲ್ವರನ್ನು ವಶಕ್ಕೆ ಪಡೆದಿದೆ. ಪೊಲೀಸ್ ಮೂಲಗಳ ಪ್ರಕಾರ, ಕೆಫೆಯಲ್ಲಿ ಬಾಂಬ್ ಇಟ್ಟ ವ್ಯಕ್ತಿಗೆ ಅವರು ಸಹಾಯ ಮಾಡಿರಬಹುದು ಎನ್ನಲಾಗುತ್ತಿದೆ.
ಕೆಫೆಯಲ್ಲಿ ಇಡ್ಲಿ ಆರ್ಡರ್ ಮಾಡಿದ ವ್ಯಕ್ತಿಯೇ ಪ್ರಮುಖ ಶಂಕಿತ. ಶಂಕಿತ ವ್ಯಕ್ತಿ ಕೆಫೆಗೆ ಪ್ರವೇಶಿಸಿದ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಸಿಕ್ಕಿವೆ. ತನಿಖೆ ನಡೆಯುತ್ತಿದ್ದು, ಪ್ರಮುಖ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಆರೋಪಿಯ ಫೋನ್ ನಂಬರ್ ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಸ್ಫೋಟದ ಸಮಯದಲ್ಲಿ ಈ ಪ್ರದೇಶದಲ್ಲಿ 500 ಸಕ್ರಿಯ ಸಂಖ್ಯೆಗಳು ಬಳಕೆಯಲ್ಲಿದ್ದವು. ಶಂಕಿತ ಆರೋಪಿ ಬನಶಂಕರಿಯಿಂದ ಐಟಿಪಿಎಲ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಕುಂದಲಹಳ್ಳಿ ಬಳಿ ವೋಲ್ವೋ ಬಸ್ ಸಂಖ್ಯೆ ಕೆಎ-57-ಎಫ್ 186 ಹತ್ತಿ ಸಿಎಂಆರ್‌ಐಟಿ ಕಾಲೇಜು ನಿಲ್ದಾಣದಲ್ಲಿ ಇಳಿದಿದ್ದಾನೆ.
ಸ್ಫೋಟದ ಬಗ್ಗೆ ಬಿಜೆಪಿ ಆರೋಪ
ರಾಜ್ಯದಲ್ಲಿ ಇತ್ತೀಚೆಗೆ ಎದ್ದಿರುವ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳಿಗೂ ಸ್ಫೋಟಕ್ಕೂ ಸಂಬಂಧವಿದೆ ಎಂದು ಬಿಜೆಪಿಯ ರಾಜೀವ್ ಚಂದ್ರಶೇಖರ್ ಶಂಕಿಸಿದ್ದಾರೆ. ‘ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಎತ್ತಲಾಯಿತು ಮತ್ತು ಎರಡು ದಿನಗಳ ನಂತರ, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಸ್ಫೋಟ ಸಂಭವಿಸಿದೆ. ಇವೆರಡರ ನಡುವೆ ಸಂಬಂಧವಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ; ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ವ್ಯಾಪಾರ ಮತ್ಸರ; ಗೃಹ ಸಚಿವರು ಹೇಳಿದ್ದೇನು?


