Homeಮುಖಪುಟಬಿಜೆಪಿ ಸುಳ್ಳಿನ ಕಾರ್ಖಾನೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ: ತೇಜಸ್ವಿ ಯಾದವ್

ಬಿಜೆಪಿ ಸುಳ್ಳಿನ ಕಾರ್ಖಾನೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ: ತೇಜಸ್ವಿ ಯಾದವ್

- Advertisement -
- Advertisement -

ಬಿಜೆಪಿಯನ್ನು ‘ಸುಳ್ಳಿನ ಕಾರ್ಖಾನೆ’ ಎಂದು ವಾಗ್ದಾಳಿ ನಡೆಸಿದ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ನಮ್ಮ ಆರ್‌ಜೆಡಿ ಪಕ್ಷವು ‘ಹಕ್ಕುಗಳು, ಉದ್ಯೋಗಗಳು ಮತ್ತು ಅಭಿವೃದ್ಧಿ’ಗಾಗಿ ನಿಂತಿದೆ ಎಂದು ಭಾನುವಾರ ಪ್ರತಿಪಾದಿಸಿದ್ದಾರೆ.

ಪಾಟ್ನಾದ ಗಾಂಧಿ ಮೈದಾನದಲ್ಲಿ ‘ಜನ್ ವಿಶ್ವಾಸ್ ಮಹಾ ರ‍್ಯಾಲಿ’ಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ, ‘ಬಿಜೆಪಿ ಸುಳ್ಳಿನ ಕಾರ್ಖಾನೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ… ಆದರೆ, ಆರ್‌ಜೆಡಿ ‘ಹಕ್ಕುಗಳು, ಉದ್ಯೋಗಗಳು ಮತ್ತು ಅಭಿವೃದ್ಧಿ’ಗಾಗಿ ಹೋರಾಡುತ್ತಿದೆ. ಬಿಜೆಪಿ ನಾಯಕರು ಸುಳ್ಳು ಭರವಸೆಗಳನ್ನು ನೀಡುತ್ತಾರೆ (ಜುಮ್ಲಾ ಕರ್ತೇ ಹೈನ್)… ಆದರೆ, ನಾವು ಬಿಹಾರ ಮತ್ತು ದೇಶದ ಜನರ ಹಕ್ಕುಗಳು, ಉದ್ಯೋಗಗಳಿಗಾಗಿ ಹೋರಾಡುತ್ತೇವೆ’ ಎಂದು ಅವರು ಹೇಳಿದರು.

ಆರ್‌ಜೆಡಿ ಎಂದರೆ ಎಂ-ವೈ (ಮುಸ್ಲಿಂ ಮತ್ತು ಯಾದವ್) ಪಕ್ಷ ಎಂದು ಕೆಲವರು ಪ್ರತಿಪಾದಿಸಿದ್ದಾರೆ. ಆದರೆ ನಮ್ಮದು ವಾಸ್ತವವಾಗಿ ಎಂ-ವೈ ಮತ್ತು ಬಿಎಎಪಿಯ ಪಕ್ಷವಾಗಿದೆ. ಅಲ್ಲಿ ‘ಬಿ’ ಎಂದರೆ ಬಹುಜನ, ‘ಎ’ ಎಂದರೆ ‘ಅಗ್ಡಾ’ (ಮೇಲ್ಜಾತಿ) ‘ಆದಿ ಆಬಾದಿ’ (ಮಹಿಳೆಯರಿಗೆ) ಮತ್ತು ಬಡವರಿಗೆ ‘ಪಿ’ ಎಂದರು.

ಬಿಹಾರದಲ್ಲಿ ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟ ತೊರೆದು ಎನ್‌ಡಿಎಗೆ ಮರಳಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ‘ರಾಜ್ಯದಲ್ಲಿ ಕಳೆದ 17 ತಿಂಗಳಲ್ಲಿ ಮಹಾಘಟಬಂಧನ್ ಸರ್ಕಾರ ಏನು ಮಾಡಿದೆ? ನಿತೀಶ್ ಅವರು ಕಳೆದ 17 ವರ್ಷಗಳಲ್ಲಿ ಬಿಜೆಪಿ ಜೊತೆಗೆ ಏನನ್ನೂ ಮಾಡಲಾಗಲಿಲ್ಲ’ ಎಂದರು.

ಹಿಂದಿ ಚಲನಚಿತ್ರ ಗೀತೆ ‘ಇಧರ್ ಚಲಾ ಮೈನ್ ಉಧರ್ ಚಲಾ’ ಹಾಡನ್ನು ಉಲ್ಲೇಖಿಸಿದರು ಯಾದವ್, ‘ನಿತೀಶ್ ಚಾಚಾ (ಚಿಕ್ಕಪ್ಪ) ಈ ರೀತಿ ಮಾಡುತ್ತಾರೆ ಮತ್ತು ಆಗಾಗ್ಗೆ ಗುಂಪು ಬದಲಾಯಿಸುತ್ತಾರೆ’ ಎಂದು ಹೇಳಿದರು.

ನಿತೀಶ್ ಕುಮಾರ್ ಸಂಪುಟದಲ್ಲಿರುವ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಸದ್ಯ ಬಿಹಾರದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳಿದ್ದು, ಒಬ್ಬರದ್ದು ಕೊಳಕಾದ ಬಾಯಿ ಮತ್ತೊಂದು ಜೋರು ಬಾಯಿ. ಉಪ ಮುಖ್ಯಮಂತ್ರಿ ಅವರು ಕಳೆದ 14 ವರ್ಷಗಳಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ, ಅವರು ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದು ಆರ್‌ಜೆಡಿ ಟಿಕೆಟ್‌ನಲ್ಲಿ’ ಎಂದು ಸಾಮ್ರಾಟ್ ಚೌಧರಿ ಅವರನ್ನು ಉಲ್ಲೇಖಿಸಿ ಕಿಡಿಕಾರಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಆರೋಪಿಸಿದ ಅವರು, ‘ಮಹಾಮೈತ್ರಿಕೂಟಕ್ಕೆ ಯಾವುದೇ ವ್ಯತ್ಯಾಸವಾಗುವುದಿಲ್ಲ, ಚುನಾವಣೆಯಲ್ಲಿ ಜನರು ಅವರ ಭವಿಷ್ಯವನ್ನು ನಿರ್ಧರಿಸುತ್ತಾರೆ. ಆರ್‌ಜೆಡಿಯ ಐವರು ಶಾಸಕರು ಇತ್ತೀಚೆಗೆ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ’ ಎಂದರು.

ರ‍್ಯಾಲಿಗಾಗಿ ರಾಜ್ಯ ರಾಜಧಾನಿಯಾದ್ಯಂತ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಹಾಕಲಾಯಿತು. ಆರ್‌ಜೆಡಿ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಬೆಳಿಗ್ಗೆ ತುಂತುರು ಮಳೆಯ ನಡುವೆಯೂ ಕಾರ್ಯಕರ್ತರು ಮತ್ತು ವಿರೋಧ ಪಕ್ಷದ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ರ‍್ಯಾಲಿಯಲ್ಲಿ ಭಾಗವಹಿಸಿದರು.

ಇದನ್ನೂ ಓದಿ; ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿಗರು ಒಮ್ಮೆ ಕನ್ನಡಿ ನೋಡಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...