Homeಅಂತರಾಷ್ಟ್ರೀಯಕಪ್ಪು ಹಣ, ಅನಿಲ್ ಅಂಬಾನಿ, ಮೋದಿ, ಅಕೌಂಟಿಗೆ 15 ಲಕ್ಷ, ರಫೇಲ್ ಡೀಲ್: ಒಂದು ಸ್ಫೋಟಕ...

ಕಪ್ಪು ಹಣ, ಅನಿಲ್ ಅಂಬಾನಿ, ಮೋದಿ, ಅಕೌಂಟಿಗೆ 15 ಲಕ್ಷ, ರಫೇಲ್ ಡೀಲ್: ಒಂದು ಸ್ಫೋಟಕ ವರದಿ

ಅನಿಲ್ ಅಂಬಾನಿ, ಅವರ ಪತ್ನಿ ಮತ್ತು ಮಕ್ಕಳ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಳ್ಳಬೇಕೆಂಬ ಮನವಿಯನ್ನು ಸ್ವಿಟ್ಜರ್ಲೆಂಡ್‌ನ ಉನ್ನತ ನ್ಯಾಯಾಲಯ ಅಂಗೀಕರಿಸಿದೆ.

- Advertisement -
- Advertisement -
  • ನೂಪೂರ್ ತಿವಾರಿ

ಕೃಪೆ: ನ್ಯೂಸ್‌ಲಾಂಡ್ರಿ

ರಿಲಯನ್ಸ್ ಗ್ರೂಪ್ ಮುಖ್ಯಸ್ಥ, ಅವರ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಳ್ಳಬೇಕೆಂಬ ಮನವಿಯನ್ನು ಸ್ವಿಟ್ಜರ್ಲೆಂಡ್‌ನ ಉನ್ನತ ನ್ಯಾಯಾಲಯ ಅಂಗೀಕರಿಸಿದೆ.

ಅನಿಲ್ ಅಂಬಾನಿ, ಟೀನಾ ಅಂಬಾನಿ ಮತ್ತು ಅವರ ಇಬ್ಬರು ಮಕ್ಕಳ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಭಾರತೀಯ ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು ಸ್ವಿಸ್ ಫೆಡರಲ್ ನ್ಯಾಯಾಲಯ ಒಪ್ಪಿಕೊಂಡಿದೆ ಎಂದು ಸ್ವಿಸ್ ಪ್ರಕಟಣೆ ಗೊಥಮ್ ಸಿಟಿ ವರದಿ ಮಾಡಿದೆ.

ಭಾರತೀಯ ಹಣಕಾಸು ಸಚಿವಾಲಯದ ವಿದೇಶಿ ತೆರಿಗೆ ಮತ್ತು ಸಂಶೋಧನಾ ವಿಭಾಗದಿಂದ ಪರಸ್ಪರ ಸಹಾಯಕ್ಕಾಗಿ ಕೋರಿಕೆಯನ್ನು ಅನುಮೋದಿಸುವ ನ್ಯಾಯಾಲಯದ ಏಪ್ರಿಲ್ 29ರ ತೀರ್ಪಿನ ಪ್ರತಿ ನ್ಯೂಸ್‌ಲಾಂಡ್ರಿ ಬಳಿಯಿದೆ. ರಿಲಯನ್ಸ್ ಗ್ರೂಪ್ ಮುಖ್ಯಸ್ಥರು (ಅನಿಲ್ ಅಂಬಾನಿ), ಏಪ್ರಿಲ್ 2011ರಿಂದ ಸೆಪ್ಟೆಂಬರ್ 2018ರ ಅವಧಿಯಲ್ಲಿ ವಿದೇಶಿ ಹಣಕಾಸು ವ್ಯವಹಾರಗಳಲ್ಲಿ ತೋರಿದ ಆಸಕ್ತಿಯನ್ನು ಪರೀಕ್ಷಿಸಲು ಅಂಬಾನಿಯ ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡುವಂತೆ ಭಾರತದ ಹಣಕಾಸು ಇಲಾಖೆ ಕೋರಿತ್ತು.

ಈ ವಿನಿಮಯಕ್ಕೆ ಸ್ವಿಟ್ಜರ್ಲೆಂಡ್ ಅನುಮತಿ ನೀಡಬಾರದು ಎಂದು ವಾದಿಸಿ ಪರಸ್ಪರ ಸಹಾಯವನ್ನು ನಿರ್ಬಂಧಿಸಲು ಸಂಬಂಧಪಟ್ಟ ವ್ಯಕ್ತಿಗಳು ಪ್ರಯತ್ನಿಸಿದ್ದಾರೆ ಎಂದು ತೀರ್ಪು ಹೇಳುತ್ತದೆ. ಆದರೆ ಅವರ ಮನವಿಯನ್ನು ವಜಾಗೊಳಿಸಲಾಯಿತು. ಇದು ಭಾರತೀಯ ಅಧಿಕಾರಿಗಳ ಮನವಿಗೆ ಸಿಕ್ಕ ಪುರಸ್ಕಾರವಾಗಿದೆ. ನ್ಯಾಯಾಲಯದ ತೀರ್ಪು ಅಂಬಾನಿ ಕುಟುಂಬವನ್ನು ಸ್ಪಷ್ಟವಾಗಿ ಹೆಸರಿಸುವುದಿಲ್ಲ, ಆದರೆ ಗೋಥಮ್ ಸಿಟಿ (ಸ್ವಿಟ್ಜರ್‌ಲೆಂಡ್‌ನ ಮಾಧ್ಯಮ), ನ್ಯಾಯಾಲಯದ ದಾಖಲೆಗಳಿಂದ ಎ, ಬಿ, ಸಿ ಮತ್ತು ಡಿ ಎಂದು ಉಲ್ಲೇಖಿಸಲ್ಪಟ್ಟ ವ್ಯಕ್ತಿಗಳು ಅನಿಲ್ ಧೀರೂಭಾಯ್ ಅಂಬಾನಿ, ಟೀನಾ ಅನಿಲ್ ಅಂಬಾನಿ, ಜೈ ಅನ್ಮೋಲ್ ಅನಿಲ್ ಅಂಬಾನಿ ಮತ್ತು ಜೈ ಅನ್ಶುಲ್ ಅನಿಲ್ ಅಂಬಾನಿ ಎಂದು ವಿವರಿಸಿದೆ. ಫ್ರೆಡೆರಿಕ್ ಸೆರಾ ಅವರು ನ್ಯಾಯಾಲಯದಲ್ಲಿ ಇವರ ಪರ ವಾದ ಮಾಡಿದ್ದರು.

ನ್ಯಾಯಾಲಯದ ತೀರ್ಪಿನಲ್ಲಿ ಎ, ಬಿ, ಸಿ ಮತ್ತು ಡಿ ಅಂದರೆ, ಅನಿಲ್ ಅಂಬಾನಿ, ಅವರ ಪತ್ನಿ ಮತ್ತು ಇಬ್ಬರು ಪುತ್ರರು ಎಂದು ಗೊಥಮ್ ಸಿಟಿಗೆ ಕಥೆಯನ್ನು ವರದಿ ಮಾಡಿದ ಫ್ರಾಂಕೋಯಿಸ್ ಪಿಲೆಟ್ ಇದನ್ನು ಹೇಗೆ ದೃಢಪಡಿಸುತ್ತಾರೆ? “ನ್ಯಾಯಾಲಯದ ವರದಿಗಾರರಾಗಿ, ಸ್ವಿಸ್ ಸುಪ್ರೀಂಕೋರ್ಟಿನ ಪ್ರತಿಯೊಂದು ತೀರ್ಪಿನಲ್ಲೂ ಪಕ್ಷಗಳ (ವ್ಯಕ್ತಿ ಅಥವಾ ಕಂಪನಿಗಳ) ಹೆಸರನ್ನು ನೋಡಲು ನಮಗೆ ಅವಕಾಶವಿದೆ” ಎಂದು ಅವರು ವಿವರಿಸಿದರು. “ಗುಮಾಸ್ತರ ಕಚೇರಿಗೆ ಖುದ್ದಾಗಿ ಹೋಗುವುದರಿಂದ ಮಾತ್ರ ಇದು ಸಾಧ್ಯ” ಎಂದು ಅವರು ಹೇಳಿದ್ದಾರೆ.
ಸ್ವಿಟ್ಜರ್ಲೆಂಡ್ ಈ ವರ್ಷ ಇಲ್ಲಿಯವರೆಗೆ ಭಾರತದಿಂದ ತೆರಿಗೆ ವಿನಂತಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ ಎಂದು ಪಿಲೆಟ್ ನ್ಯೂಸ್‌ಲಾಂಡ್ರಿಗೆ ತಿಳಿಸಿದರು. ಅವೆಲ್ಲವನ್ನೂ ಫೆಡರಲ್ ಸುಪ್ರೀಂ ಕೋರ್ಟ್ ಅನುಮೋದಿಸಿದೆ ಎಂದೂ ತಿಳಿಸಿದರು.

ಸ್ವಿಸ್ ಬ್ಯಾಂಕ್‌ಗಳ ಗೌಪ್ಯತೆ

ಸ್ವಿಸ್ ಬ್ಯಾಂಕಿಂಗ್ ಗೌಪ್ಯತೆ ಕಾನೂನುಗಳ ಪ್ರಕಾರ, ವಿವಿಧ ದೇಶದ ಖಾಸಗಿ ಬ್ಯಾಂಕುಗಳ ಮೂಲಕ ಶಂಕಿತ ಹಣ ವರ್ಗಾವಣೆಯ ಬಗ್ಗೆ ಸರ್ಕಾರಗಳು ಮಾಹಿತಿ ಪಡೆಯುವುದು ಇಲ್ಲಿವರೆಗೆ ಅಸಾಧ್ಯವಾಗಿತ್ತು. ಆದರೆ ಈ ಪ್ರಕರಣ ಅದನ್ನು ಮುರಿದು ಹಾಕುವ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಸ್ವಿಸ್ ಕಾನೂನಿಗೆ ತನ್ನ ಸರ್ಕಾರಕ್ಕೆ ಆಡಳಿತಾತ್ಮಕ ನೆರವು ನೀಡುವಂತೆ ವಿಶೇಷ ವಿನಂತಿಯ ಅಗತ್ಯವಿರುತ್ತದೆ, ನಂತರ ಮಾಹಿತಿಯನ್ನು ಒದಗಿಸಲು ಸ್ವಿಸ್ ಬ್ಯಾಂಕುಗಳಿಗೆ ಸೂಚನೆ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತದೆ.

ಕಪ್ಪುಹಣ ಇಡಲು ಸುಭದ್ರ ಎಂದು ಸ್ವಿಸ್ ಬ್ಯಾಂಕುಗಳು ಅಪಖ್ಯಾತಿಗೆ ಒಳಗಾಗಿವೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಸ್ವಿಟ್ಜರ್ಲೆಂಡ್ ಸರ್ಕಾರಕ್ಕೆ ಹಲವು ದೇಶಗಳು ಮನವಿ ಮಾಡಿ, ತಮ್ಮ ದೇಶದ ಉದ್ಯಮಿಗಳು, ರಾಜಕಾರಣಿಗಳ ಬ್ಯಾಂಕ್ ವಿವರ ನೀಡಲು ಒತ್ತಾಯಿಸುತ್ತ ಬಂದಿವೆ. ಕೆಲವೊಮ್ಮೆ, ಸರ್ಕಾರಗಳು ತೆರಿಗೆ ಮೂಲಗಳಿಂದ ಆಯ್ದ ಮಾಹಿತಿಯನ್ನು ಪಡೆದುಕೊಳ್ಳುತ್ತವೆ ಅಥವಾ ಅವರ ವಿವೇಚನೆಯಿಂದ ಕಾರ್ಯನಿರ್ವಹಿಸುತ್ತವೆ. ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು “ಪ್ರಭುತ್ವದ ತೆರಿಗೆ ಭಯೋತ್ಪಾದನೆ” ನಡೆಯುತ್ತದೆ.

ಸ್ವಿಸ್ ಬ್ಯಾಂಕ್ ಈಗ ಅಗತ್ಯವಾದ ಮಾಹಿತಿಯನ್ನು ಹಂಚಿಕೊಂಡರೆ, ಅಂಬಾನಿ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ಸಾಬೀತುಪಡಿಸಬಹುದೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಭಾರತೀಯ ಅಧಿಕಾರಿಗಳು ಪೂರ್ಣ ಚಿತ್ರವನ್ನು ಪಡೆಯಲು ಸಹಾಯ ಮಾಡುತ್ತದೆ. ಆದರೂ, ಅಂತಹ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು ಭಾರತೀಯ ಅಧಿಕಾರಿಗಳಿಂದ ಪಾರದರ್ಶಕತೆ ಅಗತ್ಯವಿರುತ್ತದೆ. ಈ ಹಿಂದೆ, ಕಪ್ಪು ಹಣದ ತನಿಖೆಗೆ ಸಹಾಯ ಮಾಡಲು ನರೇಂದ್ರ ಮೋದಿ ಸರ್ಕಾರ ಮುಂದಾಗಿಲ್ಲ ಎಂದು ಹಲವರು ವಿಶಲ್ ಬ್ಲೋವರ್ಸ್ ಆರೋಪಿಸಿದ್ದಾರೆ.

‘2015ರಲ್ಲಿ, ಸ್ವಿಸ್ ಪ್ರಕಟಣೆಯ ಪ್ರಕಾರ, ಅನಿಲ್ ಅಂಬಾನಿ ಫ್ರಾನ್ಸ್‌ನಲ್ಲಿನ ತನ್ನ ರಿಲಯನ್ಸ್ ಗ್ರೂಪ್ ಕಂಪೆನಿಗಳಿಗೆ ಸಂಬಂಧಿಸಿದಂತೆ 140 ಮಿಲಿಯನ್ ಯುರೋಗಳಷ್ಟು ತೆರಿಗೆ ಹೊಂದಾಣಿಕೆಯನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾಗಿದ್ದರು. “ಲೆ ಮಾಂಡೆ (ಫ್ರಾನ್ಸ್ ಮಾಧ್ಯಮ, ಇತ್ತೀಚೆಗೆ ಕೊರೋನಾ ನಿರ್ವಹಣೆಯ ವಿಫಲತೆಗೆ ಮೋದಿ ಕಾರಣ ಎಂದು ಸಂಪಾದಕೀಯ ಬರೆದಿದ್ದ ಪತ್ರಿಕೆ) ಬಹಿರಂಗಪಡಿಸಿದಂತೆ, ಫ್ರಾನ್ಸ್ ದೇಶದ ಡಸಾಲ್ಟ್ ಕಂಪನಿಯು ಭಾರತದೊಂದಿಗೆ ರಫೇಲ್ ಯುದ್ಧವಿಮಾನಗಳ ಮಾರಾಟದ ಬಗ್ಗೆ ಮಾತುಕತೆ ನಡೆಸುತ್ತಿದ್ದಾಗ ಅದೇ ಸಮಯದಲ್ಲಿ ನಡೆದ ಅನಿಲ್ ಅಂಬಾನಿಯವರ ಈ ‘ವಿದ್ಯಮಾನ’ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಮಾರಾಟವು ಪ್ರಭುತ್ವದ ಅತ್ಯುನ್ನತ ಮಟ್ಟದಲ್ಲಿ ಭ್ರಷ್ಟಾಚಾರದ ಅನುಮಾನದಿಂದ ಕಳಂಕಿತವಾಗಿದೆ. ಅದರಲ್ಲಿ ಅನಿಲ್ ಅಂಬಾನಿ ಮುಖ್ಯ ಫಲಾನುಭವಿಗಳಲ್ಲಿ ಒಬ್ಬರು ಎಂದು ಹೇಳಲಾಗಿದೆ” ಎಂದು ಗೊಥಮ್ ಸಿಟಿ ವರದಿ ಹೇಳುತ್ತದೆ.

ಅಗತ್ಯವಾದ ಅನುಭವ ಮತ್ತು ವಿವರಗಳನ್ನು ಹೊಂದಿಲ್ಲದಿದ್ದರೂ ಸಹ, ಇಂಡೋ-ಫ್ರೆಂಚ್ ರಫೇಲ್ ಫೈಟರ್ ಜೆಟ್ ವ್ಯವಹಾರದಲ್ಲಿ ಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್ ಅನ್ನು ಡಸಾಲ್ಟ್‌ನ ಕೈಗಾರಿಕಾ ಪಾಲುದಾರನನ್ನಾಗಿ ಮಾಡಲಾಗಿದೆ ಎಂದು ಫ್ರೆಂಚ್ ಸುದ್ದಿ ಪ್ರಕಟಣೆ ಮೀಡಿಯಾಪಾರ್ಟ್ ಬಹಿರಂಗಪಡಿಸಿತ್ತು. ಆಗ 2018ರಲ್ಲಿ ಅಂಬಾನಿ ವಿರುದ್ಧ ಭ್ರಷ್ಟಾಚಾರದ ಅನುಮಾನಗಳು ಎದ್ದವು. ಒಪ್ಪಂದದ ಪ್ರಕಾರ, ರಿಲಯನ್ಸ್ ಡಿಫೆನ್ಸ್‌ಗಾಗಿ ಡಸಾಲ್ಟ್ 30,000 ಕೋಟಿ ರೂ.ಗಳ ವ್ಯವಹಾರವನ್ನು ನೀಡಿತು!

ಫ್ರೆಂಚ್ ಪ್ರಕಟಣೆಯು ಆಗಿನ ಫ್ರೆಂಚ್ ಅಧ್ಯಕ್ಷರಾಗಿದ್ದ ಫ್ರಾಂಕೋಯಿಸ್ ಹೊಲಾಂಡ್ ಅವರನ್ನು ಉಲ್ಲೇಖಿಸಿತ್ತು: “ಇದರಲ್ಲಿ ನಾವು ಯಾವುದೇ ಹೇಳಿಕೆಯನ್ನು ಹೊಂದಿಲ್ಲ. ಭಾರತ ಸರ್ಕಾರ ಈ ಸೇವಾ ಗುಂಪನ್ನು (ಸರ್ವಿಸ್ ಗ್ರೂಪ್- ಅನಿಲ್ ಅಂಬಾಮಿಯ ಕಂಪನಿ) ಪ್ರಸ್ತಾಪಿಸಿತು ಮತ್ತು ಡಸಾಲ್ಟ್ ಕಂಪನಿ ಅಂಬಾನಿ ಸಮೂಹದೊಂದಿಗೆ ಮಾತುಕತೆ ನಡೆಸಿತು. ನಮಗೆ ಆಯ್ಕೆ ಇರಲಿಲ್ಲ, ನಮಗೆ ನೀಡಿದ ಪಾಲುದಾರನನ್ನು ನಾವು ಒಪ್ಪಿಕೊಂಡಿದ್ದೇವೆ…..’

2016 ರಲ್ಲಿ ಮೋದಿ ನೇತೃತ್ವದ ಸರ್ಕಾರ, 7.8 ಬಿಲಿಯನ್ ಯೂರೋ ಒಪ್ಪಂದ ಕುರಿತಂತೆ ಆಗಿನ ಫ್ರೆಂಚ್ ಅಧ್ಯಕ್ಷರಾಗಿದ್ದ ಫ್ರಾಂಕೋಯಿಸ್ ಹೊಲಾಂಡ್ ಅವರ ಹೇಳಿಕೆಯು ಭ್ರಷ್ಟಾಚಾರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು. ಒಪ್ಪಂದದ ಪ್ರಮುಖ ಫಲಾನುಭವಿ ಎಂದು ಅನಿಲ್ ಅಂಬಾನಿಯನ್ನು “ಆಯ್ಕೆ ಮಾಡಲಾಗಿದೆ” ಎಂದು ತೋರುತ್ತದೆ ಎಂಬುದು ಮೇಲ್ನೋಟಕ್ಕೇ ಗೊತ್ತಾಗಿತ್ತು. ಆಗಿನ ಫ್ರೆಂಚ್ ಅಧ್ಯಕ್ಷರ ಪಾಲುದಾರ ನಟ ಜೂಲಿ ಗಯೆತ್‌ಗೆ ರಿಲಯನ್ಸ್ ಗ್ರೂಪ್ ಹಣ ನೀಡಿದೆ ಎಂದು ತಿಳಿದುಬಂದಿತ್ತು.

2008 ರಲ್ಲಿ ಫ್ರಾಂಕೊ-ಇಟಾಲಿಯನ್ ವಿಶಲ್ ಬ್ಲೋವರ್ ಹೆರ್ವೆ ಫಾಲ್ಸಿಯಾನಿ ಸೋರಿಕೆ ಮಾಡಿದ ಎಚ್‌ಎಸ್‌ಬಿಸಿ ಪಟ್ಟಿಯಲ್ಲಿ ಅನಿಲ್ ಅಂಬಾನಿಯ ಹೆಸರನ್ನು ಗುರುತಿಸಲಾಗಿದೆ ಮತ್ತು ನಂತರ ಅದೇ ಡೇಟಾವನ್ನು ಬಳಸಿಕೊಂಡು 2015 ರಲ್ಲಿ ಸ್ವಿಸ್‌ಲೀಕ್ಸ್‌ನಲ್ಲಿ ಇದನ್ನು ಬಹಿರಂಗ ಮಾಡಲಾಗಿದೆ.  ಅನಿಲ್ ಅಂಬಾನಿಯ ಸಹೋದರ ಮುಖೇಶ್ ಅಂಬಾನಿಯನ್ನೂ ಈ ಪಟ್ಟಿಗಳಲ್ಲಿ ಹೆಸರಿಸಲಾಗಿದೆ. ಸ್ವಿಟ್ಜರ್ಲೆಂಡ್, ದಶಕಗಳಿಂದ, ವಿಶ್ವದ ಪ್ರಮುಖ ತೆರಿಗೆ ಆಶ್ರಯ ತಾಣಗಳಲ್ಲಿ ಒಂದಾಗಿದೆ. ಅಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಸೂಪರ್ ಶ್ರೀಮಂತರು ದೊಡ್ಡ ಪ್ರಮಾಣದ ಹಣವನ್ನು ಮರೆಮಾಡಬಹುದು. ಅದು ಹಣಕಾಸು ಅಧಿಕಾರಿಗಳಿಂದ ಕಂಡುಹಿಡಿಯುವುದು ಕಷ್ಟ ಅಥವಾ ಅಸಾಧ್ಯವಾಗುತ್ತದೆ.

ಮೋದಿಯವರ ಕಪ್ಪುಹಣದ ಬೇಟೆ, ಅಕೌಂಟಿಗೆ 15 ಲಕ್ಷ, ರಫೇಲ್ ಡೀಲ್, ಅನಿಲ್ ಅಂಬಾನಿಗೆ ನೆರವು ಮತ್ತು ಸ್ವಿಸ್ ಬ್ಯಾಂಕ್‌ಗಳ ಮರ್ಮ ಈ ಪ್ರಕರಣದಲ್ಲಿ ಒಂದಕ್ಕೊಂದು ತಳುಕು ಹಾಕಿಕೊಂಡಿದೆ.

(ನೂಪುರ್ ತಿವಾರಿ ಪ್ಯಾರಿಸ್‌ನಲ್ಲಿ ನೆಲೆಸಿರುವ ಸ್ವತಂತ್ರ ಪತ್ರಕರ್ತರು. ಕೃಪೆ: ದಿ ನ್ಯೂಸ್ ಲ್ಯಾಂಡ್ರಿ)

ಕನ್ನಡಕ್ಕೆ: ಪಿ.ಕೆ.ಮಲ್ಲನಗೌಡರ್


ಇದನ್ನೂ ಓದಿ: ಸರ್ಕಾರ ಕೈಚೆಲ್ಲಿ ಕುಳಿತಾಗ ಕೈಹಿಡಿದು ನಡೆಸಿದ ಮಾನವೀಯ ಮನಸ್ಸುಗಳಿಗೊಂದು ಸಲಾಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....