Homeಕರ್ನಾಟಕಅಮಾಯಕ ಹಿಂದೂ ಹುಡುಗ ಶ್ರೇಯಸ್ ಸಾವಿಗೆ ಭಜರಂಗಿಗಳು ಕಾರಣರೇ? 

ಅಮಾಯಕ ಹಿಂದೂ ಹುಡುಗ ಶ್ರೇಯಸ್ ಸಾವಿಗೆ ಭಜರಂಗಿಗಳು ಕಾರಣರೇ? 

- Advertisement -
- Advertisement -

“ನನ್ನ ಮಗ ಯಾರ ತಂಟೆಗೂ ಹೋಗೋನಲ್ಲ… ಮನೆಯ ಜಗುಲಿ ಮೇಲೆ ತನ್ನ ಪಾಡಿಗೆ ತಾನು ಕುಳಿತಿದ್ದವನನ್ನು ಬಿಜೆಪಿಯ ಪಾತಕ ಸ್ವಭಾವದ ಇಬ್ಬರು ಪುಢಾರಿಗಳು ಪ್ಲಾನ್‌ಮಾಡಿ ಏಳು ಕಿ.ಮೀ ದೂರದ ದುರ್ಗಮ ಕಾಡಿನ ಹೊಳೆ ಹತ್ತಿರ ಕರೆದೊಯ್ದು ಕಗ್ಗೊಲೆ ಮಾಡಿದ್ದಾರೆ… ಅಲ್ಲಿಗೆ ಹೋಗಲು ಸರಿಯಾದ ದಾರಿಯೂ ಇಲ್ಲ…. ಏಳೆಂಟು ಅಡಿಯಷ್ಟು ಆಳ ನೀರು ಹರಿವ ಆ ಹೊಳೆಗೆ ಮೀನು ಹಿಡಿಯಲಿಕ್ಕೂ ಯಾರೂ ಹೋಗೋದಿಲ್ಲ…. ಅಂಥ ಕಡೆ ನನ್ನ ಮಗನ ಕರೆದೊಯ್ದು ಕೊಂದು ಹಾಕಿದ್ದಾರೆ…. ನನ್ನ ಮನೆ ದೀಪವೇ ಆರಿಹೋಗಿದೆ…” ಎಂದು ಆ ತಾಯಿ ಭೋರೆಂದು ಬಿಕ್ಕಳಿಸುವಾಗ ಎಂಥವರ ಕರುಳು ಚುರ್ ಅನ್ನದೇ ಇರದು!!

ಆಕೆ ಬ್ರಹ್ಮಾವರ ತಾಲ್ಲೂಕಿನ ಹೊಸೂರು ಗ್ರಾಮದ ಕುರ್ಪಾಡಿಯಲ್ಲಿ ಬೀಡಿ ಕಟ್ಟಿ ಬದುಕು ಸಾಗಿಸುವ ಶೋಭಾ ಶೇರ್ವೆಗಾರ್. ಗಂಡನಿಗೆ ಅನಾರೋಗ್ಯ, ಇರುವ ಚೂರುಪಾರು ಬಂಗಾರ ಗಿರವಿಯಿಟ್ಟು, ಕೂಲಿ ಮಾಡಿ ತನ್ನೆರಡು ಮಕ್ಕಳನ್ನು ಓದಿಸುತ್ತಿದ್ದ ಆಕೆ ಹಿರಿಯ ಮಗ ಶ್ರೇಯಸ್‌ನನ್ನು ಅನ್ಯಾಯವಾಗಿ ಕಳಕೊಂಡ ನೋವಿನಲ್ಲಿ ಜರ್ಜರಿತಳಾಗಿಹೋಗಿದ್ದಾಳೆ. ವಯಸ್ಸಿನಲ್ಲಿ ಶ್ರೇಯಸ್‌ಗಿಂತ ಎರಡು ಪಟ್ಟು ದೊಡ್ಡವನಾದ ಸದಾನಂದ ಪೂಜಾರಿ ಮತ್ತಾತನ ಶಿಷ್ಯ ಯೋಗೀಶ್ ಪೂಜಾರಿ ಎಂಬ ರೌಡಿಗಳೇ ಕೊಲೆ ಮಾಡಿದ್ದಾರೆಂದು ಆಕೆ ನೇರಾನೇರ ಹೇಳುತ್ತ ಬಾಯ್ಬಾಯಿ ಬಡಿದುಕೊಳ್ಳುತ್ತಿದ್ದಾಳೆ. ಈ ಇಬ್ಬರೂ ಪಕ್ಕಾ ಭಜರಂಗಿ ಭೂಪರು ಹಲವು ದೋನಂಬರ್ ದಂಧೆ-ದೊಂಬಿಯ ಈ ಧೀರರ ಬಗ್ಗೆ ಕರ್ಜೆ-ಕಳ್ತೂರು, ಹೊಸೂರು ಪರಿಸರದಲ್ಲಿ ಯಾರೊಬ್ಬರಲ್ಲೂ ಒಳ್ಳೆಯ ಅಭಿಪ್ರಾಯವಿಲ್ಲ.

ಸದಾನಂದ ಪೂಜಾರಿ

ಆ ತಾಯಿ ಆರೋಪಿಸುತ್ತಿರುವ ಸದಾನಂದ ಪೂಜಾರಿ ಯಾರು ಎಂದು ಹುಡುಕಿದರೆ ಗಾಬರಿಯಾಗುತ್ತದೆ. ಹುಡುಗಿಯರಂತೂ ಸದಾನಂದ ಪೂಜಾರಿಯ ನೆರಳು ಕಂಡರೇ ಸಾಕು, ದೂರದಲ್ಲೇ ಅದೃಶ್ಯರಾಗಿ ಬಿಡುತ್ತಾರೆ. ಇಂಥ ಸದಾನಂದ ಪೂಜಾರಿಯ ದಾದಾಗಿರಿ ಯಾವ ರೇಂಜಿಗಿದೆಯೆಂದರೆ, ಕೌಬ್ರಿಗೇಡ್, ಅನೈತಿಕ ಪೊಲೀಸ್ ಪಡೆಯೂ ಆತ ಖತರ್‌ನಾಕ್ ಅಂತಲೇ ಬ್ರಾಂಡ್ ಮಾಡಿಬಿಟ್ಟಿದೆ!! ಆದರೆ ಪೊಲೀಸರು ಮಾತ್ರ ಅದ್ಯಾಕೋ ಸುಮ್ಮನಿದ್ದಾರೆ. ಖಡಕ್ ಎಸ್ಪಿ ನಿಶಾ ಜೇಮ್ಸ್‌ಗೂ ಏನು ಮಾಡೋದಂತಲೇ ಹೊಳೆಯುತ್ತಿಲ್ಲ. ಉಡುಪಿ-ಬ್ರಹ್ಮಾವರದ ಶಾಸಕ ರಂಗೀಲಾ ರಘುಪತಿಭಟ್ಟನ ಅತ್ಯಾಪ್ತ ಸರ್ಕಲ್ಲಿನ ಧಾಂಡಿಗ ಈ ಸದಾನಂದ ಪೂಜಾರಿ ಎಂಬುದೇ ಪೊಲೀಸರ ಕೈಕಟ್ಟಿಹಾಕಿಬಿಟ್ಟಿದೆಯೆಂದು ಜನರಾಡಿಕೊಳ್ಳುತ್ತಿದ್ದಾರೆ…….

ಯೋಗೇಶ್

ಅಂದು ನವೆಂಬರ್ ಐದನೇ ತಾರೀಖು ಮಧ್ಯಾಹ್ನ 12;30ರ ಸುಮಾರಿಗೆ ಪಕ್ಕದ ಮನೆಯ ರಾಕೇಶ್ ಎಂಬ ಹುಡುಗ ಬಂದು ಮೀನು ಹಿಡಿಯಲು ಹೋಗೋಣ ಎಂದು ಶ್ರೇಯಸ್‌ನ ಕರೆದಿದ್ದಾರೆ. ಇಲ್ಲ ನಂಗೆ ಓದೋದಿದೆ ಎಂದು ಹೇಳಿದ್ದಾನೆ ಶ್ರೇಯಸ್. ಒತ್ತಾಯ ಮಾಡಿ ತನ್ನ ಬೈಕಲ್ಲಿ ರಾಕೇಶ್ ಆತನ ಕರೆದುಕೊಂಡು ಮುಡಿಸಾಲು ಹೊಳೆಬಳಿ ಹೋಗಿದ್ದಾನೆ. ಅಲ್ಲಿ ಸದಾನಂದ ಪೂಜಾರಿ ತನ್ನ ಚೇಲಾ ಯೋಗೀಶ್ ಜೊತೆ ತೋಟೆ (ಸ್ಫೋಟಕ) ಹಾಕಿ ಮೀನು ಹಿಡಿಯುತ್ತಿರುತ್ತಾನೆ. ಕೆಲದಿನಗಳ ಹಿಂದೆ ಸಂತೆಕಟ್ಟೆಯಲ್ಲಿ ನಡೆದ ಶಾರದೋತ್ಸವ ಮೆರವಣಿಗೆ ಸಂದರ್ಭದಲ್ಲಿ ಶ್ರೇಯಸ್ ಮತ್ತವನ ಗೆಳೆಯರ ಮೇಲೆ ವಿನಾಕಾರಣ ಮುಗಿಬಿದ್ದಿದ್ದ ಸದಾನಂದ ಪೂಜಾರಿ-ಯೋಗೀಶ್ ಪೂಜಾರಿ ಕಂಡಾಗ ಆತ ಗಾಬರಿಗೆ ಬಿದ್ದಿರಬೇಕು. ಯಾಕೆ ಉಪಾಯವಾಗಿ ರಾಕೇಶ್ ತನ್ನನ್ನು ವೈರಿಗಳ ಕೈಗೆ ಕೊಡುತ್ತಿದ್ದಾನೆಂಬ ಭಯಕ್ಕೂ ಬಿದ್ದಿರಲೇಬೇಕು.

ಹುಡುಗಿ ಒಬ್ಬಳ ವಿಷಯವಾಗಿ ಸದಾನಂದ ಪೂಜಾರಿ ಮತ್ತು ಶ್ರೇಯಸ್ ನಡುವೆ ವೈಮನಸ್ಸು ಬೆಳೆದಿತ್ತು. ಸುರಸುಂದರಾಂಗನೂ, ಪ್ರತಿಭಾನ್ವಿತ ವಿದ್ಯಾರ್ಥಿಯೂ, ಪ್ರಸಿದ್ಧ ವಾಲಿಬಾಲ್ ಪಟುವೂ ಆಗಿದ್ದ ಶ್ರೇಯಸ್‌ಗೆ ಬುಡಕಟ್ಟು ಸಮುದಾಯದ ಚೆಂದದ ಸಹಪಾಠಿ ಜತೆ ಅನ್ಯೋನ್ಯ ಗೆಳೆತನವಿತ್ತು. ಆ ಬಡವರ ಮನೆ ಹುಡುಗಿ ಮೇಲೆ ಸದಾನಂದ ಕಣ್ಣುಹಾಕಿದ್ದ. ಹೇಗಾದರೂ ಮಾಡಿ ಆಕೆಯನ್ನು ತನ್ನ ಅಡ್ಡೆಗೆ ತಂದುಬಿಡುವಂತೆ ಶ್ರೇಯಸ್‌ಗೆ  ಆತ ಒತ್ತಡ ಹಾಕುತ್ತಲೇ ಇದ್ದ. ಇದೇ ಕಾರಣಕ್ಕೆ ಶಾರದೋತ್ಸವ ಹೊತ್ತಲ್ಲಿ ಶ್ರೇಯಸ್‌ಗೆ ಹೆದರಿಸಲು ಸದಾನಂದ ಗ್ಯಾಂಗ್ ಕಟ್ಟಿಕೊಂಡುಹೋಗಿದ್ದ. ಶ್ರೇಯಸ್‌ನ ಪಳಗಿಸಲು ವಿಫಲವಾಗಿದ್ದ ಸದಾನಂದ ಆತನ ಮನ ಒಲಿಸಲಿಕ್ಕೋ ಅಥವಾ ಬೆದರಿಸಲಿಕ್ಕೋ ಭೀಭತ್ಸ ಹೊಳೆ ಹತ್ತಿರ ಕರೆಸಿಕೊಂಡಿದ್ದನಾ ಎಂಬ ಅನುಮಾನ ಊರಲ್ಲಿ ಮಡುಗಟ್ಟಿದೆ.

ಹೊಳೆಯಿಂದ ಹೊರತಂದ ಶ್ರೇಯಸ್‌ನ ಮೃತದೇಹ ಕಂಡವರಿಗೆ ಅದು ನೀರಿಗೆ ಬಿದ್ದು ಸಾವು ಅನ್ನಿಸುತ್ತಿಲ್ಲ. ಕೊಲೆ ಎಂಬ ಅನುಮಾನ ಮೂಡಲು ಇದಕ್ಕೆ ಬಲವಾದ ಸಾಂದರ್ಭಿಕ ಸಾಕ್ಷ್ಯಗಳೂ ಇವೆ. ತಾವು ನೀರಿಗೆ ಬಿದ್ದ ಶ್ರೇಯಸ್‌ನ ಬಚಾಯಿಸಲು ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ ಎನ್ನುತ್ತಿರುವ ಸದಾನಂದ ಮತ್ತು ಯೋಗೀಶನ ಬಟ್ಟೆ ಒಂಚೂರು ಒದ್ದೆಯಾಗಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಶ್ರೇಯಸ್‌ನ ಕುತ್ತಿಗೆಯಲ್ಲಿ ಗಾಯದ ಗುರುತೂ ಇತ್ತು. ನಡುವಯಸ್ಸಿಗೆ ಹತ್ತಿರವಿರುವ ಸದಾನಂದನೊಂದಿಗೆ ಹತ್ತೊಂಬತ್ತರ ಪೋರ ಶ್ರೇಯಸ್‌ಗೆ ಮೀನು ಹಿಡಿಯಲು ಜತೆಯಾಗಿ ಹೋಗುವಂತ ದೋಸ್ತಿ ಇರಲು ಸಾಧ್ಯವೇ ಇಲ್ಲ. ಅಲ್ಲದೆ ಹುಡುಗಿ ವಿಷಯವಾಗಿ ಸದಾನಂದ ಸತಾಯಿಸಲು ಶುರುಮಾಡಿದ ನಂತರವಂತೂ ಶ್ರೇಯಸ್ ಆತನ ಫೋನ್ ಕಾಲ್ ಕೂಡ ಸ್ವೀಕರಿಸದೆ ಅವಾಯ್ಡ್ ಮಾಡುತ್ತಿದ್ದನಂತೆ ಎನ್ನುವ ಅವನ ಸ್ನೇಹಿತರು ಶ್ರೇಯಸ್‌ನ ಹೆಣ ಕಂಡ ಹತ್ತಿರದವರು ಆತ ನೀರೇ ಕುಡಿದಿಲ್ಲವೆಂದು ದೃಢವಾಗಿ ಹೇಳುತ್ತಾರೆ.

ಇದೆಲ್ಲ ಸಹಜವಾಗೇ ಕೊಲೆಯ ಶಂಕೆ ಮೂಡಿಸುತ್ತದೆ. ಹೆಣಸಿಕ್ಕ ನಂತರ ಬ್ರಹ್ಮಾವರದ ಪೊಲೀಸರ ವರ್ತನೆಯೂ ಏನೋ ಮುಚ್ಚಿಹಾಕಲು ತಿಣುಕಾಡುತ್ತಿರುವಂತಿದೆ. ಮಣಿಪಾಲದಲ್ಲಿ ಪೋಸ್ಟ್ಮಾರ್ಟಮ್ ನಡೆಯುತ್ತಿದ್ದಾಗ ಸಬ್‌ಇನ್ಸ್ಪೆಕ್ಟರ್ ರಾಘವೇಂದ್ರ ವೈದ್ಯರ ಬಳಿಯೇ ಇದ್ದದ್ದು ಏಕೆ? ಪ್ರಕರಣ ನಡೆದು ಎರಡು ವಾರವಾದರೂ ಪೊಲೀಸರೇಕೆ ಹುಡುಗನ ತಾಯ್ತಂದೆಯ ಹೇಳಿಕೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ? ಶಾಸಕ ರಘುಪತಿ ಭಟ್ಟರ ರಹಸ್ಯ ನಿರ್ದೇಶನ ಪೊಲೀಸರು ಪಾಲಿಸುತ್ತಿದ್ದಾರಾ? ಸದಾನಂದ ಪೂಜಾರಿಯ “ಇತಿಹಾಸ” ಗೊತ್ತಿದ್ದೂ ಪೊಲೀಸರೇಕೆ ಕಾನೂನಿನ ಕುಣಿಕೆ ಬಿಗಿಮಾಡುತ್ತಿಲ್ಲಾ? ಇಂಥ ಚರ್ಚೆ ಈಗ ಉಡುಪಿ-ಬ್ರಹ್ಮಾವರದಾದ್ಯಂತ ಬಿರುಸಾಗಿ ಸಾಗಿದೆ.

ಶ್ರೇಯಸ್‌ನ ಸಂಶಯಾಸ್ಪದ ಸಾವಿನ ಪ್ರಕರಣದಲ್ಲಿ ಸದಾನಂದ ಪೂಜಾರಿ “ಅಮಾಯಕ”ನೆಂದು ಹೇಳಲು ಸ್ಥಳೀಯರಿಗೆ ಕಾರಣಗಳೇ ಸಿಗುತ್ತಿಲ್ಲ. ಸದ್ಯಕ್ಕೆ ಅಕ್ರಮ ಮರಳು ದಂಧೆಯಲ್ಲಿ ಹೆಬ್ರಿ ಪೊಲೀಸ್ ಸ್ಟೇಷನ್‌ನಲ್ಲೇ ರೌಡಿ ಶೀಟರ್ ಎಂಬ ಕೀರ್ತಿಯೂ ಇದೆ. ತನಗೆ ಎಮ್ಮೆಲ್ಲೆ ಸಾಹೇಬರ ಬಲವಿರುವುದರಿಂದ ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುತ್ತೇನೆಂಬ ಪೊಗರಿನ ಸದಾನಂದ ಕರ್ಜೆ ಪರಿಸರದಲ್ಲಿ ಬಾರಾಭಾನ್ಗಡಿ ಮಾಡುತ್ತಲೇ ಇದ್ದಾನೆ.  ಕೆಲವು ದಿನಗಳ ಹಿಂದೆ ಪಾಪದವರೊಬ್ಬರ ಮನೆಯ ಗೇಟು ಕಿತ್ತು ಎಲ್ಲೋ ಎಸೆದಿದ್ದ ಸದಾನಂದನ ಗ್ಯಾಂಗ್ ಮೇಲೆ ಕಂಪ್ಲೇಂಟೂ ಆಗಿದೆ. ಕಳೆದ ಡಿಸೆಂಬರ್‌ನಲ್ಲಿ ಕರ್ಜೆಯ ಮಹಾಲಿಂಗೇಶ್ವರ ದೇವಳದ ಆನುವಂಶಿಕ ಮೊಕ್ತೇಸರ ಮತ್ತು ಅರ್ಚಕನ ಬೆತ್ತಲೆ ಮಾಡಿ ಹಲ್ಲೆ ನಡೆಸಿದ ಪ್ರಕರಣ ಕೇಸೂ ಈ ಗ್ಯಾಂಗಿನ ಮೇಲಿದೆ. ದಿನಕ್ಕೊಂದು ಅನಾಹುತ-ಅವ್ಯವಹಾರ ಮಾಡುವ ಸದಾನಂದನ ತಂಡ ಮುಗ್ಧ ಶ್ರೇಯಸ್‌ನ ಸಾಯಿಸಿಲ್ಲವೆಂದು ಹೇಳೋದಾದರೂ ಎನ್ನುವುದು ಊರವರ ಅಭಿಪ್ರಾಯ.

ದುರ್ಬಲ-ಅಸಹಾಯಕ ಶ್ರೇಯಸ್ ಹೆತ್ತವರಿಗೆ ಎಸ್ಪಿ ನಿಶಾ ಮೇಡಮ್ ನ್ಯಾಯ ಕೊಡಿಸುವರಾ? ಒಂದು ವಾರದಲ್ಲಿ ಸರಿಯಾದ ತನಿಖೆ ನಡೆಯದಿದ್ದರೆ ಎಸ್ಪಿ ಕಚೇರಿ ಎದುರು ಧರಣಿ ಕುಳಿತುಕೊಳ್ಳುವುದಾಗಿ ಮಾಜಿ ಶಾಸಕ ಪ್ರಮೋದ್ ಮಧ್ವಾರಾಜ್ ಆವಾಜ್ ಹಾಕಿದ್ದಾರೆ. ಆಗಲೇ ಹತ್ತು ದಿನ ಕಳೆದಿದೆ. ಶ್ರೇಯಸ್ ತಾಯ್ತಂದೆ ಪ್ರಮೋದ್‌ರನ್ನು ನಂಬಿಕೊಂಡಿದ್ದಾರೆ. ಏಳು ಮೀನುಗಾರರ ಸುವರ್ಣ ತ್ರಿಭುಜ ನೋಟನ್ನು ಮುಳುಗಿಸಿದ ನೇವಿ ಹಡಗು ಐಎಸ್‌ಎಸ್ ಕೊಚ್ಚಿನ್ ಪ್ರಕರಣ ತಾರ್ಕಿಕ ಅಂತ್ಯಕ್ಕೆ ತಲುಪಿಸದ ಪ್ರಮೋದ್ ಮಧ್ವರಾಜ್ ಶ್ರೇಯಸ್ ಕೇಸ್ ಗಂಭೀರವಾಗಿ ಪರಿಗಣಿಸಿದ್ದಾರಾ? ಎಂಬ ಪ್ರಶ್ನೆ ಏಳುವುದು ಸಹಜವಾಗಿದೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಆದರೆ ಕೇಂದ್ರ ಮತ್ತು ರಾಜ್ಯ; ಎರಡೂ ಕಡೆ ಮನುವಾದಿಗಳೇ ಅಧಿಕಾರದಲ್ಲಿ ಇರುವುದರಿಂದ ಇದು ಸಾಧ್ಯವಾ?

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...