Homeಕರೋನಾ ತಲ್ಲಣಬೀದಿಗೆ ಬಿದ್ದ ಲೋಹದ ಮೇಲೆ ಚಿತ್ತಾರ ಮೂಡಿಸುವ ಒನಿಪೆಂಟಾದ ಕಲಾವಿದರ ಬದುಕು

ಬೀದಿಗೆ ಬಿದ್ದ ಲೋಹದ ಮೇಲೆ ಚಿತ್ತಾರ ಮೂಡಿಸುವ ಒನಿಪೆಂಟಾದ ಕಲಾವಿದರ ಬದುಕು

- Advertisement -
- Advertisement -

ಒನಿಪೆಂಟಾ ಆಂಧ್ರಪ್ರದೇಶದ ಒಂದು ಚಿಕ್ಕ ಹಳ್ಳಿ. ಹಿತ್ತಾಳೆ, ಕಂಚಿನ ಮೇಲೆ ಕುಸುರಿ ಕಲೆಗಾಗಿ ಜಗತ್‌ಪ್ರಸಿದ್ದವಾಗಿದ್ದ ಊರು. ದೇಶದ ಮೂಲೆ ಮೂಲೆಯಿಂದ, ಜಗತ್ತಿನ ನಾನಾ ದೇಶಗಳಿಂದ ಬರುವ ಪ್ರವಾಸಿಗಳಿಂದ ಒನಿಪೆಂಟಾ ಹಳ್ಳಿ ಒಂದು ಕಾಲದಲ್ಲಿ ತುಂಬಿರುತ್ತಿತ್ತು. ಬೇರೆ ಬೇರೆ ಭಾಷೆಯ ಜನರ ಮಾತಿನ ಕಲರವ ಕೇಳುತ್ತಿತ್ತು.  ಚೌಕಾಸಿಯ ವ್ಯಾಪಾರಗಳು ನಡೆಯುತ್ತಿತ್ತು. ಇಂದು ಒನಿಪೆಂಟಾದಲ್ಲಿ ಹೇಳಲಿಕ್ಕೆ ಏನೂ ಇಲ್ಲ. ಪ್ರವಾಸಿಗಳಿಲ್ಲ. ಕಲಾವಿದರೂ ಊರು ಬಿಡುವ ಹಂತಕ್ಕೆ ತಲುಪಿದ್ದಾರೆ. ಕೊರೋನಾ ಸಾಂಕ್ರಾಮಿಕದ ಆರ್ಥಿಕ ಹೊಡೆತಕ್ಕೆ ದೇಶದಲ್ಲಿ ನೂರಾರು ಕಸುಬುಗಳು ನಾಶವಾಗಿವೆ. ಅದರೆ ನಡುವೆ ಒನಿಪೆಂಟಾದ ಹಿತ್ತಾಳೆಯ ಕಲಾವಿದರ ಬದುಕು ಇನ್ನಷ್ಟು ದುಸ್ತರವಾಗಿದೆ.

ಕಳೆದ 15 ತಿಂಗಳುಗಳಿಂದ ಹಿತ್ತಾಳೆಯ ಕಲೆಯನ್ನೇ ನಂಬಿ, ಲೋಹದಲ್ಲಿ ಜೀವ ಹಿಡಿದು ಬದುಕುತ್ತಿದ್ದ ಒನಿಪೆಂಟಾ ಕಲಾವಿದರು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ದೇವಸ್ಥಾನಗಳು, ಶಾಲೆ – ಕಾಲೇಜುಗಳು, ಮಾರುಕಟ್ಟೆಗಳು ಕೊರೋನಾ ಕಾರಣಕ್ಕೆ ಬಂದ್‌ ಆಗಿರುವುದರಿಂದ ಹಿತ್ತಾಳೆ ಕಂಚುಗಳ ಮೇಲೆ ಚಿತ್ತಾರ ಮೂಡಿಸುತ್ತಿದ್ದ ಕಲಾವಿದರು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

ನೂರಕ್ಕು ಹೆಚ್ಚು ಕಲಾವಿದರು ಲೋಹದ ಕುಸುರಿ ಕಲೆಗಾರಿಕೆಯಲ್ಲಿಯೇ ತೊಡಗಿಕೊಂಡಿದ್ದಾರೆ. ಹಿತ್ತಾಳೆಯ ಕಲಾಕೃತಿಗಳ ತಯಾರಿಕೆಯಲ್ಲಿಯೇ ಜೀವನ ಆಧರಿಸಿದ್ದಾರೆ. ಅವರಿಗೆ ಸದ್ಯದಲ್ಲಿ ಯಾವ ಆದಾಯವೂ ಇಲ್ಲವಾಗಿದೆ ಎಂದು ಒನಪೆಂಟಾ ಲೋಹ ಕಲಾವಿದರ ಸಹಕಾರಿ ಸಂಘದ ಅಧ್ಯಕ್ಷ ಎಫ್.ಎಮ್‌ ಇಸ್ಮಾಯಿಲ್‌ ತಿಳಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ಆರಂಭವಾದಾಗಿನಿಂದ ವ್ಯಾಪರ ನೆಲ ಕಚ್ಚಿದೆ. ಬೇರೆ ಬೇರೆ ಊರುಗಳಿಂದ ವ್ಯಾಪಾರಿಗಳು ಬರುತ್ತಿಲ್ಲ. ಸರ್ಕಾರ ಸಾಂಪ್ರದಾಯಿಕ ಕಲೆಯಲ್ಲಿ ತೊಡಗಿರುವ ಕಲಾವಿದರ ಸಹಾಯಕ್ಕೆ ನಿಲ್ಲಬೇಕಿದೆ. ಒಂದಷ್ಟು ಪರಿಹಾರದ ರೀತಿಯಲ್ಲಿ ಸಹಾಯವನ್ನು, ಸಬ್ಸಿಡಿಯನ್ನು ನೀಡಬೇಕು ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ : ರಾಜ್ಯಕ್ಕೆ ಹೆಚ್ಚಿನ ಲಸಿಕೆ ನೀಡುವಂತೆ ಆಗ್ರಹಿಸಿ ಪ್ರಧಾನಿ ಭೇಟಿಗೆ ಸಜ್ಜಾದ ತಮಿಳುನಾಡು ಸಿಎಂ ಸ್ಟಾಲಿನ್

ಕಳೆದ ಅನೇಕ ಶತಮಾನಗಳಿಂದ ತಲೆ ಮಾರುಗಳಿಂದ ತಲೆ ಮಾರುಗಳಿಗೆ ಈ ಕಂಚಿನ, ಹಿತ್ತಾಳೆಯ ಮೇಲೆ ಚಿತ್ತಾರ ಮೂಡಿಸುವ ಕಲೆ ಹರಿದು ಬಂದಿದೆ. ಇಷ್ಟು ವರ್ಷದಲ್ಲಿ ಹಿಂದೆ ಎಂದೂ ಇಂತಹ ವಿಪತ್ತುಗಳು ಬಂದಿರಲಿಲ್ಲ. ಜಿಲ್ಲಾ ಕೇಂದ್ರದಿಂದ 43 ಕಿಲೋ ಮೀಟರ್‌ ದೂರವಿರುವ ಒನಿಪೆಂಟಾ ಹಳ್ಳಿಯಲ್ಲಿ ಇಂದು ವಿಶೇಷವಾದ ಲೋಹದ ಕಲೆ ಅಳಿವಿನ ಅಂಚಿಗೆ ಬಂದು ತಲುಪಿದೆ. 13 ನೇ ಶತಮಾನದ ಜನಮೇಜಯಡು ಎಂಬ ರಾಜನ ಕಾಲದಿಂದ ಆರಂಭವಾದ ಲೋಹದ ಚಿತ್ತಾರ ಕಲೆ ಆ ಕಾಲದಲ್ಲಿ ಪೋಥುಲುರಿ ವೀರ ಬ್ರಹ್ಮೇಂದ್ರ ಸ್ವಾಮಿ ಎಂಬ ಕಲಾವಿದನಿಂದ ವಿಶ್ವಪ್ರಸಿದ್ಧವಾಯಿತು.

ಆರಂಭದಲ್ಲಿ ಈ ಊರನ್ನು ಕಾಮಸಲಿವನಿಪೆಂಟಾ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಊರಿನ ಹೆಸರು ಒನಿಪೆಂಟಾ ಎಂದಾಯಿತು. ಈ ಊರಿನಲ್ಲಿ ಸಧ್ಯ 500 ಕ್ಕೂ ಹೆಚ್ಚು ಕುಟುಂಬಗಳು ಹಿತ್ತಾಳೆಯ ಕರ ಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಭಿನ್ನ ಭಿನ್ನ ಶೈಲಿಯ ದೀಪಗಳು, ಚಿತ್ತಾರದ ಪಾತ್ರೆಗಳು, ವಿಭಿನ್ನ ಕಲಾಕೃತಿಗಳು ಒನಿಪೆಂಟಾ ಕಲಾವಿದರ ಕೈಯಲ್ಲಿ ತಯಾರಾಗಿ ಬಾಂಬೆ, ಹೈದ್ರಾಬಾದ್‌, ಬೆಂಗಳೂರು, ಚೆನ್ನೈಗೆ ಹೋಗುತ್ತಿದ್ದವು. ಹಾಗೇ ಕಚ್ಚಾ ಲೋಹಗಳು ಹೈದ್ರಾಬಾದ್‌, ಬೆಂಗಳೂರು, ಚೆನ್ನೈ, ಹೈದ್ರಾಬಾದ್‌ ನಗರಗಳಿಂದ ಒನಿಪೆಂಟಾ ಊರಿಗೆ ಬರುತ್ತವೆ. ಹಿತ್ತಾಳೆಯನ್ನು ಬಳಸಿಕೊಂಡು ಒನಿಪೆಂಟಾದ ಕಲಾವಿದರು, ಅಡಿಗೆ ಮನೆ ಪಾತ್ರೆ, ಪಗಡೆಗಳು, ಚಿತ್ರಗಳು, ದೇವ – ದೇವತೆಯ ವಿಗ್ರಹಗಳು, ಹಂಡೆಗಳು, ಸುಂದರ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಒನಿಪೆಂಟಾದ ವಿಶೇಷ ಶೈಲಿಯ ಕುಸುರಿಯಿಂದ ಅಲಂಕೃತವಾದ ಯಾವುದೇ ಲೋಹವಿರಲಿ ಅದು ಮನೆಗೆ ಮೆರಗು ಕೊಡುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಮದುವೆಗಳಲ್ಲಿ ವಧುವಿಗೆ ಹಿತ್ತಾಳೆಯ ಪಾತ್ರೆ ಪಗಡೆಗಳನ್ನು ಕೊಟ್ಟು ಕಳುಹಿಸುವ ಸಂಪ್ರದಾಯವಿದೆ. ಹಾಗೇ ದೇವಸ್ಥಾನಗಳ ಧ್ವಜಸ್ಥಂಭ, ದೇವರ ವಿಗ್ರಹಗಳು, ಹಿತ್ತಾಳೆ ದೀಪಗಳು, ಗೋಪುರದ ಕಳಶ, ಗೋಡೆಗಳಿಗೆ ಲೇಪನ ಹೀಗೆ ವರ್ಷವಿಡಿ ಒಂದಿಲ್ಲೊಂದು ದೇವಸ್ಥಾನಗಳಲ್ಲಿ ಇಲ್ಲಿನ ಕಲಾವಿದರಿಗೆ ಕೆಲಸವಿರುತ್ತಿತ್ತು. ಆದರೆ ಕೊರೋನಾ ಕಾರಣದಿಂದ ಎಲ್ಲಿಂದಲೂ ಈ ಕಲಾವಿದರಿಗೆ ಕೆಲಸ ಬರುತ್ತಿಲ್ಲ. ಹಾಗಾಗಿ ಹಿತ್ತಾಳೆ ಮತ್ತು ಲೋಹದ ಕೆಲಸ ಮಾಡುತ್ತಿದ್ದ 500 ಕುಟುಂಬಗಳಲ್ಲಿ ಈಗ ಕೇವಲ 222 ಕುಟುಂಬಗಳು ಮಾತ್ರ ತಮ್ಮ ಸಾಂಪ್ರದಾಯಿಕ ಕಸುಬಿನಲ್ಲಿ ಉಳಿದಿವೆ. 100 ಕುಟುಂಬಗಳು ಚೆನ್ನೈ, ಹೈದ್ರಾಬಾದ್‌, ಬೆಂಗಳೂರಿನಂತಹ  ನಗರಗಳಿಗೆ ಬದುಕು ಅರಸಿ ವಲಸೆ ಹೋಗಿವೆ. ಉಳಿದ ಕೆಲವೇ ಕೆಲವರು ಇರುವ ಕೆಲಸವನ್ನೇ ನಂಬಿ ಜೀವ ಸಾಗಿಸುತ್ತಿದ್ದಾರೆ.

ನಮಗೆ ಬೇರೆ ಕೆಲಸ ಗೊತ್ತಿಲ್ಲ. ನಾವು ಹಿತ್ತಾಳೆಯ ಕುಸುರಿ ವೃತ್ತಿಯನ್ನು ಬಿಟ್ಟು ಬಿಡಲು ಸಾದ್ಯವಿಲ್ಲ. ನಮ್ಮ ತಲತಲಾಂತರದಿಂದ ನಡೆಸಿಕೋಂಡು ಬಂದಿದ್ದೇವೆ. ಈ ಕಾಲ ಸರಿದು ಮುಂದೆ ನಮಗೂ ಒಳ್ಳೆಯ ದಿನಗಳು ಬರಬಹುದು.‌ ಹಿತ್ತಾಳೆಯೂ ಹೊಳೆಯಬಹುದು ಎನ್ನುತ್ತಾರೆ ಮೋರ್ ವಿರೋಜಿ ಮತ್ತು ಮುಕ್ತಿಯಾ ಭಾಷಾ ಎಂಬ ಒನಿಪೆಂಟಾದ ಕಲಾವಿದರು.

ಕೊರೋನಾ ಸಾಂಕ್ರಾಮಿಕ ಕಳೆದು ಒನಿಪೆಂಟಾ ಕಲಾವಿದರಿಗೆ ಒಂದಷ್ಟು ನೆಮ್ಮದಿಯ ಉಸಿರಾಡುವ ಕಾಲ ಬರಲಿ. ತಲ ತಲಾಂತರದಿಂದ ಕಾಪಾಡಿಕೊಂಡು ಬಂದಿರುವ ಒನಿಪೆಂಟಾದ ದೇಸೀ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಲು ಸರ್ಕಾರಗಳೂ ಒಂದಷ್ಟು ಪ್ರಯತ್ನ ಪಡಬೇಕು. ಒನಿಪೆಂಟಾದ ಕಲಾವಿದರಿಗೆ  ಸರ್ಕಾರಗಳು ಆರ್ಥಿಕವಾಗಿ ಸಹಾಯ ಮಾಡಿ ಅವರನ್ನು ಮೇಲೆತ್ತಬೇಕು.


ಇದನ್ನೂ ಓದಿ :ಗೋಹತ್ಯೆ ತಡೆ ಕಾನೂನಿನ ದುರ್ಬಳಕೆ: ಪೊಲೀಸರ ವಿರುದ್ಧ ಅಲಹಾಬಾದ್ ಹೈಕೋರ್ಟ್ ಗರಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...