ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಬ್ರಿಟನ್‌ನಲ್ಲಿ ಬಂಧಿಸಲಾಗಿದೆ ಎಂದು ಬಿಬಿಸಿ ಶನಿವಾರ ವರದಿ ಮಾಡಿದೆ.
20 ವರ್ಷದ ಪ್ರೀತ್ ವಿಕಲ್ ಆರೋಪಿ ಎಂದು ಗುರುತಿಸಲಾಗಿದ್ದು, ಯುವ ಅಪರಾಧಿಗಳ ಸಂಸ್ಥೆಯಲ್ಲಿ ಆರು ವರ್ಷ ಒಂಬತ್ತು ತಿಂಗಳು ಶಿಕ್ಷೆ ವಿಧಿಸಲಾಗಿದೆ.
ಕಳೆದ ವರ್ಷ ಜೂನ್‌ನಲ್ಲಿ ಪ್ರೀತ್ ಮತ್ತು ಮಹಿಳೆ ಪ್ರತ್ಯೇಕ ಸ್ನೇಹಿತರ ಗುಂಪುಗಳೊಂದಿಗೆ ಕಾರ್ಡಿಫ್‌ನಲ್ಲಿ ರಾತ್ರಿಯ ವಿಹಾರಕ್ಕೆ ಹೋಗಿದ್ದರು, ಅಲ್ಲಿ ಅವರು ಪರಸ್ಪರ ಭೇಟಿಯಾದರು.
”ಸಂತ್ರಸ್ತ ಮಹಿಳೆ ಮಿತಿಮೀರಿ ಕುಡಿದಿದ್ದರು ಮತ್ತು ರಾತ್ರಿಯ ಅಂತ್ಯದ ವೇಳೆಗೆ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಮಹಿಳೆಯು ಕ್ಲಬ್‌ನ ಹೊರಗೆ ಹೊರಟಿದ್ದಳು ಆಗ ಪ್ರೀತ್ ವಿಕಲ್‌ನನ್ನು ೆದುರಾದರು. ಇಬ್ಬರು ಸಂಭಾಷಣೆಯಲ್ಲಿ ತೊಡಗಿದ್ದರು ಮತ್ತು ಅವರ ಗುಂಪುಗಳಿಂದ ದೂರ ಇದ್ದರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
”ಸಂತ್ರಸ್ತ ಮಹಿಳೆ ಅತಿಯಾಗಿ ಕುಡಿದಿದ್ದರು ಮತ್ತು ರಾತ್ರಿಯ ವೇಳೆಗೆ ಸಂಪೂರ್ಣವಾಗಿ ನಶೆಯಲ್ಲಿದ್ದರು” ಎಂದು ಅಪರಿಚಿತ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ.
UK: 20yr old Preet Vikal, Indian student sentenced to 6.9yrs in prison for taking intoxicated girl home, photographing & raping her
CCTV shows Preet carrying the girl to his Cardif student hall. He earlier claimed not guilty, saying girl was a 'willing participant'. Later… pic.twitter.com/F2kf9huYjJ
— Nabila Jamal (@nabilajamal_) June 17, 2023
ಸಿಸಿ ಟಿವಿ ದೃಶ್ಯಾವಳಿ ಪ್ರಕಾರ, ”ಮಹಿಳೆಯು ಕ್ಲಬ್‌ನ ಹೊರಗೆ ಹೊರಟಿದ್ದಳು ಆಗ ಪ್ರೀತ್ ವಿಕಲ್ ಎದುರಾರದರು. ಇಬ್ಬರೂ ಸಂಭಾಷಣೆಯಲ್ಲಿ ತೊಡಗಿದರು ಮತ್ತು ಅವರ ಗುಂಪುಗಳಿಂದ ದೂರ ಹೋದರು. ಆ ಬಳಿಕ ವಿಕಲ್ ಮಹಿಳೆಯನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ತನ್ನ ನಿವಾಸಕ್ಕೆ ಹೋಗಿರುವ ದೃಶ್ಯ ಸೆರೆಯಾಗಿದೆ. ಅಲ್ಲಿ ಅವನು ಅವಳ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ಮಹಿಳೆಯ ಭಾವಚಿತ್ರ ತೆಗೆದು ತನ್ನ ಸ್ನೇಹಿತರಿಗೆ ಕಳುಹಿಸಿದ್ದಾನೆ’.
#INCOURT l A man has been jailed for raping at a woman at a halls of residence in #Cardiff.
CCTV showed Preet Vikal carrying the victim in his arms and later across his shoulders out of the city centre.
1/2 pic.twitter.com/wfYrIggd7o
— South Wales Police Cardiff (@SWPCardiff) June 16, 2023
ಈ ಬಗ್ಗೆ ಟ್ವೀಟ್ ಮಾಡಿರುವ ಸೌತ್ ವೇಲ್ಸ್ ಪೊಲೀಸ್ ಕಾರ್ಡಿಫ್, ”ಕಾರ್ಡಿಫ್‌ನಲ್ಲಿರುವ ನಿವಾಸದ ಸಭಾಂಗಣದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ಜೈಲಿಗೆ ಹಾಕಲಾಗಿದೆ. ಪ್ರೀತ್ ವಿಕಲ್ ಮಹಿಳೆಯನ್ನು ತನ್ನ ತೋಳುಗಳಲ್ಲಿ ಮತ್ತು ನಂತರ ತನ್ನ ಭುಜದ ಮೇಲೆ ಹೊತ್ತುಕೊಂಡು ಸಿಟಿ ಸೆಂಟರ್‌ನಿಂದ ಹೊರಕ್ಕೆ ಸಾಗಿಸುತ್ತಿರುವುದನ್ನು ಸಿಸಿಟಿವಿ ತೋರಿಸಿದೆ” ಎಂದು ಸೌತ್ ವೇಲ್ಸ್ ಪೊಲೀಸ್ ಕಾರ್ಡಿಫ್ ಟ್ವೀಟ್ ಮಾಡಿದೆ.
“ಕಾರ್ಡಿಫ್‌ನಲ್ಲಿ ಇಂತಹ ದಾಳಿಗಳು ಅತ್ಯಂತ ಅಸಾಮಾನ್ಯವಾಗಿವೆ. ಪ್ರೀತ್ ವಿಕಾಲ್‌ನಂತಹ ಅಪಾಯಕಾರಿ ವ್ಯಕ್ತಿ ಇದ್ದಿದ್ದರಿಂದ ಈ ಘಟನೆ ನಡೆದಿದೆ. ಪ್ರೀತ್ ವಿಕಾಲ್ ತನ್ನ ಸ್ನೇಹಿತರಿಂದ ದೂರ ಉಳಿದು, ನಶೆಯಲ್ಲಿದ್ದ ಯುವತಿಯ ಲಾಭವನ್ನು ಪಡೆದರು” ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಮಹಿಳೆಯನ್ನು ಮನೆಗೆ ಕರೆದೊಯ್ದ ನಂತರ ಪ್ರೀತ್ ಆಕೆಯೊಂದಿಗೆ ಫೋಟೋ ತೆಗೆದುಕೊಂಡು ತನ್ನ ಸ್ನೇಹಿತರಿಗೆ ಕಳುಹಿಸಿದ್ದಾನೆ ಎಂದು ವರದಿಗಳು ತಿಳಿಸಿವೆ.
ಮಹಿಳೆ ಧೈರ್ಯದಿಂದ ನಡೆದ ಘಟನೆಯ ವಿವರವನ್ನು ಅಧಿಕಾರಿಗಳಿಗೆ ನೀಡಿದರು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮಹಿಳೆಯೊಂದಿಗೆ Instagram ಸಂದೇಶ ವಿನಿಮಯವು ಪೊಲೀಸರಿಗೆ ಪ್ರೀತ್ ವಿಕಲ್ ಅನ್ನು ಗುರುತಿಸಲು ಸಹಾಯ ಮಾಡಿತು.
ಇದನ್ನೂ ಓದಿ: ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಎಸಗುವುದೇ RSS ಶಾಖೆಯ ನಿತ್ಯ ಪಾಠವೇ?: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ


