Homeಮುಖಪುಟಸುಪ್ರೀಂ ಕೋರ್ಟ್ ನಿರ್ದೇಶನದ ಹೊರತಾಗಿಯೂ ಮುಂದುವರೆದ ಬುಲ್ಡೋಝರ್ ಅ'ನ್ಯಾಯ' : ಯುಪಿ ಸರ್ಕಾರಕ್ಕೆ ಅಲಾಹಾಬಾದ್‌ ಹೈಕೋರ್ಟ್‌...

ಸುಪ್ರೀಂ ಕೋರ್ಟ್ ನಿರ್ದೇಶನದ ಹೊರತಾಗಿಯೂ ಮುಂದುವರೆದ ಬುಲ್ಡೋಝರ್ ಅ’ನ್ಯಾಯ’ : ಯುಪಿ ಸರ್ಕಾರಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ಛೀಮಾರಿ

- Advertisement -
- Advertisement -

ಉತ್ತರ ಪ್ರದೇಶದ ಸರ್ಕಾರದ “ಬುಲ್ಡೋಝರ್ ಅನ್ಯಾಯ” ವಿರುದ್ಧ ಸುಪ್ರೀಂ ಕೋರ್ಟ್ 2024ರ ನವೆಂಬರ್‌ನಲ್ಲಿ ಕಟ್ಟುನಿಟ್ಟಾದ ತೀರ್ಪು ನೀಡಿದ್ದರೂ, ದಂಡನಾತ್ಮಕ ಕ್ರಮವಾಗಿ ಕಟ್ಟಡಗಳನ್ನು ಉರುಳಿಸುವ ಪ್ರಕ್ರಿಯೆ ಇನ್ನೂ ಮುಂದುವರಿಯುತ್ತಿರುವುದರ ಬಗ್ಗೆ ಅಲಹಾಬಾದ್ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಯಾವುದೇ ವ್ಯಕ್ತಿಯ ಮೇಲೆ ಅಪರಾಧದ ಆರೋಪ ಕೇಳಿಬಂದ ತಕ್ಷಣ, ಕಾನೂನು ಪ್ರಕ್ರಿಯೆಯನ್ನು ಪಾಲಿಸದೆ ಅವರ ಮನೆ ಅಥವಾ ಆಸ್ತಿಯನ್ನು ಧ್ವಂಸಗೊಳಿಸುವುದು ಸಂವಿಧಾನ ಬಾಹಿರ ಎಂದು ನ್ಯಾಯಾಲಯ ಹೇಳಿದೆ. ಈ ಕ್ರಮವು ಕಾರ್ಯಾಂಗವು ನ್ಯಾಯಾಂಗದ ಅಧಿಕಾರವನ್ನು ಕೈಗೆತ್ತಿಕೊಂಡಂತೆ ಮತ್ತು ಅಧಿಕಾರದ ದುರುಪಯೋಗದಂತೆ ಕಾಣುತ್ತಿದೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.

ಒಂದು ಅಪರಾಧ ನಡೆದ ತಕ್ಷಣವೇ ಆಸ್ತಿಯನ್ನು ಧ್ವಂಸಗೊಳಿಸುವುದು, ಆಡಳಿತಾತ್ಮಕ ವಿವೇಚನಾಧಿಕಾರವನ್ನು “ಬಣ್ಣಬಣ್ಣದ” ರೀತಿಯಲ್ಲಿ, ಅಂದರೆ ಕಾನೂನಿನ ಮುಖವಾಡ ತೊಟ್ಟು ಪರೋಕ್ಷವಾಗಿ ಶಿಕ್ಷಿಸಲು ಬಳಸಿಕೊಳ್ಳುವ ಕ್ರಮವೇ? ಎಂದು ನ್ಯಾಯಾಲಯ ಪ್ರಶ್ನಿಸಿದೆ. ಇದು ಕಾನೂನಿನ ಪಾಲನೆಗಿಂತ ಹೆಚ್ಚಾಗಿ ಪೂರ್ವಾಗ್ರಹ ಪೀಡಿತ ದಂಡನಾತ್ಮಕ ಕ್ರಮದಂತೆ ಕಾಣುತ್ತಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಶಿಕ್ಷೆ ವಿಧಿಸುವ ಅಧಿಕಾರ ಕೇವಲ ನ್ಯಾಯಾಂಗಕ್ಕೆ ಮಾತ್ರ ಇದೆ. ಆದರೆ ಅಪರಾಧದ ಆರೋಪ ಕೇಳಿಬಂದ ತಕ್ಷಣ ಮನೆಗಳನ್ನು ಉರುಳಿಸುವುದು, ಕಾರ್ಯಾಂಗವು ತಾನೇ ನ್ಯಾಯಾಧೀಶನಂತೆ ವರ್ತಿಸಿ ಶಿಕ್ಷೆ ನೀಡಿದಂತಾಗುತ್ತದೆ, ಇದು ಸಂವಿಧಾನದ ‘ಅಧಿಕಾರ ವಿಭಜನೆ’ ತತ್ವಕ್ಕೆ ವಿರುದ್ಧವಾಗಿದೆ. ಸಂವಿಧಾನದ 14ನೇ ವಿಧಿ (ಸಮಾನತೆ) ಮತ್ತು 21ನೇ ವಿಧಿ (ಜೀವಿಸುವ ಹಕ್ಕು ಮತ್ತು ಆಶ್ರಯದ ಹಕ್ಕು) ಅಡಿಯಲ್ಲಿ ಪ್ರಜೆಗಳಿಗೆ ರಕ್ಷಣೆ ಇದೆ. ಆಡಳಿತವು ಕೇವಲ ತಾಂತ್ರಿಕ ಕಾರಣಗಳನ್ನು ಒಡ್ಡಿ (ಉದಾಹರಣೆಗೆ ಅಕ್ರಮ ನಿರ್ಮಾಣ) ಆಶ್ರಯವನ್ನು ಕಸಿದುಕೊಳ್ಳುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಹೇಳಿದೆ.

ಅಪರಾಧ ನಡೆದ ತಕ್ಷಣವೇ ಆರೋಪಿಗಳ ವಾಸಸ್ಥಳ ತೆರವುಗೊಳಿಸುವುದಾಗಿ ನೋಟಿಸ್‌ ನೀಡಿ ಕೂಡಲೇ ಕಟ್ಟಡ ಧ್ವಂಸಗೊಳಿಸುತ್ತಿರುವ ಹಲವು ಪ್ರಕರಣಗಳು ತಮ್ಮ ಗಮನಕ್ಕೆ ಬಂದಿರುವುದಾಗಿ ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಸಿದ್ಧಾರ್ಥ್‌ ನಂದನ್‌ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಅಧಿಕಾರಿಗಳು ಕಾನೂನಿನ ನಿಯಮಗಳನ್ನು ಪಾಲಿಸುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಕೇವಲ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಇದರ ಹಿಂದಿನ ಅಸಲಿ ಉದ್ದೇಶ ಕಾನೂನು ಪಾಲನೆಯಲ್ಲ, ಬದಲಿಗೆ ಆರೋಪಿಯನ್ನು ಶಿಕ್ಷಿಸುವುದೇ ಆಗಿದೆ. ಅಪರಾಧ ನಡೆದ ತಕ್ಷಣವೇ ಆಸ್ತಿಯು ‘ಅಕ್ರಮ’ ಎಂದು ಅಧಿಕಾರಿಗಳಿಗೆ ನೆನಪಾಗುವುದು ಮತ್ತು ತಕ್ಷಣವೇ ನೋಟಿಸ್ ನೀಡಿ ಧ್ವಂಸಗೊಳಿಸುವುದು ಕೇವಲ ಕಾಕತಾಳೀಯವಲ್ಲ, ಇದು ಪೂರ್ವಯೋಜಿತ ದಂಡನಾತ್ಮಕ ಕ್ರಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ನಿಯಮಗಳ ಪಾಲನೆಯು ಕೇವಲ ಒಂದು ನೆಪವಾಗಿದ್ದು, ನ್ಯಾಯಾಂಗ ಪ್ರಕ್ರಿಯೆಯನ್ನು ಬದಿಗೊತ್ತಿ ಕಾರ್ಯಾಂಗವೇ ತೀರ್ಪುಗಾರನಂತೆ ವರ್ತಿಸುತ್ತಿರುವುದನ್ನು ಹೈಕೋರ್ಟ್ ಖಂಡಿಸಿದೆ.

ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳ ಉಲ್ಲಂಘನೆಯಾಗಿರುವುದರಿಂದ ಕೆಲವು ಕಾನೂನು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆಯೆಂದು ಹೈಕೋರ್ಟ್‌ ತಿಳಿಸಿದ್ದು, ಆ ಐದು ಪ್ರಶ್ನೆಗಳು ಹೀಗಿವೆ..

1.ಸರ್ವೋಚ್ಚ ನ್ಯಾಯಾಲಯ ನೀಡಿದ್ದ ತೀರ್ಪಿಗೆ, ಅದರಲ್ಲಿಯೂ 85 ಮತ್ತು 86ನೇ ಪ್ಯಾರಾಗ್ರಾಫ್‌ಗಳನ್ನು ಪಾಲನೆ ಮಾಡದೆ ಇರಲು ಸಾಧ್ಯವೇ?

2.ಧ್ವಂಸಗೊಳಿಸುವ ಅಧಿಕಾರವಿದೆ ಎಂಬುವುದೇ ಕಟ್ಟಡ ಧ್ವಂಸಗೊಳಿಸುವ ಕ್ರಿಯೆಗೆ ನ್ಯಾಯಸಮ್ಮತತೆಯನ್ನು ನೀಡುತ್ತದೆಯೇ? ಅಥವಾ ಸಾರ್ವಜನಿಕ ಅವಶ್ಯಕತೆ/ಉದ್ದೇಶ ಇಲ್ಲದ ಸಂದರ್ಭದಲ್ಲಿ ವಾಸಸ್ಥಳವನ್ನು ಧ್ವಂಸಗೊಳಿಸಬಾರದೆಂಬ “ಪ್ರಭುತ್ವವೇ ಪೋಷಕ” ಎಂಬ ತತ್ವದ ಅಡಿಯಲ್ಲಿ ಪ್ರಭುತ್ವದ ಮೇಲೆ ಕರ್ತವ್ಯವಿದೆಯೇ?

    3. ಅಪರಾಧ ಸಂಭವಿಸಿದ ತಕ್ಷಣವೇ ಕಟ್ಟಡ ಧ್ವಂಸಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳು, ಕಾರ್ಯಾಂಗ ವಿವೇಚನೆಯ ಭೇದ ಸೃಷ್ಟಿಸುತ್ತವೆಯೇ?

    4.ಪ್ರಭುತ್ವಕ್ಕೆ ಕಟ್ಟಡ ಧ್ವಂಸಗೊಳಿಸುವ ಅಧಿಕಾರ ಮತ್ತು ಸಂವಿಧಾನದ ಕಲಂ 14 ಹಾಗೂ 21ರ ಅಡಿಯಲ್ಲಿ ನಾಗರಿಕರಿಗೆ ನೀಡಲಾಗಿರುವ ಮೂಲಭೂತ ಹಕ್ಕುಗಳ ನಡುವಿನ ಸಂಘರ್ಷವನ್ನು ತಪ್ಪಿಸುವುದು ಹೇಗೆ?

    5.ಸಮಂಜಸವಾದ ಭಯ” ಇದ್ದ ಮಾತ್ರಕ್ಕೆ ನಾಗರಿಕ ಈ ನ್ಯಾಯಾಲಯ ಸಂಪರ್ಕಿಸಲು ಕಾರಣವಾಗಬಹುದೇ? ಹೌದಾದರೆ, ಇಂತಹ “ಸಮಂಜಸವಾದ ಭಯ” ಇರುವುದನ್ನು ನ್ಯಾಯಾಲಯ ನಿರ್ಧರಿಸಲು ಕನಿಷ್ಠ ಯಾವ ಅಂಶಗಳು ಅಗತ್ಯ?

      ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಫೆಬ್ರವರಿ 9ರಂದು ಮುಂದುವರಿಸಲಿದೆ.

      ಪ್ರಕರಣದ ಹಿನ್ನೆಲೆ : ಫೈಮುದ್ದೀನ್ ಮತ್ತು ಇತರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪೀಠವು ವಿಚಾರಣೆ ನಡೆಸಿದೆ. ಅವರ ಸಂಬಂಧಿ (ಆಫಾನ್ ಖಾನ್) ವಿರುದ್ಧ ಬಿಎನ್‌ಎಸ್, ಪೋಕ್ಸೊ ಕಾಯ್ದೆ, ಐಟಿ ಕಾಯ್ದೆ ಮತ್ತು ಯುಪಿ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿಯ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

      ಅರ್ಜಿದಾರರು ಹೇಳಿರುವ ಎಫ್‌ಐಆರ್‌ನಲ್ಲಿ ತಮ್ಮನ್ನು ಸಹ-ಆರೋಪಿಗಳೆಂದು ಹೆಸರಿಸಲಾಗಿಲ್ಲವಾದರೂ, ಪೊಲೀಸರೊಂದಿಗೆ ಶಾಮೀಲಾಗಿ ಗುಂಪೊಂದು ತಮ್ಮನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ವಸತಿ ಮನೆ, ವಾಣಿಜ್ಯ ವಸತಿಗೃಹ ಮತ್ತು ಗರಗಸದ ಗಿರಣಿ ಸೇರಿದಂತೆ ಹಮೀರ್‌ಪುರದಲ್ಲಿರುವ ತಮ್ಮ ಆಸ್ತಿಗಳನ್ನು ಅಧಿಕಾರಿಗಳು ಯಾಂತ್ರಿಕ ವಿಧಾನಗಳಿಂದ ನಾಶಮಾಡಲು ಗುರುತಿಸಿದ್ದಾರೆ ಎಂಬ ಸಮಂಜಸವಾದ ಆತಂಕವನ್ನು ಅವರು ಪೀಠದ ಮುಂದೆ ಎತ್ತಿದ್ದಾರೆ.

      ವಾಣಿಜ್ಯ ಲಾಡ್ಜ್ ಮತ್ತು ಗರಗಸದ ಗಿರಣಿಯನ್ನು ಪ್ರತಿವಾದಿ ಅಧಿಕಾರಿಗಳು ಈಗಾಗಲೇ ಸೀಲ್ ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಆದ್ದರಿಂದ, ಆಸ್ತಿಗಳ ನಿರೀಕ್ಷಿತ ನಾಶವನ್ನು ತಡೆಯಲು ಹೈಕೋರ್ಟ್‌ನ ಹಸ್ತಕ್ಷೇಪವನ್ನು ಅವರು ಕೋರಿದ್ದಾರೆ. ಆದಾಗ್ಯೂ, ರಾಜ್ಯ ಸರ್ಕಾರವು ಅರ್ಜಿಯು ಅಕಾಲಿಕವಾಗಿದ್ದು, ಅರ್ಜಿದಾರರು ತಮಗೆ ನೀಡಲಾದ ನೋಟಿಸ್‌ಗಳಿಗೆ ಪ್ರತಿಕ್ರಿಯಿಸಬೇಕು ಎಂದು ಪ್ರಾಥಮಿಕ ಆಕ್ಷೇಪಣೆಯನ್ನು ಎತ್ತಿತ್ತು.

      ವಾಸ್ತವವಾಗಿ, ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನವನ್ನು ಪಾಲಿಸದೆ ಮತ್ತು ಅರ್ಜಿದಾರರಿಗೆ ಸಂಬಂಧಪಟ್ಟ ಅಧಿಕಾರಿಗಳ ಮುಂದೆ ತಮ್ಮ ಪ್ರಕರಣವನ್ನು ಮಂಡಿಸಲು ಸೂಕ್ತ ಅವಕಾಶವನ್ನು ನೀಡದೆ ಯಾವುದೇ ಧ್ವಂಸ ನಡೆಯುವುದಿಲ್ಲ ಎಂದು ಹೈಕೋರ್ಟ್‌ಗೆ ಮೌಖಿಕ ಭರವಸೆ ನೀಡಲಾಗಿದೆ.

      ಆದಾಗ್ಯೂ, ಸುಪ್ರೀಂ ಕೋರ್ಟ್‌ನ ಆದೇಶದ ಹೊರತಾಗಿಯೂ ರಾಜ್ಯದಲ್ಲಿ ಇಂತಹ ಧ್ವಂಸಗಳು ಮುಂದುವರೆದಿವೆ ಎಂದು ಗಮನಿಸಿದ ಪೀಠವು, ಜನವರಿ 21 ರಂದು ನೀಡಿದ ಆದೇಶದಲ್ಲಿ ರೂಪಿಸಲಾದ ಪ್ರಶ್ನೆಗಳನ್ನು ಪರಿಹರಿಸುವುದು ಸೂಕ್ತವೆಂದು ಹೇಳಿದೆ.

      ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

      LEAVE A REPLY

      Please enter your comment!
      Please enter your name here

      - Advertisment -

      ‘ಸಂಯಮ ಮುಗಿದಿದೆ’: ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್; ಪ್ರದೇಶವನ್ನು ಮೀರಿ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ ಐಆರ್‌ಜಿಸಿ

      ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ನೀಡಿದ್ದ ಗಡುವು ಕೆಲವೇ ಗಂಟೆಗಳು ಬಾಕಿ ಇರುವಾಗ, ಟ್ರಂಪ್ ಬೆದರಿಕೆಯನ್ನು ಧಿಕ್ಕರಿಸಿದ ಇರಾನ್ "ಸಂಯಮ ಮುಗಿದಿದೆ" ಎಂದು ಹೇಳಿದೆ ಮತ್ತು ಅದು ಈಗ ಈ ಪ್ರದೇಶದಲ್ಲಿನ...

      ಒಡಿಶಾ| ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ; ಬುಡಕಟ್ಟು ಜನಾಂಗ – ಪೊಲೀಸರ ನಡುವೆ ಘರ್ಷಣೆ

      ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಸಿಜಿಮಾಲಿ ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣದ ಬಗ್ಗೆ ಮಂಗಳವಾರ (ಏಪ್ರಿಲ್ 7) ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗಿನ ಘರ್ಷಣೆಯಲ್ಲಿ 40 ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 50 ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ...

      ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಅನುಮತಿಸಿದ್ದ ತೀರ್ಪು ತಪ್ಪು : 9 ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಕೇಂದ್ರ ಸರ್ಕಾರ ಹೇಳಿಕೆ-ವರದಿ

      ಶಬರಿಮಲೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿದ 2018ರ ತೀರ್ಪು ತಪ್ಪಾಗಿದೆ ಮತ್ತು ಅದನ್ನು ತಪ್ಪು ಕಾನೂನು ಎಂದು ಘೋಷಿಸಲು ಅರ್ಹವಾಗಿದೆ ಎಂಬುವುದಾಗಿ ಕೇಂದ್ರ...

      ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ‘ಲವ್ ಜಿಹಾದ್’ ಹೇಳಿಕೆ; ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಚುನಾವಣಾ ಆಯೋಗ

      ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಅಥವಾ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗದ ಗೆಲುವು ರಾಜ್ಯದಲ್ಲಿ "ಲವ್ ಜಿಹಾದ್" ಘಟನೆಗಳಿಗೆ ಕಾರಣವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಪಿ ಕೆ ಕೃಷ್ಣದಾಸ್ ನೀಡಿದ ಹೇಳಿಕೆಯ...

      ಮಣಿಪುರ: ಇಬ್ಬರು ಮಕ್ಕಳ ಹತ್ಯೆ ಖಂಡಿಸಿ ಇಂಫಾಲ್ ಕಣಿವೆಯಲ್ಲಿ ಪ್ರತಿಭಟನೆ; 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

      ಮಣಿಪುರ: ಕಣಿವೆಯ ಐದು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಬ್ರಾಡ್‌ಬ್ಯಾಂಡ್, ವಿಎಸ್‌ಎಟಿಗಳು ಮತ್ತು ವಿಪಿಎನ್ ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಮಣಿಪುರ ಸರ್ಕಾರ ಮಂಗಳವಾರ ಆದೇಶಿಸಿದೆ. ಗೃಹ ಇಲಾಖೆಯ ಅಧಿಕೃತ...

      ಶ್ರೀನಗರದಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐವರ ಬಂಧನ; ಅಂತರರಾಜ್ಯ ಎಲ್‌ಇಟಿ ಮಾಡ್ಯೂಲ್ ಪತ್ತೆ 

      ಶ್ರೀನಗರ: ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಶ್ರೀನಗರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಅಂತರರಾಜ್ಯ ಮಾಡ್ಯೂಲ್ ಅನ್ನು ಭೇದಿಸಿದ್ದು, ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐದು...

      ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿ ಬಳಿ ಗುಂಡಿನ ದಾಳಿ: ಮೂವರು ಸಾವು

      ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ಕಾನ್ಸುಲೇಟ್ ಕಟ್ಟಡದ ಬಳಿ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ, ಅಧಿಕಾರಿಗಳು ಆ ಪ್ರದೇಶವನ್ನು...

      ತೆಲಂಗಾಣ ಸಿಎಂ ರೆಡ್ಡಿ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ; ತೀವ್ರ ಸ್ವರೂಪ ಪಡೆದುಕೊಂಡ ವಾಕ್ಸಮರ

      ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ (ಏ.7) ವಾಗ್ದಾಳಿ ನಡೆಸಿದ್ದಾರೆ. ಇಬ್ಬರು ನಾಯಕರ ನಡುವಿನ ಮಾತಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಣ್ಣೂರಿನಲ್ಲಿ ನಡೆದ ಪತ್ರಿಕಾ ಸಂವಾದ...

      ಹಿಮಂತ ಬಿಸ್ವಾ ಶರ್ಮಾ ಪತ್ನಿಯ ವಿರುದ್ಧ ‘ಹಲವು ಪಾಸ್‌ಪೋರ್ಟ್‌’ ಹೊಂದಿರುವ ಆರೋಪ : ಪವನ್ ಖೇರಾ ಮನೆಯಲ್ಲಿ ಶೋಧ ನಡೆಸಿದ ಅಸ್ಸಾಂ ಪೊಲೀಸರು

      ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ಮನೆಯಲ್ಲಿ ಶೋಧ...

      ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೇಂದ್ರದ ಹಣವನ್ನು ಪಕ್ಷದ ಚಟುವಟಿಕೆಗಳಿಗೆ ಬಳಸಿಕೊಂಡಿದೆ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

      ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರ ನಿಧಿಯ ದುರುಪಯೋಗ ಮತ್ತು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ತೀವ್ರ ಕುಸಿತವಾಗಿದೆ ಎಂದು...