ಮುಂದಿನ ತಿಂಗಳು ನಡೆಯುವ ಚುನಾವಣೆಗೆ ಮುನ್ನ ಹದಿನಾಲ್ಕು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿ(ಸಿಎಜಿ)ಗಳನ್ನು ಮಂಡಿಸುವಂತೆ ವಿಧಾನಸಭಾ ಸ್ಪೀಕರ್‌ಗೆ ನಿರ್ದೇಶನ ನೀಡಬೇಕೆಂದು ಕೋರಿ ಬಿಜೆಪಿಯ ಏಳು ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಸಿಎಜಿ ವರದಿ
ವಿಶೇಷ ಅಧಿವೇಶನ ಕರೆಯಲು ನಿರಾಕರಿಸಿದ ನ್ಯಾಯಮೂರ್ತಿ ಸಚಿನ್ ದತ್ತ, ದೆಹಲಿ ಸರ್ಕಾರವು ತನ್ನ ಸಾಂವಿಧಾನಿಕ ಬಾಧ್ಯತೆಯನ್ನು ಪೂರೈಸುವಲ್ಲಿ “ಅತಿಯಾದ ವಿಳಂಬ” ಮಾಡುತ್ತಿದೆ ಟೀಕಿಸಿದ್ದು, ಸಿಎಜಿ ವರದಿಗಳನ್ನು “ತಕ್ಷಣ ವಿಧಾನಸಭೆಯ ಮುಂದೆ ಇಡಬೇಕಿತ್ತು” ಎಂದು ಹೇಳಿದ್ದಾರೆ. ಸರ್ಕಾರದ ವಿಳಂಬವು “ಅದರ ಪ್ರಾಮಾಣಿಕತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ” ಎಂದು ನ್ಯಾಯಾಲಯ ಹೇಳಿದೆ.
ಬಿಜೆಪಿ ಶಾಸಕರಾದ ವಿಜೇಂದರ್ ಗುಪ್ತಾ, ಮೋಹನ್ ಸಿಂಗ್ ಬಿಶ್ತ್, ಓಂ ಪ್ರಕಾಶ್ ಶರ್ಮಾ, ಅಜಯ್ ಕುಮಾರ್ ಮಹಾವರ್, ಅಭಯ್ ವರ್ಮಾ, ಅನಿಲ್ ಬಾಜ್‌ಪೈ ಮತ್ತು ಜಿತೇಂದ್ರ ಮಹಾಜನ್ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅರ್ಜಿಯಲ್ಲಿ, “ರಾಜ್ಯ ಹಣಕಾಸು, ಮಾಲಿನ್ಯ ತಗ್ಗಿಸುವಿಕೆ, ಮದ್ಯ ನಿಯಂತ್ರಣ, ಸಾರ್ವಜನಿಕ ವಲಯದ ವಿನಿಯೋಗ ಖಾತೆಗಳು ಮತ್ತು ಆರೈಕೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆ ಸೇರಿದಂತೆ ನಿರ್ಣಾಯಕ ವಿಷಯಗಳನ್ನು ವರದಿಗಳು ಒಳಗೊಂಡಿವೆ” ಎಂದು ವಾದಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ವಿಳಂಬವು ರಾಷ್ಟ್ರೀಯ ರಾಜಧಾನಿ ಪ್ರದೇಶದ ದೆಹಲಿ ಸರ್ಕಾರದ ಕಾಯ್ದೆ ಮತ್ತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಅದಾಗ್ಯೂ, ವಿಧಾನಸಭೆ ಅಧಿವೇಶನಗಳನ್ನು ಕರೆಯುವ ಸಮಯದಂತಹ ಕಾರ್ಯವಿಧಾನದ ಅಂಶಗಳಿಗೆ ನ್ಯಾಯಾಂಗ ಹಸ್ತಕ್ಷೇಪ ವಿಸ್ತರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ನ ಪೂರ್ವನಿದರ್ಶನಗಳನ್ನು ಉಲ್ಲೇಖಿಸಿದ ಹೈಕೋರ್ಟ್ ನ್ಯಾಯಮೂರ್ತಿ ದತ್ತ, ವಿಧಾನಸಭೆಯ ಅಧಿವೇಶನವನ್ನು ಕರೆಯುವುದು ಸ್ಪೀಕರ್ ಅವರ ವಿಶೇಷ ಹಕ್ಕು ಎಂದು ಒತ್ತಿ ಹೇಳಿದ್ದಾರೆ.
ಪ್ರಸ್ತುತ ವಿಧಾನಸಭೆಯ ಅಧಿಕಾರಾವಧಿ ಮುಗಿಯುವ ಹಂತದಲ್ಲಿದೆ, ಫೆಬ್ರವರಿ 5 ರಂದು ಚುನಾವಣೆಗಳು ನಿಗದಿಯಾಗಿವೆ ಮತ್ತು ಫೆಬ್ರವರಿ 8 ರಂದು ಮತಗಳ ಎಣಿಕೆ ನಡೆಯಲಿದೆ ಎಂದು ವಿಧಾನಸಭೆ ಸಚಿವಾಲಯ ಪ್ರತಿವಾದದಲ್ಲಿ ಹೇಳಿದೆ. ಸಿಎಜಿ ವರದಿಗಳನ್ನು ಮಂಡಿಸಿದ ನಂತರ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿಂದ ಪರಿಶೀಲನೆ ನಡೆಸುವ ಅಗತ್ಯವಿರುವುದರಿಂದ ವಿಶೇಷ ಅಧಿವೇಶನ ನಡೆಸುವುದು “ಅಪ್ರಾಯೋಗಿಕ” ಎಂದು ಸ್ಪೀಕರ್ ಪರ ವಕೀಲರು ವಾದಿಸಿದ್ದಾರೆ. ಸಿಎಜಿ ವರದಿ
“ಮುಂಬರುವ ಚುನಾವಣೆಗಳಿಗೆ ಅನುಗುಣವಾಗಿ ವಿಧಾನಸಭೆಯನ್ನು ರಚಿಸಿ ಕರೆದ ನಂತರ, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರವು ಕಾರ್ಯವಿಧಾನದ ನಿಯಮಗಳ ಇಪ್ಪತ್ತನಾಲ್ಕು, ಇಪ್ಪತ್ತೇಳು ಮತ್ತು ಇನ್ನೂರ ಎಂಬತ್ತೊಂಬತ್ತು ನಿಯಮಗಳ ಅಡಿಯಲ್ಲಿ, ಸಾಧ್ಯವಾದಷ್ಟು ಬೇಗ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಗಳನ್ನು ಸಲ್ಲಿಸುವ ಉದ್ದೇಶಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.” ನ್ಯಾಯಮೂರ್ತಿ ದತ್ತ ನಿರ್ದೇಶನ ನೀಡಿದ್ದಾರೆ.
ದೆಹಲಿ ಸರ್ಕಾರವು ತನ್ನ ಸಾಂವಿಧಾನಿಕ ಬಾಧ್ಯತೆಗಳನ್ನು “ಅವಮಾನಕರವಾಗಿ ಕಡೆಗಣಿಸಿದೆ” ಮತ್ತು ವರದಿಗಳನ್ನು ಮಂಡಿಸುವಲ್ಲಿ ಉತ್ಸಾಹದಿಂದ ವರ್ತಿಸಬೇಕಿದ್ದ ಅವರು, ಅದರಿಂದ ವಿಫಲವಾಗಿದ್ದಾರೆ ಎಂದು ನ್ಯಾಯಾಲಯವು ಹೇಳಿದೆ.
ಇದನ್ನೂಓದಿ: ಎಲ್ಗರ್ ಪರಿಷತ್ ಪ್ರಕರಣ : ಆರು ವರ್ಷಗಳ ಬಳಿಕ ಜೈಲಿನಿಂದ ಹೊರಬಂದ ರೋನಾ ವಿಲ್ಸನ್, ಸುಧೀರ್ ಧಾವಳೆ
ಎಲ್ಗರ್ ಪರಿಷತ್ ಪ್ರಕರಣ : ಆರು ವರ್ಷಗಳ ಬಳಿಕ ಜೈಲಿನಿಂದ ಹೊರಬಂದ ರೋನಾ ವಿಲ್ಸನ್, ಸುಧೀರ್ ಧಾವಳೆ


