ಮುಜಾಫರ್ ನಗರ ಮತ್ತು ದೆಹಲಿಯ ನರಮೇಧ, ಗುಜರಾತ್ ಹತ್ಯಾಕಾಂಡ, ಬಾಬರಿ ಮಸೀದಿ ಧ್ವಂಸ ಗಲಭೆ ನಡೆದು ದಶಕಗಳೇ ಕಳೆದರೂ ಭಾರತವನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಮತ್ತು ಅಂತಾರಾಷ್ಟ್ರೀಯ ಸಮುದಾಯದ ನಡುವೆ ಭಾರತಕ್ಕೆ ಕಪ್ಪು ಚುಕ್ಕೆಗಳಾಂತಾಗಿರುವ ನರಮೇಧಗಳಿವು. ಜಾತ್ಯಾತೀತಯನ್ನು ಒಪ್ಪಿಕೊಂಡಿರುವ ಮತ್ತು ಎಲ್ಲಾ ಧರ್ಮಕ್ಕೂ ಸಮಾನ ಸ್ಥಾನಮಾನ ನೀಡಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಅರ್ಥಾತ್ ಧರ್ಮದ ಕಾರಣಕ್ಕೆ ಗಲಭೆಗಳು, ನರಮೇಧಗಳೇ ನಡೆಯುತ್ತವೆ.
ಸಾವಿರಾರು ಜನ ಅಮಾಯಕರ ಕೊಲೆಗಳಾಗುತ್ತವೆ ಎಂಬುದು ನಿಜಕ್ಕೂ ಸಾಮಾನ್ಯವಾದ ವಿಚಾರವಲ್ಲ. ಆದರೆ, ಈ ಎಲ್ಲಾ ನರಮೇಧಗಳನ್ನೂ ಭಾರತದ ಇತಿಹಾಸದ ಪುಟಗಳು ಹೊಟ್ಟೆಗೆ ಹಾಕಿಕೊಂಡಿವೆ, ಜೀರ್ಣಿಸಿಕೊಂಡಿವೆ. ಆದರೆ, ಭವಿಷ್ಯದಲ್ಲಿ ಭಾರತ ಎಂದಿಗೂ ಜೀರ್ಣೀಸಿಕೊಳ್ಳಲು ಸಾಧ್ಯವಾಗದ, ರವಾಂಡ ಮಾದರಿಯ ನರಮೇಧಕ್ಕೆ ಸಾಕ್ಷಿಯಾಗಲಿದೆ. ಧರ್ಮದ ಕಾರಣಕ್ಕೆ ಲಕ್ಷಾಂತರ ಜನ ಬಡಿದಾಡಿಕೊಂಡು ಸಾವನ್ನಪ್ಪಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ ‘ಜೆನೋಸೈಡ್’ ಎಂಬ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಗ್ರೆಗೊರಿ ಸ್ಟಾಂಟನ್.
ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ: ಅಪರಾಧಿ ದಿನೇಶ್ ಯಾದವ್ಗೆ ಐದು ವರ್ಷ ಜೈಲು ಶಿಕ್ಷೆ

ಇಷ್ಟಕ್ಕೂ ಯಾರೂ ಈ ಗ್ರೆಗೊರಿ ಸ್ಟಾಂಟನ್? ಅವರು ಭಾರತಕ್ಕೆ ಇಂತಹ ಒಂದು ಎಚ್ಚರಿಕೆ ನೀಡಲು ಕಾರಣವಾದರೂ ಏನು? ಅವರು ನೀಡುವ ಅಂಕಿಅಂಶವಾದರೂ ಏನು? ರುವಾಂಡ ಹತ್ಯಾಕಾಂಡ ಭಾರತದಲ್ಲೂ ನಡೆಯುತ್ತದೆ ಎನ್ನಲು ಅವರು ಮುಂದಿಡುವ ಅಧ್ಯಯನ ಏನು? ಎಂದು ಒಮ್ಮೆ ಗಮನ ಹರಿಸಿದರೆ ಅರ್ಥವಾಗದ ಭಯವೊಂದು ಆವರಿಸುವುದು ದಿಟ. ಆದರೆ, ಇದಕ್ಕೂ ಮುನ್ನ ರುವಾಂಡ ನರಮೇಧದ ಇತಿಹಾಸವನ್ನು ತಿಳಿದುಕೊಳ್ಳುವುದು ಈ ಸಂದರ್ಭಕ್ಕೆ ಸಾಕಷ್ಟು ಔಚಿತ್ಯವೂ ಔದು.
ರುವಾಂಡ ನರಮೇಧ
ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದ ಕಾಲ ಅದು. ವರ್ಣಭೇದ ನೀತಿಯಿಂದಾಗಿಯೇ ಕುಖ್ಯಾತಿ ಪಡೆದಿದ್ದ ದಕ್ಷಿಣ ಆಫ್ರಿಕಾದಲ್ಲಿ ದಶಕಗಳ ಕಾಲ ಸತತ ಹೋರಾಟ ನಡೆಸಿ ಜೈಲನ್ನೂ ಕಂಡೂ ಕೊನೆಗೆ ಕಪ್ಪು ಜನಾಂಗದವರಿಗೆ ಗೌರವಯುತ ಜೀವನ ನಡೆಸುವ ಹಕ್ಕುನ್ನು ಸಾಧಿಸಿದ್ದ ಕಾಲ. ಆದರೆ, ಇದೇ ಸಮಯದಲ್ಲಿ ಆಫ್ರಿಕಾ ಖಂಡದ ಮತ್ತೊಂದು ಪುಟ್ಟ ದೇಶ ರುವಾಂಡ ಯಾರೂ ತಡೆಯಲಾಗದ ನರಮೇಧ ಒಂದಕ್ಕೆ ಸಾಕ್ಷಿಯಾಗಿ ಹೋಗಿತ್ತು. ಕನಿಷ್ಟ 10 ಲಕ್ಷ ಜನರನ್ನು ಕೊಲೆಗೀಡು ಮಾಡಿದ ಈ ನರಮೇಧದ ಮೂಲ ಕಾರಣ ತಮ್ಮ ಕುಲ ಧರ್ಮವೇ ಶ್ರೇಷ್ಠ ಎಂಬ ಪೊಳ್ಳು ಶ್ರೇಷ್ಠತೆಯ ವ್ಯಸನ.

ರುವಾಂಡದಲ್ಲಿ “ಟೂಟ್ಸಿ, ಹುಟು ಮತ್ತು ಟ್ವಾ” ಮೂರು ಬುಡಕಟ್ಟು ಸಮಾಜಗಳು ಇವೆ. ’ಟ್ವಾ’ ಈ ದೇಶದ ಆದಿವಾಸಿ ಮೂಲ ಜನಾಂಗ. ಆದರೆ, ಇಡೀ ದೇಶದ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಕೇವಲ ಶೇ.1 ರಷ್ಟು ಮಾತ್ರ. ಇನ್ನೂ ’ಹುಟು’ ಜನಾಂಗದವರು ಚಾಡ್ ದೇಶದಿಂದ ಬಂದು ನೆಲೆಸಿದ್ದರೆ, ’ಟೂಟ್ಸಿ’ ಜನರ ಮೂಲ ಇಥಿಯೋಪಿಯಾ.
ಇದನ್ನೂ ಓದಿ: ಮುರುಡೇಶ್ವರದ ಶಿವನ ವಿಗ್ರಹ ವಿರೂಪ: ಚುನಾವಣೆಗಾಗಿ ಐಸಿಸ್ ಹೆಸರಲ್ಲಿ ಕೋಮು ಗಲಭೆಗೆ ಹುನ್ನಾರ?
ರುವಾಂಡ ದೇಶದಲ್ಲಿ ಬಹುಸಂಖ್ಯಾತರು ಎನಿಸಿಕೊಂಡಿರುವವರು ’ಹುಟು’ ಜನಾಂಗದವರು. ಈ ಜನಾಂಗದ ಒಟ್ಟು ಸಂಖ್ಯೆ ಶೇ.85. ಇನ್ನೂ ಟೂಟ್ಸಿ ಜನಸಂಖ್ಯೆ ಶೇ.14 ರಷ್ಟು. ಆದರೆ, ಈ ಎರಡೂ ಜನಾಂಗದ ಸಂಬಂಧ ಮಾತ್ರ ಹಾವು ಮುಂಗುಸಿಯಂತದ್ದು.

ಅಸಲಿಗೆ ಫ್ರಾನ್ಸ್, ಬೆಲ್ಜಿಯಂ ಸೇರಿದಂತೆ ಅನೇಕ ರಾಷ್ಟ್ರಗಳ ಆಳ್ವಿಕೆಗೆ ಒಳಪಟ್ಟಿದ್ದ ರುವಾಂಡಕ್ಕೆ 1962 ರಲ್ಲಿ ಸ್ವಾತಂತ್ಯ್ರ ನೀಡಲಾಗಿತ್ತು. ಸ್ವಾತಂತ್ಯ್ರ ಲಭಿಸಿದ ತಕ್ಷಣವೇ ಆ ದೇಶದ ಹುಟು ಜನಾಂಗದವರು ಮಾಡಿದ ಮೊದಲ ಕೆಲಸ ಟೂಟ್ಸಿ ಜನರ ನರಮೇಧ. ಈ ಸಂದರ್ಭದಲ್ಲೇ ಸಾವಿರಾರು ಟೂಟ್ಸಿ ಜನರ ಹತ್ಯೆ ನಡೆಸಲಾಗಿತ್ತು. ಜೀವದ ಭಯದಲ್ಲಿ ಲಕ್ಷಾಂತರ ಜನ ದೇಶದಿಂದಲೇ ಪಲಾಯನ ಮಾಡಿದ್ದರು. ಇನ್ನೂ ಸರ್ಕಾರಿ ಕೆಲಸಗಳನ್ನು ಟೂಟ್ಸಿ ಜನರಿಗೆ ನಿಷೇಧಿಸಲಾಗಿತ್ತು.
ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ ಇಳಿದಿದ್ದ ಟೂಟ್ಸಿ ಜನಾಂಗದವರು 1994 ಏಪ್ರಿಲ್ 6 ರಂದು ಅಚಾನಕ್ಕಾಗಿ ಹುಟು ಜನಾಂಗದ ರಾಷ್ಟ್ರಪತಿ ತೆರಳಿದ್ದ ವಿಮಾನವನ್ನೇ ಹೊಡೆದುರುಳಿಸಿದ್ದರು. ಆದರೆ, ಈ ಘಟನೆ ಮುಂದಿನ ನೂರು ದಿನಗಳಲ್ಲಿ 10 ಲಕ್ಷ ಜನರ ಕೊಲೆಗೆ ನಾಂದಿಯಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ.

10 ಲಕ್ಷ ಅಮಾಯಕ ಟುಟ್ಸಿ ಜನರನ್ನು ಕೇವಲ 100 ದಿನಗಳಲ್ಲಿ ಹತ್ಯೆ ಮಾಡಿದ 1994ರ ನರಮೇಧವು ಲಿಖಿತ ಇತಿಹಾಸ ಕಂಡ ಅತ್ಯಂತ ಭೀಕರ ಮತ್ತು ವೇಗದ ಹತ್ಯಾಕಾಂಡ. ರುವಾಂಡಾದ ಬಹುಸಂಖ್ಯಾತ ಹುಟು ಜನಾಂಗ ಕಡಿಮೆ ಸಂಖ್ಯೆಯಲ್ಲಿರುವ ಟುಟ್ಟಿಗಳನ್ನು ಮುಗಿಸಿ ಬಿಡುವ ಪ್ರಯತ್ನದಲ್ಲಿ ಅವರನ್ನು ಅಕ್ಷರಶಃ ಬೇಟೆಯಾಡಿತು. ಮಾನಭಂಗ ಮಾಡಿ, ಸುಟ್ಟು, ಅತ್ಯಾಚಾರಗೈದು ನಿರ್ಗತಿಕರನ್ನಾಗಿಸಿತು. ನೂರಕ್ಕೆ ಎಪ್ಪತ್ತರಷ್ಟು ಟುಟ್ಸಿಗಳು ಹತ್ಯೆಗೊಂಡ ಈ ದುರ್ಘಟನೆ ಮನುಷ್ಯನ ಮನಸಿನಲ್ಲಡಗಿದ ಹಿಂಸೆಯ ಸ್ವರೂಪ ಮತ್ತು ಪರಿಣಾಣಗಳನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.
ಆಳುವವರು, ಆರಕ್ಷಕರು, ಸೈನ್ಯ, ಗಣ್ಯರು ಮತ್ತು ಬಹುಸಂಖ್ಯಾತರ ಬೆಂಬಲವೂ ಇದ್ದರೆ ಜನಾಂಗೀಯ ಹತ್ಯೆ ಅದೆಷ್ಟು ಭೀಕರವಾಗಬಹುದು ಎನ್ನುವುದಕ್ಕೆ ಈ ದುರಂತ ಸಾಕ್ಷಿಯಾಗಿದೆ. ಇಂತಹದ್ದೇ ದುರಂತಗಳು ಭಾರತದಲ್ಲೂ ನಡೆಯದೇ ಏನಿಲ್ಲ.
ಇದನ್ನೂ ಓದಿ:ದೆಹಲಿ ಗಲಭೆ: ಸುಳ್ಳು ಸುದ್ದಿ ಬಿತ್ತರಿಸಿದ್ದ ಟೈಮ್ಸ್ ನೌ, ವಿಡಿಯೋ ಡಿಲೀಟ್ ಮಾಡಲು ಸೂಚನೆ
ಬಾಬರಿ, ಗೋಧ್ರಾ, ಮುಜಾಫರ್, ದೆಹಲಿ ನರಮೇಧ
130 ಕೋಟಿ ಜನರಿರುವ ಭಾರತದಲ್ಲಿ ಶೇ.80 ರಷ್ಟಿರುವ ಹಿಂದುಗಳೇ ಬಹು ಸಂಖ್ಯಾತರು. ಬಹು ಸಂಖ್ಯಾತರು ಅಲ್ಪ ಸಂಖ್ಯಾತರನ್ನು ಗೌರವಿಸಬೇಕಾದದ್ದು ಮಾನವೀಯ ಕರ್ತವ್ಯ. ಆದರೆ, ಸ್ವಾತಂತ್ಯ್ರಾ ನಂತರ ಭಾರತದಲ್ಲಿ ಅಂತಹ ಪರಿಸ್ಥಿತಿ ಇಲ್ಲ ಎಂದೇ ಹೇಳಬಹುದು. ಬಾಬರಿ ಮಸೀದಿ ಧ್ವಂಸ, ಗೋಧ್ರಾ, ದೆಹಲಿ ಮತ್ತು ಮುಜಾಫರ್ ನಗರದ ಹತ್ಯಾಕಾಂಡ ಮೇಲಿನ ಹೇಳಿಕೆಗೆ ಸೂಕ್ತ ಸಾಕ್ಷಿ.

ಈ ಮೂರೂ ಗಲಭೆಗಳ ಟಾರ್ಗೆಟ್ ಮುಸ್ಲಿಮರು. ಈ ಗಲಭೆಯ ವೇಳೆ ಮುಸ್ಲಿಂ ಸಮುದಾಯದವರನ್ನು ಹುಡುಕಿ ಹುಡುಕಿ ಕೊಲ್ಲಲಾಗಿದೆ. ದೆಹಲಿ ಹತ್ಯಾಕಾಂಡದ ಸಂದರ್ಭದಲ್ಲಂತೂ ಮುಸ್ಲಿಮರು ಜೀವ ಭಯದಿಂದ ನಗರವನ್ನೆ ತೊರೆಯುವಂತಾಗಿತ್ತು. ಇನ್ನೂ ಮುಸ್ಲಿಮರ ಮನದಲ್ಲಿ ಅಸುರಕ್ಷತೆಯ ಬೀಜ ಭಿತ್ತಿದ ಗುಜರಾತ್ ಹತ್ಯಾಕಾಂಡ ಉಂಟು ಮಾಡಿದ್ದ ಘಾಸಿಯನ್ನು ಪದಗಳಲ್ಲಿ ವಿವರಿಸುವುದು ಅಸಾಧ್ಯ. ಈಗ ಅಸ್ಸಾಂ, ಜಮ್ಮು ಕಾಶ್ಮೀರದಲ್ಲೂ ಅಂತಹದ್ದೇ ಪರಿಸ್ಥಿತಿ ಇದೆ. ದಿನನಿತ್ಯ ಚರ್ಚ್ಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಆಳುವ ಸರ್ಕಾರವೇ ಪೋಷಿಸುತ್ತಿದೆಯೇ ಎಂಬ ಸಂಶಯವೂ ಮೂಡಿಬರುತ್ತಿದೆ. ಈ ಎಲ್ಲಾ ಆಧಾರದ ಮೇಲೆಯೇ ಜೆನೋಸೈಡ್ ಎಂಬ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಗ್ರೆಗೊರಿ ಸ್ಟಾಂಟನ್ ಕಳವಳ ವ್ಯಕ್ತಪಡಿಸುತ್ತಿರುವುದು.
ಗ್ರೆಗೊರಿ ಸ್ಟಾಂಟನ್ ಕಳವಳ ಏನು?
ಗ್ರೆಗೊರಿ ಸ್ಟಾಂಟನ್ ಓರ್ವ ಜನಪರ ಮತ್ತು ಸಾಮಾಜಿಕ ಹೋರಾಟಗಾರ. 10 ಲಕ್ಷ ಜನರ ಬಲಿ ಪಡೆದ ರುವಾಂಡ ನರಮೇಧದ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿರುವ ಗ್ರೆಗೊರಿ ಸ್ಟಾಂಟನ್, ಈ ನರಮೇಧದ ಕಾರಣವನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿದ್ದಾರೆ. ಅಲ್ಲದೆ, ಜಗತ್ತಿನ ಎಲ್ಲಲ್ಲಿ ಮತ್ತೆ ಇಂತಹ ನರಮೇಧಗಳು ನಡೆಯುವ ಸಾಧ್ಯತೆ ಇದೆ? ಅವನ್ನು ತಡೆಗಟ್ಟಲು ಇರುವ ಸಾಧ್ಯತೆಗಳು ಏನು? ಎಂಬುದರ ಬಗ್ಗೆಯೂ ಸ್ಟಾಂಟನ್ ಅಧ್ಯಯನ ನಡೆಸಿದ್ದಾರೆ. ಆದರೆ, ಇದೀಗ ಅವರು ಭಾರತದ ಭವಿಷ್ಯದ ಬಗ್ಗೆ ಹಲವು ಆಘಾತಕಾರಿ ಮಾಹಿತಿಗಳನ್ನು ಹೊರಹಾಕುತ್ತಿದ್ದಾರೆ. ನರಮೇಧಗಳ ಕುರಿತಾಗಿ ಇತ್ತೀಚೆಗೆ ನಡೆದ ಸಂವಾದವೊಂದರ ತುಣುಕನ್ನು ಅವರು ಟ್ವೀಟ್ ಮಾಡಿದ್ದು, ಈ ಟ್ವೀಟ್ ಇದೀಗ ಎಲ್ಲಾ ಚರ್ಚೆಗೂ ಕಾರಣವಾಗಿದೆ.
ಗ್ರೆಗೊರಿ ಸ್ಟಾಂಟನ್ ಪ್ರಕಾರ “ಭಾರತದಲ್ಲಿ ಕೋಮು ಧೃವೀಕರಣ ಆರಂಭವಾಗಿದೆ. ದಶಕಗಳ ಕಾಲ ಭಾರತದಲ್ಲಿ ಬಹು ಸಂಖ್ಯಾತ ಹಿಂದೂಗಳ ಮತಗಳನ್ನು ಕ್ರೋಡೀಕರಿಸುವ ಕೆಲಸ ಯಶಸ್ವಿಯಾಗಿದ್ದು, ಇಲ್ಲಿನ ಚುನಾವಣೆಗಳು ಧರ್ಮದ ಆಧಾರದಲ್ಲೇ ನಡೆಯುತ್ತಿವೆ, ಸರ್ಕಾರಗಳೂ ರಚನೆಯಾಗುತ್ತಿವೆ.

ಈ ಹಿಂದೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ ಗುಜರಾತ್ ಹತ್ಯಾಕಾಂಡ ನಡೆದಿತ್ತು. ಆದರೆ, ಈ ಹತ್ಯಾಕಾಂಡವನ್ನು ನಿಯಂತ್ರಿಸಬೇಕಿದ್ದ ಅವರು ಹತ್ಯಾಕಾಂಡವನ್ನು ಉತ್ತೇಜಿಸಿದ್ದರು. ಪರಿಣಾಮ ಸಾವಿರಾರು ಮುಸ್ಲಿಮರ ಮಾರಣಹೋಮವೇ ನಡೆದಿತ್ತು. ಇದೀಗ ಅದೇ ವ್ಯಕ್ತಿ ಭಾರತದ ಪ್ರಧಾನಿಯಾಗಿದ್ದಾರೆ.
ಮೋದಿ ಪ್ರಧಾನಿಯಾಗಿರುವ ಇದೇ ಅವಧಿಯಲ್ಲಿ ದೆಹಲಿ ಹತ್ಯಾಕಾಂಡ ನಡೆಯಿತು. ಈ ಹತ್ಯಾಕಾಂಡದಲ್ಲೂ ಹಲವಾರು ಮುಸ್ಲಿಮರ ಹತ್ಯೆಗಳಾದವು. ಆದರೆ, ಮೋದಿ ಅದನ್ನು ತಡೆಯುವ ಪ್ರಯತ್ನವನ್ನೂ ಮಾಡಿಲ್ಲ. ಇದೀಗ ಜಮ್ಮು-ಕಾಶ್ಮೀರ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಸತತವಾಗಿ ಜನರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ಮೋದಿಯವರ ಆಡಳಿತ ಮುಂದೊಂದು ದಿನ ಭಾರತದಲ್ಲಿ ನಡೆಯಬಹುದಾದ ಬಹುದೊಡ್ಡ ನರಮೇಧಕ್ಕೆ ಆರಂಭಿಕ ಹಂತ. ಧರ್ಮದ ಶ್ರೇಷ್ಠತೆ ಬಹುದೊಡ್ಡ ಹತ್ಯಾಕಾಂಡಕ್ಕೆ ವೇದಿಕೆಯಾಗಲಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಗ್ರೆಗೊರಿ ಸ್ಟಾಂಟನ್ ಅವರ ಈ ಎಚ್ಚರಿಕೆ ನಡುವೆ ಭಾರತದಲ್ಲೂ ಜಾತಿ/ಧರ್ಮಾಧಾರಿತ ಹತ್ಯೆಗಳು ಹೆಚ್ಚುತ್ತಿರುವುದನ್ನು ಪರಿಗಣಿಸಿದರೆ ರುವಾಂಡಾದ ಭೀಕರ ಘಟನೆ ಭಾರತದಲ್ಲೂ ನಡೆದರೆ ಅಚ್ಚರಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಈ ನರಮೇಧ ನಡೆಯದಂತೆ ತಡೆಯುವುದು ಸಹ ನಮ್ಮ ಮತ್ತು ಪ್ರಭುತ್ವದ ಜವಾಬ್ದಾರಿಯಾಗಿದೆ.
ಇದನ್ನೂ ಓದಿ:ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಲಾಗಿದೆ: ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್



Modi ji Jai
BJP Jai
Hindu Jia
Barat Mata ki Jai bolanevale
Vande Matram song bolanevale
Muslim ko bi Jai
any one