Homeಮುಖಪುಟದೆಹಲಿ ಗಲಭೆ ಪ್ರಕರಣ: ಅಪರಾಧಿ ದಿನೇಶ್ ಯಾದವ್‌ಗೆ ಐದು ವರ್ಷ ಜೈಲು ಶಿಕ್ಷೆ

ದೆಹಲಿ ಗಲಭೆ ಪ್ರಕರಣ: ಅಪರಾಧಿ ದಿನೇಶ್ ಯಾದವ್‌ಗೆ ಐದು ವರ್ಷ ಜೈಲು ಶಿಕ್ಷೆ

ದೆಹಲಿ ಗಲಭೆಗೆ ಸಂಬಂಧಿಸಿದಂತೆ ಶಿಕ್ಷೆಗೆ ಗುರಿಯಾದ ಮೊದಲ ವ್ಯಕ್ತಿ ದಿನೇಶ್ ಯಾದವ್

- Advertisement -
- Advertisement -

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯ ಕೆಲವು ಭಾಗಗಳಲ್ಲಿ ಸಂಭವಿಸಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಒಬ್ಬರನ್ನು ಅಪರಾಧಿ ಎಂದು ದೆಹಲಿ ಕೋರ್ಟ್ ತೀರ್ಪು ನೀಡಿದೆ. ಅಪರಾಧಿ ದಿನೇಶ್ ಯಾದವ್‌ಗೆ ದೆಹಲಿ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಐದು ವರ್ಷ ಜೈಲು ಶಿಕ್ಷೆ ಜೊತೆಗೆ 12,000 ರೂಪಾಯಿ ದಂಡವನ್ನು ಪಾವತಿಸಬೇಕು ಎಂದು ಅವರ ವಕೀಲ ಶಿಖಾ ಗಾರ್ಗ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ದೆಹಲಿ ಗಲಭೆಗೆ ಸಂಬಂಧಿಸಿದಂತೆ ಶಿಕ್ಷೆಗೆ ಗುರಿಯಾದ ಮೊದಲ ವ್ಯಕ್ತಿ ದಿನೇಶ್ ಯಾದವ್. ಆತನಿಗೆ ಶಿಕ್ಷೆಯ ವಿವರವಾದ ಆದೇಶವನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ಅಕ್ರಮ ಸಭೆ, ಗಲಭೆ ಮತ್ತು 73 ವರ್ಷದ ವೃದ್ಧೆಯ ಮನೆಯನ್ನು ದರೋಡೆ ಮಾಡಿ ಸುಟ್ಟು ಹಾಕುವಲ್ಲಿ ಭಾಗವಹಿಸಿದ್ದಕ್ಕಾಗಿ ದಿನೇಶ್ ಯಾದವ್ ಅವರನ್ನು ಕಳೆದ ತಿಂಗಳು ದೋಷಿ ಎಂದು ಘೋಷಿಸಲಾಗಿತ್ತು. ಇತನ ಅಪರಾಧಗಳಿಗೆ ಗರಿಷ್ಠ ಶಿಕ್ಷೆ 10 ವರ್ಷ ಜೈಲು.

ಇದನ್ನೂ ಓದಿ: ದೆಹಲಿ ಗಲಭೆ: ಸುಳ್ಳು ಸುದ್ದಿ ಬಿತ್ತರಿಸಿದ್ದ ಟೈಮ್ಸ್ ನೌ, ವಿಡಿಯೋ ಡಿಲೀಟ್ ಮಾಡಲು ಸೂಚನೆ

ದಿನೇಶ್ ಯಾದವ್ “ಗಲಭೆಯ ಗುಂಪಿನ ಸಕ್ರಿಯ ಸದಸ್ಯ” ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಈಶಾನ್ಯ ದೆಹಲಿಯ ಗೋಕುಲಪುರಿಯಲ್ಲಿರುವ ಭಾಗೀರಥಿ ವಿಹಾರ್‌ನಲ್ಲಿರುವ ಮಹಿಳೆಯ ಮನೆಯನ್ನು ಧ್ವಂಸಗೊಳಿಸಿ ಸುಟ್ಟುಹಾಕುವಲ್ಲಿ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿತ್ತು.

ಸುಮಾರು 150 ರಿಂದ 200 ಗಲಭೆಕೋರರ ಗುಂಪು ಫೆಬ್ರವರಿ 25 ರಂದು ತನ್ನ ಕುಟುಂಬವು ಇಲ್ಲದಿದ್ದಾಗ ತನ್ನ ಮನೆಯ ಮೇಲೆ ದಾಳಿ ಮಾಡಿ ಹಲವಾರು ಬೆಲೆಬಾಳುವ ವಸ್ತುಗಳನ್ನು ದೋಚಿದೆ ಎಂದು ವೃದ್ಧೆ ಮನೋರಿ ದೂರಿದ್ದರು.

ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ದೆಹಲಿಯ ಕರ್ಕರ್ಡೂಮಾ ನ್ಯಾಯಾಲಯವು ಇಬ್ಬರು ಪೊಲೀಸ್ ಸಿಬ್ಬಂದಿಯ ಹೇಳಿಕೆಯನ್ನು ಪ್ರಮುಖವಾಗಿ ಪರಿಗಣಿಸಿತ್ತು. ಮನೋರಿ ಅವರ ಮನೆಯ ಮೇಲೆ ದಾಳಿ ಮಾಡಿದ ಗುಂಪಿನಲ್ಲಿ ದಿನೇಶ್ ಯಾದವ್ ಇದ್ದರು ಎಂದು ಪೊಲೀಸರು ಹೇಳಿದ್ದಾರೆ. ಆದರೆ ಆರೋಪಿಗಳು ಸ್ವತಃ ಮನೆಯನ್ನು ಸುಟ್ಟುಹಾಕುತ್ತಿರುವುದು ಕಂಡುಬಂದಿಲ್ಲ. ಆದರೂ, ಯಾದವ್ ಗಲಭೆ ಗುಂಪಿನ ಭಾಗವಾಗಿರುವುದರಿಂದ ಅವರು ಮನೆಯನ್ನು ಸುಟ್ಟುಹಾಕಿದವರಷ್ಟೇ ಜವಾಬ್ದಾರರು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಇತ್ತ, ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ, ಗೋಕುಲಪುರಿ ಪ್ರದೇಶದಲ್ಲಿ ಅಂಗಡಿಯನ್ನು ಧ್ವಂಸಗೊಳಿಸಿದ ಮತ್ತು ಬೆಂಕಿ ಹಚ್ಚಿದ ಆರೋಪದಲ್ಲಿ ಆರು ಮಂದಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಫೆಬ್ರವರಿ 24 ರಂದು ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆಯ ಬೆಂಬಲಿಗರು ಮತ್ತು ಪ್ರತಿಭಟನಾಕಾರರ ನಡುವೆ ಹಿಂಸಾಚಾರ ಭುಗಿಲೆದ್ದ ನಂತರ ಈಶಾನ್ಯ ದೆಹಲಿಯಲ್ಲಿ ಕೋಮು ಘರ್ಷಣೆಗಳು ಪ್ರಾರಂಭವಾಗಿದ್ದವು. ಗಲಭೆಯಲ್ಲಿ ಕನಿಷ್ಠ 53 ಜನರು ಸಾವನ್ನಪ್ಪಿ, ಸುಮಾರು 700 ಜನರು ಗಾಯಗೊಂಡಿದ್ದರು.


ಇದನ್ನೂ ಓದಿ: ದೆಹಲಿ ಗಲಭೆ: ಒಂದೇ ಘಟನೆ ಬಗ್ಗೆ ದಾಖಲಾದ ನಾಲ್ಕು ಎಫ್‌ಐಆರ್‌ಗಳನ್ನು ರದ್ದುಗೊಳಿಸಿದ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...