Homeಕರ್ನಾಟಕಹಿಜಾಬ್‌ ಧರಿಸುವುದು ಅಶಿಸ್ತು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ವಿವಾದಾತ್ಮಕ ಹೇಳಿಕೆ

ಹಿಜಾಬ್‌ ಧರಿಸುವುದು ಅಶಿಸ್ತು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ವಿವಾದಾತ್ಮಕ ಹೇಳಿಕೆ

- Advertisement -
- Advertisement -

ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದು ಅಶಿಸ್ತು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಕರ್ನಾಟಕದ ಉಡುಪಿ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿಗೆ ಬರುತ್ತಿದ್ದ ವಿದ್ಯಾರ್ಥಿನಿಗಳನ್ನು ಹೊರಗಿಟ್ಟು ಮೂರು ವಾರಗಳಾಗಿವೆ. ವಿದ್ಯಾರ್ಥಿನಿಗಳು ಕಾಲೇಜಿನ ಗೇಟ್‌ ಬಳಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿ, ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕೇಳುತ್ತಿದ್ದಾರೆ.

“ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಗಳಿಗೆ ಪ್ರವೇಶ ನೀಡಲಾಗುತ್ತಿಲ್ಲ. ನಾವು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದೇವೆ. ಆದರೆ, ತರಗತಿಗಳಿಗೆ ಹಾಜರಾಗದಂತೆ ಮತ್ತೊಮ್ಮೆ ನಮ್ಮನ್ನು ನಿರ್ಬಂಧಿಸಲಾಗಿದೆ” ಎಂದು ವಿದ್ಯಾರ್ಥಿನಿಗಳಲ್ಲಿ ಒಬ್ಬರಾದ ಅಲಿಯಾ ಎನ್‌ಡಿಟಿವಿಗೆ ಪ್ರತಿಕ್ರಿಯಿಸಿದ್ದಾರೆ.

“ಹಿಜಾಬ್ ಧರಿಸಿದ್ದಕ್ಕಾಗಿ ನಮಗೆ 20 ದಿನಗಳಿಂದ ನಿರ್ಬಂಧ ವಿಧಿಸಲಾಗಿದೆ. ನಮಗೆ ನ್ಯಾಯ ಬೇಕು” ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿನಿ ಮುಸ್ಕಾನ್ ಜೈನಾಬ್, “ಸಂವಿಧಾನ ನಮಗೆ ಹಿಜಾಬ್ ಧರಿಸುವ ಹಕ್ಕನ್ನು ನೀಡಿದೆ, ಕಾಲೇಜು ಅದನ್ನು ತಿರಸ್ಕರಿಸುತ್ತಿದೆ” ಎಂದು ಪ್ರಶ್ನಿಸಿದ್ದಾರೆ.

ವಿದ್ಯಾರ್ಥಿಗಳ ಹೋರಾಟದ ಕುರಿತು ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಎನ್‌ಡಿಟಿವಿಗೆ ಪ್ರತಿಕ್ರಿಯೆ ನೀಡಿದ್ದು, “ಹಿಜಾಬ್‌ ಧರಿಸುವುದು ಅಶಿಸ್ತು. ಶಾಲಾ, ಕಾಲೇಜುಗಳು ಧರ್ಮವನ್ನು ಆಚರಿಸುವ ಸ್ಥಳವಲ್ಲ” ಎಂದಿದ್ದಾರೆ.

“ಕೆಲವು ಜನರು 2023ರ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಸಮಸ್ಯೆಯನ್ನು ರಾಜಕೀಯಗೊಳಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. “ವಿದ್ಯಾರ್ಥಿಗಳು ಸಾಂವಿಧಾನಿಕ ಹಕ್ಕುಗಳ ಕುರಿತು ಈಗ ಏಕೆ ಪ್ರಸ್ತಾಪಿಸಲು ಬಯಸುತ್ತಾರೆ” ಎಂದು ಸಚಿವರು ಕೇಳಿದ್ದಾರೆ. ಫ್ಯಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾವು ವಿದ್ಯಾರ್ಥಿಗಳ ಹಿಂದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಆ ಆರೋಪವನ್ನು ವಿದ್ಯಾರ್ಥಿಗಳು ನಿರಾಕರಿಸಿದ್ದು, ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾಕ್ಕೂ ಹೋರಾಟಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ನಾವು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ಪ್ರಭಾವಿತರಾಗಿಲ್ಲ. ನಾವು ಅವರ ಭಾಗವಾಗಿಲ್ಲ. ನಮಗೆ ಸಕಾರಾತ್ಮಕ ಪ್ರತಿಕ್ರಿಯೆ ಅಥವಾ ಯಾವುದೇ ಬೆಂಬಲ ಸಿಗದ ಕಾರಣ ನಾವು CFI ಅನ್ನು ಸಂಪರ್ಕಿಸಿದ್ದೆವು” ಎಂದು ಆಲಿಯಾ ಎನ್‌ಡಿಟಿವೆಗೆ ತಿಳಿಸಿದ್ದಾರೆ.

“ಸದರಿ ಕಾಲೇಜಿನಲ್ಲಿ ದಾಖಲಾದ 100ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಈ ವಿದ್ಯಾರ್ಥಿಗಳು ಮಾತ್ರ (ಡ್ರೆಸ್ ಕೋಡ್) ಅನುಸರಿಸಲು ಬಯಸುವುದಿಲ್ಲ. ಶಾಲೆಯು ಧರ್ಮವನ್ನು ಅಭ್ಯಾಸ ಮಾಡುವ ಸ್ಥಳವಲ್ಲ” ಸಚಿವವರು ಹೇಳಿಕೆ ನೀಡಿದ್ದಾರೆ.

“ಕಾಂಗ್ರೆಸ್ ಸರ್ಕಾರವಿದ್ದಾಗ… ನಿಯಮವನ್ನು ಅನುಸರಿಸಿದ್ದರು. ಆದರೆ ಈಗ ಅವರಿಗೆ ಸಮಸ್ಯೆ ಇದೆಯೇ? ಅವರು ಈಗ ಸಾಂವಿಧಾನಿಕ ಹಕ್ಕುಗಳನ್ನು ಪಾಲಿಸಲು ಬಯಸುತ್ತಾರೆಯೇ? ಅಶಿಸ್ತು ಹಕ್ಕಾಗುವುದಿಲ್ಲ” ಎಂದು ನಾಗೇಶ್‌ ಹೇಳಿದ್ದಾರೆ.

“ತಮ್ಮ ಪೋಷಕರು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕಾಲೇಜಿನ ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಎನ್‌ಡಿಟಿವಿಗೆ ತಿಳಿಸಿದ್ದಾರೆ.

“ಆರಾಮವಾಗಿ ಕೂರಲು ಆಗುತ್ತಿಲ್ಲ… ಅದಕ್ಕೇ ಹಿಜಾಬ್ ಹಾಕಿಕೊಂಡಿದ್ದೇವೆ. ಇದು ಸರ್ಕಾರಿ ಕಾಲೇಜು… ಬಾಲಕಿಯರ ಕಾಲೇಜು (ಆದರೆ) ನಮ್ಮಲ್ಲಿ ಪುರುಷ ಉಪನ್ಯಾಸಕರು ಇದ್ದಾರೆ” ಎಂದು ದ್ವಿತೀಯ ವರ್ಷದ ವಿದ್ಯಾರ್ಥಿ ಸಫಾ ಹೇಳಿದ್ದಾರೆ.

“ಕಾಲೇಜಿನಲ್ಲಿ ಧಾರ್ಮಿಕ ತಾರತಮ್ಯವಿದೆ. ನಾವು ಸಲಾಮ್ ಹೇಳುವಂತಿಲ್ಲ. ಸರಕಾರಿ ಕಾಲೇಜಾದರೂ ಉರ್ದುವಿನಲ್ಲಿ ಮಾತನಾಡುವಂತಿಲ್ಲ. ಇತರೆ ವಿದ್ಯಾರ್ಥಿಗಳಿಗೆ ತುಳುವಿನಲ್ಲಿ (ಸ್ಥಳೀಯ ಭಾಷೆ) ಮಾತನಾಡಲು ಅವಕಾಶವಿದೆ. ಉಪನ್ಯಾಸಕರು ನಮ್ಮೊಂದಿಗೆ ತುಳುವಿನಲ್ಲಿ ಮಾತನಾಡುತ್ತಾರೆ. ಆದರೆ ಉರ್ದುವಿನಲ್ಲಿ ಮಾತನಾಡಲು ನಮಗೆ ಅವಕಾಶವಿಲ್ಲ” ಎಂದು ವಿದ್ಯಾರ್ಥಿನಿಯರು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ನಿಯಮಗಳಲ್ಲಿ ಹಿಜಾಬ್ ಧರಿಸುವುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ನಾವು ಅಪರಾಧ ಮಾಡುವವರಂತೆ ಏಕೆ ವರ್ತಿಸುತ್ತಿದ್ದಾರೆ, ನಾವು ತಲೆಗೆ ಸ್ಕಾರ್ಫ್ ಮಾತ್ರ ಕೇಳುತ್ತಿದ್ದೇವೆ ಎಂದಿದ್ದಾರೆ.

ವಿವಾದದ ಬಗ್ಗೆ ಈ ಹಿಂದೆ ನಾನುಗೌರಿ.ಕಾಂ ಜೊತೆ ಸಾಮಾಜಿಕ ಕಾರ್ಯಕರ್ತರೊಬ್ಬರು, “ವಿದ್ಯಾರ್ಥಿನಿಯರು ತಲೆಗೆ ಶಾಲು ಸುತ್ತಿಕೊಳ್ಳುವುದರ ಬಗ್ಗೆ ಕೇಳುತ್ತಿದ್ದಾರೆ. ಅದು ಅವರ ಧಾರ್ಮಿಕ ಆಚರಣೆ, ಅದರಲ್ಲಿ ತಪ್ಪೇನಿದೆ. ಸಂವಿಧಾನದಲ್ಲಿ ಧಾರ್ಮಿಕ ಆಚರಣೆಯನ್ನು ಮೂಲಭೂತ ಹಕ್ಕಾಗಿ ನೀಡಲಾಗಿದೆ” ಎಂದಿದ್ದರು.

“ಈ ಹಿಂದೆ ಯಾವುದೇ ವಿದ್ಯಾರ್ಥಿನಿಯರು ತಲೆಗೆ ಸ್ಕಾರ್ಫ್ ಹಾಕಿ ಬರುತ್ತಿರಲಿಲ್ಲ ಎಂಬ ವಾದವಿದೆ. ಆದರೆ ಅವರು ಧರಿಸುತ್ತಿರಲಿಲ್ಲ ಎಂದರೆ, ಈಗಿರುವ ವಿದ್ಯಾರ್ಥಿನಿಯರು ತಮ್ಮ ಧಾರ್ಮಿಕ ಆಚರಣೆಯ ಹಕ್ಕುಗಳನ್ನು ಕೇಳಬಾರದೇ? ಹೀಗೆಯೆ ಬೇರೆ ವಿದ್ಯಾರ್ಥಿನಿಯರು ಅವರ ಧಾರ್ಮಿಕ ಆಚರಣೆಗಳಾದ ಕೈಗೆ ಬಳೆ ಧರಿಸುವುದು, ಹಣೆಗೆ ಕುಂಕುಮ ಹಚ್ಚುವುದು, ತಲೆಗೆ ಹೂವು ಮುಡಿದುಕೊಳ್ಳುವುದನ್ನು ನಿರಾಕರಿಸಲು ಆಗುತ್ತದೆಯೆ? ಅಥವಾ ಅವರು ಹೊಸದಾಗಿ ಈ ಆಚರಣೆಯನ್ನು ಶುರು ಮಾಡಿದರೆ ತಪ್ಪು ಎನ್ನಲು ಸಾಧ್ಯವೆ?” ಎಂದು ಅವರು ಪ್ರಶ್ನಿಸಿದ್ದರು.

ವಿದ್ಯಾರ್ಥಿನಿಯರ ಹೋರಾಟಕ್ಕೆ ಹಲವರ ದನಿ

ಹಿಜಾಬ್‌ ಧರಿಸಲು ಅವಕಾಶ ಕೋರಿ ಹೋರಾಡುತ್ತಿರುವ ವಿದ್ಯಾರ್ಥಿಗಳ ಪರ ಅನೇಕರು ದನಿ ಎತ್ತಿದ್ದಾರೆ.


ಇದನ್ನೂ ಓದಿರಿ: ಉಡುಪಿ: ಹಿಜಾಬ್ ಧರಿಸಿ ಬರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಇನ್ನೂ ಪ್ರವೇಶ ನೀಡದ ಕಾಲೇಜು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಸಚಿವರು ನಿಜಾನೇ ಹೇಳಿದ್ದಾರೆ,ಆದರೆ ಕಮ್ಯೂನಿಸ್ಟ್ ,ಮಾವೋವಾದಿಗಳಿಗೆ ಮಾತ್ರವೇ ಅದು ವಿವಾದ ಅನಿಸ್ತಿದೆ

  2. ಮುದುಕರಾದಮೇಲೇ ಮುಚ್ಚಿಕೋಂಡಿರಬೇಕಲ್ಲವೇ, ಸಿಖ್ ಗಳು ಅದೇನೋ ಹಾಕಿಕೋತಾರಲ್ಲವೇ ,ಬ್ರಾಮ್ಹಣರರು ಜುಟ್ಟು ಬಿಟ್ಟುಕೋಳ್ಳವೇ

  3. Can you ban the Sikh turban? Bindi?Vibhuti? Different color threads on the wrists? Do you think these practices will not disturb the uniformity? What’s the problem if Muslim girls wear hijaab? How it is going to affect the uniformity and education. Stop this cheap politics. Live and let live harmoniously. This practice is prevailant since beginning and not new. Why this issue is being raked now? Just because ur government is in power?

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...