Homeಮುಖಪುಟ‘ಹಸು ಅಪ್ಪಿಕೊ ದಿನಾಚರಣೆ’ ರದ್ದು: ಪಶು ಕಲ್ಯಾಣ ಮಂಡಳಿ ಸ್ಪಷ್ಟನೆ

‘ಹಸು ಅಪ್ಪಿಕೊ ದಿನಾಚರಣೆ’ ರದ್ದು: ಪಶು ಕಲ್ಯಾಣ ಮಂಡಳಿ ಸ್ಪಷ್ಟನೆ

- Advertisement -
- Advertisement -

ಪ್ರೇಮಿಗಳ ದಿನವನ್ನು ‘ಹಸು ಅಪ್ಪು ದಿನ’ವನ್ನಾಗಿ ಆಚರಿಸಿ ಎಂದು ಭಾರತೀಯ ಪಶು ಕಲ್ಯಾಣ ಮಂಡಳಿಯು ಮಾಡಿದ್ದ ಮನವಿಯನ್ನು ಶುಕ್ರವಾರ ಹಿಂಪಡೆಯಲಾಗಿದೆ. ಹಸು ಅಪ್ಪಿಕೊ ದಿನಾಚರಣೆ ಮಾಡಲು ಮಂಡಳಿ ನೀಡಿದ್ದ ಮನವಿಯು ಅಪಹಾಸ್ಯಕ್ಕೆ ಈಡಾಗಿತ್ತು.

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ನೀಡಿದ ನಿರ್ದೇಶನದ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ.

ಇತ್ತೀಚೆಗೆ ‘ಹಸು ಅಪ್ಪಿಕೋ ದಿನಾಚರಣೆ’ಗೆ ಕರೆ ನೀಡಿದ್ದ ಮಂಡಳಿಯು, “ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂದು ನಮಗೆಲ್ಲರಿಗೂ ತಿಳಿದಿದೆ, ಗೋವು ನಮ್ಮ ಜೀವನವನ್ನು ಉಳಿಸಿಕೊಳ್ಳುತ್ತದೆ, ಸಂಪತ್ತು ಮತ್ತು ಜೀವವೈವಿಧ್ಯತೆಯನ್ನು ಪಶುಗಳು ಪ್ರತಿನಿಧಿಸುತ್ತವೆ. ತಾಯಿಯಂತೆ ಪೋಷಿಸುವ ಸ್ವಭಾವದಿಂದಾಗಿ, ಮನುಷ್ಯನ ಶ್ರೀಮಂತಿಕೆಗೆ ಎಲ್ಲವನ್ನೂ ನೀಡುವ ಕಾರಣದಿಂದಾಗಿ ಹಸುವನ್ನು ‘ಕಾಮಧೇನು’ ಮತ್ತು ‘ಗೋ ಮಾತಾ’ ಎಂದು ಕರೆಯಲಾಗುತ್ತದೆ” ಎಂದಿತ್ತು.

ಮುಂದುವರಿದು, “ಕಾಲಾನಂತರದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಬೆಳವಣಿಗೆಯಿಂದಾಗಿ ವೈದಿಕ ಸಂಪ್ರದಾಯಗಳು ಬಹುತೇಕ ಅಳಿವಿನ ಅಂಚಿನಲ್ಲಿವೆ. ಪಾಶ್ಚಿಮಾತ್ಯ ನಾಗರಿಕತೆಯ ಬೆರಗು ನಮ್ಮ ಭೌತಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಬಹುತೇಕ ಮರೆತುಹೋಗುವಂತೆ ಮಾಡಿದೆ” ಎಂದು ಹೇಳಿತ್ತು.

“ಹಸುಗಳಿಂದಾಗುವ ಅಪಾರ ಪ್ರಯೋಜನದ ದೃಷ್ಟಿಯಿಂದ, ಹಸುವಿನ ಜೊತೆ ಅಪ್ಪಿಕೊಳ್ಳುವುದು ಭಾವನಾತ್ಮಕ ಶ್ರೀಮಂತಿಕೆಯನ್ನು ತರುತ್ತದೆ. ಆದ್ದರಿಂದ ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷ ಹೆಚ್ಚಿಸುತ್ತದೆ. ಎಲ್ಲಾ ಗೋ ಪ್ರೇಮಿಗಳು ಫೆಬ್ರವರಿ 14 ಅನ್ನು ಕೌ ಹಗ್‌ ಡೇ (ಗೋವು ತಬ್ಬಿಕೊಳ್ಳುವ ದಿನ) ಆಚರಿಸಬಹುದು. ಗೋಮಾತೆಯ ಮಹತ್ವವನ್ನು ಗಮನದಲ್ಲಿಟ್ಟುಕೊಳ್ಳಿ. ಜೀವನವನ್ನು ಸಂತೋಷದಾಯಕವಾಗಿಸಿ. ಸಕಾರಾತ್ಮಕ ಶಕ್ತಿ ತುಂಬಿಕೊಳ್ಳಿ” ಎಂದು ಸಲಹೆ ನೀಡಿತ್ತು.

ಅಪಹಾಸ್ಯಕ್ಕೀಡಾದ ಹಸು ಅಪ್ಪುವ ಕರೆ

‘ಹಸು ತಬ್ಬುವ ದಿನ ಆಚರಣೆ’ ಮಾಡಬೇಕೆಂದು ಪಶು ಕಲ್ಯಾಣ ಮಂಡಳಿ ನೀಡಿರುವ ಕರೆಗೆ ಟೀಕೆಗಳು ವ್ಯಕ್ತವಾಗಿದ್ದವು. ಹಲವಾರು ವ್ಯಂಗ್ಯಚಿತ್ರಗಳು ಹರಿದಾಡಿದ್ದವು. ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್‌ಗಳ ಸುರಿಮಳೆಯೇ ಆಗಿತ್ತು. ಹಸುವನ್ನು ಅಪ್ಪಿಕೊಳ್ಳಲು ಹೋಗಿ ವದೆ ತಿಂದವರ ವಿಡಿಯೊಗಳನ್ನು ವ್ಯಾಪಕವಾಗಿ ವೈರಲ್ ಆಗಿದ್ದವು.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನು ಮಾಡುವ ಮೂಲಕ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಕನ್ನಡ ಪರ ಹೋರಾಟಗಾರ ಎಸ್.ಸಿ.ದಿನೇಶ್‌ ಕುಮಾರ್‌, “ಪ್ರೇಮಿಗಳ ದಿನಕ್ಕೆ ಕೇಂದ್ರ ಸರ್ಕಾರದ ಕೌಂಟರ್. ಕೌ ಹಗ್‌ ಡೇ ಅಂತೆ. ದನ ತಬ್ಬಿಕೊಳ್ಳೋ ದಿನ! ಬಹುಶಃ ಮೋದಿಯವರೇ ಒಂದು ದನ ತಬ್ಕೊಂಡು ಉದ್ಘಾಟನೆ ಮಾಡಬಹುದು. ಆದರೆ ದನ ತಬ್ಕೊಳ್ಳೋದು ಹೆಂಗೆ? ಇದೊಂಥರ ಬಡಪಾಯಿ ದನಗಳಿಗೆ ಲೈಂಗಿಕ ಕಿರುಕುಳದ ಥರ ಅನ್ನಿಸಲ್ವಾ? ತೀರ್ಮಾನ ತೆಗೆದುಕೊಳ್ಳೋದಕ್ಕೆ ಮುಂಚೆ ದನಗಳಿಗೂ ಒಂದು ಮಾತು ಕೇಳಬೇಕಿತ್ತು ಅಲ್ವಾ? ನಿಮಗೇನನ್ನಿಸುತ್ತೆ?” ಎಂದು ಪ್ರಶ್ನಿಸಿದ್ದರು.

ಬರಹಗಾರ ಚಂದ್ರಪ್ರಭ ಕಠಾರಿ ಅವರು, “ಪ್ರೇಮಿಗಳ ದಿನಾಚರಣೆ (Valentines day) ಬಂದರೆ ಸಾಕು, ಈ ಮತಾಂಧರಿಗೆ ಯಾಕೊ ಮೈಯೆಲ್ಲ ತುರಿಕೆ ಶುರುವಾಗುತ್ತೆ. ಸಾಲದಕ್ಕೆ ಎಲೆಕ್ಷನ್ ಬೇರೆ ಹತ್ತಿರ ಇದೆ. 40% ಕಮಿಷನ್ ಭ್ರಷ್ಟ ಸರ್ಕಾರ ಅನ್ನೋ ಇಮೇಜ್ ಇನ್ನೂ ಅಳಿಸಲಾಗಿಲ್ಲ. ಏನೋ ಒಂದು ಡೈವರ್ಷನ್ ಟ್ಯಾಕ್ ಟಿಕ್ಸ್ ಮಾಡ್ಬೇಕಲ್ಲ. ಅದಕ್ಕೆ ಫೆಬ್ರವರಿ 14ರಂದು ಹಸುಗಳನ್ನು ತಬ್ಬಿಕೊ ಬೇಕಂತೆ (ಅದು ಎಗರಿಸಿ ಒದಿದಿದ್ರೆ ಸಾಕು). ಅವತ್ತೇ ಏಕೆ ದಿನಾ ತಬ್ಕೊಂಡು ಕೊಟ್ಟಿಗೆಯಲ್ಲೇ ಮಲಗಿ…ಯಾರು ಬೇಡ ಅಂದದ್ದು” ಎಂದು ಕುಟುಕಿದ್ದರು.

ಮುಂದುವರಿದು, “ಅದಿರಲಿ, ಸಾರ್ವಜನಿಕವಾಗಿ ಈ ಕೇಸರಿಗಳು ಇಂಥ ಹೇಳಿಕೆ ಕೊಟ್ರೆ ಆಶ್ಚರ್ಯವೇನಿಲ್ಲ. ಆದರೆ ಅನಿಮಲ್ ವೇಲ್‌ಫೇರ್‌ ಬೋರ್ಡ್ ಆಫ್ ಇಂಡಿಯಾದಂತಹ ಸರ್ಕಾರಿ ಸಂಸ್ಥೆಯ ಮೂಲಕ ಆರ್ಡರ್ ಮಾಡುವಷ್ಟು ಲಜ್ಜೆಗೇಡಿತನ ಈ ಫ್ಯಾಶಿಸ್ಟ್ ಮೋದಿ ಸರ್ಕಾರದ್ದು” ಎಂದು ಬೇಸರ ವ್ಯಕ್ತಪಡಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ: ಬುರ್ಖಾ ಧರಿಸಿ ಧುರಂಧರ್ ಹಾಡಿಗೆ ನೃತ್ಯ; ಹುಡುಗರ ಪುಂಡಾಟಕ್ಕೆ ಆಕ್ರೋಶ

ಧುರಂಧರ್ ಚಿತ್ರದ ಹಾಡಿಗೆ ಬುರ್ಖಾ ಧರಿಸಿ ನೃತ್ಯ ಮಾಡಿದ ಯುವಕರು ಇಸ್ಲಾಮಿಕ್ ಉಡುಗೆಯನ್ನು ಬಹಿರಂಗವಾಗಿ ಅಪಹಾಸ್ಯ ಮಾಡಿದ್ದಾರೆ ಎಂಬ ಕಾರಣಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಶಾಲಾ ಕಾರ್ಯಕ್ರಮವೊಂದರಲ್ಲಿ ಈ...

ಬಾಂಗ್ಲಾ ಮಾಜಿ ಪ್ರಧಾನಿ ಖಾಲಿದಾ ಝಿಯಾ ಅಂತ್ಯಕ್ರಿಯೆ : ಭಾರತದಿಂದ ಸಚಿವ ಜೈಶಂಕರ್ ಭಾಗಿ

ಮಂಗಳವಾರ (ಡಿ.30) ನಿಧನರಾದ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಝಿಯಾ ಅವರ ಅಂತ್ಯಕ್ರಿಯೆ ಬುಧವಾರ (ಡಿ.31) ಢಾಕಾದಲ್ಲಿ ನಡೆಯಿತು. ಭಾರತದಿಂದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಪಾಲ್ಗೊಂಡು ಪ್ರಧಾನಿ ಮೋದಿ...

ಇಂದೋರ್| ಕಲುಷಿತ ನೀರು ಸೇವಿಸಿ ಏಳು ಜನರು ಸಾವು; ದೃಢಪಡಿಸಿದ ಮೇಯರ್

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ ಅತಿಸಾರ ಮತ್ತು ವಾಂತಿಯಿಂದ ಇದುವರೆಗೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಮೇಯರ್ ಪುಷ್ಯಮಿತ್ರ ಭಾರ್ಗವ ಬುಧವಾರ ದೃಢಪಡಿಸಿದರು. "ಭಾಗೀರಥಪುರ ಪ್ರದೇಶದಲ್ಲಿ ಅತಿಸಾರದಿಂದ ಮೂರು ಸಾವುಗಳು...

ಉತ್ತರ ಪ್ರದೇಶ| ಅಮೇಥಿಯಲ್ಲಿ 15 ವರ್ಷದ ದಲಿತ ಬಾಲಕಿ ಮೇಲೆ ಅತ್ಯಾಚಾರ ಆರೋಪ; ಆರೋಪಿ ಬಂಧನ

ಅಮೇಥಿಯಲ್ಲಿ 15 ವರ್ಷದ ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದು...

ಚಲಿಸುತ್ತಿದ್ದ ವ್ಯಾನ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ರಸ್ತೆಗೆ ಎಸೆದ ಪ್ರಕರಣ : ಇಬ್ಬರ ಬಂಧನ

ಚಲಿಸುತ್ತಿದ್ದ ವ್ಯಾನ್‌ನಲ್ಲಿ 25 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ನಂತರ ಆಕೆಯನ್ನು ರಸ್ತೆಗೆ ಎಸೆದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫರೀದಾಬಾದ್‌ನಲ್ಲಿ ನಡೆದಿದ್ದು, ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು...

ವಶಪಡಿಸಿಕೊಂಡ 200 ಕೆ.ಜಿ ಗಾಂಜಾ ಇಲಿಗಳು ತಿಂದಿವೆ ಎಂದ ಪೊಲೀಸರು : ಆರೋಪಿಯನ್ನು ಖುಲಾಸೆಗೊಳಿಸಿದ ಕೋರ್ಟ್

ಮೂರು ವರ್ಷಗಳ ಹಿಂದೆ ಜಾರ್ಖಂಡ್ ಪೊಲೀಸರು ವಾಹನವೊಂದನ್ನು ತಡೆದು, ಅದರಿಂದ ಭಾರೀ ಪ್ರಮಾಣದ ಮಾದಕ ವಸ್ತು ಗಾಂಜಾ ವಶಪಡಿಸಿಕೊಂಡಿದ್ದರು. 2024ರಲ್ಲಿ ಈ ಪ್ರಕರಣದ ವಿಚಾರಣೆ ನಡೆಯುವಾಗ, ವಶಪಡಿಸಿಕೊಂಡ ಗಾಂಜಾವನ್ನು ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿತ್ತು....

ಗಿಗ್ ಕಾರ್ಮಿಕರಿಂದ ಮತ್ತೆ ಮುಷ್ಕರ : ಹೊಸ ವರ್ಷದ ಸಂಜೆ ಆಹಾರ, ದಿನಸಿ ವಿತರಣೆಯಲ್ಲಿ ವ್ಯತ್ಯಯ ಸಾಧ್ಯತೆ

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 25ರ ಕ್ರಿಸ್‌ಮಸ್ ದಿನದಂದು ದೇಶದ ವಿವಿಧ ನಗರಗಳಲ್ಲಿ ಮುಷ್ಕರ ನಡೆಸಿರುವ ಗಿಗ್‌ ಕಾರ್ಮಿಕರು, ಹೊಸ ವರ್ಷದ ಸಂಜೆಯಾದ ಇಂದು (ಡಿ.31) ಮತ್ತೊಮ್ಮೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ನ್ಯಾಯಯುತ ಮತ್ತು...

ಉತ್ತರಾಖಂಡ: ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಎರಡು ಲೋಕೋ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ

ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಗಢ-ಪಿಪಲ್ಕೋಟಿ ಜಲ ವಿದ್ಯುತ್ ಯೋಜನೆಯ ಸುರಂಗದ ಪಿಪಲ್ಕೋಟಿ ಸುರಂಗದೊಳಗೆ ಮಂಗಳವಾರ ಸಂಜೆ ಕಾರ್ಮಿಕರು ಮತ್ತು ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಲೋಕೋ ರೈಲು, ಸರಕು ರೈಲಿಗೆ ಡಿಕ್ಕಿ ಹೊಡೆದು ಸುಮಾರು...

ವಿಬಿ-ಜಿ ರಾಮ್‌ ಜಿ ಕಾಯ್ದೆ ವಿರುದ್ಧ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ : ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಲು ಆಗ್ರಹ

ನರೇಗಾ ಬದಲಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್‌ ಜಿ ಕಾಯ್ದೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದರ ಅನುಷ್ಠಾನ ತಡೆ ಹಿಡಿಯುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಂಗಳವಾರ (ಡಿ.30)...

ಚಕ್ರವರ್ತಿ ಸೂಲಿಬೆಲೆಗೆ ಆಹ್ವಾನ ವಿರೋಧಿಸಿ ಪ್ರತಿಭಟನೆ; ಧಾರವಾಡ ಕೃಷಿ ವಿವಿ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ರದ್ದು

ಧಾರವಾಡದ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮಕ್ಕೆ ಹಿಂದುತ್ವ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ದಲಿತ ಸಂಘಟನೆ ಹಾಗೂ ಕೃಷಿ ವಿವಿ ಬೋರ್ಡ್ ಸದಸ್ಯರು ವಿವಿ...