Homeಮುಖಪುಟಹಳೆಯ ಬಜೆಟ್ ಪ್ರತಿ ಓದಿ ನಗೆಪಾಟಲಿಗೀಡಾದ ಗೆಹ್ಲೋಟ್: ಶೇಮ್ ಶೇಮ್‌ ಎಂದ ಬಿಜೆಪಿ

ಹಳೆಯ ಬಜೆಟ್ ಪ್ರತಿ ಓದಿ ನಗೆಪಾಟಲಿಗೀಡಾದ ಗೆಹ್ಲೋಟ್: ಶೇಮ್ ಶೇಮ್‌ ಎಂದ ಬಿಜೆಪಿ

- Advertisement -
- Advertisement -

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ 2023-24ರ ಬಜೆಟ್‌ ಪ್ರತಿಯನ್ನು ಓದಲು ಬದಲಿಗೆ ಹಿಂದಿನ ವರ್ಷದ ಬಜೆಟ್‌ನ ಆಯ್ದ ಭಾಗಗಳನ್ನು ತಪ್ಪಾಗಿ ಓದುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ.

ಮುಖ್ಯ ಸಚೇತಕ ಮಹೇಶ್ ಜೋಶಿ ಅವರು ಬಂದು ತಡೆಯುವ ಮೊದಲು ಗೆಹ್ಲೋಟ್ ಅವರು ಬಜೆಟ್ ಪೇಪರ್‌ಗಳನ್ನು ಓದುತ್ತಿರುವುದು ರಾಜ್ಯ ಅಸೆಂಬ್ಲಿಯ ವಿಡಿಯೊದಲ್ಲಿ ಸೆರೆಲಾಗಿದೆ. ನಂತರ ಅವರು ಭಾಷಣ ನಿಲ್ಲಿಸಿ ಕ್ಷಮೆಯಾಚಿಸಿದ್ದಾರೆ. ಪ್ರತಿಪಕ್ಷ ಬಿಜೆಪಿಯ ಶಾಸಕರು ನಗೆಗಡಲಲ್ಲಿ ತೇಲುತ್ತಾ, “ಶೇಮ್‌, ಶೇಮ್‌” ಎಂದು ಆಡಿಕೊಂಡಿದ್ದಾರೆ.

ನಂತರ ಪ್ರತಿಪಕ್ಷಗಳು ಸದನದ ಬಾವಿಗೆ ನುಗ್ಗಿ ಪ್ರತಿಭಟಿಸಿದ ನಂತರ ಕಲಾಪವನ್ನು ಅರ್ಧ ಗಂಟೆ ಮುಂದೂಡಲಾಯಿತು.

ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಅವರು, “ಬಜೆಟ್ ಸೋರಿಕೆಯಾಗಿದೆಯೇ?” ಎಂದು ಪ್ರಶ್ನಿಸಿದರು. “ದಾಖಲೆಯನ್ನು ಹೊಸದಾಗಿ ರೂಪಿಸಿ ನಂತರ ವಿಧಾನಸಭೆಯಲ್ಲಿ ಮಂಡಿಸಬೇಕು” ಎಂದು ಒತ್ತಾಯಿಸಿದರು. ಗೆಹ್ಲೋಟ್‌ ವಿಚಾರ ಗೆಹ್ಲೋಟ್‌ ಅವರಿಗೆ ಮಾತ್ರ ಗೊತ್ತಿರಬೇಕಿತ್ತು ಎಂದಿರುವ ಕಟಾರಿಯ, “ಮುಖ್ಯಮಂತ್ರಿಯವರು ತಪ್ಪಾಗಿ ಓದುತ್ತಿದ್ದಾರೆಂದು ಇತರ ಶಾಸಕರಿಗೆ ಹೇಗೆ ಗೊತ್ತಾಯಿತು?” ಎಂದು ಪ್ರಶ್ನಿಸಿದ್ದಾರೆ.

“ಇದು ಸೋರಿಕೆಯಾದ ಬಜೆಟ್ ಅಲ್ಲದಿದ್ದರೆ ಇನ್ನೇನು ಆಗಿರಬಹುದು?” ಎಂದು ಅವರು ಕೇಳಿದ್ದಾರೆ. “ನೀವು [ಗೆಹ್ಲೋಟ್] ಮತ್ತೊಮ್ಮೆ ಬಜೆಟ್ ಅನ್ನು ರೂಪಿಸಬೇಕು, ನಂತರ ಅದನ್ನು ಸದನದಲ್ಲಿ ಮಂಡಿಸಬೇಕು. ನಮ್ಮದೇನೂ ಅಭ್ಯಂತರವಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

ಆದಾಗ್ಯೂ, ಗೆಹ್ಲೋಟ್ ಪ್ರತಿಕ್ರಿಯಿಸಿ, “ನನ್ನ ಕೈಯಲ್ಲಿರುವ ಬಜೆಟ್‌ ಪ್ರತಿಯಲ್ಲಿ ಬರೆದಿರುವುದಕ್ಕೂ ಸದನದ ಸದಸ್ಯರಿಗೆ ನೀಡಿದ ಪ್ರತಿಯಲ್ಲಿ ಬರೆದಿರುವುದಕ್ಕೂ ವ್ಯತ್ಯಾಸವಿದ್ದರೆ ಮಾತ್ರ ನೀವು [ವಿರೋಧ] ಸೂಚಿಸಬಹುದು. ನನ್ನ ಬಜೆಟ್ ಪ್ರತಿಗೆ ತಪ್ಪಾದ ಪುಟವನ್ನು ಸೇರಿಸಿದ್ದರೆ, ಬಜೆಟ್ ಸೋರಿಕೆಯ ವಿಷಯವು ಹೇಗೆ ಉದ್ಭವಿಸುತ್ತದೆ?” ಎಂದು ಪ್ರಶ್ನಿಸಿದರು.

ನಂತರ ಮುಖ್ಯಮಂತ್ರಿಯವರು ಸದನದಲ್ಲಿ ಬಜೆಟ್ ಮಂಡಿಸಲು ಮುಂದಾದರು.

ಗೆಹ್ಲೋಟ್ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿ, “ಅಭಿವೃದ್ಧಿ ಮತ್ತು ಪ್ರಗತಿಗೆ ವಿರುದ್ಧವಾಗಿರುವುದಾಗಿ ತೋರಿಸಲು ಬಿಜೆಪಿ ಬಯಸುತ್ತದೆ. ಬಜೆಟ್ ದಾಖಲೆ ಸೋರಿಕೆಯಾಗಿರುವ ಬಗ್ಗೆ ಅವರ ಆಧಾರರಹಿತ ಆರೋಪಗಳನ್ನು ಬಿಜೆ ಮಾಡಿದೆ. ತನ್ನ ಕ್ಷುಲ್ಲಕ ರಾಜಕೀಯಕ್ಕೆ ಬಜೆಟ್ ಅನ್ನು ಸಹ ಬಿಡುವುದಿಲ್ಲ ಎಂಬುದನ್ನು ಬಿಜೆಪಿ ತೋರಿಸಿದೆ” ಎಂದಿದ್ದಾರೆ.

ಗಿಗ್ ಕೆಲಸಗಾರರಿಗೆ ಕಾರ್ಯಕ್ರಮಗಳ ಘೋಷಣೆ

ರಾಜಸ್ಥಾನದಲ್ಲಿನ ಗಿಗ್ ಕಾರ್ಮಿಕರಿಗಾಗಿ ಹಲವಾರು ಕ್ರಮಗಳನ್ನು ಘೋಷಿಸಿದ್ದಾರೆ ತಮ್ಮ ಬಜೆಟ್‌ನಲ್ಲಿ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಓಲಾ, ಉಬರ್, ಸ್ವಿಗ್ಗಿ, ಜೊಮಾಟೊ, ಅಮೆಜಾನ್ ಮತ್ತು ಇತರ ಕಂಪನಿಗಳೊಂದಿಗೆ ಸಂಬಂಧ ಹೊಂದಿರುವ ಗಿಗ್ ಕೆಲಸಗಾರರ ಸಂಖ್ಯೆ ಹೆಚ್ಚುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

“ಇಲ್ಲಿಯವರೆಗೆ, ಅವರಿಗೆ ಯಾವುದೇ ಸಾಮಾಜಿಕ ಭದ್ರತೆಯ ವ್ಯವಸ್ಥೆ ಇರಲಿಲ್ಲ” ಎಂದಿರುವ ಸಿಎಂ, “ಅವರನ್ನು ಕಿರುಕುಳದಿಂದ ರಕ್ಷಿಸಲು, ಗಿಗ್ ವರ್ಕರ್ಸ್ ವೆಲ್ಫೇರ್ ಆಕ್ಟ್ ಅನ್ನು ತರಲು ನಾನು ಪ್ರಸ್ತಾಪಿಸುತ್ತೇನೆ, ಅದರ ಅಡಿಯಲ್ಲಿ ಗಿಗ್ ವರ್ಕರ್ಸ್ ವೆಲ್ಫೇರ್ ಬೋರ್ಡ್ ರಚನೆಯ ಜೊತೆಗೆ 200 ಕೋಟಿ ರೂ.ಗಳೊಂದಿಗೆ ಗಿಗ್ ವರ್ಕರ್ಸ್ ಕಲ್ಯಾಣ ನಿಧಿಯನ್ನು ಸ್ಥಾಪಿಸಲಾಗುವುದು” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...