ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಮತ್ತು ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿ ಪಡೆಯಬೇಕಿದ್ದ 100 ದಿನಗಳ ರಜೆಯಲ್ಲಿ 2020 ಮತ್ತು 2024ರ (ಅಕ್ಟೋಬರ್ ವರೆಗೆ) ನಡುವೆ ಈ ಪಡೆಗಳಲ್ಲಿರುವ 9.5 ಲಕ್ಷ ಸಿಬ್ಬಂದಿಗಳ ಪೈಕಿ ಕೇವಲ 42,000 ಸಿಬ್ಬಂದಿಗಳು ಮಾತ್ರವೇ 100 ದಿನಗಳ ರಜೆಯ ಲಾಭ ಪಡೆದಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ (MHA) ಮಾಹಿತಿ ನೀಡಿದೆ. 9.5 ಲಕ್ಷ ಸಿಎಪಿಎಫ್ ಸಿಬ್ಬಂದಿಯಲ್ಲಿ
ಕೇಂದ್ರೀಯ ಸಶಸ್ತ್ರ ಪಡೆಗಳಲ್ಲಿ ಆತ್ಮಹತ್ಯೆಗಳು ಮತ್ತು ಸ್ವಯಂನಿವೃತ್ತಿಯನ್ನು ಕಡಿಮೆ ಮಾಡುವ ಮತ್ತು ಸಿಬ್ಬಂದಿಗಳು ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ಮಾಡಿಕೊಡುವ ಉದ್ದೇಶದಿಂದ 100 ದಿನಗಳ ರಜೆ ನೀತಿಯನ್ನು ಘೋಷಿಸಲಾಗಿತ್ತು. ಆದಾಗ್ಯೂ, ತೀರಾ ಕಡಿಮೆ ಸಿಬ್ಬಂದಿ ಈ ನೀತಿಯಡಿ ರಜೆ ಪಡೆದಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. 9.5 ಲಕ್ಷ ಸಿಎಪಿಎಫ್ ಸಿಬ್ಬಂದಿಯಲ್ಲಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಂಸತ್ತಿನಲ್ಲಿ ಗೃಹ ಸಚಿವಾಲಯದ ನೀಡಿದ ಮಾಹಿತಿಯಂತೆ, ಕಳೆದ ನಾಲ್ಕು ವರ್ಷಗಳಲ್ಲಿ ಸಿಆರ್‌ಪಿಎಫ್‌ನ ಒಟ್ಟು 2,245 ಸಿಬ್ಬಂದಿಗಳು ಮಾತ್ರವೇ 100 ದಿನಗಳ ರಜೆ ಪಡೆದುಕೊಂಡಿದ್ದಾರೆ. ಆದಾಗ್ಯೂ, 2024ರಲ್ಲಿ ಕೇವಲ 71 ಮಂದಿ ಮಾತ್ರವೇ ರಜೆ ಮೇಲೆ ತಮ್ಮೂರಿಗೆ ಹೋಗಲು ಸಾಧ್ಯವಾಗಿದೆ ಎಂದು ಸಚಿವಾಲಯ ಹೇಳಿದೆ.
ಜೊತೆಗೆ, ಗಡಿ ಭದ್ರತಾ ಪಡೆಯಲ್ಲಿ (BSF) ಒಟ್ಟು 21,733 ಸಿಬ್ಬಂದಿ 100 ದಿನ ರಜೆಯನ್ನು ತೆಗೆದುಕೊಂಡಿದ್ದರೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) ಪಡೆಯ 1,472 ಸಿಬ್ಬಂದಿ, ಸಶಸ್ತ್ರ ಸೀಮಾ ಬಲ್‌ನ (SSB) 6,142 ಸಿಬ್ಬಂದಿ ಹಾಗೂ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್‌ನ (CISF) 8,838 ಸಿಬ್ಬಂದಿ ಈ ರಜೆಗಳನ್ನು ಪಡೆದಿದ್ದಾರೆ ಎಂದು ಸರ್ಕಾರ ಹೇಳಿದೆ.
ಇದಲ್ಲದೆ, ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಕಾರ್ಯನಿರ್ವಹಿಸುವ ಮತ್ತು ಮಣಿಪುರದಲ್ಲಿ ನಿಯೋಜಿಸಲಾದ ಅಸ್ಸಾಂ ರೈಫಲ್ಸ್‌ನ 2,367 ಸಿಬ್ಬಂದಿಗಳು 100 ದಿನಗಳ ರಜೆ ಪಡೆದಿದ್ದು, ಒಟ್ಟಾರೆಯಾಗಿ, 42,797 ಸಿಬ್ಬಂದಿಗಳು ರಜೆಯ ಉಪಯೋಗ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಸದನದಲ್ಲಿ ಹೇಳಿದೆ.
ಇದನ್ನೂ ಓದಿ: ಪ್ರಧಾನಿಗೆ ಸಂವಿಧಾನದ ವಿಧಿಗಳ ಪಾಠ ಮಾಡಬೇಕು – ಸಂಸದ ಅಸಾದುದ್ದೀನ್ ಓವೈಸಿ
ಪ್ರಧಾನಿಗೆ ಸಂವಿಧಾನದ ವಿಧಿಗಳ ಪಾಠ ಮಾಡಬೇಕು – ಸಂಸದ ಅಸಾದುದ್ದೀನ್ ಓವೈಸಿ



No such types of orders for avail compulsory 100 days leave till now. I am availed 60 days EL&15days C/L with 2 RH , 4 GH & 06 Sundays as prefix and Suffix Total-87 days. How I am availed 100 days leave? Please provide if any orders issued for compulsory avail 100 days leave by MHA to CAPF Jawans. Regards.