Homeಮುಖಪುಟಬನಾರಸ್‌ ವಿ.ವಿಯಲ್ಲಿ RSS ಧ್ವಜ ತೆರವುಗೊಳಿಸಿದ ಉಪ ಪ್ರಾಧ್ಯಾಪಕರ ವಿರುದ್ಧ ಕೇಸ್‌..!

ಬನಾರಸ್‌ ವಿ.ವಿಯಲ್ಲಿ RSS ಧ್ವಜ ತೆರವುಗೊಳಿಸಿದ ಉಪ ಪ್ರಾಧ್ಯಾಪಕರ ವಿರುದ್ಧ ಕೇಸ್‌..!

- Advertisement -
- Advertisement -

ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಅಳವಡಿಸಿದ್ದ ಆರ್‌ಎಸ್‌ಎಸ್‌ ಧ್ವಜವನ್ನು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿ ತೆರವುಗೊಳಿಸಿದ್ದರು. ಇದರಿಂದ ಅವರ ವಿರುದ್ಧ ಕೇಸ್‌ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಚ್‌ಯು ದಕ್ಷಿಣ ಕ್ಯಾಂಪಸ್‌ನ ಡೆಪ್ಯೂಟಿ ಚೀಫ್ ಪ್ರೊಕ್ಟರ್ ಕಿರಣ್ ದಾಮ್ಲೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ಮತ್ತು ಪ್ರಚೋದನೆ ನೀಡಿದ್ದಾರೆ ಎಂಬ ಕಾರಣ ನೀಡಿ ದಾಮ್ಲೆ ವಿರುದ್ಧ ಆರ್‌ಎಸ್‌ಎಸ್ ಪದಾಧಿಕಾರಿ ಚಂದ್ರಮೋಹನ್ ದೂರು ನೀಡಿದ್ದರು. ದೂರು ಆಧರಿಸಿ, ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್‌ಎಚ್‌ಒ ಅಭಯ್ ಸಿಂಗ್ ಹೇಳಿದ್ದಾರೆ.

ಮಂಗಳವಾರ ಉಪ ಪ್ರಾಧ್ಯಾಪಕ ಕಿರಣ್‌ ದಾಮ್ಲೆ ಅವರು ವಿಶ್ವವಿದ್ಯಾಲಯದಲ್ಲಿ ಅಳವಡಿಸಿದ್ದ ಆರ್‌ಎಸ್‌ಎಸ್ ಧ್ವಜವನ್ನು ಹಿಡಿದು, ಶಾಖಾದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದ ಆರ್‌ಎಸ್‌ಎಸ್ ಮತ್ತು ಎಬಿವಿಪಿ ಸದಸ್ಯರ ಬಳಿ ತೆಗೆದುಕೊಂಡು ಹೋಗಿದ್ದರು. ವಿಶ್ವವಿದ್ಯಾಲಯದಲ್ಲಿ ಆರ್‌ಎಸ್‌ಎಸ್‌ ಧ್ವಜ ಅಳವಡಿಕೆಗೆ ಅನುಮತಿಯಿಲ್ಲ ಎಂದು ಹೇಳಿದ್ದರು.

ಆರ್‌ಎಸ್‌ಎಸ್‌ ಧ್ವಜಕ್ಕೆ ಅಗೌರವ ತೋರಿರುವ ಪ್ರಾಧ್ಯಾಪಕರ ವಿರುದ್ಧ ಆರ್‌ಎಸ್‌ಎಸ್‌ ಸದಸ್ಯರು ಧರಣಿ ಕುಳಿತಿದ್ದರು. ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆರ್‌ಎ‌ಸ್‌ಎಸ್‌ ಧ್ವಜದ ಜತೆ ಯೋಗಾಭ್ಯಾಸಕ್ಕೆ ಅನುಮತಿ ನೀಡಬೇಕು ಎಂದು ಪ್ರತಿಭಟನೆ ನಡೆಸಿ, ಆಗ್ರಹಿಸಿದ್ದರು.

ಇಷ್ಟೆಲ್ಲಾ ನಾಟಕೀಯ ಬೆಳವಣಿಗೆಯ ನಂತರ ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಕ್ಷಮೆಯಾಚಿಸಿದರೂ ಸಹ ಪ್ರತಿಭಟನಾಕಾರರು ಮಣಿದಿಲ್ಲ.

ಪ್ರತಿಭಟನಾಕಾರರಿಗೆ ಸ್ಥಳೀಯ ಶಾಸಕ ರತ್ನಾಕರ್ ಮಿಶ್ರಾ ಮತ್ತು ಆರ್‌ಎಸ್‌ಎಸ್ ‘ಸಹ ಪ್ರಾಂತ್‌ ಕರ್ವಾ’ ಸೊಹನ್ ಅವರ ಬೆಂಬಲವೂ ದೊರೆತಿದೆ. ಈ ಮಧ್ಯೆ ಎಸ್ಪಿ ಧರಂವೀರ್‌ ಸಿಂಗ್‌ ಅವರು ಧ್ವಜವನ್ನು ತೆಗೆದಿರುವುದು ಆರ್‌ಎಸ್‌ಎಸ್‌ ಸೇವಕರ ಭಾವನೆಗಳನ್ನು ಘಾಸಿಗೊಳಿಸಿದೆ. ಅದನ್ನು ಯಾಕೆ ತೆಗೆದು ಹಾಕಿದರು ಎಂಬುದನ್ನು ದಾಮ್ಲೆ ವಿವರಿಸಬೇಕು ಎಂದು ಹೇಳಿದರು.

ಇನ್ನು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಲಲಿತೇಶ್ ತ್ರಿಪಾಠಿ, ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ‘ಶಾಖಾ’ ನಡೆಸಬಾರದು. ಆರ್‌ಎಸ್ಎಸ್ ಪದಾಧಿಕಾರಿಗಳು ಸೇರಿದಂತೆ ಹೊರಗಿನವರು ವಿಶ್ವವಿದ್ಯಾಲಯದ ವ್ಯವಹಾರಗಳಲ್ಲಿ  ಹಸ್ತಕ್ಷೇಪ ಮಾಡುತ್ತಿರುವುದು ಏಕೆ..? ಎಂದು ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...