Homeಅಂತರಾಷ್ಟ್ರೀಯಪಠ್ಯದಲ್ಲಿ ಹವಾಮಾನ ಬದಲಾವಣೆ ಪಾಠ ಕಡ್ಡಾಯಗೊಳಿಸಿದ ಮೊದಲ ದೇಶ ಇಟಲಿ

ಪಠ್ಯದಲ್ಲಿ ಹವಾಮಾನ ಬದಲಾವಣೆ ಪಾಠ ಕಡ್ಡಾಯಗೊಳಿಸಿದ ಮೊದಲ ದೇಶ ಇಟಲಿ

- Advertisement -
- Advertisement -

ಶಾಲಾ ಮಕ್ಕಳಿಗೆ ಹವಾಮಾನ ಬದಲಾವಣೆಯ ಪಾಠಗಳನ್ನು ಕಡ್ಡಾಯಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಇಟಲಿ ಪಾತ್ರವಾಗಿದೆ. ಬದಲಾಗುತ್ತಿರುವ ಹವಾಮಾನ, ಹೆಚ್ಚುತ್ತಿರುವ ತಾಪಮಾನ, ವಿಪರೀತಗೊಳ್ಳುತ್ತಿರುವ ಮಾಲಿನ್ಯದಂತ ವಿಷ ವರ್ತುಲದಲ್ಲಿ ಮನುಷ್ಯ ಬದುಕುತ್ತಿದ್ದಾನೆ. ಹೀಗಾಗಿ ಹವಾಮಾನ ಬದಲಾವಣೆ ಪಾಠ ಅತ್ಯಗತ್ಯವಾಗಿದೆ. ಈಗ ಹವಾಮಾನ ಬದಲಾವಣೆ ಕುರಿತ ಪಾಠಗಳನ್ನು ಶಾಲಾ ಮಕ್ಕಳಿಗೆ ಇಟಲಿ ಸರ್ಕಾರ ಕಡ್ಡಾಯಗೊಳಿಸಿದೆ.

ಈ ಬಗ್ಗೆ ಶಿಕ್ಷಣ ಮಂತ್ರಿ ಲೋರೆಂಜೋ ಫೀಯೋರಾಮೊಂಟಿ ಮಾತನಾಡಿ, ಮುಂದಿನ ವರ್ಷದ ಶೈಕ್ಷಣಿಕ ವರ್ಷದಿಂದ  ಹವಾಮಾನ ಬದಲಾವಣೆ ಪಾಠಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಕಲಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರಲಿದೆ. ಇಟಲಿಯ ಪ್ರತಿ ಶಾಲೆಯೂ  ಹವಾಮಾನ ಬದಲಾವಣೆ ಪಾಠಕ್ಕಾಗಿ ಒಂದು ಗಂಟೆ ಮೀಸಲಿಡಲಿವೆ ಎಂದು ಹೇಳಿದ್ದಾರೆ.

’ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಯನ್ನು ಪಠ್ಯದಲ್ಲಿ ಅಳವಡಿಸುವ ಮೂಲಕ ಶಿಕ್ಷಣ ಸರಳೀಕೃತಗೊಳಿಸಲಾಗುವುದು. ಇದಕ್ಕಾಗಿ ಇಡೀ ಶೈಕ್ಷಣಿಕ ಆಡಳಿತ ಮಂಡಳಿ, ಶಿಕ್ಷಣದ ಮಾದರಿ ಹಾಗೂ ಶೈಕ್ಷಣಿಕ ಸಚಿವಾಲಯದಲ್ಲೂ ಬದಲಾವಣೆ ತರಲಾಗುವುದು. ಇಟಾಲಿಯನ್ ಶಿಕ್ಷಣ ವ್ಯವಸ್ಥೆಯಲ್ಲಿ ಹಾಗೂ ನಾವು ಕಲಿಯುವ ಶಾಲೆಯಲ್ಲಿ ಎಲ್ಲದರಲ್ಲೂ ಪರಿಸರ ಮತ್ತು ಸಮಾಜದ ಕುರಿತ ಪಠ್ಯ ಇರುವಂತೆ ವ್ಯವಸ್ಥೆ ಮಾಡಲು ಬಯಸುತ್ತೇನೆ’ ಎಂದು ಲೋರೆಂಜೋ ಹೇಳಿದರು.

ಲೋರೇಂಜೋ ಅವರು ವಿದ್ಯಾರ್ಥಿಗಳು ಶಾಲೆ ಬಿಟ್ಟು ಹವಾಮಾನ ಬದಲಾವಣೆ ಪ್ರತಿಭಟನೆಯಲ್ಲಿ ಭಾಗವಹಿಸಿ ಎಂದು ಸೆಪ್ಟಂಬರ್‌ನಲ್ಲಿ ಹೇಳಿದ್ದರು. ಆಗ ವಿರೋಧ ಪಕ್ಷದವರು ಲೋರೆಂಜೋ ಅವರ ಹೇಳಿಕೆ ಮತ್ತು ನೀತಿಯನ್ನು ಖಂಡಿಸಿದ್ದರು. ಸ್ವತಃ ಅರ್ಥಶಾಸ್ತ್ರಜ್ಞರೂ ಆಗಿರುವ 42 ವಯಸ್ಸಿನ ಲೊರೆಂಜೊ `ಒಟ್ಟು ದೇಶೀಯ ಉತ್ಪನ್ನವನ್ನು ಇನ್ನು ಮುಂದೆ ದೇಶದ ಆರ್ಥಿಕ ಯಶಸ್ಸಿನ ಮುಖ್ಯ ಅಳತೆಯಾಗಿ ಬಳಸಬಾರದು’ ಎಂಬ ವಾದವನ್ನು ಮುಂದಿಟ್ಟಿದ್ದಂತವರು. ಅದಕ್ಕಾಗಿ ಬಲಪಂಥೀಯರಿಂದ ತೀವ್ರ ವಿರೋಧವನ್ನೂ ಎದುರಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದಾಗಿನಿಂದಲೂ ಬಲಪಂಥೀಯ ವಿರೋಧಕ್ಕೆ ಗುರಿಯಾಗಿದ್ದಾರೆ.

ಶಿಕ್ಷಣಕ್ಕಾಗಿ ಹಣ ಸಂಗ್ರಹಿಸಲು ವಿಮಾನಯಾನ ಟಿಕೆಟ್‌ ದರ ಹೆಚ್ಚಿಸುವುದು, ಪ್ಲಾಸ್ಟಿಕ್ ಮತ್ತು ಸಕ್ಕರೆ ಆಹಾರಗಳ ಮೇಲೆ ಹೊಸದಾಗಿ ತೆರಿಗೆ ಹೇರುವ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಇದನ್ನು ವಿಮರ್ಶಕರು ತೀವ್ರವಾಗಿ ಖಂಡಿಸಿದ್ದರು. ಇಟಾಲಿಯನ್‌ ಜನತೆ ಈಗಾಗಲೇ ಅಧಿಕ ತೆರಿಗೆ ಭರಿಸುತ್ತಿದ್ದಾರೆ. ಹೀಗಿರುವಾಗ ಹೊಸ ತೆರಿಗೆ ಕಟ್ಟುವುದು ಎಷ್ಟು ಸರಿ..? ಎಂದು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು.

ಎಲ್ಲಾ ಟೀಕೆಗಳ ಹೊರತಾಗಿಯೂ, ಸರ್ಕಾರ 2020ರ ಬಜೆಟ್‌ನಲ್ಲಿ ಪ್ಲಾಸ್ಟಿಕ್ ತೆರಿಗೆ ಮತ್ತು ಸಕ್ಕರೆ ಪಾನೀಯಗಳ ಮೇಲಿನ ಹೊಸ ತೆರಿಗೆ ವಿಧಿಸಿದೆ. ‘ಮೊದಲು ನಾನು ಹೇಳಿದ್ದ ನೀತಿಯನ್ನು ಅಪಹಾಸ್ಯ ಮಾಡಲಾಗಿತ್ತು. ಆದರೆ ಕೆಲ ತಿಂಗಳುಗಳ ನಂತರ ಸರ್ಕಾರ ಎರಡೂ ಪ್ರಸ್ತಾಪಗಳನ್ನು ಬಳಸುತ್ತಿದ್ದು, ಇದು ನಿಜವಾಗಿಯೂ ಸಾಗಬೇಕಾದ ದಾರಿ ಎಂದು ಜನರಿಗೆ ಮನವರಿಕೆಯಾಗಿದೆ’ ಎಂದು ಅರ್ಥಶಾಸ್ತ್ರಜ್ಞರೂ, ಶಿಕ್ಷಣ ಮಂತ್ರಿಯೂ ಆದ ಲೊರೆಂಜೊ ಹೇಳಿದ್ದಾರೆ.

ಸಾಂಪ್ರದಾಯಿಕ ವಿಷಯಗಳಾದ ಭೂಗೋಳಶಾಸ್ತ್ರ, ಗಣಿತಶಾಸ್ತ್ರ, ಭೌತಶಾಸ್ತ್ರ ವಿಷಯಗಳನ್ನು ಸುಸ್ಥಿರ ಬೆಳವಣಿಗೆಯ ಆಯಾಮದಿಂದಲೇ ಬೋಧಿಸಲಾಗುವುದು ಎಂದು ವಿಶ್ವವಿದ್ಯಾಲಯವೊಂದರ ಮಾಜಿ ಪ್ರಾಧ್ಯಾಪಕರೂ ಆಗಿರುವ ಲೊರೆಂಜೊ ಅಭಿಪ್ರಾಯಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...