ಕಳೆದ ಎರಡು ದಿನಗಳಿಂದ ವಿಶ್ರಾಂತಿಯಲ್ಲಿದ್ದ ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ ಯಾತ್ರೆಯು ಪ.ಬಂಗಾಳದಲ್ಲಿ ಮತ್ತೆ ಪುನರಾರಂಭಗೊಂಡಿದೆ. ಇದೇ ವೇಳೆ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಜಾತಿಗಣತಿ ಬಗ್ಗೆ ಮಹತ್ವದ ಪೋಸ್ಟ್ ಮಾಡಿದ್ದು, ತೆಲಂಗಾಣ ಸರಕಾರವನ್ನು ಅಭಿನಂದಿಸಿದ್ದಾರೆ.
ತೆಲಂಗಾಣದಲ್ಲಿ ರಾಜ್ಯದಲ್ಲಿ ಜಾತಿ ಗಣತಿಯನ್ನು ಘೋಷಿಸುವ ಮೂಲಕ ನ್ಯಾಯದ ಕಡೆಗೆ ಮೊದಲ ಹೆಜ್ಜೆ ಇಟ್ಟಿದ್ದಕ್ಕಾಗಿ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಮತ್ತು ಅವರ ಸರ್ಕಾರವನ್ನು ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ.
ದೇಶದ ಏಳಿಗೆಯಲ್ಲಿ ಸಮಾಜದ ಪ್ರತಿಯೊಂದು ವರ್ಗದ ಸಮಾನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಜಾತಿ ಗಣತಿಯೊಂದೇ ಮಾರ್ಗವಾಗಿದೆ. ಜಾತಿ ಗಣತಿ ನ್ಯಾಯದ ಮೊದಲ ಮೆಟ್ಟಿಲು. ಏಕೆಂದರೆ ಯಾವುದೇ ಸಮಾಜದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ತಿಳಿಯದೆ, ಅದಕ್ಕೆ ಸರಿಯಾದ ಯೋಜನೆಗಳನ್ನು ರೂಪಿಸುವುದು ಅಸಾಧ್ಯ. ದೇಶದ ಸಮೃದ್ಧಿಗೆ ಜಾತಿ ಗಣತಿಯು ಸಮಾಜದ ಪ್ರತಿಯೊಂದು ವರ್ಗದ ಸಮಾನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಏಕೈಕ ಮಾರ್ಗವಾಗಿದೆ. ನ್ಯಾಯದತ್ತ ಮೊದಲ ಹೆಜ್ಜೆ ಇಟ್ಟ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ತೆಲಂಗಾಣ ಸರ್ಕಾರಕ್ಕೆ ಅಭಿನಂದನೆಗಳು ಎಂದು ಅವರು ಹೇಳಿದ್ದಾರೆ.
ತೆಲಂಗಾಣ ಸರ್ಕಾರ ಚುನಾವಣೆಗೂ ಮುನ್ನ ಜನತೆಗೆ ನೀಡಿದ ಭರವಸೆಯಂತೆ ಜಾತಿಗಣತಿಯನ್ನು ಶೀಘ್ರವೇ ಕೈಗೊಳ್ಳಲಿದೆ ಎಂದು ರೆಡ್ಡಿ ಶನಿವಾರ ಹೇಳಿದ್ದರು. ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಭೆ ನಡೆಸಿದ ರೆಡ್ಡಿ, ಜಾತಿ ಗಣತಿಯನ್ನು ಕೈಗೊಳ್ಳಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇದಲ್ಲದೆ ಬಿಪಿಎಲ್ ವರ್ಗದ ಕುಟುಂಬಗಳ ಹೆಣ್ಣುಮಕ್ಕಳಿಗೆ ಅವರ ಮದುವೆಯ ಸಮಯದಲ್ಲಿ 1 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯದ ಜೊತೆಗೆ ಒಂದು ತೊಲ ಚಿನ್ನವನ್ನು ನೀಡುವ ‘ಕಲ್ಯಾಣಮಸ್ತು’ ಯೋಜನೆಯನ್ನು ಅನುಷ್ಠಾನಗೊಳಿಸಲು ಬಜೆಟ್ ಅಂದಾಜುಗಳನ್ನು ಸಿದ್ಧಪಡಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆ:
ಜ. 26, 27ರಂದು ವಿಶ್ರಾಂತಿಯಲ್ಲಿದ್ದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯು ಇಂದು ಮತ್ತೆ ಪುನರಾರಂಭಗೊಂಡಿದೆ. ಪ.ಬಂಗಾಳದ ಜಲ್ಪೈಗುರಿಯಿಂದ ರಾಹುಲ್ ಪಾದಯಾತ್ರೆಯನ್ನು ಪುನರಾರಂಭಿಸಿದ್ದಾರೆ.
ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ರಾಜ್ಯದ ಉತ್ತರ ಭಾಗದಲ್ಲಿರುವ ಸಿಲಿಗುರಿಯ ಬಾಗ್ದೋಗ್ರಾ ವಿಮಾನ ನಿಲ್ದಾಣದಲ್ಲಿ ದೆಹಲಿಯಿಂದ ಬಂದ ರಾಹುಲ್ ಗಾಂಧಿ ಅವರನ್ನು ಬರಮಾಡಿಕೊಂಡಿದ್ದಾರೆ.
ಬಸ್ ಮತ್ತು ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯು ಇಂದು ರಾತ್ರಿ ಸಿಲಿಗುರಿಯ ಬಳಿ ತಂಗಲಿದೆ. ಸೋಮವಾರ ಯಾತ್ರೆ ಬಿಹಾರಕ್ಕೆ ತೆರಳಲಿದೆ. ಜ.31ಕ್ಕೆ ಮಾಲ್ಡಾ ಮೂಲಕ ಪಶ್ಚಿಮ ಬಂಗಾಳ ಮರುಪ್ರವೇಶಿಸಿ ಫೆಬ್ರವರಿ 1ರಂದು ಪ.ಬಂಗಾಳದಿಂದ ಯಾತ್ರೆ ಮುಂದೆ ಸಾಗಿ ಫೆಬ್ರವರಿ 2ರಂದು ಜಾರ್ಖಂಡ್ ಪ್ರವೇಶಿಸಲಿದೆ ಹಾಗೂ ಪಾಕುರ್ ಜಿಲ್ಲೆಯಲ್ಲಿ ರಾಹುಲ್‌ಗಾಂಧಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
#WATCH | Congress MP Rahul Gandhi arrives in Bagdogra, West Bengal from Delhi, to resume the Bharat Jodo Nyay Yatra. pic.twitter.com/n39PLylk0O
— ANI (@ANI) January 28, 2024
VIDEO | Visuals of Congress MP Rahul Gandhi leaving from his residence in Delhi.
He will resume his Bharat Jodo Nyay Yatra from West Bengal's Jalpaiguri district today after a two-day hiatus. pic.twitter.com/2adTDik6EU
— Press Trust of India (@PTI_News) January 28, 2024
ಇದನ್ನು ಓದಿ: ‘ಕಸ ಈಗ ಮತ್ತೆ ತೊಟ್ಟಿಗೆ ಸೇರಿದೆ’: INDIA ಮೈತ್ರಿಕೂಟ ತೊರೆದ ನಿತೀಶ್ ವಿರುದ್ಧ ಪ್ರತಿಪಕ್ಷಗಳ ನಾಯಕರು ವಾಗ್ಧಾಳಿ


