Homeಕರ್ನಾಟಕಸಿಬಿಐ ದಾಳಿ: ಮಾಧ್ಯಮಗಳಿಗೆ ಸಂಪೂರ್ಣ ವಿವರ ನೀಡಿದ ಡಿ.ಕೆ.ಶಿವಕುಮಾರ್

ಸಿಬಿಐ ದಾಳಿ: ಮಾಧ್ಯಮಗಳಿಗೆ ಸಂಪೂರ್ಣ ವಿವರ ನೀಡಿದ ಡಿ.ಕೆ.ಶಿವಕುಮಾರ್

ಕುತಂತ್ರಕ್ಕೆ ಹೆದರುವ ಮಗ ನಾನಲ್ಲ, ನನ್ನ ವಿರುದ್ಧ ಒತ್ತಡ ಹಾಕುತ್ತಿರುವವರಿಗೆ ಒಳ್ಳೆಯದಾಗಲಿ

- Advertisement -
- Advertisement -

ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಮನೆ ಮೇಲೆ ಇಂದು ಸಿಬಿಐ ದಾಳಿ ನಡೆಸಿದ್ದು, ಇದರ ಕುರಿತಂತೆ ಸ್ಪಷ್ಟನೆ ಮತ್ತು ಸಂಪೂರ್ಣ ವಿವರಗಳನ್ನು ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್ ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

“ಮಾಧ್ಯಮ ಸ್ನೇಹಿತರು ಬೆಳಗ್ಗೆಯಿಂದ ಅನೇಕ ವಿಚಾರ ತಿಳಿಸಿದ್ದೀರಿ. ಕೆಲವು ಸತ್ಯವನ್ನೂ ಹೇಳಿದ್ದೀರಿ, ಸುಳ್ಳನ್ನು ಹೇಳಿದ್ದೀರಿ. ಅದು ಏನೆಂಬುದನ್ನು ನೀವೇ ಯೋಚಿಸಿ. ನಿಮ್ಮ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. 2017ರಲ್ಲಿ ಐಟಿ ದಾಳಿ ಆದಾಗ ಅವತ್ತೇ ಬಂಧನ ಆಗುತ್ತೆ ಅಂತಾ ಹೇಳಿದ್ದರು. 2018ರಲ್ಲಿ ಆರ್ಥಿಕ ಅಪರಾಧ ಪ್ರಕರಣ, 2019ರಲ್ಲಿ ಇಡಿ ಪ್ರಕರಣ ನ್ಯಾಯಾಲಯ ನನಗೆ ಜಾಮೀನು ನೀಡಿತು. ಆಗಲೂ ದೇಶದ ಉದ್ದಗಲಕ್ಕೂ, ಸೋನಿಯಾ ಗಾಂಧಿ ಅವರಿಂದ ಹಿಡಿದು ಎಲ್ಲ ಪಕ್ಷದ ಮುಖಂಡರು, ಅನೇಕ ಸಂಘಟನೆಗಳು ಪ್ರತಿಭಟನೆ ಮಾಡಿ ಬೆಂಬಲ ನೀಡಿದರು. ನನಗೆ ಅನ್ಯಾಯ ಆಗಿದೆ ಎಂದು ಜನ ಅಭಿಮಾನದಿಂದ ಬಂದು ಪ್ರತಿಭಟನೆ ಮಾಡಿದರು” ಎಂದು ಹೇಳಿದರು.

“ಎಲ್ಲ ಧರ್ಮದ ಹಿರಿಯರು ನನಗೆ, ನನ್ನ ಕುಟುಂಬಕ್ಕೆ ಶಕ್ತಿ ನೀಡಿದ್ದಾರೆ. ನಾನು ಮರಳಿ ಬಂದಾಗ ಪಕ್ಷ, ಜಾತಿ ಎಲ್ಲ ಮರೆತು ಸ್ವಾಗತ ಕೊಟ್ಟರು. ಜೈಲಿನಿಂದ ಬಂದವನಿಗೆ ಈ ಮೆರವಣಿಗೆ ಬೇಕಾ ಅಂತಾ ಕೇಳಿದ್ದರು. ಅವರು ಒಮ್ಮೆ ಯೋಚಿಸಬೇಕು ಪರಪ್ಪನ ಅಗ್ರಹಾರ ಜೈಲಿನಿಂದ ಬಂದವರು ಹೇಗೆ ಬಂದರು? ನಾನು ಅವರಂತೆ ವಿಕ್ಟರಿ ತೋರಿಸಿ ಬರಲಿಲ್ಲ. ಕೈಮುಗಿದು ಬಂದೆ” ಎಂದರು.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ನಿವಾಸಗಳ ಮೇಲೆ ಸಿಬಿಐ ದಾಳಿ

ನಮ್ಮ ರಾಷ್ಟ್ರೀಯ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಜವಾಬ್ದಾರಿ ಕೊಟ್ಟಿದ್ದಾರೆ. ಕಳೆದ ಏಳು ತಿಂಗಳಲ್ಲಿ ಕೊರೋನಾ ಸಮಸ್ಯೆಯಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದಾಗ ನಾವು ಅವರಿಗೆ ನೆರವಾಗಿದ್ದೇವೆ. ಬಡವರು, ಕಾರ್ಮಿಕರು, ರೈತರು, ಜನ ಸಾಮಾನ್ಯರ ಜತೆ ಸರ್ಕಾರ ನಿಲ್ಲಲಿಲ್ಲ. ವಿರೋಧ ಪಕ್ಷವಾಗಿ ನಾವು ಅವರ ಪರ ನಿಂತೆವು. ಅವರ ಪರವಾಗಿ ನಾವು ಧ್ವನಿ ಎತ್ತಿದ್ದೇವೆ.

ನಾನು ಒಂದು ಪಕ್ಷದ ಅಧ್ಯಕ್ಷನಾಗಿ ನನ್ನ ಕರ್ತವ್ಯ ಮಾಡಿದೆ. ರೈತರ ಸಮಸ್ಯೆಗೆ ಸ್ಪಂದಿಸಿ ರೈತರ ಬೆಳೆಯನ್ನು ಅವರ ಹೊಲಕ್ಕೆ ಹೋಗಿ ಖರೀದಿಸಿದೆವು. ಕೊರೋನಾ ವಿಚಾರದಲ್ಲಿ 300, 400 ಪಟ್ಟು ಭ್ರಷ್ಟಾಚಾರ ಮಾಡಲಾಗಿದೆ. ಈ ಬಗ್ಗೆ ಹೋರಾಟ ಮಾಡಿದೆವು. ವಿಧಾನಸೌಧದಲ್ಲಿ ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ. ನಾವು ಜನರ ನೋವಿಗೆ ಸ್ಪಂದಿಸದಿದ್ದರೆ, ಅವರ ಭಾವನೆಗೆ ಬೆಲೆ ಕೊಡದಿದ್ದರೆ ನಮ್ಮ ಕರ್ತವ್ಯ ನಿರ್ವಹಿಸಲು ವಿಫಲವಾದಂತೆ ಆಗುತ್ತದೆ.

ಇದನ್ನೂ ಓದಿ: ರಮೇಶ್‍ಕುಮಾರ್ ಮತ್ತು ಡಿ.ಕೆ.ಶಿವಕುಮಾರ್: ಇಲ್ಲಿಯವರೆಗೆ ವಿಶ್ವಾಸಮತ ಗೆದ್ದುಕೊಂಡ ಇಬ್ಬರು

ಇಂದು ದೇಶದಲ್ಲಿ ಅನೇಕ ಬೆಳವಣಿಗೆ ಆಗುತ್ತಿದೆ. ಹತ್ರಾಸ್ ನಲ್ಲಿ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಯಿತು. ಆಕೆಗೆ ಸರ್ಕಾರ ನ್ಯಾಯ ಒದಗಿಸಿಕೊಡಲು ಮುಂದಾಗಿದೆಯೇ? ಚುನಾವಣೆ ಘೋಷಣೆಯಾದ ಮೇಲೆ, ನಾವು ಅನೇಕ ವಿಚಾರವಾಗಿ ಪ್ರತಿಭಟನೆಗೆ ಕರೆ ಕೊಟ್ಟ ಸಮಯದಲ್ಲಿ ನನ್ನ ಮನೆ ಮೇಲೆ ದಾಳಿ ಮಾಡಲಾಗಿದೆ. ಇಷ್ಟು ಆತುರ ಯಾಕೆ? ಈ ಎಫ್ಐಆರ್, ಪ್ರಕರಣಗಳಿಗೆ ನಾವು ಹೆದರುವುದಿಲ್ಲ. ಮುಖ್ಯಮಂತ್ರಿಗಳೇ 35 ವರ್ಷಗಳಲ್ಲಿ ನನ್ನ ಮೇಲೆ ಯಾವುದಾದರೂ ತನಿಖೆ ಆಗಿದೆಯಾ? ಕ್ರಿಮಿನಲ್ ಕೇಸ್? ಎಫ್ಐಆರ್ ಆಗಿದೆಯಾ? ನಾನು ಮಂತ್ರಿಯಾದ ಎಲ್ಲ ಇಲಾಖೆಗಳ ಫೈಲ್ ಜಾಲಾಡಿದ್ದೀರಾ. ಏನಾದರೂ ತಪ್ಪು ಕಾಣಿಸಿದೆಯಾ?

ಬೇರೆಯವರ ಬಂಡವಾಳವೂ ನನ್ನ ಬಳಿ ಇದೆ. ಆರ್‌ಟಿಐ ಮೂಲಕ ಎಲ್ಲವನ್ನು ಸಂಗ್ರಹಿಸಿದ್ದೇನೆ. ಯಾವಾಗ ಅದನ್ನು ಬಹಿರಂಗ ಮಾಡಬೇಕೋ ಆಗ ಮಾಡುತ್ತೇನೆ. ಬರೀ ಡಿ.ಕೆ ಶಿವಕುಮಾರ್ ಮಾತ್ರನಾ ನಿಮ್ಮ ಕಣ್ಣಿಗೆ ಕಾಣುತ್ತಿರುವುದು? ನಾನು ನಂಬಿರುವ ಶಕ್ತಿ ದೇವರು ಅಜ್ಜಯ್ಯನವರು, ಈ ಜನ ನನ್ನ ಜತೆ ಇದ್ದಾರೆ.

“ನನ್ನ ಮನೆಯಲ್ಲಿ 1.87 ಲಕ್ಷ ಸಿಕ್ಕಿದೆ ಅಂತಾ ಪಂಚನಾಮ ಇದೆ. ಪಕ್ಕದ ಕಚೇರಿಯಲ್ಲಿ 2-3 ಲಕ್ಷ, ದೆಹಲಿಯಲ್ಲಿ 2-3 ಲಕ್ಷ ಸಿಕ್ಕಿದೆ. ಮಾಧ್ಯಮಗಳಲ್ಲಿ ಬಂದಂತೆ ಕೋಟಿಗಟ್ಟಲೆ ಹಣ ಸಿಕ್ಕಿಲ್ಲ. ನಮ್ಮ ಮನೆಯಲ್ಲಿ ಏನು ಸಿಕ್ಕಿದೆಯೋ ಅದನ್ನು ಹೇಳಿದ್ದೇನೆ. ಬೇರೆಯವರ ಮನೆಯಲ್ಲಿ ಏನು ಸಿಕ್ಕಿದೆ ಗೊತ್ತಿಲ್ಲ. ನಾನು ಉದ್ಯಮಿ, ಶಿಕ್ಷಣದಾರ, ರಾಜಕಾರಣಿ. ನಾನು ತಪ್ಪು ಮಾಡಿದ್ದರೆ, ನನ್ನನ್ನು ನೇಣಿಗೆ ಹಾಕಲಿ. ಅವರು ಯಾವಾಗ ವಿಚಾರಣೆಗೆ ಕರೆಯುತ್ತಾರೋ ಹೋಗುತ್ತೇನೆ” ಎಂದು ಹೇಳಿದರು.


ಇದನ್ನೂ ಓದಿ: ಸಿಬಿಐ ದಾಳಿ: ರಾಜಕೀಯ ಷಡ್ಯಂತ್ರ ಎಂದ ಸಂಸದ ಡಿ.ಕೆ.ಸುರೇಶ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...