Homeಕರ್ನಾಟಕರಮೇಶ್‍ಕುಮಾರ್ ಮತ್ತು ಡಿ.ಕೆ.ಶಿವಕುಮಾರ್: ಇಲ್ಲಿಯವರೆಗೆ ವಿಶ್ವಾಸಮತ ಗೆದ್ದುಕೊಂಡ ಇಬ್ಬರು

ರಮೇಶ್‍ಕುಮಾರ್ ಮತ್ತು ಡಿ.ಕೆ.ಶಿವಕುಮಾರ್: ಇಲ್ಲಿಯವರೆಗೆ ವಿಶ್ವಾಸಮತ ಗೆದ್ದುಕೊಂಡ ಇಬ್ಬರು

- Advertisement -
- Advertisement -

ಸರ್ಕಾರಕ್ಕೆ ಬಹುಮತ ಇಲ್ಲ, ಕುಮಾರಸ್ವಾಮಿ ರಾಜೀನಾಮೆ ಕೊಡಲಿ ಎಂದು ಬಿಜೆಪಿ ಅಬ್ಬರಿಸುತ್ತಿದೆ. ವಿಶ್ವಾಸಮತ ಯಾಚನೆ ಮಾಡಲಿದ್ದೇನೆ, ಸಮಯ ನಿಗದಿ ಮಾಡಿ ಎಂದು ಸ್ವತಃ ಕುಮಾರಸ್ವಾಮಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ಹೋಟೆಲ್ಲಿನಲ್ಲಿ ಸೇರಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿಯು ತಮ್ಮನ್ನು ತೃಪ್ತರಾಗಿಸೀತೇ ಎಂದು ಕಾದುಕೊಂಡು ಕೂತಿದ್ದಾರೆ. ಯಾರ್ಯಾರಿಗೆ ಏನೇನು, ಎಷ್ಟೆಷ್ಟು ಸಿಕ್ಕಿದೆ ಅಥವಾ ಸಿಗುತ್ತದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ಇಬ್ಬರಂತೂ ತಾವೇನು ಪಡೆದುಕೊಳ್ಳಲು ಇಚ್ಛಿಸಿದ್ದರೋ ಅಥವಾ ವಾಸ್ತವದಲ್ಲಿ ಯಾವುದಕ್ಕೆ ಅರ್ಹರೋ ಅದನ್ನು ಪಡೆದುಕೊಂಡಾಗಿದೆ.

ಅವರೇ ರಾಜ್ಯ ರಾಜಕಾರಣದ ಇಬ್ಬರು ಮಹತ್ವಾಕಾಂಕ್ಷಿಗಳಾದ ಸ್ಪೀಕರ್ ರಮೇಶ್ ಕುಮಾರ್ ಮತ್ತು ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿವಕುಮಾರ್. ಶ್ರೀನಿವಾಸಪುರದ ಕೆ.ಆರ್.ರಮೇಶ್‍ಕುಮಾರ್ ಮುಖ್ಯಮಂತ್ರಿಯಾಗಬಹುದೆಂಬ ಆಸೆಯನ್ನೇನೂ ಇಟ್ಟುಕೊಂಡಿಲ್ಲ. ರಾಜಕೀಯ ಸಂದರ್ಭ ಮತ್ತು ಅವರದ್ದೇ ಮಿತಿಗಳ ಕಾರಣಕ್ಕೆ ಅವರನ್ನು ಸಚಿವರನ್ನಾಗಿಸಲೂ ಅವರ ಪಕ್ಷಗಳು ಸಿದ್ಧರಿಲ್ಲ. ಆದರೆ, ಸುದೀರ್ಘಕಾಲದ ರಾಜಕಾರಣದಲ್ಲಿ ತಾನು ಪಡೆದುಕೊಂಡಿರುವ ಜ್ಞಾನ ಹಾಗೂ ದೇಶದಲ್ಲಿ ಈ ಮಟ್ಟಿಗಿನ ತಿಳುವಳಿಕೆ ಇರುವ ಕೆಲವರಲ್ಲೇ ಒಬ್ಬನಾಗಿರುವ ತನಗೆ ಅದರ ‘ಸದ್ಬಳಕೆ’ಗೆ ಸೂಕ್ತ ಅವಕಾಶ ಸಿಕ್ಕಿಲ್ಲ ಎಂಬ ಕೊರಗಂತೂ ಇದೆ. ಈ ಸಾರಿಯ ಬಿಕ್ಕಟ್ಟು ಆ ಅವಕಾಶವನ್ನು ಅವರಿಗೆ ಒದಗಿಸಿದೆ ಮತ್ತು ಇನ್ನೂ ಕೆಲಕಾಲ ಒದಗಿಸಲಿದೆ.

ಸುಪ್ರೀಂಕೋರ್ಟು ಮತ್ತು ರಾಜ್ಯಪಾಲರಿಗೆ ‘ನನ್ನದು ಸ್ಪೀಕರ್ ಸ್ಥಾನ. ಶಾಸಕಾಂಗದ ಮಟ್ಟಿಗೆ ಇದೂ ಸಾಂವಿಧಾನಿಕ ಹುದ್ದೆಯೇ. ನನ್ನ ಕೆಲಸ ನಾನಷ್ಟೇ ಮಾಡುವುದು ಸಾಧ್ಯ. ನೀವು ನನಗೆ ಡಿಕ್ಟೇಟ್ ಮಾಡಲು ಸಾಧ್ಯವಿಲ್ಲ’ ಎಂದು ಅವರು ಸೂಚ್ಯವಾಗಿ ಹೇಳಿಯಾಗಿದೆ. ಇದು ತಲುಪಬೇಕಾದವರಿಗೆ ತಲುಪಲಿ ಎಂದು ಸಂದರ್ಭ ಇದ್ದಾಗಲೆಲ್ಲಾ ಇಂಗ್ಲಿಷಿನಲ್ಲೂ ಮಾತಾಡುತ್ತಾ, ರಾಜ್ಯಪಾಲರು ಮತ್ತು ಸುಪ್ರೀಂಕೋರ್ಟಿಗೂ ಅವರು ಸಂದೇಶ ರವಾನೆ ಮಾಡಿಯಾಗಿದೆ. ಸ್ಪೀಕರ್ ಸ್ಥಾನದಿಂದ ತಾನೇನು ಮಾಡಬಹುದೆಂಬ ಸಣ್ಣ ಸೂಚನೆಯನ್ನು ಉಮೇಶ್ ಜಾಧವ್ ರಾಜೀನಾಮೆ ಸಂದರ್ಭದಲ್ಲೇ ಅವರು ತೋರಿಸಿದ್ದರು.

ಸಂಜೆ 6 ಗಂಟೆ ಒಳಗೆ ರಾಜೀನಾಮೆ ಕೊಡಬಯಸುವ ಶಾಸಕರು ಸ್ಪೀಕರ್ ಅವರನ್ನು ಕಾಣಿ ಮತ್ತು ಇಂದೇ ರಾಜೀನಾಮೆಗಳನ್ನು ಸ್ಪೀಕರ್ ಇತ್ಯರ್ಥ ಮಾಡಲಿ ಎಂಬ ಸೂಚನೆಯನ್ನು ಸುಪ್ರೀಂಕೋರ್ಟು ನಿನ್ನೆ ಕೊಟ್ಟಿತ್ತು. ತಪ್ಪು ಲೆಕ್ಕಾಚಾರದಿಂದ ಎಚ್‍ಎಎಲ್ ಏರ್ ಪೋರ್ಟಿಗೆ ತಡವಾಗಿ ಬಂದ ತೃಪ್ತರಾಗದ ಶಾಸಕರು, ಸಿಗ್ನಲ್ ಫ್ರೀ ವ್ಯವಸ್ಥೆ ಇದ್ದರೂ 6 ಗಂಟೆ ಒಳಗೆ ವಿಧಾನಸೌಧ ತಲುಪಲಿಲ್ಲ. ಅದರ ರನ್ನಿಂಗ್ ಕಾಮೆಂಟ್ರಿ ನೀಡುತ್ತಿದ್ದ ಟಿವಿ ಆಂಕರ್ ಗಳಲ್ಲಿ ಯಾರಾದರೂ ಒಬ್ಬರು ಉಸಿರುಕಟ್ಟಿ ಸತ್ತು ಹೋಗಬಹುದು ಎನಿಸುವ ರೀತಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದರು.

ಬೇರೆ ಸ್ಪೀಕರ್ ಆಗಿದ್ದರೆ, 6 ಗಂಟೆ 1 ನಿಮಿಷಕ್ಕೆ ತಮ್ಮ ಕಚೇರಿಯಿಂದ ಹೊರಟು, ಎ.ಜಿ.ಕಚೇರಿ ಗೇಟಿನಿಂದ ವಿಧಾನಸೌಧ ಆವರಣ ಬಿಡಲು ವ್ಯವಸ್ಥೆ ಮಾಡಿಕೊಂಡಿರುತ್ತಿದ್ದರು. ಆಗ ಸುಪ್ರೀಂಕೋರ್ಟಿನ ತೀರ್ಪನ್ನು ಪಾಲನೆ ಮಾಡಿದ ಹಾಗೂ ಆಗಿರುತ್ತಿತ್ತು; ತಮ್ಮ ಪಕ್ಷವನ್ನು ಬಚಾವು ಮಾಡಿದ ಹಾಗೂ ಆಗಿರುತ್ತಿತ್ತು. ಆದರೆ ಸ್ಪೀಕರ್ ನೈತಿಕವಾಗಿ ತಪ್ಪು ಮಾಡಿದ ಕಳಂಕ ಹೊರಬೇಕಾಗುತ್ತಿತ್ತು. ರಮೇಶ್‍ಕುಮಾರ್ ರಿಗೆ ಇರುವ ಆತ್ಮವಿಶ್ವಾಸ ಎಷ್ಟೆಂದರೆ, ತಾನು ಈ ಪ್ರಕರಣವನ್ನು ತಾಂತ್ರಿಕವಾಗಿ ಗೆಲ್ಲಬೇಕಿಲ್ಲ; ಕೊಡಬೇಕಾದ ಪೆಟ್ಟು ಕೊಟ್ಟೇ ಗೆಲ್ಲುತ್ತೇನೆ ಎಂದು. ಹಾಗಾಗಿ ರಾಜೀನಾಮೆ ಪತ್ರವನ್ನು ತೆಗೆದುಕೊಂಡು (ಖಾಲಿ ಹಾಳೆ ಹಿಡಿದು ಬಂದ ಶಾಸಕರಿಗೆ ಸರಿಯಾದ ರೀತಿಯಲ್ಲಿ ರಾಜೀನಾಮೆ ಪತ್ರ ಹೇಗಿರಬೇಕು ಎಂದು ಅವರೇ ಹೇಳಿರಲಿಕ್ಕೂ ಸಾಕು), ಹೊರಬಂದು ಪತ್ರಿಕಾಗೋಷ್ಠಿ ನಡೆಸಿದರು. ಸುಪ್ರೀಂಕೋರ್ಟು ತನಗೆ ಇಷ್ಟೇ ಸಮಯದಲ್ಲಿ ನಿರ್ಧಾರ ಹೇಳಿ ಎಂದು ತಾಕೀತು ಮಾಡುವಂತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಹೇಳಿದರು.

ಮರುದಿನ ಸುಪ್ರೀಂಕೋರ್ಟು ತಾನೇ ಸಮಯ ಕೇಳಿಕೊಂಡು ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿತು! ಇಂತಹ ಸಂದರ್ಭ ಬರಬಹುದೆಂದೇ ಸಿದ್ದರಾಮಯ್ಯ ಮತ್ತು ದೇವೇಗೌಡರಿಬ್ಬರೂ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ರಮೇಶ್‍ಕುಮಾರ್‍ರನ್ನು ಸ್ಪೀಕರ್ ಮಾಡಿದ್ದರು. ಮೊನ್ನೆ ಕಾಂಗ್ರೆಸ್ ಸಂಸದೀಯ ಪಕ್ಷದಿಂದ ಸ್ಪೀಕರ್ ಕಚೇರಿಗೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಿಯೋಗವೊಂದು ಹೋಗಿತ್ತು. ಆಗ ಹಳೆಯ ಸ್ನೇಹಿತರಾದ ಸಿದ್ದರಾಮಯ್ಯ ಮತ್ತು ರಮೇಶ್‍ ಕುಮಾರ್ ನಡುವೆ ನಡೆದ ಮಾತುಕತೆ ಹೀಗಿತ್ತು.

ರಮೇಶ್ ಕುಮಾರ್: ‘ಒಟ್ಟಿನಲ್ಲಿ ನಿನಗೆ ಈಗ ಬಹಳ ಖುಷಿಯಲ್ಲವೇನಪ್ಪಾ? You are the happiest person now’,

ಸಿದ್ದರಾಮಯ್ಯ: ‘ನಾನೇಕೆ ಖುಷಿ ಪಡಬೇಕಪ್ಪಾ, ನಮ್ಮ ಕಷ್ಟ ನಮಗೆ ಆಗಿದೆ’.

ರ.ಕು: ‘ನನ್ನನ್ನ ಈ ಕಷ್ಟಕ್ಕೆ ಸಿಕ್ಕಿ ಹಾಕಿಸಿದ್ದಕ್ಕೆ’.

ಸಿ.ರಾ: ‘ಇಂಥದ್ದನ್ನೆಲ್ಲಾ ನಿಭಾಯಿಸಲು ನೀನೇ ಸರಿ. ಆ ಸಾಮಥ್ರ್ಯ, ತಿಳುವಳಿಕೆ ನಿನಗೇ ಇದೆ ಎಂಬ ಕಾರಣಕ್ಕೇ ನಿನ್ನನ್ನು ಸ್ಪೀಕರ್ ಆಗಿ ಮಾಡಿರುವುದು’.

ಇದು ವಾಸ್ತವವೇ. ಹಾಗೆಯೇ ಅದಕ್ಕಿಂತ ಜಾಸ್ತಿ ರಮೇಶ್‍ ಕುಮಾರ್ ರವರಿಗೆ ಅವಕಾಶ ಕೊಡಬಾರದು ಎಂಬುದು ಸಿದ್ದರಾಮಯ್ಯ ಮತ್ತು ದೇವೇಗೌಡರಿಬ್ಬರಿಗೂ ಗೊತ್ತು. ಸಂಸದೀಯ ನಿಯಮಾವಳಿಗಳ ಬಗ್ಗೆ ಅಪಾರ ಜ್ಞಾನವಿರುವ ರಮೇಶ್‍ಕುಮಾರ್, ಈ ಅವಧಿಯಲ್ಲಿ ಎರಡೆರಡು ಸಾರಿ ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್ ರಿಂದಲೂ ಸಲಹೆ ಪಡೆದುಕೊಂಡಿದ್ದಾರೆ. ಅವೆಲ್ಲದರ ಪರಿಣಾಮವಾಗಿ ಈ ಪ್ರಕರಣವನ್ನು ವಿಶೇಷ ರೀತಿಯಲ್ಲಿ ನಿಭಾಯಿಸಬೇಕೆಂಬ ನಿರ್ಧಾರಕ್ಕೆ ಅವರು ಬಂದಂತಿದೆ.

ಸಂವಿಧಾನದ 10ನೇ ಶೆಡ್ಯೂಲ್‍ನ ಪ್ರಕಾರ ಶಾಸಕರನ್ನು ಅನರ್ಹಗೊಳಿಸುವ ಪರಮಾಧಿಕಾರ ಸ್ಪೀಕರ್ ಗೆ ಇದೆ. ಅದನ್ನು ನಂತರ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಬಹುದಾದರೂ, ಕೋರ್ಟಿಗೆ ಕೆಲವು ಮಿತಿಗಳಿವೆ. ಈಗಾಗಲೇ ಕಿಹೊಟೊ ಹೊಲ್ಲೊಹಾನ್ ವರ್ಸಸ್ ಜಾಚಿಲ್ಹು (Kihoto Hollohan v/s Zachillhu) ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟೇ ಅದನ್ನು ಹೇಳಿದೆ. ಹಾಗಾಗಿ ಇದು ಶಾಸಕಾಂಗ ಮತ್ತು ನ್ಯಾಯಾಂಗದ ಅಧಿಕಾರವ್ಯಾಪ್ತಿಯ ಕುರಿತ ತಿಕ್ಕಾಟವಾಗುವ ಸಂಭವವಿದೆ. ಹಾಗಾದಾಗ, ಸಾಂವಿಧಾನಿಕ ಮೌಲ್ಯಗಳು ಏನಿರಬೇಕು ಎಂಬುದನ್ನು ಸಮರ್ಥವಾಗಿ ಅಭಿವ್ಯಕ್ತಿಸಬಲ್ಲ ಸ್ಪೀಕರ್ ಇಲ್ಲಿರುವುದರಿಂದ ಸುಪ್ರೀಂಕೋರ್ಟು ಸಹಾ ಇಕ್ಕಟ್ಟಿಗೆ ಸಿಲುಕುತ್ತದೆ.

ಇವೆಲ್ಲದರ ಕೇಂದ್ರದಲ್ಲಿರುವ ರಮೇಶ್‍ ಕುಮಾರ್ ರವರಿಗೆ ಇವೆಲ್ಲವೂ ಹೆಚ್ಚೆಚ್ಚು ಅವಕಾಶಗಳನ್ನು ಒದಗಿಸುತ್ತಾ ಹೋಗುತ್ತದೆ ಮತ್ತು ಅವರೂ ಅದನ್ನು ಬಯಸುತ್ತಾರೆ. ಇವೆಲ್ಲದರ ಪರಿಣಾಮವಾಗಿ ಪ್ರಜಾತಂತ್ರಕ್ಕೆ ಒಳಿತಾಗುವುದಾದರೆ ಮತ್ತು ಅನೈತಿಕ ಪಕ್ಷಾಂತರವನ್ನು ತಡೆಯುವಲ್ಲಿ ಮೈಲುಗಲ್ಲನ್ನು ನಿರ್ಮಿಸುವುದಾದರೆ ಅದಕ್ಕಿಂದ ಒಳ್ಳೆಯದು ಇನ್ನೊಂದಿಲ್ಲ.

ಇದನ್ನೂ ಓದಿ: ಮುಂಬೈಗೆ ಹೋಗಿ ತನ್ನ ಪರವಾದ ವಿಶ್ವಾಸಮತ ಗೆದ್ದುಕೊಂಡ ಡಿ.ಕೆ.ಶಿವಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಭಾರತೀಯ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಪ್ರಕರಣ : 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ...

ಮಂಡಿಯ ಐಐಟಿ ಕ್ಯಾಂಪಸ್‌ನಲ್ಲಿ ‘ಶೂದ್ರರು ಮೇಲ್ವರ್ಗಗಳ ಸೇವಕರು’ ಎಂಬ ವರ್ಣ ಶ್ರೇಣೀಕರಣ ಚಿತ್ರಣ: ಜಾತಿ ವಿವಾದದ ನಂತರ ತನಿಖೆಗೆ ಆದೇಶ

ಮಂಡಿ: ಶೂದ್ರರನ್ನು ‘ಉನ್ನತ ವರ್ಗಗಳಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವವರು’ ಎಂದು ಬಿಂಬಿಸುವ ಪೋಸ್ಟರ್‌ವೊಂದು ಹಿಮಾಚಲ ಪ್ರದೇಶದ ಐಐಟಿ ಮಂಡಿಯಲ್ಲಿ ಜಾತಿ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಂಸ್ಥೆ ತನಿಖೆಗೆ ಆದೇಶಿಸಿದೆ. ಸೆಪ್ಟೆಂಬರ್ 4ರಂದು...

ಎಸ್ಐಆರ್ ಬಳಿಕ ಮಣಿಪುರ, ಸಿಕ್ಕಿಂ, ಮಿಜೋರಾಂನಲ್ಲಿ 2.24 ಲಕ್ಷ ಮತದಾರರ ಹೆಸರು ಕಡಿತ: ಸಿಕ್ಕಿಂನಲ್ಲಿ ಶೇ.11.15ರಷ್ಟು ಇಳಿಕೆ 

ನವದೆಹಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಈಶಾನ್ಯ ಭಾರತದ ಮಣಿಪುರ, ಸಿಕ್ಕಿಂ ಮತ್ತು ಮಿಜೋರಾಂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಈ ಮೂರು ರಾಜ್ಯಗಳಲ್ಲಿ...

ಜೆಎನ್‌ಯು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ : 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ದೂರು

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಂತರಿಕ ದೂರುಗಳ ಸಮಿತಿಯು (ಐಸಿಸಿ), ಸುಮಾರು ಹನ್ನೊಂದು ವಿದ್ಯಾರ್ಥಿನಿಯರು ಪ್ರೊಫೆಸರ್ ಒಬ್ಬರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು...

ಹಿಂದೂ ಧಾರ್ಮಿಕ ಸಂಘಟನೆ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಟ್ಟ ಆರೋಪ; ಈಫೆಲ್ ಟವರ್‌ನಲ್ಲಿ ನೌಕರರ ಮುಷ್ಕರ

ಹಿಂದೂ ಧಾರ್ಮಿಕ ಸಂಘಟನೆ ಬಿಎಪಿಎಸ್ (BAPS) ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿಡಲಾಗಿತ್ತು ಎಂಬ ಆರೋಪ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಈಫೆಲ್ ಟವರ್‌ನ ಸಿಬ್ಬಂದಿ ಸೋಮವಾರ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: CID ತನಿಖೆಯಲ್ಲಿ ರೂ. 12 ಕೋಟಿಗೂ ಅಧಿಕ ಡೀಲ್ ಬಯಲು!

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ತನಿಖೆಯಲ್ಲಿ ಸಾಲು ಸಾಲು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಒಟ್ಟು 24 ಅಭ್ಯರ್ಥಿಗಳು ಹಣ...

ದೆಹಲಿಯಲ್ಲಿ ಮಣಿಪುರದ ಸಂಗೀತಗಾರನ ಗುಂಪು ಹತ್ಯೆ : ಎಂಟು ಜನರ ಬಂಧನ

ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಸಂಗೀತಗಾರ ಚೊಂಗ್ಥಾಮ್ ವಿಕ್ರಮ್ ಸಿಂಗ್ ಅವರು ಭಾನುವಾರ (ಸೆ.6) ರಾತ್ರಿ ಗುಂಪೊಂದರಿಂದ ಕಲ್ಲು ತೂರಾಟ ಅಥವಾ ಹಲ್ಲೆಗೆ ಒಳಗಾಗಿ, ಅದರಿಂದ ಉಂಟಾದ ಗಂಭೀರ ಗಾಯಗಳಿಂದಾಗಿ ಸೋಮವಾರ...

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...