ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳನ್ನು ಹತ್ಯೆ ಮಾಡಿದ ಆರೋಪದಡಿ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ ಅವರನ್ನು ಪ್ರಶ್ನಿಸಲು ಸಿಬಿಐಗೆ ವಿಶೇಷ ನ್ಯಾಯಾಲಯ ಸೋಮವಾರ ಅನುಮತಿ ನೀಡಿದೆ. ಇದೇ ಪ್ರಕರಣದಲ್ಲಿ ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಈಗಾಗಲೇ ಬಂಧಿಸಲಾಗಿದೆ.
ಮಗಳ ಕೊಲೆ ಪ್ರಕರಣದ ಸಹ ಆರೋಪಿಗಳಾದ ಇಂದ್ರಾಣಿ ಮುಖರ್ಜಿ ಮತ್ತು ಅವರ ಪತಿ ಪೀಟರ್ ಮುಖರ್ಜಿ ಐಎನ್‌ಎಕ್ಸ್ ಮೀಡಿಯಾ ಗ್ರೂಪ್‌ನ ಮಾಜಿ ಪ್ರವರ್ತಕರಾಗಿದ್ದಾರೆ. ಚಿದಂಬರಂ ಮತ್ತು ಅವರ ಮಗ ಕಾರ್ತಿ ವಿರುದ್ಧ ಇಂದ್ರಾಣಿ ಮುಖರ್ಜಿ ಅವರು ತಪ್ಪೊಪ್ಪಿಗೆಯ ಹೇಳಿಕೆಯನ್ನು ದಾಖಲಿಸಿದ್ದರು. ನಂತರ ಅವರನ್ನು ಸದರಿ ಪ್ರಕರಣದಲ್ಲಿ ಅನುಮೋದಕರೆಂದು ಘೋಷಿಸಲಾಗಿದೆ.
ಭ್ರಷ್ಟಾಚಾರ ಪ್ರಕರಣದ ಭಾಗವಾಗಿ ಕೆಲವು ಹಣಕಾಸಿನ ವಹಿವಾಟುಗಳ ಬಗ್ಗೆ ಸ್ಪಷ್ಟತೆ ಬೇಕು ಎಂದು ಇಂದ್ರಾನಿ ಮುಖರ್ಜಿ ಅವರನ್ನು ಪ್ರಶ್ನಿಸಲು ಕೇಂದ್ರೀಯ ತನಿಖಾ ದಳ ಸೋಮವಾರ ನ್ಯಾಯಾಲಯದ ಅನುಮತಿಯನ್ನು ಕೋರಿತ್ತು. ವಿಶೇಷ ಸಿಬಿಐ ನ್ಯಾಯಾಧೀಶ ಜೆ ಸಿ ಜಗ್ಡೇಲ್ ಅವರು ನಗರದ ಬೈಕುಲ್ಲಾ ಜೈಲಿನೊಳಗೆ ಇಂದ್ರಾಣಿ ಮುಖರ್ಜಿ ಅವರನ್ನು ಪ್ರಶ್ನಿಸಲು ಕೇಂದ್ರ ಏಜೆನ್ಸಿಗೆ ಅನುಮತಿ ನೀಡಿದರು. ಅಲ್ಲಿ ಅವರ ಮಗಳು ಶೀನಾ ಬೋರಾ ಅವರ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
47 ವರ್ಷದ ಮಾಜಿ ಮಾಧ್ಯಮ ಕಾರ್ಯನಿರ್ವಾಹಕಿ ಇಂದ್ರಾಣಿಯನ್ನು ಇಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ರ ನಡುವೆ ಪ್ರಶ್ನಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂ ಅವರನ್ನು ಆಗಸ್ಟ್ 21 ರಂದು ಸಿಬಿಐ ಬಂಧಿಸಿತ್ತು. ಕಾಂಗ್ರೆಸ್ ನಾಯಕನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ.
ಇಂದ್ರಾಣಿ ಮುಖರ್ಜಿ ಅವರು ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು, ಅವರು ಮತ್ತು ಅವರ ಪತಿ ಸೇರಿ ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ಕಚೇರಿಯಲ್ಲಿ ಚಿದಂಬರಂ ಅವರನ್ನು ಹಣಕಾಸು ಸಚಿವರಾಗಿದ್ದಾಗ ಭೇಟಿಯಾಗಿದ್ದರು ಎಂದು ಆರೋಪಿಸಲಾಗಿದೆ.
ತನ್ನ ಮಗ ಕಾರ್ತಿಗೆ ವ್ಯವಹಾರದಲ್ಲಿ ನೀವು ಸಹಾಯ ಮಾಡಿದರೆ ನಿಮ್ಮ ಐಎನ್‌ಎಕ್ಸ್ ಮೀಡಿಯಾಕ್ಕೆ ವಿದೇಶಿ ಹೂಡಿಕೆಗೆ ಅನುಮೋದನೆ ನೀಡುತ್ತೇವೆ ಎಂದು ಚಿದಂಬರಂ ಹೇಳಿದ್ದರು ಎಂದು ಇಂದ್ರಾಣಿ ಹೇಳಿಕೊಂಡಿದ್ದಾಳೆ.
ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ 305 ಕೋಟಿ ರೂ.ಗಳ ವಿದೇಶಿ ಹಣವನ್ನು ಪಡೆದಿದ್ದಕ್ಕಾಗಿ ಐಎನ್‌ಎಕ್ಸ್ ಮೀಡಿಯಾ ಗ್ರೂಪ್‌ಗೆ ನೀಡಿದ್ದ ಎಫ್‌ಐಪಿಬಿ ಕ್ಲಿಯರೆನ್ಸ್‌ನಲ್ಲಿನ ಅಕ್ರಮಗಳ ಆರೋಪದಲ್ಲಿ ಸಿಬಿಐ 2017 ರ ಮೇ 15 ರಂದು ಎಫ್‌ಐಆರ್ ದಾಖಲಿಸಿದೆ. ಇದಾದ ನಂತರ ಇ.ಡಿ ಈ ನಿಟ್ಟಿನಲ್ಲಿ 2018 ರಲ್ಲಿ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದೆ.
73 ವರ್ಷದ ಚಿದಂಬರಂ ಮತ್ತು ಅವರ ಮಗ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಚಿದಂಬರಂ ವಿರುದ್ಧ ತನಿಖಾ ಸಂಸ್ಥೆಗಳ ಕ್ರಮವನ್ನು “ರಾಜಕೀಯ ಪ್ರೇರಿತ” ಎಂದು ಕಾಂಗ್ರೆಸ್ ಹೇಳಿದೆ.


