Homeಮುಖಪುಟಯುವಕನಿಂದ ತನ್ನ ನಾದಿನಿ ಮತ್ತು ಮಗುವಿನ ಕೊಲೆ..: ನಿರುದ್ಯೋಗವೇ ಕಾರಣ??

ಯುವಕನಿಂದ ತನ್ನ ನಾದಿನಿ ಮತ್ತು ಮಗುವಿನ ಕೊಲೆ..: ನಿರುದ್ಯೋಗವೇ ಕಾರಣ??

- Advertisement -
- Advertisement -

ಮಹಾರಾಷ್ಟ್ರದ ನವೀ ಮುಂಬಯಿಯಲ್ಲಿ ನಿರುದ್ಯೋಗಿ ಯುವಕನೊಬ್ಬ ತನ್ನ ನಾದಿನಿ ಮತ್ತು ಆಕೆಯ 2 ವರ್ಷದ ಮಗುವನ್ನು ಕೊಲೆ ಮಾಡಿ ಬಂಧನಕ್ಕೊಳಗಾಗಿರುವ ಘಟನೆ ಜರುಗಿದೆ.

29 ವರ್ಷದ ಸುರೇಶ್ ಚವಾಣ್ ಎಂಬುವವನೆ ಆರೋಪಿಯಾಗಿ ಜೈಲಿನಲ್ಲಿರುವ ಯುವಕನಾಗಿದ್ದಾನೆ. ಈತನಿಗೆ ಎಷ್ಟೇ ಹುಡುಕಿದ್ದರೂ ಸರಿಯಾದ ಉದ್ಯೋಗ ಸಿಕ್ಕಿರಲಿಲ್ಲ. ಆದರೆ ಈತನ ತಮ್ಮನಿಗೆ ಉದ್ಯೋಗ ಸಿಕ್ಕು ಆತ ಮದುವೆಯಾಗಿ ಮನೆ ಮಾಡಿಕೊಂಡಿದ್ದ. ಪನ್ವೆಲ್ ಸಿಟಿ ಮುನ್ಸಿಪಲ್ ಕಾರ್ಪೊರೇಷನ್ (ಪಿಸಿಎಂಸಿ) ವ್ಯಾಪ್ತಿಯಲ್ಲಿರುವ ಮನೆಯಲ್ಲಿಯೇ ಸುರೇಶ್ ಸಹ ಇದ್ದುಕೊಂಡು ಕಾಲ ಕಳೆಯುತ್ತಿದ್ದ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಸುರೇಶ್ ನಿರುದ್ಯೋಗಿಯಾಗಿದ್ದರಿಂದ ಸಹೋದರರ ನಡುವಿನ ಸಂಬಂಧವು ಬಿಗಡಾಯಿಸಿದೆ. ಜಗಳವಾಗಿ ಸುರೇಶ್ ನನ್ನು ಆತನ ತಮ್ಮ ಮನೆಯಿಂದ ಓಡಿಸಿದ್ದಾನೆ. ಇದರಿಂದ ಖಿನ್ನತೆಗೊಳಗಾಗಿದ್ದ ಸುರೇಶ್ ಹಲವಾರು ಕಡೆ ಅಲೆದಾಡಿ ಉದ್ಯೋಗ ಸಿಗದೇ ಅದೇ ಕೋಪದಲ್ಲಿ ತನ್ನ ತಮ್ಮನ ಮನೆಗೆ ಸೋಮವಾರ ರಾತ್ರಿ ಮತ್ತೆ ಬಂದಿದ್ದಾನೆ.

ಆ ಸಂದರ್ಭದಲ್ಲಿ ತನ್ನ ತಮ್ಮ ಕೆಲಸಕ್ಕೆ ಹೋಗಿದ್ದು ಮನೆಯಲ್ಲಿದ್ದು ತನ್ನ ನಾದಿನಿ ಜೈಶ್ರೀಯೊಂದಿಗೆ ಜಗಳವಾಗಿ ಆಕೆಯನ್ನು ಮತ್ತು ಆಕೆಯ ಎರಡು ವರ್ಷದ ಪುತ್ರ ಅವಿನಾಶ್ ಅವರನ್ನು ಒಬ್ಬರ ನಂತರ ಒಬ್ಬರಂತೆ ದಿಂಬಿನಿಂದ ಮುಖಮುಚ್ಚಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ರಾತ್ರಿ 11:30ರ ಸುಮಾರಿಗೆ ತನ್ನ ಕಿರಿಯ ಸಹೋದರ ಕಚೇರಿಯಿಂದ ಮನೆಗೆ ಮರಳುವವರೆಗೂ ಆರೋಪಿ ಸುರೇಶ್ ಶವಗಳ ಪಕ್ಕದಲ್ಲಿ ಕುಳಿತಿದ್ದರು” ಎಂದು ಪೊಲೀಸ್ ಅಧಿಕಾರಿ ದೇವಿದಾಸ್ ಸೋನವಾನೆ ಹೇಳಿದ್ದಾರೆ. ಅವನ ತಮ್ಮ ಪೊಲೀಸರಿಗೆ ತಿಳಿಸಿದ ನಂತರ, ಸುರೇಶ್ ಅವರನ್ನು ಮಂಗಳವಾರ ಆ ಫ್ಲ್ಯಾಟ್‌ನಿಂದ ಬಂಧಿಸಲಾಗಿದೆ.

ತನ್ನ ಸಹೋದರನು ಜೀವನಕ್ಕಾಗಿ ಸ್ವಂತ ಹಣ ಸಂಪಾದಿಸದ ಕಾರಣಕ್ಕಾಗಿ ಅವನನ್ನು ತನ್ನ ಫ್ಲ್ಯಾಟ್‌ನಿಂದ ಓಡಿಸಿದ್ದರಿಂದ ಆರೋಪಿ ಸುರೇಶ್ ನಿರಾಶೆಗೊಂಡಿದ್ದಾನೆಂದು ತೋರುತ್ತದೆ, ಇದೇ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸ್ ಅಧಿಕಾರಿ ಸೋನವಾನೆ ಹೇಳಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎನ್ನುತ್ತಿದ್ದಾರೆ.

ಮೂಲ: ಎನ್.ಡಿ.ಟಿ.ವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...