Homeಕರ್ನಾಟಕಮಡಿಕೇರಿ: ಹುಲಿ ದಾಳಿಗೆ 8 ವರ್ಷದ ಬಾಲಕ ಬಲಿ - 14 ದಿನದಲ್ಲಿ ಇದು 3...

ಮಡಿಕೇರಿ: ಹುಲಿ ದಾಳಿಗೆ 8 ವರ್ಷದ ಬಾಲಕ ಬಲಿ – 14 ದಿನದಲ್ಲಿ ಇದು 3 ನೇ ಸಾವು!

ದಕ್ಷಿಣ ಕೊಡಗು ಸ್ಥಳೀಯರನ್ನು ಸುರಕ್ಷಿತವಾಗಿಡಲು ಸಾಧ್ಯವಾಗದ ಕಾರಣ ಅಲ್ಲಿನ ಗ್ರಾಮಸ್ಥರು ರಾಜ್ಯ ಅರಣ್ಯ ಸಚಿವರು ಮತ್ತು ಜಿಲ್ಲೆಯ ಜನರ ಪ್ರತಿನಿಧಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.

- Advertisement -
- Advertisement -

ಹುಲಿ ದಾಳಿ ಮಾಡಿದ ಪರಿಣಾಮ ಕೊಡಗು ಜಿಲ್ಲೆಯ ಬೆಳ್ಳೂರು ಗ್ರಾಮದ 8 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಇಂದು (ಮಾ.8) ನಡೆದಿದೆ. 14 ದಿನದಲ್ಲಿ ಮೂರನೇ ಸಾವು ಇದಾಗಿದೆ.

ಸಿಕೆ ಸುಬ್ಬಯ್ಯ ಅವರ ಎಸ್ಟೇಟ್‌ನಲ್ಲಿ 55 ವರ್ಷದ ಕಾರ್ಮಿಕ ಕೆಂಚ ಎಂಬುವವರು ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಕೆಂಚ ಅವರೊಂದಿಗೆ ಅವರ ಮೊಮ್ಮಗ ರಾಮಸ್ವಾಮಿ ತನ್ನ ತಾತ ಮಾಡುತ್ತಿದ್ದ ಕೆಲಸವನ್ನು ನೋಡುತ್ತಿದ್ದನು. ಈ ಸಂದರ್ಭದಲ್ಲಿ ಇಬ್ಬರ ಮೇಲೂ ಹುಲಿ ತೀವ್ರವಾಗಿ ದಾಳಿ ಮಾಡಿದೆ. ಇದರಿಂದ ರಾಮಸ್ವಾಮಿ ಸಾವನ್ನಪ್ಪಿದ್ದು, ಕೆಂಚ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆದ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದರು. ಸ್ಥಳೀಯರಿಂದ ಮಾಹಿತಿ ಪಡೆದ ಅವರು ಸ್ಥಳಕ್ಕೆ ಧಾವಿಸಿ ರಾಮಸ್ವಾಮಿಯ ದೇಹವನ್ನು ಕೂಡಲೇ ಸ್ಥಳಾಂತರಿಸಿದರು. ಕೆಂಚ ಅವರನ್ನು ಕೂಡ ಚಿಕಿತ್ಸೆಗಾಗಿ ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಪ.ಬಂಗಾಳ: 3 ರೈಲು ಬಾಡಿಗೆಗೆ ಪಡೆದು ಪ್ರಧಾನಿಯ ರ್‍ಯಾಲಿಗೆ ಜನ ಸೇರಿಸಿದ ಬಿಜೆಪಿ!

ಈ ಘಟನೆಯಿಂದ ಕೋಪಗೊಂಡ ಗ್ರಾಮಸ್ಥರು ಪೊನ್ನಂಪೇಟೆ-ಕುಟ್ಟಾ ರಸ್ತೆಯನ್ನು ತಡೆದಿದ್ದಾರೆ. ಕಳೆದ ಎರಡು ವಾರಗಳಲ್ಲಿ ದಾರಿತಪ್ಪಿದ ಪ್ರಾಣಿಗಳನ್ನು ಸೆರೆಹಿಡಿಯಲು ಸಾಧ್ಯವಾಗದ ಇಲಾಖೆಯ ವಿಫಲ ಪ್ರಯತ್ನಗಳ ಬಗ್ಗೆ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಹುಲಿಯು ‘ನಾಗರಹೊಳೆ ಹುಲಿ ಮೀಸಲು ಪ್ರದೇಶ’ದಿಂದ ವಲಸೆ ಬಂದಿದೆ ಎಂದು ತಿಳಿದುಬಂದಿದೆ. ಪ್ರಾಣಿಗಳನ್ನು ತಡೆಯುವ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿವೆ. ದಕ್ಷಿಣ ಕೊಡಗು ಸ್ಥಳೀಯರನ್ನು ಸುರಕ್ಷಿತವಾಗಿಡಲು ಸಾಧ್ಯವಾಗದ ಕಾರಣ ಅಲ್ಲಿನ ಗ್ರಾಮಸ್ಥರು ರಾಜ್ಯ ಅರಣ್ಯ ಸಚಿವರು ಮತ್ತು ಜಿಲ್ಲೆಯ ಜನರ ಪ್ರತಿನಿಧಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಕಳೆದ 14 ದಿನಗಳಲ್ಲಿ ಹುಲಿ ದಾಳಿಯಿಂದಾಗಿ ಸಂಭವಿಸಿರುವ ಸಾವುಗಳಲ್ಲಿ ಇದು ಮೂರನೆಯದು. ಫೆಬ್ರವರಿ 20 ರಂದು ಜಿಲ್ಲೆಯ ಟಿ ಶೆಟ್ಟಿಗೇರಿ ಮತ್ತು ಕುಮ್ಟೂರು ಗ್ರಾಮಗಳಲ್ಲಿ ಎರಡು ಜೀವಗಳು ಬಲಿಯಾಗಿವೆ. ಇದರ ನಡುವೆ ಅರಣ್ಯ ಇಲಾಖೆ ಮಂಚಳ್ಳಿ ಗ್ರಾಮದಲ್ಲಿ ಮರುದಿನ ಆ ಹುಲಿಯನ್ನು ಸೆರೆಹಿಡಿದಿತ್ತು.

ಅಂದಿನಿಂದ ಇಂದಿನವರೆಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವಾರು ಜಾನುವಾರುಗಳ ಸಾವಿನ ವರದಿಗಳು ಬಂದಿವೆ.


ಇದನ್ನೂ ಓದಿ: ಹುಲಿಗಳಿಗೆ ಗೋಮಾಂಸ ನೀಡುವುದಕ್ಕೆ ಬಿಜೆಪಿ ಪ್ರತಿಭಟನೆ: ಹಾಗಾದರೆ ಇಡ್ಲಿ-ಸಾಂಬಾರ್ ಕೊಡಿ ಎಂದ ನೆಟ್ಟಿಗರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...