Homeಅಂಕಣಗಳುಸಾವನ್ನು ಸಂಭ್ರಮಿಸುವ ಮನಸ್ಥಿತಿ: ಮೂಲ ಮತ್ತು ಮೂಲೋತ್ಪಾಟನೆ

ಸಾವನ್ನು ಸಂಭ್ರಮಿಸುವ ಮನಸ್ಥಿತಿ: ಮೂಲ ಮತ್ತು ಮೂಲೋತ್ಪಾಟನೆ

ಸಂತಾಪಸೂಚಕ ಸಂದೇಶಗಳ ಅಲೆಯೊಂದಿಗೆ ಸಮಾಜದ ಇನ್ನೊಂದು ಕರಾಳ ಮುಖವೂ ನಮ್ಮೆದುರಿಗೆ ರಾಚಿದೆ

- Advertisement -
- Advertisement -

ಸಂಪಾದಕೀಯ |
ಸೋಮವಾರ ಬೆಳಗ್ಗೆ ನಾಡಿನ ಅತ್ಯಂತ ಪ್ರಮುಖ ಬರಹಗಾರ, ನಾಟಕಕಾರ, ಬಹುಮುಖ ಪ್ರತಿಭೆ ಗಿರೀಶ್ ಕಾರ್ನಾಡ್ ಇಲ್ಲವಾದರು. ಸಂತಾಪಸೂಚಕ ಸಂದೇಶಗಳ ಅಲೆಯೊಂದಿಗೆ ಸಮಾಜದ ಇನ್ನೊಂದು ಕರಾಳ ಮುಖವೂ ನಮ್ಮೆದುರಿಗೆ ರಾಚಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ನಾಡ್ ಅವರ ಸಾವನ್ನು ಸಂಭ್ರಮಿಸುವ ಹಲವಾರು ಪೋಸ್ಟ್‍ಗಳು ಕಾಣಿಸಿಕೊಂಡಿವೆ. ಕಳೆದ ವರ್ಷ ಗೌರಿ ಲಂಕೇಶ್ ಹತ್ಯೆಯಾದಾಗಲೂ ಇಂತಹ ಪೋಸ್ಟ್‍ಗಳು ಕಂಡುಬಂದಿದ್ದವು.
ಎಲ್ಲೋ ಒಂದೋ ಎರಡೋ ಇಂತಹ ಪೋಸ್ಟ್‍ಗಳು ಕಂಡುಬಂದಿದ್ದರೆ ಸಮಾಜದಲ್ಲಿ ಕೆಲವು ವಿಕೃತ ಮನಸ್ಥಿತಿಗಳು ಇದ್ದೇ ಇರುತ್ತಾರೆ ಎಂದು ಸುಮ್ಮನಾಗಬಹುದಿತ್ತು. ಆದರೆ ಇಂತಹವರ ಸಂಖ್ಯೆ ಸುಮ್ಮನಾಗುವಷ್ಟು ವಿರಳವಾಗಿಲ್ಲ. ಹಾಗೂ ಇಂಥವರನ್ನು ಬೈದು, ಸಮಾಜಕ್ಕೆ, ಧರ್ಮಕ್ಕೆ ನೀವು ಕಳಂಕ ಎಂದು ಹೇಳಿಯೂ ಸುಮ್ಮನಾಗುವ ಹಾಗಿಲ್ಲ.
ಗಿರೀಶ್ ಕಾರ್ನಾಡ್ ಅವರು ಒಬ್ಬ ಚಿಂತಕರಾಗಿದ್ದರು, ಅವರು ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿ ಸಮಾಜಕ್ಕೆ ತಮ್ಮ ಕರ್ತವ್ಯವವನ್ನು ತಮ್ಮದೇ ಆದ ರೀತಿಯಲ್ಲಿ ನಿಭಾಯಿಸುತ್ತಿದ್ದರು. ಕೋಮು ಸೌಹಾರ್ದತೆಯ ಬಗ್ಗೆ, ಜಾತ್ಯತೀತತೆಯ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದವರಾಗಿದ್ದರು. ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸುವುದಕ್ಕೆ ಎಂದೂ ಹಿಂಜರಿಯಲಿಲ್ಲ. ಅದೇ ಕಾರಣಕ್ಕೆ ಅವರಿಗೆ ಕೆಲವರಿಂದ ವಿರೋಧವೂ ವ್ಯಕ್ತವಾಗಿತ್ತು. ಆದರೆ ಅವರ ಸಾವನ್ನು ಸಂಭ್ರಮಿಸುವವರು ಕೇವಲ ಅವರ ವಿರೋಧಿಗಳಾಗಿಲ್ಲ ಹಾಗೂ ಪ್ರಜಾತಂತ್ರ, ಸಮಾನತೆ, ಉದಾರತೆಯಂತಹ ಆಶಯಗಳನ್ನೇ ವಿರೋಧಿಸುವವರಾಗಿದ್ದಾರೆ. ಅಂತಹವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿರುವುದರಿಂದ ಅವರನ್ನು, ಈ ವಿಕೃತ ಸಂಭ್ರಮವನ್ನು ಮೊದಲು ನಾವು ಒಂದು ವಾಸ್ತವ ಮತ್ತು ಗಂಭೀರ ಸಮಸ್ಯೆ ಎಂದು ಒಪ್ಪಿಕೊಳ್ಳಬೇಕಿದೆ. ಇಲ್ಲಿ ಕಾಣಿಸುತ್ತಿರುವುದು ಸಮಾಜದ ವಿಕೃತಿ.
ಕಾರ್ನಾಡ್ ಅವರು ಹಿಂದೂ ಧರ್ಮದ ವಿರೋಧಿಯಾಗಿದ್ದರು ಹಾಗೂ ಧರ್ಮದ ವಿರೋಧಿ ಸಾವನ್ನು ಸಂಭ್ರಮಿಸುವುದರಲ್ಲಿ ತಪ್ಪೇನೂ ಇಲ್ಲ ಎನ್ನುವುದು ಈ ಸಾವನ್ನು ಸಂಭ್ರಮಿಸಿದವರ ವಾದ.
ಧರ್ಮಾತ್ಮ, ಧರ್ಮ-ಕರ್ಮ, ಮಾನವೀಯತೆಯೇ ಧರ್ಮ, ದಯವೇ ಧರ್ಮ ಇತ್ಯಾದಿಗಳೆಲ್ಲಾ ಧರ್ಮವಾಗಿದ್ದರೆ ಕಾರ್ನಾಡ್ ಅವರು ಧರ್ಮದ ಪರ ಇರುವವರಾಗಿರುತ್ತಿದ್ದರು ಎಂಬ ಮಾತನ್ನು ನಾವು ಹೇಳುವುದು ಪ್ರಯೋಜನವಾಗುತ್ತಿಲ್ಲ. ಬಲಿ ಚಕ್ರವರ್ತಿ ಮತ್ತು ಅಸುರರನ್ನು (ಯಾರು ಅಸುರರು ಎಂಬುದಕ್ಕೆ ಬದಲಾದ ವ್ಯಾಖ್ಯಾನವಿರುವಾಗ) ಕೊಂದದ್ದಕ್ಕೆ ಹಬ್ಬ ಆಚರಿಸುತ್ತಿರುವ ಸಂಸ್ಕೃತಿಯೂ ಈ ದೇಶದಲ್ಲಿದೆ. ಅದನ್ನೇ ‘ಅಧಾರ್ಮಿಕರು’ ಸಮರ್ಥನೆಯಾಗಿ ಬಳಸುತ್ತಿದ್ದಾರೆ.
ನಮ್ಮ ಸಮಾಜವನ್ನು ನಿರ್ಮಿಸುವಲ್ಲಿ ಧರ್ಮವು ಸಕಾರಾತ್ಮಕ ಪಾತ್ರವನ್ನೇ ನಿರ್ವಹಿಸಿದೇ ಅಂತೇನಲ್ಲ. ಆದರೆ ಅದರ ಪಾತ್ರವಂತೂ ಅತ್ಯಂತ ದೊಡ್ಡದು. ಬಡತನ ಮತ್ತು ಅಭದ್ರತೆಯಿಂದ ಬಳಲುತ್ತ ಸಿನಿಕತೆಯನ್ನು ಮೈಗೂಡಿಸಿಕೊಂಡ ನಮ್ಮ ಸಮಾಜದಲ್ಲಿ ಇವುಗಳನ್ನು ಮತ್ತು ಎಲ್ಲೋ ಹುದುಗಿರುವ ದ್ವೇಷವನ್ನೂ ಬಳಸಿಕೊಂಡು ಮಾಡುತ್ತಿರುವ ರಾಜಕಾರಣಕ್ಕೆ ಪ್ರಗತಿಪರರು ಇದುವರೆಗೆ ನೀಡಿರುವ ಉತ್ತರ ಸಾಕಾಗುವುದಿಲ್ಲ ಎಂಬುದನ್ನಷ್ಟೇ ಇವೆಲ್ಲವೂ ತೋರುತ್ತಿದೆ. ಅವರು ದ್ವೇಷವನ್ನು ಬಿತ್ತಿಬಳಸಿದರೆ ನಾವುಗಳು ಭಾರತವು ಎಂದಿಗೂ ಸೌಹಾರ್ದದ ನಾಡಾಗಿತ್ತು, ಕೋಮು ದ್ವೇಷ, ದಳ್ಳುರಿ ಎಂದಿಗೂ ಇದ್ದಿಲ್ಲ, ಹಿಂದೂ ಧರ್ಮ ಅಹಿಂಸೆಯ ಪ್ರತೀಕ ಎನ್ನುವ ಅರೆಸತ್ಯಗಳಿಂದ ಎದುರಿಸಲಾಗುವುದಿಲ್ಲ. ಹಾಗೂ ಹಿಂದು ಧರ್ಮವೆಂದರೆ ಜಾತಿ ತಾರತಮ್ಯ, ಹಿಂದು ಧರ್ಮವೆಂದರೆ ಕಂದಾಚಾರ ಮತ್ತು ಶೋಷಣೆ ಎನ್ನುವುದಷ್ಟೇ ಸರಿಯಲ್ಲ. ಈ ಎಲ್ಲಾ ವಾದಗಳನ್ನು ನಾವು ಮೀರಬೇಕಿದೆ. ಹಾಗೂ ಸಮಾಜವನ್ನು ನಿರ್ಮಿಸುವುದರಲ್ಲಿ ಧರ್ಮ ಮುಖ್ಯ ಪಾತ್ರ ನಿರ್ವಹಿಸುತ್ತದೆ ಎಂದು ಒಪ್ಪಿಕೊಂಡು ಅದರ ಮರ್ಮವನ್ನು ಅರಿಯುವ ಪ್ರಯತ್ನವನ್ನೂ ಮಾಡಬೇಕಿದೆ. ಬೇರೊಂದು ಧರ್ಮವೇ ದೇಶದ ಅತಿದೊಡ್ಡ ಶತ್ರು ಎಂದು ನಂಬಿಸಿ, ದ್ವೇಷವನ್ನೇ ಬಂಡವಾಳ ಮಾಡಿಕೊಂಡು ರಾಜಕೀಯವಾಗಿ ಗೆಲ್ಲುತ್ತಿರುವಾಗ ಅದನ್ನು ವಿರೋಧಿಸಿದ ಕಾರ್ನಾಡರಂತಹ ಚೇತನಗಳು ಇಲ್ಲವಾದಾಗ ಕಾಣಿಸಿಕೊಳ್ಳುವ ಸಂಭ್ರಮ ನಮಗೆ ಅಚ್ಚರಿ/ಆಘಾತವನ್ನಷ್ಟೇ ಮೂಡಿಸಬಾರದು. ಈ ಮನುಷ್ಯತ್ವ ವಿರೋಧಿ ಶಕ್ತಿಗಳು ಧರ್ಮದ ಪರಿಕಲ್ಪನೆಯನ್ನು ತಿರುಚಿ, ಧರ್ಮದ ಅರ್ಥವನ್ನು ಸಂಕುಚಿತಗೊಳಿಸಿ, ಧರ್ಮದ ಪಾಲನೆಯೆಂದರೆ ಅನ್ಯ ಧರ್ಮದ ವಿರೋಧ ಎಂದು ನಂಬಿಸುವಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿವೆ. ಇಂತಹ ಸಂದರ್ಭದಲ್ಲಿ ನಾವು ಧಾರ್ಮಿಕತೆಯ ವರ್ಸಸ್ ಜಾತ್ಯತೀತತೆ ಎಂದಾಗಿಬಿಟ್ಟಿರುವ ಸರಳ ಬೈನರಿಗಳನ್ನು ಕೈಬಿಡಬೇಕಿದೆ. ಸಾವನ್ನು ಸಂಭ್ರಮಿಸಿದವರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡದೇ ಅರಿವು ಮೂಡಿಸಬೇಕಿದೆ.
ಗಿರೀಶ ಕಾರ್ನಾಡ ಅವರು ನಮ್ಮ ದೇಶದ ಇತಿಹಾಸ ಮತ್ತು ಪುರಾಣಗಳನ್ನು ಆಳವಾಗಿ ಅಭ್ಯಸಿಸಿ ಸಾಹಿತ್ಯವನ್ನು ಸೃಷ್ಟಿಸಿದ ವ್ಯಕ್ತಿ. ಅವರ ಸಾಹಿತ್ಯದಲ್ಲೇ ಅವರ ಸಾವನ್ನು ಸಂಭ್ರಮಿಸುತ್ತಿರುವವರಿಗೆ ಸಾಕಷ್ಟು ಉತ್ತರಗಳು ಸಿಗುತ್ತವೆ. ನಾಡಿಗೆ ಈ ಚೇತನ ನೀಡಿದ ಕೊಡುಗೆಗಳನ್ನು ಸಂಭ್ರಮಿಸೋಣ. ಇನ್ನೊಮ್ಮೆ ಯಾರ ಸಾವನ್ನೂ ಸಂಭ್ರಮಿಸದ ಸಮಾಜವನ್ನು ಸೃಷ್ಟಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...