ವೈದ್ಯರು, ದಾದಿಯರು, ಅರೆವೈದ್ಯರು, ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು ಮತ್ತು ಅಗತ್ಯ ಸೇವಾ ಪೂರೈಕೆದಾರರು, ಎನ್‌ಜಿಒಗಳು ಮತ್ತು ಲಕ್ಷಾಂತರ ನಾಗರಿಕರು ಭಾರತದಾದ್ಯಂತದ ಅತ್ಯಂತ ನಿರ್ಗತಿಕರಿಗೆ ಪರಿಹಾರವನ್ನು ನೀಡುತ್ತಿದ್ದಾರೆ. ಅವರ ಸಮರ್ಪಣೆ ಮತ್ತು ದೃಢನಿಶ್ಚಯ ನಮ್ಮೆಲ್ಲರಿಗೂ ನಿಜವಾಗಿಯೂ ಸ್ಫೂರ್ತಿ ನೀಡುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಕೆಲವು ಯಶಸ್ಸಿನ ಕಥೆಗಳಿವೆ ಮತ್ತು ನಾವು ಅವರನ್ನು ಶ್ಲಾಘಿಸಬೇಕು. ಸಾಕಷ್ಟು ವೈಯಕ್ತಿಕ ರಕ್ಷಣಾ ಸಾಧನಗಳ ಕೊರತೆಯ ನಡುವೆಯೂ #COVID19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರತಿಯೊಬ್ಬ ಭಾರತೀಯನಿಗೂ ನಾವು ನಮಸ್ಕರಿಸಬೇಕು ಎಂದು ಅವರು ತಿಳಿಸಿದ್ದಾರೆ.
ಕೊರೊನ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪರಿಸ್ಥಿತಿ ಹೇಗೆ ನಿರ್ವಹಿಸಬೇಕೆಂಬ ಸ್ಪಷ್ಟ ಕಲ್ಪನೆ ಇಲ್ಲ. ಈವರೆಗಿನ ನಿಭಾಯಿಸಿರುವುದು ಪಾರ್ಶ್ವ ಮತ್ತು ಶೋಚನೀಯ ಮಾರ್ಗವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಸೊನಿಯಾ ಗಾಂಧಿ ಆರೋಪಿಸಿದ್ದಾರೆ.
The doctors, nurses, paramedics, health workers, sanitation workers and essential service providers, NGOs and the lakhs of citizens providing relief to the most needy all over India, their dedication and determination truly inspire us all: Congress President Sonia Gandhi https://t.co/J9J9x4UB1d
— ANI (@ANI) April 23, 2020
ಕಾಂಗ್ರೆಸ್ ವರ್ಕಿಂಗ್ ಸಮಿತಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸೋನಿಯಾಗಾಂಧಿ ಕೋವಿಡ್-19 ಸೋಂಕು ಹೆಚ್ಚುತ್ತಿದೆ ಮತ್ತು ದೇಶದ ಜನರನ್ನು ತೀವ್ರವಾಗಿ ಬಾಧಿಸುತ್ತಿದೆ. ಅಷ್ಟೇ ಏಕೆ ವೇಗವಾಗಿ ಹರಡುತ್ತಿದೆ. ಆದರೆ ಸರ್ಕಾರ ಪರಿಸ್ಥಿತಿಯನ್ನು ಪಾರ್ಶ್ವ ರೀತಿಯಲ್ಲಿ ನಿಭಾಯಿಸಿದೆ ಎಂದು ಟೀಕಿಸಿದ್ದಾರೆ.
ಎಲ್ಲರೂ ಒಟ್ಟಾಗಿ ಕರೋನವೈರಸ್ ವಿರುದ್ಧ ಹೋರಾಡಬೇಕಾದ ಸಮಯದಲ್ಲಿ ಬಿಜೆಪಿ ದ್ವೇಷ ಮತ್ತು ಕೋಮು ಪಕ್ಷಪಾತದ ವೈರಸ್ ಅನ್ನು ಹರಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮಾರ್ಚ್ 23 ರಿಂದ ಲಾಕ್ ಡೌನ್ ಆರಂಭವಾದ ದಿನದಿಂದಲೂ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಕಷ್ಟು ಪತ್ರಗಳನ್ನು ಬರೆದಿದ್ದೇನೆ. ಪರಿಸ್ಥಿತಿಯನ್ನು ನಿಭಾಯಿಸಲು ರಚನಾತ್ಮಕ ಸಹಕಾರ ಅಗತ್ಯ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದಿದ್ದಾರೆ.
ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಜನವಿಭಾಗಗಳು ಮತ್ತು ವಿವಿಧ ಮೂಲಗಳಿಂದ ನಾವು ಸಲಹೆಗಳನ್ನು ಪಡೆದಿದ್ದೇವೆ. ಕೋವಿಡ್-19 ನಿಯಂತ್ರಣಕ್ಕೆ ಬೇಕಾದ ಸಲಹೆಗಳು ಬಂದಿವೆ. ಅವುಗಳನ್ನು ಕೇಂದ್ರ ಸರ್ಕಾರಕ್ಕೂ ತಿಳಿಸಿದ್ದೇವೆ. ಈ ಸಲಹೆಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳಿಂದ ಹೊರತರಲು ಸಹಕಾರಿಯಾಗಲಿವೆ ಎಂದು ಹೇಳಿದ್ದಾರೆ.
ಆದರೆ ಕೇಂದ್ರ ಸರ್ಕಾರ ಕೇವಲ ಪಾರ್ಶ್ವ ಮತ್ತು ಸ್ಪಷ್ಟಕಲ್ಪನೆ ಇಲ್ಲದೆ ಕೆಲಸ ಮಾಡುತ್ತಿದೆ. ಸದ್ಯದ ಪರಿಸ್ಥಿಯನ್ನು ನಿಭಾಯಿಸಲು ದೊಡ್ಡ ಹೃದಯವಂತಿಕೆ ಬೇಕಾಗಿದೆ. ಕೊರೊನ ಸೋಂಕು ಪರೀಕ್ಷೆಗಳನ್ನು ತೀವ್ರಗೊಳಿಸಬೇಕು. ವೈಯಕ್ತಿಕ ರಕ್ಷಣಾ ಉಪಕರಣಗಳ ಕಿಟ್ ಗಳನ್ನು ಕೊಡಬೇಕು. ಆದರೆ ಈಗ ವಿತರಿಸಿರುವ ಪಿಪಿಇ ಕಿಟ್ ಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಆಪಾದಿಸಿದರು.
ಲಾಕ್‌ಡೌನ್ ಸಮಯದಲ್ಲಿ ಕೋಟ್ಯಂತರ ಉದ್ಯೋಗಗಳು ಕಳೆದುಹೋಗಿವೆ ಎಂಬುದು ಬಹಳ ಗಂಭೀರ ವಿಷಯ. ನಿರುದ್ಯೋಗ ಇನ್ನೂ ಹೆಚ್ಚಾಗಲಿದೆ. ಸೋನಿಯಾ ಗಾಂಧಿಯವರು ಈ ಬಿಕ್ಕಟ್ಟಿನ ಸಮಯದಲ್ಲಿ ಪ್ರತಿ ಕುಟುಂಬಕ್ಕೆ ರೂ.7,500 ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದು ರಾಜಸ್ತಾನದ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
Sonia ji spoke about the problem of migrant laborers stranded in other states without jobs, money & in many cases without food. She demanded that the govt provide them food security & a financial safety net. The Govt needs to address this with compassion & large heartedness.#CWC
— Ashok Gehlot (@ashokgehlot51) April 23, 2020
ಉದ್ಯೋಗ, ಹಣ ಮತ್ತು ಅನೇಕ ಸಂದರ್ಭಗಳಲ್ಲಿ ಆಹಾರವಿಲ್ಲದೆ ಇತರ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರ ಸಮಸ್ಯೆಯ ಬಗ್ಗೆ ಸೋನಿಯಾ ಗಾಂಧಿಯವರು ಮಾತನಾಡಿದರು. ಸರ್ಕಾರವು ಅವರಿಗೆ ಆಹಾರ ಭದ್ರತೆ ಮತ್ತು ಆರ್ಥಿಕ ಸುರಕ್ಷತಾ ಜಾಲವನ್ನು ಒದಗಿಸಬೇಕೆಂದು ಅವರು ಒತ್ತಾಯಿಸಿದರು. ಸರ್ಕಾರ ಇದನ್ನು ಸಹಾನುಭೂತಿ ಮತ್ತು ದೊಡ್ಡ ಹೃದಯದಿಂದ ಪರಿಹರಿಸಬೇಕಾಗಿದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.



ಮನುವಾದಿಗಳು ಪ್ರಜ್ಞಾವಂತರ ಮಾತುಗಳನ್ನು ಕೇಳುವುದಿಲ್ಲ. ಅವರ ಮೆದುಳಿನಲ್ಲಿ ಇರುವುದು ಲಾಕ್ ಡೌನ್ ಮತ್ತು ಸೀಲ್ ಡೌನ್ ಮಾತ್ರ.