Homeಮುಖಪುಟಸಿಇಟಿ, ಎನ್‌ಇಟಿ, ನೀಟ್ ಇತ್ಯಾದಿ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

ಸಿಇಟಿ, ಎನ್‌ಇಟಿ, ನೀಟ್ ಇತ್ಯಾದಿ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್

- Advertisement -

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ, ಎನ್‌ಇಟಿ, ನೀಟ್ ಸೇರಿದಂತೆ ಇತ್ಯಾದಿಗಳನ್ನು ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಆದರೆ ಈ ಪರೀಕ್ಷೆಗಳಿಗೆ ಪ್ರವೇಶ ಬಯಸಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಕೋಚಿಂಗ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈಗಿನಿಂದಲೇ ವಿದ್ಯಾರ್ಥಿಗಳು ತಯಾರಿ ನಡೆಸಿದರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ GetSetGo ಎಂಬ ಆ್ಯಪ್ ಬಿಡುಗಡೆ ಮಾಡಿದೆ. ಕೊರೊನಾ ಲಾಕ್‌ಡೌನ್ ಕಾರಣದಿಂದ ವಿದ್ಯಾರ್ಥಿಗಳು ಇನ್ನು ಹೆಚ್ಚು ಕಾಲ ಸಿಇಟಿ, ಎನ್‌ಇಟಿ, ನೀಟ್ ರೆಗ್ಯುಲರ್ ತರಬೇತಿ ತರಗತಿಗಳಿಗೆ ಹಾಜರಾಗುವುದು ಸಾಧ್ಯವಿಲ್ಲವಾದ್ದರಿಂದ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ತರಬೇತಿ ನೀಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

GetSetGo ಆ್ಯಪ್ ಅನ್ನು ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಂಡು ಮನೆಯಿಂದಲೇ ಅಭ್ಯಾಸ ನಡೆಸಬಹುದಾಗಿದೆ. ನೇರವಾಗಿ ತರಬೇತಿಗೆ ಹೋಗಿದ್ದರೆ ಪ್ರತಿ ವಿದ್ಯಾರ್ಥಿಯೂ ಕನಿಷ್ಠ 20000 ಖರ್ಚು ಮಾಡಬೇಕಿತ್ತು. ಈಗ ನಮ್ಮ ಸರ್ಕಾರದ ಕಾಳಜಿಯಿಂದಾಗಿ 1,91,000 ವಿದ್ಯಾರ್ಥಿಗಳು ಆನ್‌ಲೈನ್‌ನಿಂದಲೇ ಯಾವುದೇ ಖರ್ಚಿಲ್ಲದೆ ತರಬೇತಿ ಪಡೆಯಬಹುದಾಗಿದೆ ಎಂದಿದ್ದಾರೆ.

ಈ ಸಿಇಟಿ, ಎನ್‌ಇಟಿ, ನೀಟ್ ಆನ್‌ಲೈನ್ ಕೋಚಿಂಗ್‌ಗಾಗಿ ಸರ್ಕಾರವು ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿದೆ. ಗೆಟ್‌ಸೆಟ್‌ಗೊ ಆ್ಯಪ್ ಜೊತೆಗೆ ವೆಬ್ ಪೋರ್ಟಲ್ ಸಹ ಇರಲಿದ್ದು ಪರೀಕ್ಷೆಯ ಸಮಗ್ರ ವಿವರ ಮತ್ತು ತರಬೇತಿ ನೀಡಲು ಸಜ್ಜಾಗಿದ್ದಾರೆ.

GetSetGo ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ; ಪಂಜಾಬ್‌ನ ಈ ಖಾಸಗಿ ವಿವಿ ಆಗಲಿದೆಯೇ ದೇಶದ ಅತಿದೊಡ್ಡ ಕೊರೊನಾ ಹಾಟ್‌ಸ್ಪಾಟ್‌? 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ನಿರಾಕರಣೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

0
ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಕೇರಳ ಸರ್ಕಾರ ಕಳುಹಿಸಿದ್ದ ಪ್ರಸ್ತಾಪವನ್ನು ಒಕ್ಕೂಟ ಸರ್ಕಾರ ನಿರಾಕರಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.  ಕೇರಳವು ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ...
Wordpress Social Share Plugin powered by Ultimatelysocial