ರಾಜಕಾರಣಿಗಳು ತಮ್ಮ ಪ್ರಚಾರಕ್ಕಾಗಿ ಏನೆಲ್ಲಾ ಕಸರತ್ತುಗಳನ್ನು ನಡೆಸುತ್ತಾರೆ. ಆದರೆ ಇದು ಇಂಟರ್‌ನೆಟ್ ಯುಗವಾಗಿದ್ದರಿಂದ ಜನರು ರಾಜಕೀಯ ನಾಯಕರನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ. ಸಣ್ಣದೊಂದು ತಪ್ಪೆಸಗಿದರೂ ಜನರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಾರೆ ಮತ್ತು ತಮ್ಮ ಆಕ್ಷೇಪವನ್ನು ದಾಖಲು ಮಾಡುತ್ತಾರೆ. ಇದೀಗ ಮಧ್ಯಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಎಡವಟ್ಟೊಂದನ್ನು ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.
ಶಿವರಾಜ್ ಸಿಂಗ್ ಅವರು ಇತ್ತೀಚೆಗೆ ಸುರಿಯುವ ಮಳೆಯ ನಡುವೆಯೂ, ಸಹಾಯಕನೋರ್ವ ಹಿಡಿದ ಕೊಡೆಗಳ ಅಡಿಯಲ್ಲಿ ಟೈಲ್ಸ್ ಮೇಲೆ ನಿಂತು ಗಿಡಗಳಿಗೆ ನೀರುಣಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಚಿತ್ರವನ್ನು ಬಳಸಿಕೊಂಡು ನೆಟ್ಟಿಗರು ಮುಖ್ಯಮಂತ್ರಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸ್ಮಾರ್ಟ್ ಸಿಟಿ ರ್‍ಯಾಕಿಂಗ್‌ನಲ್ಲಿ ಉತ್ತರಪ್ರದೇಶಕ್ಕೆ ಮೊದಲ ಸ್ಥಾನ!: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್
ಆದರೆ ಮುಖ್ಯಮಂತ್ರಿಯ ಈ ಕಾರ್ಯವನ್ನು ಅವರ ಪ್ರಚಾರ ತಂಡದ ಅಧಿಕಾರಿಯೊಬ್ಬರು ಸಮರ್ಥನೆ ಮಾಡಿದ್ದಾಗಿ ವರದಿಯಾಗಿದೆ. “ಪ್ರತಿಕೂಲ ಹವಾಮಾನ ಇದ್ದರೂ ಕೂಡಾ ಮುಖ್ಯಮಂತ್ರಿ ಪ್ರತಿದಿನ ಗಿಡಗಳನ್ನು ನೆಡುತ್ತಾರೆ. ಎಲ್ಲವೂ ಅವರವರ ಭಾವಕ್ಕೆ ಬಿಟ್ಟದ್ದು” ಎಂದು ಅಧಿಕಾರಿ ಹೇಳಿದ್ದಾಗಿ ವರದಿಯಾಗಿದೆ.
ಟೈಲ್ಸ್ ಮೇಲೆ ನಿಂತು ಗಿಡಕ್ಕೆ ನೀರು ಹಾಕುತ್ತಿರುವ ಚೌಹಾಣ್ ಕುರಿತು ಪ್ರತಿಪಕ್ಷ ಕಾಂಗ್ರೆಸ್ ವ್ಯಂಗ್ಯವಾಡಿದೆ. “ಮಣ್ಣಿನ ಮಗ, ರೈತನ ಮಗ, ದುಬಾರಿ ಬೆಲೆಯ ಟೈಲ್ಸ್ ಮೇಲೆ ನಿಂತುಕೊಂಡು ಮಳೆಯ ನಡುವೆ ಕೊಡೆ ಹಿಡಿದುಕೊಂಡು ಗಿಡಗಳಿಗೆ ನೀರುಣಿಸುತ್ತಿರುವ ಅಪರೂಪದ ದೃಶ್ಯ” ಎಂದು ಹೇಳಿದೆ.
ಪತ್ರಕರ್ತ ಗುರುಪ್ರೀತ್ ಅವರು ಹಂಚಿವರು ಚಿತ್ರಕ್ಕೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು, ಬಿಜೆಪಿಯವರು ಎಲ್ಲರೂ ಹಾಗೆಯೆ ಎಂದು ಚಿತ್ರವವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹಲವಾರು ಬಿಜಿಪಿ ನಾಯಕರು ಮುಖ್ಯಮಂತ್ರಿ ಶಿವರಾಜ್ ಅವರ ರೀತಿಯಲ್ಲೇ ಗಿಡಗಳಿಗೆ ನೀರುಣಿಸುತ್ತಿರುವ ಚಿತ್ರವನ್ನು ಕೊಲಾಜ್ ಮಾಡಲಾಗಿದೆ.
BJP wale pic.twitter.com/hKlTZoqetv
— Hamza?️ (@Hamza_INC) September 11, 2021
ಮತ್ತೊಬ್ಬ ಬಳಕೆದಾರರು, ಶಿವರಾಜ್ ಅವರನ್ನು ಅಧಿಕಾರಿಗಳು ಎತ್ತಿಕೊಂಡು ನದಿಯೊಂದನ್ನು ದಾಟಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
I'm sure marble tak aise hi pahunche honge – ? pic.twitter.com/bagVCJffVh
— गोव्याचा ਮੁੰਡਾ ? ?♂️ (@HairaanJivi) September 10, 2021
ಇದನ್ನೂ ಓದಿ: ತೆಲಂಗಾಣ: ಕೆರೆಗೆ ಬೈಕ್ ಎಸೆದು ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ
ಡಾ. ರಾಗಿಣಿ ನಾಯಕ್ ಅವರು ಮುಖ್ಯಮಂತ್ರಿಯನ್ನು, “ಬುದ್ಧಿವಂತಿಕೆಯ ಕುರುಡು” ಎಂದು ವ್ಯಂಗ್ಯವಾಡಿದ್ದಾರೆ.
अक्ल के अंधे ?? https://t.co/RR8CbTqR51
— Dr. Ragini Nayak (@NayakRagini) September 10, 2021
बारिश में पौधों को पानी कैसे दें? ऐसे ? pic.twitter.com/ucxLtMafjK
— Ranvijay Singh (@ranvijaylive) September 10, 2021
ಇದನ್ನೂ ಓದಿ: ಪೆಟ್ರೋಲ್: ಸೈಕಲ್‌ನಲ್ಲಿ ಓಡಾಡಿದರೆ ವ್ಯಾಯಾಮ ಆಗುತ್ತದೆ ಎಂದ ದಾವಣಗೆರೆ ಬಿಜೆಪಿ ಸಂಸದ


