Homeಮುಖಪುಟಪುಲ್ವಾಮಾ ದಾಳಿಗೆ ರಾಸಾಯನಿಕಗಳನ್ನು "ಅಮೇಜಾನ್"ನಿಂದ ಖರೀದಿ

ಪುಲ್ವಾಮಾ ದಾಳಿಗೆ ರಾಸಾಯನಿಕಗಳನ್ನು “ಅಮೇಜಾನ್”ನಿಂದ ಖರೀದಿ

- Advertisement -
- Advertisement -

ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಬೆಂಗಾವಲು ವಾಹನದ ಮೇಲೆ ನಡೆದ ದಾಳಿಗೆ ಸುಧಾರಿತ ಸ್ಫೋಟಕ ಸಾಧನ ತಯಾರಿಸಲು ಆನ್‌ಲೈನ್‌ನಲ್ಲಿ ರಾಸಾಯನಿಕಗಳನ್ನು ಖರೀದಿಸಿದ ವ್ಯಕ್ತಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ಎನ್ಡಿಟಿವಿ ವರದಿ ಮಾಡಿದೆ. ಕಳೆದ ವರ್ಷದ ಈ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿಗಳು ಸಾವನ್ನಪ್ಪಿದ್ದರು.

ಶ್ರೀನಗರದ ವೈಜ್-ಉಲ್-ಇಸ್ಲಾಂ ಮತ್ತು ಪುಲ್ವಾಮಾದ ಮೊಹಮ್ಮದ್ ಅಬ್ಬಾಸ್ ರಾಥರ್ ಎಂಬವರನ್ನು ಎನ್ಐಎ ಬಂಧಿಸಿದೆ. ಒಟ್ಟು ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟವರ ಸಂಖ್ಯೆ ಐದಕ್ಕೆ ಏರಿದೆ.

“ಆರಂಭಿಕ ವಿಚಾರಣೆಯಲ್ಲಿ, ವೈಜ್-ಉಲ್-ಇಸ್ಲಾಂ ತನ್ನ ಅಮೆಜಾನ್ ಆನ್‌ಲೈನ್ ಶಾಪಿಂಗ್ ಖಾತೆಯನ್ನು ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರ ನಿರ್ದೇಶನದ ಮೇರೆಗೆ ಐಇಡಿಗಳು, ಬ್ಯಾಟರಿಗಳು ಮತ್ತು ಇತರ ಪರಿಕರಗಳನ್ನು ತಯಾರಿಸಲು ರಾಸಾಯನಿಕಗಳನ್ನು ಸಂಗ್ರಹಿಸಲು ಬಳಸಿದ್ದಾಗಿ ತಿಳಿದು ಬಂದಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಅಬ್ಬಾಸ್ ರಾಥರ್ ಜೆಎಂನ ಹಳೆಯ ಭೂಗತ ಕೆಲಸಗಾರರಾಗಿದ್ದು. ಏಪ್ರಿಲ್-ಮೇ 2018 ರಲ್ಲಿ ಕಾಶ್ಮೀರಕ್ಕೆ ಬಂದ ನಂತರ ಜೈಶ್ ಭಯೋತ್ಪಾದಕ ಮತ್ತು ಐಇಡಿ ತಜ್ಞ ಮೊಹಮ್ಮದ್ ಉಮರ್ ಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಾರೆ ಎಂದು ಹೇಳಿದ್ದಾರೆ” ಎಂದು ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ ಪುಲ್ವಾಮಾ ದಾಳಿಯ ಮೊದಲು ಆತ್ಮಹತ್ಯಾ ಬಾಂಬರ್ ಆದಿಲ್ ಅಹ್ಮದ್ ದಾರ್, ಸಮೀರ್ ಅಹ್ಮದ್ ದಾರ್ ಮತ್ತು ಪಾಕಿಸ್ತಾನಿ ಕಮ್ರಾನ್ ಅಬ್ಬಾಸ್, ರಾಥರ್ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ವೈಜ್-ಉಲ್-ಇಸ್ಲಾಂ ಮತ್ತು ಅಬ್ಬಾಸ್ ರಾಥರ್ ಅನ್ನು ಶನಿವಾರ ಜಮ್ಮುವಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು, ಆದರೆ ಪ್ರಕರಣದ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ. 2019 ರ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ನಡೆದ ದಾಳಿಯ ಹಿಂದಿನ ಪಿತೂರಿಯ ತನಿಖೆಗಾಗಿ ಎನ್‌ಐಎ ಈ ಪ್ರಕರಣವನ್ನು ವಹಿಸಿಕೊಂಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...