ಛತ್ತೀಸ್‌ಗಢದಲ್ಲಿ ಕಳೆದ ಶನಿವಾರ ಮಾವೋವಾದಿಗಳು ಮತ್ತು ಯೋಧರ ನಡುವೆ ನಡೆದ ಎನ್‌ಕೌಂಟರ್ ನಂತರ ಅಪಹರಣಕ್ಕೆ ಒಳಗಾಗಿ, 100 ಗಂಟೆಗಳಿಗೂ ಹೆಚ್ಚು ಕಾಲ ಸೆರೆಯಲ್ಲಿದ್ದ ಯೋಧನನ್ನು ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ.
ಮಾವೋವಾದಿಗಳು ಮತ್ತು ಯೋಧರ ನಡುವೆ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ 22 ಮಂದಿ ಸೈನಿಕರು ಸಾವನ್ನಪ್ಪಿದ್ದರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಎನ್‌ಕೌಂಟರ್ ಕಾರ್ಯಾಚರಣೆಯ ನಂತರ ಸಿಆರ್‌ಪಿಎಫ್ ಕಮಾಂಡೋ ರಾಕೇಶ್ವರ ಸಿಂಗ್ ಮನ್ಹಾಸ್ ಅವರನ್ನು ಮಾವೋವಾದಿಗಳು ಅಪಹರಿಸಿದ್ದರು.
ಶನಿವಾರದಿಂದಲೂ ಸೇನೆ ಕಮಾಂಡೋಗಾಗಿ ಶೋಧಕಾರ್ಯ ನಡೆಸಿತ್ತು. ಯೋಧನನ್ನು ಅಪಹರಿಸಿರುವುದಾಗಿ ಮಾವೋವಾದಿಗಳು ತಿಳಿಸಿ, ಮಧ್ಯಸ್ಥಿಕೆ ಸರ್ಕಾರ ಯಾರನ್ನಾದರೂ ಸೂಚಿಸಬೇಕು ನಂತರ ಯೋಧನನ್ನು ಬಿಡುಗಡೆ ಮಾಡುವುದಾಗಿ ತಿಳಿಸಲಾಗಿತ್ತು.
ಇದನ್ನೂ ಓದಿ: ಛತ್ತೀಸ್‌ಗಢ: ಯೋಧನ ಬಿಡುಗಡೆಗೆ ಮಧ್ಯಸ್ಥಿಕೆ ಬೇಕು ಎಂದ ಮಾವೋವಾದಿಗಳು
ಸುಮಾರು 2,000 ಭದ್ರತಾ ಸಿಬ್ಬಂದಿಗಳು ಛತ್ತೀಸ್‌ಗಢ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿ ಬಂಡಾಯ ನಾಯಕನ ಹುಡುಕಾಟದಲ್ಲಿದ್ದರು. ಈ ವೇಳೆ ಎನ್‌ಕೌಂಟರ್ ನಡೆದಿತ್ತು. ಘಟನೆಯಲ್ಲಿ ಸಾವನ್ನಪ್ಪಿದ್ದ ಭದ್ರತಾ ಪಡೆಗಳ ಯೋಧರಿಂದ ಶಸ್ತ್ರಾಸ್ತ್ರ, ಮದ್ದುಗುಂಡು, ಸಮವಸ್ತ್ರ ಮತ್ತು ಬೂಟುಗಳನ್ನು ಮಾವೋವಾದಿಗಳು ಲೂಟಿ ಮಾಡಿದರು.
Chhattisgarh: CoBRA jawan Rakeshwar Singh Manhas brought to CRPF camp, Bijapur after he was released by Naxals pic.twitter.com/L1FKSCtVnb
— ANI (@ANI) April 8, 2021
ಮಾವೋವಾದಿಗಳು ತಮ್ಮ ಹೇಳಿಕೆಯಲ್ಲಿ, ’ನಮ್ಮ ಹೋರಾಟವು ಭದ್ರತಾ ಸಿಬ್ಬಂದಿಯೊಂದಿಗೆ ಅಲ್ಲ, ಮೋದಿ-ಶ ಸರ್ಕಾರದ ಆದೇಶದ ಮೇರೆಗೆ ಪಡೆಗಳು ಪ್ರಾರಂಭಿಸಿದ ದಾಳಿಗೆ ತಾವು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು.
“ಸರ್ಕಾರವು ಮೊದಲು ಮಧ್ಯವರ್ತಿಗಳ ಹೆಸರನ್ನು ಘೋಷಿಸಬೇಕು, ಅದರ ನಂತರ ನಮ್ಮ ಬಳಿ ಒತ್ತೆಯಾಳಾಗಿರುವ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಅಲ್ಲಿಯವರೆಗೆ ಅವರು ನಮ್ಮ ಭದ್ರತೆಯಲ್ಲಿ ಸುರಕ್ಷಿತರಾಗಿರುತ್ತಾರೆ” ಎಂದು ಸಿಪಿಐ (ಮಾವೋವಾದಿಗಳು) ದಂಡಕಾರಣ್ಯ ವಿಶೇಷ ವಲಯ ಸಮಿತಿ ಮಂಗಳವಾರ ಹೇಳಿಕೆ ನೀಡಿತ್ತು.
ಇದನ್ನೂ ಓದಿ: ರೈತ ಹೋರಾಟ: ಹುತಾತ್ಮ ಸ್ಮಾರಕಕ್ಕೆ ಸೇರಿದ ದೇಶದ 23 ರಾಜ್ಯಗಳ 1,500 ಹಳ್ಳಿಗಳ ಮಣ್ಣು


