ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದ ಮೇಲೆ ನಾಲ್ವರು ದುಷ್ಕರ್ಮಿಗಳನ್ನು ಚಿಕ್ಕಮಗಳೂರು ಜಿಲ್ಲೆಯಿಂದ ಪೊಲೀಸ್ ಇಲಾಖೆ ಗಡಿಪಾರು ಮಾಡಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಪೊಲೀಸ್ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅದು ಹೇಳಿದೆ. ಚಿಕ್ಕಮಗಳೂರು | ನಾಲ್ವರು
ಗಡಿಪಾರಿಗೆ ಒಳಗಾದವರನ್ನು ಇಂದಿರಾ ನಗರದ ನಿವಾಸಿ ಫೈಜುಲ್ಲಾ ಷರೀಫ್ (49), ನರಸಿಂಹರಾಜಪುರ ತಾಲ್ಲೂಕಿನ ಮೇಗರಮಕ್ಕಿಯ ಕೆ.ವಿ. ಪ್ರದೀಪ್ (38) ಮತ್ತು ಮನೋರಂಜನ್ (33) ಮತ್ತು ತರೀಕೆರೆ ತಾಲ್ಲೂಕಿನ ಎಂ.ಸಿ. ಹಳ್ಳಿಯ ಮೌಂಟ್ ಬ್ಯಾಟನ್ ಆರೋಕ್ಯಸ್ವಾಮಿ (31) ಎಂದು ಗುರುತಿಸಲಾಗಿದೆ.
ಕಾನೂನುಬಾಹಿರ ಕೃತ್ಯಗಳು, ನೈತಿಕ ಪೊಲೀಸ್ ಗಿರಿ, ವದಂತಿ ಹರಡುವಿಕೆ ಮತ್ತು ಅಶಾಂತಿ ಸೃಷ್ಟಿಸುವ ಇತರ ಕೃತ್ಯಗಳನ್ನು ನಡೆಸುವ ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿಕ್ಕಮಗಳೂರು | ನಾಲ್ವರು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: All eyes on Madleen | ನೆರವು ಹೊತ್ತು ಗಾಝಾದತ್ತ ‘ಮದ್ಲೀನ್’ ಹಡಗು; ಇಸ್ರೇಲ್‌ನ ನೌಕಾ ದಿಗ್ಬಂಧನ ಮುರಿಯಲಿದೆಯೆ!
All eyes on Madleen | ನೆರವು ಹೊತ್ತು ಗಾಝಾದತ್ತ ‘ಮದ್ಲೀನ್’ ಹಡಗು; ಇಸ್ರೇಲ್‌ನ ನೌಕಾ ದಿಗ್ಬಂಧನ ಮುರಿಯಲಿದೆಯೆ!


Hello sir namdu Ajjampura deli police sariella dayaviittu ivranu gadi paru madi