Homeಅಂತರಾಷ್ಟ್ರೀಯAll eyes on Madleen | ನೆರವು ಹೊತ್ತು ಗಾಝಾದತ್ತ 'ಮದ್ಲೀನ್' ಹಡಗು; ಇಸ್ರೇಲ್‌ನ ನೌಕಾ...

All eyes on Madleen | ನೆರವು ಹೊತ್ತು ಗಾಝಾದತ್ತ ‘ಮದ್ಲೀನ್’ ಹಡಗು; ಇಸ್ರೇಲ್‌ನ ನೌಕಾ ದಿಗ್ಬಂಧನ ಮುರಿಯಲಿದೆಯೆ!

ಈ ಪ್ರಯಾಣ ಎಷ್ಟೇ ಅಪಾಯಕಾರಿಯಾಗಿದ್ದರೂ, ನರಮೇಧಕ್ಕೆ ಒಳಗಾಗುತ್ತಿರುವ ಜೀವಗಳ ಮುಂದೆ ಇಡೀ ಪ್ರಪಂಚದ ಮೌನದಷ್ಟು ಅಪಾಯಕಾರಿ ಅಲ್ಲ ಎಂದು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರು ಹೇಳಿದ್ದಾರೆ

- Advertisement -
- Advertisement -

ವಸಾಹತುಗಾರರು ಆಕ್ರಮಿಸಿರುವ ಪ್ಯಾಲೆಸ್ತೀನ್‌ನ ಗಾಝಾಕ್ಕೆ ಆಹಾರ, ನೀರು ಮತ್ತು ವೈದ್ಯಕೀಯ ಸಾಮಗ್ರಿಗಳೊಂದಿಗೆ ‘ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ’ದ ನೆರವು ಹಡಗು ‘ಮದ್ಲೀನ್’ ಇಟಲಿಯ ಸಿಸಿಲಿಯಿಂದ ಭಾನುವಾರ ಹೊರಟಿದೆ. ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಮತ್ತು ಫ್ರೆಂಚ್ ಸಂಸದೆ ರಿಮಾ ಹಸನ್ ಸೇರಿದಂತೆ ಇತರರು ಹಡಗಿನಲ್ಲಿದ್ದಾರೆ ಎಂದು ವರದಿಯಾಗಿದೆ. All eyes on Madleene,All eyes on Madeleine Madleen

ಈ ಹಿಂದೆ ನೆರವಿನೊಂದಿಗೆ ಹೊರಟಿದ್ದ ಅದರ ಹಡಗಿನ ಮೇಲೆ ಮೆಡಿಟರೇನಿಯನ್‌ ಸಮುದ್ರದಲ್ಲಿ ಡ್ರೋನ್ ದಾಳಿಗಳಾಗಿದ್ದವು. ಹಾಗಾಗಿ, ಅಂತರರಾಷ್ಟ್ರೀಯ ಲಾಭರಹಿತ ಸಂಸ್ಥೆಯಾಗಿರುವ ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ (FFC)ವು ಗಾಝಾಗೆ ಮಾನವೀಯ ನೆರವು ಈ ಬಾರಿ ಟ್ರ್ಯಾಕರ್‌ನೊಂದಿಗೆ ತನ್ನ ‘ಮದ್ಲೀನ್’ ಹಡಗನ್ನು ಮುನ್ನಡೆಸುತ್ತಿದ್ದು ಇಸ್ರೇಲ್‌ ವಸಾಹತುಗಾರರು ಗಾಝಾದ ಮೇಲೆ ಹೇರಿರುವ ನೌಕಾ ದಿಗ್ಬಂಧನವನ್ನು ಮುರಿಯಲು ಮುಂದಾಗಿದೆ. ಮದ್ಲೀನ್ ಎಲ್ಲಿದೆ ಎಂದು ಇಲ್ಲಿ ಕ್ಲಿಕ್ ಮಾಡಿ ನೋಡಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

“2014 ರಲ್ಲಿ ಗಾಝಾದ ಮೊದಲ ಮತ್ತು ಏಕೈಕ ಮೀನುಗಾರ ಮಹಿಳೆಯಾದ ‘ಮದ್ಲೀನ್’ ಅವರ ಹೆಸರನ್ನು ಹಡಗಿಗೆ ಇಡಲಾಗಿದ್ದು, ಪ್ಯಾಲೆಸ್ತೀನಿ ಹೋರಾಟದ ಅವಿಶ್ರಾಂತ ಮನೋಭಾವ ಮತ್ತು ಇಸ್ರೇಲ್‌ನ ಸಾಮೂಹಿಕ ಶಿಕ್ಷೆ ಮತ್ತು ಉದ್ದೇಶಪೂರ್ವಕ ಹಸಿವು ನೀತಿಗಳ ಹೇರಿಕೆಗಳ ವಿರುದ್ಧ ಬೆಳೆಯುತ್ತಿರುವ ಜಾಗತಿಕ ಪ್ರತಿರೋಧವನ್ನು ಇದು ಸಂಕೇತಿಸುತ್ತದೆ” ಎಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಹೇಳಿದೆ.

“ಮಾಲ್ಟಾ ಕರಾವಳಿಯ ಅಂತರರಾಷ್ಟ್ರೀಯ ಸಮುದ್ರದಲ್ಲಿ ಇಸ್ರೇಲಿ ಡ್ರೋನ್‌ಗಳು ಮತ್ತೊಂದು ಫ್ರೀಡಂ ಫ್ಲೋಟಿಲ್ಲಾ ನೆರವು ಹಡಗಿನ ಕಾನ್ಸೈನ್ಸ್ ಮೇಲೆ ಬಾಂಬ್ ದಾಳಿ ಮಾಡಿದ ಕೇವಲ ಒಂದು ತಿಂಗಳ ನಂತರ ಈ ಹಡಗು ಹೊರಟಿದೆ. ಇದು ಗಾಝಾದ ಮುತ್ತಿಗೆಯನ್ನು ಮುರಿಯುವ ಈ ಕಾರ್ಯಾಚರಣೆಯ ತುರ್ತು ಮತ್ತು ಅಪಾಯವನ್ನು ಒತ್ತಿಹೇಳುತ್ತದೆ” ಎಂದು ಒಕ್ಕೂಟ ಹೇಳಿಕೆಯಲ್ಲಿ ತಿಳಿಸಿದೆ.

ಮದ್ಲೀನ್ ಹಡಗು ಶಿಶು ಆಹಾರ, ಹಿಟ್ಟು, ಅಕ್ಕಿ, ಡೈಪರ್‌ಗಳು, ಮಹಿಳೆಯರ ನೈರ್ಮಲ್ಯ ಉತ್ಪನ್ನಗಳು, ನೀರಿನ ಡೀಸಲಿನೇಷನ್ ಕಿಟ್‌ಗಳು, ವೈದ್ಯಕೀಯ ಸರಬರಾಜುಗಳು, ಊರುಗೋಲುಗಳು ಮತ್ತು ಮಕ್ಕಳ ಪ್ರಾಸ್ಥೆಟಿಕ್ಸ್ ಅನ್ನು ಹೊತ್ತೊಯ್ಯುತ್ತಿದೆ ಎಂದು ಒಕ್ಕೂಟ ತಿಳಿಸಿದೆ.

 

View this post on Instagram

 

A post shared by AJ+ (@ajplus)

ಇಸ್ರೇಲಿ ವಸಾಹತುಗಾರರು ಮುತ್ತಿಗೆ ಹಾಕಿದ ಪ್ಯಾಲೆಸ್ತೀನಿ ಪ್ರದೇಶವಾದ ಗಾಝಾದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಗಳ ಬಗ್ಗೆ ಅಂತರರಾಷ್ಟ್ರೀಯ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಿರುವುದರಿಂದ, ಈ ಸಹಾಯವು ಪ್ರಮಾಣದಲ್ಲಿ ಸೀಮಿತವಾಗಿದ್ದರೂ, ನಿರ್ಣಾಯಕ ಉದ್ದೇಶವನ್ನುಹೊಂದಿದೆ ಎಂದು ಒಕ್ಕೂಟ ಹೇಳಿದೆ.

ಗಾಝಾದಲ್ಲಿ ಇಸ್ರೇಲ್‌ನ “ಅಕ್ರಮ ಮುತ್ತಿಗೆ ಮತ್ತು ಹೆಚ್ಚುತ್ತಿರುವ ಯುದ್ಧ ಅಪರಾಧ”ಗಳ ವಿರುದ್ಧ ನಾಗರಿಕ ಪ್ರತಿರೋಧದ ಅಹಿಂಸಾತ್ಮಕ ಕ್ರಿಯೆ ಇದಾಗಿದೆ ಎಂದು ಒಕ್ಕೂಟ ಹೇಳಿದೆ.

ಮದ್ಲೀನ್ ಅಂತರರಾಷ್ಟ್ರೀಯ ಕಡಲ ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುವ ನಿರಾಯುಧ ನಾಗರಿಕ ಹಡಗು ಎಂದು ಅವರು ಹೇಳಿದ್ದು, ಯಾವುದೇ ಪ್ರತಿಬಂಧ ಇಲ್ಲದಿದ್ದರೆ ಹಡಗು ಗಾಝಾಗೆ ತಲುಪಲು ಏಳು ದಿನಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಸ್ವೀಡಿಷ್‌ ಮೂಲದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರೊಂದಿಗೆ ಜರ್ಮನಿಯ ಯಾಸೆಮಿನ್ ಅಕಾರ್, ಬ್ರೆಜಿಲ್‌ನ ಥಿಯಾಗೊ ಅವಿಲಾ, ಫ್ರಾನ್ಸ್‌ನ ಒಮರ್ ಫಯಾದ್, ರಿಮಾ ಹಸನ್, ಬ್ಯಾಪ್ಟಿಸ್ಟ್ ಆಂಡ್ರೆ, ಪ್ಯಾಸ್ಕಲ್ ಮೌರಿಯರಾಸ್, ಯಾನಿಸ್ ಮಹಮ್ದಿ, ಟರ್ಕಿಯ ಶುವಾಯ್ಬ್ ಒರ್ಡು, ರೆವಾ ವಿಯಾರ್ಡ್, ಸ್ಪೇನ್‌ನ ಸೆರ್ಗಿಯೊ ಟೊರಿಬಿಯೊ ಮತ್ತು ನೆದರ್ಲ್ಯಾಂಡ್ಸ್‌ನ ಮಾರ್ಕೊ ವ್ಯಾನ್ ರೆನ್ನೆಸ್ ಹಡಗಿನಲ್ಲಿ ಇದ್ದಾರೆ.

“ಈ ಕಾರ್ಯಾಚರಣೆ ಎಷ್ಟೇ ಅಪಾಯಕಾರಿಯಾಗಿದ್ದರೂ, ನರಮೇಧಕ್ಕೆ ಒಳಗಾಗುತ್ತಿರುವ ಜೀವಗಳ ಮುಂದೆ ಇಡೀ ಪ್ರಪಂಚದ ಮೌನದಷ್ಟು ಅಪಾಯಕಾರಿ ಅಲ್ಲ” ಎಂದು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರು ಹೇಳಿದ್ದಾರೆ.

ಹಗಡಿನಲ್ಲಿ ಇರುವ ಮತ್ತೊಬ್ಬ ಪ್ರಯಾಣಿಕರಾದ ಥಿಯಾಗೊ ಅವಿಲಾ ಅವರು ಮಾತನಾಡಿ, “ನಾವು ಸಮುದ್ರದ ಮೂಲಕ ಗಾಝಾದ ಮುತ್ತಿಗೆಯನ್ನು ಮುರಿಯುತ್ತಿದ್ದೇವೆ” ಎಂದು ಹೇಳಿದ್ದಾರೆ. ವೈದ್ಯರು, ವಕೀಲರು ಮತ್ತು ಮಾಧ್ಯಮದ ಸದಸ್ಯರಿರುವ ಅಂತರರಾಷ್ಟ್ರೀಯ ಉಪಕ್ರಮವಾದ ಗ್ಲೋಬಲ್ ಮಾರ್ಚ್ ಟು ಗಾಜಾ ಬಗ್ಗೆಯೂ ಅವಿಲಾ ಪ್ರಸ್ತಾಪಿಸಿದ್ದು, ಈ ಅಂತರರಾಷ್ಟ್ರೀಯ ಉಪಕ್ರಮವು ಜೂನ್ ಮಧ್ಯದಲ್ಲಿ ಈಜಿಪ್ಟ್‌ನಿಂದ ಹೊರಟು ರಫಾ ಕ್ರಾಸಿಂಗ್‌ಗೆ ತಲುಪಿ ಅಲ್ಲಿ ಪ್ರತಿಭಟನೆ ನಡೆಸಲಿದ್ದು, ಗಾಝಾ ಆಕ್ರಮಣವನ್ನು ನಿಲ್ಲಿಸಿ ಗಡಿಯನ್ನು ಮತ್ತೆ ತೆರೆಯುವಂತೆ ಇಸ್ರೇಲ್‌ಗೆ ಕರೆ ನೀಡಲಿದೆ ಎಂದು ಹೇಳಿದ್ದಾರೆ.

ಪ್ರದೇಶದ ಸುಮಾರು 20 ಲಕ್ಷ ನಿವಾಸಿಗಳು ಹಸಿವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಸಹ ಸಂಸ್ಥೆಗಳು ಮತ್ತು ಪ್ರಮುಖ ಮಾನವೀಯ ಸಂಸ್ಥೆಗಳು ಗಾಝಾದಲ್ಲಿನ ಭೀಕರ ಪರಿಸ್ಥಿತಿಗಳನ್ನು ವರದಿ ಮಾಡುತ್ತಲೇ ಇವೆ. ವಸಾಹತುಗಾರ ಇಸ್ರೇಲಿ ನಿರ್ಬಂಧಗಳು, ನಾಗರಿಕ ಸುವ್ಯವಸ್ಥೆಯಲ್ಲಿನ ಕುಸಿತ ಮತ್ತು ವ್ಯಾಪಕ ಲೂಟಿಯು ನೆರವು ವಿತರಣೆಗೆ ಪ್ರಾಥಮಿಕ ಅಡೆತಡೆಗಳಾಗಿ ಅವರು ಉಲ್ಲೇಖಿಸಿದ್ದಾರೆ.

ಪ್ರದೇಶವನ್ನು ಆಳುತ್ತಿರುವ ಪ್ಯಾಲೆಸ್ತೀನ್‌ ಹೋರಾಟಗಾರ ಸಂಘಟನೆ ಹಮಾಸ್‌ನಿಂದ ಭದ್ರತಾ ಬೆದರಿಕೆಗಳನ್ನು ಉಲ್ಲೇಖಿಸಿ ಇಸ್ರೇಲ್ ಒಂದು ದಶಕಕ್ಕೂ ಹೆಚ್ಚು ಕಾಲ ಗಾಝಾದ ಮೇಲೆ ನೌಕಾ ದಿಗ್ಬಂಧನವನ್ನು ಜಾರಿಗೊಳಿಸಿದೆ. ಆದಾಗ್ಯೂ, ಈ ದಿಗ್ಬಂಧನವು ಸಾಮೂಹಿಕ ಶಿಕ್ಷೆಗೆ ಸಮನಾಗಿರುತ್ತದೆ ಮತ್ತು ಮಾನವೀಯ ಬಿಕ್ಕಟ್ಟನ್ನು ಗಮನಾರ್ಹವಾಗಿ ಹದಗೆಡಿಸುತ್ತದೆ ಎಂದು ಮಾನವ ಹಕ್ಕುಗಳ ಗುಂಪುಗಳು ವಾದಿಸುತ್ತವೆ.

ಹಿಂದಿನ ಫ್ಲೋಟಿಲ್ಲಾ ಹಡಗಾದ ಮಾವಿ ಮರ್ಮರದ ಮೇಲೆ ಇಸ್ರೇಲ್ ದಾಳಿ ನಡೆಸಿದ ನಂತರ 2010 ರಲ್ಲಿ ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟವನ್ನು ಸ್ಥಾಪಿಸಲಾಯಿತು. ಈ ವೇಳೆ 10 ಮಾನವ ಹಕ್ಕುಗಳ ಹೋರಾಟಗಾರರು ಸಾವಿಗೀಡಾಗಿದ್ದರು.

ಮದ್ಲೀನ್ ಹಡಗಿನ ಸುರಕ್ಷಿತ ಮಾರ್ಗವನ್ನು ಖಾತರಿಪಡಿಸುವಂತೆ ವಿಶ್ವದ ಸರ್ಕಾರಗಳಿಗೆ ಒಕ್ಕೂಟ ಕರೆ ನೀಡಿದೆ ಮತ್ತು ಕಾರ್ಯಾಚರಣೆಯ ನಿಖರ ಮತ್ತು ನಿರಂತರ ವರದಿಯನ್ನು ಒದಗಿಸುವಂತೆ ಮಾಧ್ಯಮಗಳನ್ನು ಒತ್ತಾಯಿಸಿದೆ. ಸಂಭಾವ್ಯ ಸಂಘರ್ಷದ ಆತಂಕಗಳ ನಡುವೆ ಹಡಗಿನ ಪ್ರಯಾಣವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವ ನಿರೀಕ್ಷೆಯಿದೆ. ಅಷ್ಟೆ ಅಲ್ಲದೆ, ಫೋರೆನ್ಸಿಕ್ ಆರ್ಕಿಟೆಕ್ಚರ್‌ನ ಸಹಭಾಗಿತ್ವದಲ್ಲಿ, ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟವು ‘ಮದ್ಲೀನ್’ ಹಡಗನ್ನು ಸುಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯೊಂದಿಗೆ ಸಜ್ಜುಗೊಳಿಸಿದೆ. ಮದ್ಲೀನ್ ಎಲ್ಲಿದೆ ಎಂದು ಇಲ್ಲಿ ಕ್ಲಿಕ್ ಮಾಡಿ ನೋಡಬಹುದು.

“ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕಾನೂನುಬಾಹಿರವೆಂದು ಪರಿಗಣಿಸಲಾದ ಇಸ್ರೇಲ್‌ನ ದಿಗ್ಬಂಧನವನ್ನು ಪ್ರಶ್ನಿಸಲು ಮದ್ಲೀನ್ ಗಾಝಾದ ಕಡೆಗೆ ಸಾಗುತ್ತಿದೆ. ಈ ವೇಳೆ ಇಸ್ರೇಲಿ ನೌಕಾ ಪಡೆಗಳಿಂದ ಪ್ರತಿಬಂಧನಲಕ್ಕೆ ಒಳಗಾಗುವ ಅಪಾಯವಿದೆ. ಹಿಂದಿನ ಫ್ಲೋಟಿಲ್ಲಾಗಳು ಹಿಂಸಾತ್ಮಕ ದಾಳಿಗಳು, ಕಾನೂನುಬಾಹಿರ ಬಂಧನಗಳು ಮತ್ತು ಮಾನವೀಯ ಕಾರ್ಯಾಚರಣೆಗಳ ಅಡಚಣೆಯನ್ನು ಎದುರಿಸಿವೆ. ಈ ಸಂದರ್ಭದಲ್ಲಿ, ಟ್ರ್ಯಾಕರ್ ಕೇವಲ ಸಂಚಾರ ಸಾಧನವಲ್ಲ; ಇದು ರಕ್ಷಣೆಯ ಒಂದು ರೂಪವಾಗಿದೆ,” ಎಂದು ಮದ್ಲೀನ್ ಟ್ರ್ಯಾಕರ್‌ನಲ್ಲಿ ಹೇಳಿದೆ. All eyes on Madleen

ಗಾಝಾದ ಮೊದಲ ಮತ್ತು ಏಕೈಕ ಮೀನುಗಾರ ಮಹಿಳೆ ಮದ್ಲೀನ್ ಬಗ್ಗೆ ಅಜ್‌ಜಝೀರಾ ಮಾಧ್ಯಮ ಮಾಡಿರುವ ಸಾಕ್ಷ್ಯ ಚಿತ್ರ ನೋಡಿ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಸರ್ಕಾರ ಜೋಳ ಖರೀದಿಸುವಂತೆ ಒತ್ತಾಯಿಸಿ ‘ಸಿಂಧನೂರು ಬಂದ್’; ಬೃಹತ್ ಪ್ರತಿಭಟನಾ ಮೆರವಣಿಗೆ

ಸರ್ಕಾರ ಜೋಳ ಖರೀದಿಸುವಂತೆ ಒತ್ತಾಯಿಸಿ ‘ಸಿಂಧನೂರು ಬಂದ್’; ಬೃಹತ್ ಪ್ರತಿಭಟನಾ ಮೆರವಣಿಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -