Homeಮುಖಪುಟಚೀನಾ ಮುಂದಿಟ್ಟ ಎರಡು ಹೆಜ್ಜೆಯಲ್ಲಿ ಒಂದು ಹೆಜ್ಜೆ ಹಿಂದಿಟ್ಟಿದೆ, ಅದು ಹಿನ್ನೆಡೆಯೋ? ಮುನ್ನೆಡೆಯೋ?; ಜಸ್ಟ್‌ ಆಸ್ಕಿಂಗ್

ಚೀನಾ ಮುಂದಿಟ್ಟ ಎರಡು ಹೆಜ್ಜೆಯಲ್ಲಿ ಒಂದು ಹೆಜ್ಜೆ ಹಿಂದಿಟ್ಟಿದೆ, ಅದು ಹಿನ್ನೆಡೆಯೋ? ಮುನ್ನೆಡೆಯೋ?; ಜಸ್ಟ್‌ ಆಸ್ಕಿಂಗ್

ಮೋದಿಯವರು ಲಡಾಖ್‌‌ಗೆ ಕೇವಲ ಭೇಟಿ ಕೊಟ್ಟ ಮಾತ್ರಕ್ಕೆ ಚೀನಿಯರು ಹೆದರಿ ಹಿಂದೆಸರಿದರು ಎಂಬ ಮೋದಿ ಭಕ್ತರ ಪ್ರಚಾರ ದೇಶ ದ್ರೋಹವಲ್ಲವೇ?

- Advertisement -
- Advertisement -

ಚೀನಾ ಸೈನಿಕರು ಈಗಲೂ ಭಾರತವು ತನ್ನದೆಂದು ಪ್ರತಿಪಾದಿಸುವ ಪ್ರದೇಶದಲ್ಲೇ ಇದ್ದಾರೆ… ಹಾಗಿದ್ದಲ್ಲಿ ಯಾರನ್ನು ಮರುಳು ಮಾಡುವ ಉದ್ದೇಶದಿಂದ ಮೋದಿ ಸರ್ಕಾರ, ಅದರ ಸಾಕುನಾಯಿ ಮಾಧ್ಯಮಗಳು ಮತ್ತು ಭಕ್ತರು ಗಡಿಯಲ್ಲೆಲ್ಲೂ ಕಾಣದ ಮೋದಿಯ ಗುಡುಗು-ಸಿಡಿಲು ಕಂಪನಗಳನ್ನೂ ಸೃಷ್ಟಿಸುತ್ತಿದ್ದಾರೆ?


ನಿನ್ನೆಯಿಂದ ಎಲ್ಲಾ ಮಾಧ್ಯಮಗಳು ಗಾಲ್ವಾನ್ ಪ್ರಾಂತ್ಯದಿಂದ ಚೀನಾ ಸೈನಿಕರು ಹಿಂದೆ ಸರಿಯುತ್ತಿದ್ದಾರೆ ಎಂದು ವರದಿ ಮಾಡುತ್ತಿವೆ. ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳಾದ ಅಜಿತ್ ದೋವಲ್ ಹಾಗು ವಾಂಗ್ ಯೀ ಟೆಲಿಫೋನ್ ಮಾತುಕತೆ ನಡೆಸಿದ ನಂತರ ಈ ಬೆಳವಣಿಗೆಯಾಗಿವೆ ಎಂದು ಹೇಳಲಾಗುತ್ತಿದೆ.

ಈ ಸಮಯದಲ್ಲಿ ಎರಡು ಹೆಜ್ಜೆ ಮುಂದಿಟ್ಟಿದ್ದ ಚೀನಾ ಒಂದು ಹೆಜ್ಜೆ ಹಿಂದೆ ಸರಿದರೆ, ಅದು ಹಿನ್ನೆಡೆಯೋ? ಮುನ್ನೆಡೆಯೋ? ಎಂದು ಅವಲೋಕಿಸಬೇಕಾಗಿದೆ.

ಆದರೆ ಎರಡು ದೇಶಗಳ ಸರ್ಕಾರಗಳು ಈವರೆಗೆ ಯಾವ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ಬದಲಿಗೆ ಭಾರತೀಯ ಮಾಧ್ಯಮಗಳು ಸೇನೆಯಲ್ಲಿನ ಅನಾಮಿಕ ಸರ್ಕಾರಿ “ಮೂಲಗಳನ್ನು” ಆಧರಿಸಿ ವರದಿ ಮಾಡಿವೆ. ಎಲ್ಲಾ ಮಾಧ್ಯಮಗಳಲ್ಲೂ ಈ ಸುದ್ದಿ ಏಕಕಾಲದಲ್ಲಿ ಪ್ರಕಟವಾಗಿರುವುದು ನೋಡಿದರೆ ಕೇಂದ್ರ ಸರ್ಕಾರ ಮತ್ತು ಸೇನೆಯು ಈ ಮೂಲಗಳಿಗೆ ಅನಾಮಿಕವಾಗಿ ಹೇಳಿಕೆ ನೀಡಲು ಅಧಿಕೃತ ಅನುಮತಿ ನೀಡಿರುವುದು ಸ್ಪಷ್ಟವಾಗಿದೆ. ಆದರೆ ಅಧಿಕೃತವಾದ ಹೇಳಿಕೆ ಏಕಿಲ್ಲ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ.

ಆದ್ದರಿಂದಲೇ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಅಜಯ್ ಶುಕ್ಲಾ ಅವರು ಈ ಸುದ್ದಿಯ ಬಗ್ಗೆ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ :

ಈ ಸುದ್ದಿಯು ನಿಜವೇ ಆಗಿದ್ದಲ್ಲಿ ನಾನು
ಅ) ಸರ್ಕಾರದ ಅಧಿಕೃತ ಹೇಳಿಕೆಯನ್ನು ನೋಡಬಯಸುತ್ತೇನೆ. ಅನಾಮಿಕ ಮೂಲದ ಸುದ್ದಿಯನ್ನಲ್ಲ.
ಆ) ಚೀನಿಯರು ಹಿಂದಿರುಗುತ್ತಿರುವುದನ್ನು ಧೃಡಪಡಿಸುವ ಉಪಗ್ರಹ ಚಿತ್ರ ಹಾಗು
ಇ ) ಭಾರತೀಯ ಸೈನಿಕರು ಹಿಂದೆ ಸರಿದಿದ್ದು ಎಲ್ಲಿಗೆ ಎಂಬ ಪ್ರಶ್ನೆಗಳಿಗೆ ಉತ್ತರ ಬಯಸುತ್ತೇನೆ ಎಂದು ಕರ್ನಲ್ ಕೇಳಿದ್ದಾರೆ.

ಇದರ ಜೊತೆಗೆ ದೇಶ ಭಕ್ತಿಗೂ ಮೋದಿ ಭಕ್ತಿಗೂ ವ್ಯತ್ಯಾಸ ಗೊತ್ತಿರುವವರಿಗೂ ಹಾಗು ತಮ್ಮ ಬುದ್ಧಿಯನ್ನು ಮತ್ತು ಕಾಮನ್ ಸೆನ್ಸನ್ನು ಇತರರಿಗೆ ಒಪ್ಪಿಸದವರಿಗೂ ಇನ್ನು ಕೆಲವು ಪ್ರಶ್ನೆಗಳು ಮೂಡುವುದು ಸಹಜ.

ಅನಾಮಿಕ ಮೂಲದ ಹೇಳಿಕೆಯ ಪ್ರಕಾರ ಭಾರತ ಸೇನೆಯು ಕೂಡಾ ಗಾಲ್ವಾನ್ ಘರ್ಷಣೆ ನಡೆದ PP 14 ಪ್ರದೇಶದಿಂದ 1.8 ಕಿ.ಮೀ ಯಷ್ಟು ಹಿಂದೆ ಸರಿದಿದೆ.

ಇದರ ಅರ್ಥವೇನು?

ಈವರೆಗೆ ಮೋದಿ ಸರ್ಕಾರವು ಗಾಲ್ವಾನ್ ಘರ್ಷಣೆ ನಡೆದ ಪ್ರದೇಶವು ( PP 14 ) ವಿವಾದಾತೀತವಾಗಿ ಭಾರತ ಪ್ರದೇಶವಾಗಿದೆಯೆಂದು, ಚೀನಾ ಭಾರತದ ಸರಹದ್ದಿನೊಳಗೆ ಅತಿಕ್ರಮ ಪ್ರವೇಶ ಮಾಡಿದ್ದರಿಂದ ಅಲ್ಲಿ ಘರ್ಷಣೆಯುಂಟಾಯಿತೆಂದು ಹೇಳಿಕೊಂಡು ಬಂದಿದೆ.

ಹಾಗಿದ್ದಲ್ಲಿ PP 14 ಪ್ರದೇಶದಿಂದ 1.8 ಕಿಮಿ ಭಾರತ ಮತ್ತು ಚೀನಾ ಎರಡು ಹಿಂದೆ ಸರಿದಿದೆ ಎಂದರೆ ಭಾರತವು ಕೂಡಾ ವಿವಾದೀತವಾಗಿ ತನ್ನ ಸುಪರ್ದಿನಲ್ಲಿದ್ದ ಪ್ರದೇಶವನ್ನು ಬಿಟ್ಟು ಹಿಂದೆ ಸರಿದಿದೆ ಎಂದಾಗಲಿಲ್ಲವೇ?

ಹಾಗಿದ್ದ ಮೇಲೆ ಮೋದಿಯವರು ಲಡಾಖ್‌‌ಗೆ ಕೇವಲ ಭೇಟಿ ಕೊಟ್ಟ ಮಾತ್ರಕ್ಕೆ ಚೀನಿಯರು ಹೆದರಿ ಹಿಂದೆಸರಿದರು ಎಂಬ ಮೋದಿ ಭಕ್ತರ ಪ್ರಚಾರ ದೇಶ ದ್ರೋಹವಲ್ಲವೇ?

ಗಾಲ್ವಾನ್ ಪ್ರದೇಶಕ್ಕಿಂತ ಇನ್ನು ತೀವ್ರವಾದ ಗಡಿ ವಿವಾದವಿರುವ ಪ್ರದೇಶ ಪಾಂಗಾಂಗ್ ಸರೋವರ ಪ್ರದೇಶ.

ಅಲ್ಲಿ ಸರೋವರದ ಪೂರ್ವಭಾಗದ ಚೀನಾದ ಕಡೆ ಇರುವ ಫಿಂಗರ್ 8 ಎಂಬಲ್ಲಿಯವರೆಗೆ ಭಾರತ ತನ್ನ ಪ್ರದೇಶವೆಂದು ವಾದಿಸಿದರೆ, ಸರೋವರದ ಪಶ್ಚಿಮಕ್ಕೆ ಭಾರತದ ಕಡೆ ಇರುವ ಫಿಂಗರ್ 4 ರ ವರೆಗೆ ತನ್ನ ಪ್ರದೇಶವೆಂದು ಚೀನಾ ವಾದಿಸುತ್ತದೆ.

ಫಿಂಗರ್ 4 ಹಾಗೂ ಫಿಂಗರ್ 8 ರ ನಡುವೆ 8 ಕಿಮಿ ವ್ಯಾಪ್ತಿಯ ಪ್ರದೇಶವಿದ್ದು ಚೀನಾವು ಫಿಂಗರ್ 4 ರಿಂದ ಒಂದು ಕಿಮಿ ದೂರ ಮಾತ್ರ ಹಿಂದೆ ಸರಿದಿದೆ ಎಂದು ಭಾರತೀಯ ‌ಸೇನಾ ಮೂಲವು ತಿಳಿಸುತ್ತದೆ .

ಅಂದರೆ ಚೀನಾ ಸೈನಿಕರು ಈಗಲೂ ಭಾರತವು ತನ್ನದೆಂದು ಪ್ರತಿಪಾದಿಸುವ ಪ್ರದೇಶದಲ್ಲೇ ಇದ್ದಾರೆ…..

ಹಾಗಿದ್ದಲ್ಲಿ ಯಾರನ್ನು ಮರುಳು ಮಾಡುವ ಉದ್ದೇಶದಿಂದ ಮೋದಿ ಸರ್ಕಾರ, ಅದರ ಸಾಕುನಾಯಿ ಮಾಧ್ಯಮಗಳು ಮತ್ತು ಭಕ್ತರು ಗಡಿಯಲ್ಲೆಲ್ಲೂ ಕಾಣದ ಮೋದಿಯ ಗುಡುಗು-ಸಿಡಿಲು ಕಂಪನಗಳನ್ನೂ ಸೃಷ್ಟಿಸುತ್ತಿದ್ದಾರೆ?

ಒಂದು ದೀರ್ಘಕಾಲೀನ ಶಾಂತಿ ಮಾತುಕತೆಯ ಭಾಗವಾಗಿ ಈ ಬಗೆಯ ತಾತ್ಕಾಲಿಕ ಹಿಂದೆ ಸರಿಕೆಯಲ್ಲಿ ತಪ್ಪಿಲ್ಲ.

ಅದರಲ್ಲೂ ಭಾರತ ಮತ್ತು ಚೀನಾ ನಡುವೆ ಗಡಿ ಭಾಗಗಳು ನಿಖರವಾಗಿ ಗುರುತುಪಡಿಸಿಲ್ಲವಾದ್ದರಿಂದ ಇಂಥಾ ರಾಜತಾಂತ್ರಿಕ-ಸೈನಿಕ ಕ್ರಮಗಳಿಗೆ ಸರ್ಕಾರ ಮುಂದಾಗಬೇಕಾಗುತ್ತದೆ.

ಆದರೆ ಸತ್ಯಕ್ಕೆ ತದ್ವಿರುದ್ಧವಾದ ಹೇಳಿಕೆಯನ್ನು ಕೊಟ್ಟು ಜನರಲ್ಲಿ ರಾಜಕೀಯ ದುರುದ್ದೇಶಗಳಿಗೆ ಹುಸಿ ಗೆಲುವಿನ ಉನ್ಮಾದವನ್ನು ಸೃಷ್ಟಿಸುವುದು ತಪ್ಪು. ಅಷ್ಟೇ…

ಎಲ್ಲಕ್ಕಿಂತ ಹೆಚ್ಚಾಗಿ ಈ ಗಾಲ್ವಾನ್ ಮತ್ತು ಹಿಂದಿನ ದೋಕ್ಲಾಮ್ ಘರ್ಷಣೆಗಳಿಂದ ಮೋದಿ ಸರ್ಕಾರ ಸಾಕಷ್ಟು ಪಾಠಗಳನ್ನು ಕಲಿಯಬೇಕಿದೆ.

ಈ ಭೂಭಾಗದಲ್ಲಿ ಅಮೇರಿಕ ಸಾಮ್ರಾಟನ ಸಾಮಂತನಾಗಿ ಕೆಲಸ ಮಾಡುವುದು ಅಮೇರಿಕಾದ ಹಿತಾಸಕ್ತಿಗಳಿಗೆ ಪೂರಕವೇ ಹೊರತು ಭಾರತದ ಹಿತಾಸಕ್ತಿಗೆ ಮಾರಕವೆಂಬುದನ್ನು ಈಗಲಾದರೂ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಅಲ್ಲವೇ?; ಜಸ್ಟ್ ಆಸ್ಕಿಂಗ್


ಓದಿ: ಅರುಣಾಚಲದ ಮೇಲೆ ಚೀನಾ ಕಣ್ಣು?; ಬಹುಜನ ಭಾರತ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...