Homeಕರ್ನಾಟಕಕರಾವಳಿ: ಯುವಜನರ ಕೈಗೆ ಶಸ್ತ್ರ ನೀಡಿದ ಬಿಜೆಪಿ ಬೆಂಬಲಿತ ಸಂಘಟನೆ ಬಜರಂಗದಳ

ಕರಾವಳಿ: ಯುವಜನರ ಕೈಗೆ ಶಸ್ತ್ರ ನೀಡಿದ ಬಿಜೆಪಿ ಬೆಂಬಲಿತ ಸಂಘಟನೆ ಬಜರಂಗದಳ

ಬಿಜೆಪಿ ಮುಂದಿನ ಚುನಾವಣೆಗೆ ಸಜ್ಜಾಗುತ್ತಿದೆ, ಜನರು ಎಚ್ಚರದಿಂದ ಇರಬೇಕು ಎಂದು ಜನಪರ ಸಂಘಟನೆಗಳು ಎಚ್ಚರಿಸಿವೆ

- Advertisement -
- Advertisement -

ಮುಖ್ಯಮಂತ್ರಿ ಬೊಮ್ಮಾಯಿ ಅವರು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿ ಅನೈತಿಕ ಪೊಲೀಸ್‌ಗಿರಿಯನ್ನು ಸಮರ್ಥನೆ ಮಾಡಿ, ಭಾವನಾತ್ಮಕ ವಿಚಾರಗಳು ಮತ್ತು ನೈತಿಕತೆಯ ಬಗ್ಗೆ ಉಲ್ಲೇಖ ಮಾಡಿದ್ದರು. ಅದಾಗಿ ಒಂದರೆಡು ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು ಮತ್ತು ಉಡುಪಿ ಜಿಲ್ಲೆಯ ಮಲ್ಪೆ, ಕುಂದಾಪುರದಲ್ಲಿ, ಬಿಜೆಪಿ ಬೆಂಬಲಿತ ಸಂಘಟನೆಗಳಾದ ಬಜರಂಗದಳ ಮತ್ತು ವಿಎಚ್‌ಪಿ ಯುವಕ-ಯುವತಿಯರ ಕೈಗೆ ತ್ರಿಶೂಲದಂತಹ ಶಸ್ತ್ರಗಳನ್ನು ಹಂಚಿದೆ.

ನವರಾತ್ರಿಯ ಪೂಜೆಯ ದಿನದಂದು ‘ತ್ರಿಶೂಲ ದೀಕ್ಷೆ’ ಹೆಸರಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಗಳು ತಮ್ಮ ಕಾರ್ಯಕರ್ತರಿಗೆ ಮಾರಕ ಶಸ್ತ್ರಗಳನ್ನು ಹಂಚಿದೆ. ಇದರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಬೊಮ್ಮಾಯಿ ‘ಕೇಶವ ಕೃಪಾ’ದ ಗುಲಾಮ: ಮಾವಳ್ಳಿ ಶಂಕರ್‌ ಆಕ್ರೋಶ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕದ್ರಿ ವಿಹೆಚ್‌ಪಿ ಕಚೇರಿಯಲ್ಲಿ, ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿ, ಸಂಘಟನೆಯ ನಾಯಕ ಶರಣ್ ಪಂಪ್‌ವೆಲ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದೆ. ಜೊತೆಗೆ ಜಿಲ್ಲೆಯ ಪುತ್ತೂರಿನಲ್ಲೂ ಇದು ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಇಷ್ಟೇ ಅಲ್ಲದೆ, ಉಡುಪಿಯ ಮಲ್ಪೆ ವಡಭಾಂಡೇಶ್ವರ ಬಲರಾಮ ದೇವಸ್ಥಾನದಲ್ಲಿ ಕೂಡಾ ತ್ರಿಶೂಲ ದೀಕ್ಷೆ ನಡೆದಿದೆ. ಅಲ್ಲದೆ ಜಿಲ್ಲೆಯ ಕುಂದಾಪುರದಲ್ಲೂ ಮಹಿಳೆಯಗೆ ತ್ರಿಶೂಲ ದೀಕ್ಷೆ ನೀಡಲಾಗಿದೆ.

ಇದನ್ನೂ ಓದಿ: ನೈತಿಕತೆ ಇಲ್ಲದೇ ಬದುಕಲಾಗದು: ಮಾರಲ್ ಪೊಲೀಸಿಂಗ್ ಸಮರ್ಥಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ

ಹಿಂದೂಗಳ ಆತ್ಮ ರಕ್ಷಣೆ, ಗೋಹತ್ಯೆ, ಭಯೋತ್ಪಾದನೆ, ಮತಾಂತರ, ಲವ್‌ ಜಿಹಾದ್ ಮತ್ತು ಲ್ಯಾಂಡ್ ಜಿಹಾದ್ ವಿರುದ್ದ ಹೋರಾಟ ಮಾಡಲು ತ್ರಿಶೂಲ ದೀಕ್ಷೆಯನ್ನು ಮಾಡಲಾಗಿದೆ ಎಂದು ಸಂಘಟನೆಗಳು ಹೇಳಿಕೊಂಡಿದ್ದು, ಯುವಕರಿಗೆ ಶಪಥವನ್ನು ಮಾಡಿಸಿಕೊಂಡಿದ್ದಾರೆ.

ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಅನೈತಿಕ ಪೊಲೀಸ್‌ಗಿರಿಯನ್ನು ಸಮರ್ಥನೆ ಮಾಡಿದ್ದರು. ಅದಾಗಿ ಒಂದರೆಡು ದಿನಗಳಲ್ಲಿ ಕರಾವಳಿಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೊಶ ಹೆಚ್ಚಿದೆ. ಹಲವಾರು ಜನರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

May be an image of 11 people, people standing and text that says "Lm ಸೇವಾ ಸಂಸ್ಕಾರ।। ವಿಶ್ವ ಹಿಂದು ಪರಿಷದ್ ಬಜರಂಗ ದಳ ಸುರಕಾ ಮಾತೃಶಕ್ತಿ ದುರ್ಗಾವಾಹಿನಿ, ಕುಂದಾಪುರ ಪ್ರಖಂಡ අವප ದತಿಯಬಂದ ನವರಾತ್ರಿಯ ಶುಭ ದಿನದಂದು ದುಗ ಗವಮಿ ಕಾರ್ಯ ದಿನಾಂ4-10 4-10 ದಿನಾಂ é"

ನಾನುಗೌರಿ.ಕಾಂ ಜೊತೆ ಮಾತನಾಡಿದ ದ.ಕ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್‌, “ಇಂತಹ ಸಂಘಟನೆಗಳಿಂದ ಬೇರೇನೂ ನಿರೀಕ್ಷಿಸಲು ಸಾಧ್ಯವಿಲ್ಲ, ಅವರಿಂದ ಇದು ಸಾಮಾನ್ಯ. ಬಿಜೆಪಿಯ ಮುಖ್ಯಮಂತ್ರಿ, ಸಂಸದರು, ಸಚಿವರು ಮತ್ತು ಸೇರಿದಂತೆ ಕೊಲೆ ಮಾಡಲು, ಸಂವಿದಾನ ಬದಲಾವಣೆ ಮಾಡುವ ಬಗ್ಗೆ ಹೇಳಿಕೆ ನೀಡುತ್ತಲೆ ಇದ್ದಾರೆ. ಗಾಂಧೀ ಕೊಂದವರನ್ನು ಇವರು ವಿಜ್ರಂಭಿಸುತ್ತಾರೆ. ಇದು ಅವರ ಹುಟ್ಟು ಗುಣ, ಇಂತಹ ಘಟನೆಗಳು ಅನಿರೀಕ್ಷಿತ ಅಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪುತ್ತೂರು-ಸುಳ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ ಉಪದ್ರವ; ಜಿ.ಪಂ-ತಾ.ಪಂ ಚುನಾಚಣೆಗಾಗಿ ಈ ಆಟ?

“ಈ ರೀತಿಯಾಗಿ ಭಯ ಹುಟ್ಟಿಸುವಂತದ್ದು, ದೇವರ ಹೆಸರನ್ನು ಬಳಸಿ ಹಿಂದೂಗಳನ್ನು ಭಾವನಾತ್ಮಕವಾಗಿ ಕೆರಳಿಸಿ ಮತ ಪಡೆಯುವಂತಹದ್ದು, ಇದೆಲ್ಲಾ ಅವರಿಗೆ ಕರಗತವಾಗಿ ಬಂದಿದೆ. ಅವರಿಗೆ ದೇಶದ ಬಗ್ಗೆ ಚಿಂತೆಯಿಲ್ಲ, ಆಡಳಿತ ಮತ್ತು ದುಡ್ಡಷ್ಟೇ ಅವರ ಉದ್ದೇಶ. ಮುಂದೆ ಚುನಾವಣೆ ಬರುತ್ತಿದೆ ಅದಕ್ಕಾಗಿ ಅವರು ತಯಾರಿ ಮಾಡುತ್ತಿದ್ದಾರೆ. ಆದರೆ ಬೆಲೆ ಏರಿಕೆ, ಉದ್ಯೋಗ ನಷ್ಟ, ಕೊರನಾದಿಂದ ಜನರ ಸಂಕಷ್ಟಪಡುತ್ತಿದ್ದಾರೆ ಆದರೆ ಇವುಗಳನ್ನು ಕೇಳುವವರಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಕಾಂಗ್ರೆಸ್‌ಗೆ ಮತ ನೀಡಿದರೆ ಶಾಲೆಗೆ ಹೊರಟ ನಿಮ್ಮ ಮಕ್ಕಳು ಮನೆಗೆ ವಾಪಾಸು ಬರಲು ಸಾಧ್ಯವಿಲ್ಲ ಎಂದು ಪ್ರಚಾರ ಮಾಡಿದ್ದರು. ಆದರೆ ಇತ್ತೀಚೆಗೆ ಸುರತ್ಕಲ್‌ನಲ್ಲಿ ಕಾಲೇಜ್‌ನ ಮಕ್ಕಳನ್ನು ಹಿಡಿದು ಹಲ್ಲೆ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಇವರು ಹಿಂದೂ ಧರ್ಮವನ್ನು ಬಳಸಿಕೊಳ್ಳುತ್ತಾರೆ. ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಇದರ ವಿರುದ್ದ ಕಾಂಗ್ರೆಸ್ ನಿರಂತರವಾಗಿ ಹೋರಾಟ ಮಾಡುತ್ತಿದೆ. ಈ ಘಟನೆಯ ಬಗ್ಗೆಯು ಕಾನೂನಾತ್ಮಕವಾಗಿಯು ಹೋರಾಟ ಮಾಡುತ್ತದೆ” ಎಂದು ಹರೀಶ್ ಕುಮಾರ್‌ ಹೇಳಿದ್ದಾರೆ.

May be an image of text that says "विश्व हिन्दू परिषट ವಿಶ್ವ ಹಿಂದೂ ಪರಿಷದ್ धर्मो रक्षति रकित: ಬಜರಂಗದಳ ಉಡುಪಿ ವಿಜಯ ದಶಮಿಯ ಅಂಗವಾಗಿ ಶಸ್ತ್ರ ಪೂಜೆ ತ್ರಿಶೂಲ ದೀಕ್ಷೆ ಸಮಾರಂಭ ದಿನಾಂಕ: 13 ಬುಧವಾರ ಸಂಜೆ 4:00 ಗಂಟೆಗೆ ಸ್ಥಳ: ವಡಭಾಂಡ ಬಲರಾಮ ದೇವಸ್ಥಾನ, ಮಲ್ಪೆ- ವಡಭಾಂಡೇಶ್ವರ ದುಷ್ಟರ ದಮನಕ್ಕೆ ಶಸ್ತವ ಹಿಡಿಯಲು ರಾಮನ ಬಂಟರು ಸದಾ ಸನ್ನದ್ಧ.."

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಮಾತನಾಡಿ, “ಇದು ವ್ಯವಸ್ಥಿತ ಕಾರ್ಯಸೂಚಿಯ ಭಾಗ. ಮುಂಬರುವ ಚುನಾನಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇದೆಲ್ಲ ನಡೆಯುತ್ತಿದೆ. ಕರಾವಳಿಯಲ್ಲಿ ನಿರುದ್ಯೋಗ, ಬೆಲೆಯೇರಿಕೆ ಮುಂತಾದ ಜ್ವಲಂತ ಸಮಸ್ಯೆಗಳಿಂದ ಜನ ದಿಕ್ಕೆಟ್ಟಿದ್ದಾರೆ. ಸಹಜವಾಗಿಯೇ ಇದು ಸರಕಾರದ ವಿರುದ್ದ ಅತೃಪ್ತಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಇದರ ಅಪಾಯವನ್ನು ಮನಗಂಡಿರುವ ಬಿಜೆಪಿ ಮತೀಯ ಧ್ರುವೀಕರಣದ ತನ್ನ ಹಳೆಯ ಅಜೆಂಡಾವನ್ನು ಮುನ್ನಲೆಗೆ ತಂದು ಆಡಳಿತ ವಿರೋಧಿ ಅಲೆಯಿಂದ ಪಾರಾಗುವುದು, ಮುಂಬರುವ ಚುನಾವಣೆಯನ್ನು ಗೆಲ್ಲುವುದು ಗುರಿಯಾಗಿ ಇರಿಸಿಕೊಂಡಿದೆ” ಎಂದು ಹೇಳಿದ್ದಾರೆ.

“ಈ ಎಲ್ಲಾ ವಿಚಾರಕ್ಕಾಗಿ ಸಂಘ ಪರಿವಾರದ ಸಂಘಟನೆಗಳಿಂದ ವಿವಿಧ ರೀತಿಯ ಪ್ರಚೋದಕ ಕಾರ್ಯಗಳು ನಡೆಯುತ್ತಿವೆ. ಅನೈತಿಕ ಪೊಲೀಸ್ ಗಿರಿ, ದ್ವೇಷ ಭಾಷಣ, ಮುಖ್ಯಮಂತ್ರಿಯ ಕ್ರಿಯೆ, ಪ್ರತಿಕ್ರಿಯೆ ಹೇಳಿಕೆ ಎಲ್ಲವೂ ಯೋಜಿತ ರೀತಿಯಲ್ಲಿ ನಡೆಯುತ್ತಿದೆ. ಈಗ ಆಯುಧ ಪೂಜೆಯ ದಿನ ನಡೆದಿರುವ ತ್ರಿಶೂಲ ಧೀಕ್ಷೆ ಅದರ ಒಂದು ಭಾಗ. ಸರಕಾರ ನಡೆಸುತ್ತಿರುವ ಪಕ್ಷ ಸ್ವತಹ ಇಂತಹ ಸಂವಿಧಾನ ವಿರೋಧಿ, ಕಾನೂನು ವಿರೋಧಿ ಕೃತ್ಯಗಳನ್ನು ಹಮ್ಮಿಕೊಳ್ಳುತ್ತಿರುವುದರ ಹಿಂದಿನ ಹುನ್ನಾರಗಳನ್ನು ಜನ ಅರ್ಥ ಮಾಡಿಕೊಳ್ಳದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ” ಎಂದು ಎಚ್ಚರಿಕೆ ನೀಡಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯೆಗಾಗಿ ಮಂಗಳೂರು ಕಮಿಷನರ್‌ ಶಶಿಕುಮಾರ್‌ ಅವರಿಗೆ ನಾನುಗೌರಿ.ಕಾಂ ಕರೆ ಮಾಡಿದ್ದು ಅವರು ಕರೆಯನ್ನು ಸ್ವೀಕರಿಸಿಲ್ಲ. ಅವರು ಪ್ರತಿಕ್ರಿಯೆ ನೀಡಿದ ಕೂಡಲೇ ಸುದ್ದಿಯನ್ನು ಅಪ್‌ಡೇಟ್ ಮಾಡಲಾಗುವುದು.

ಇದನ್ನೂ ಓದಿ: ನೈತಿಕತೆ ಮತ್ತು ಪೊಲೀಸ್‌ಗಿರಿ ಕೂಡಿಕೊಂಡರೆ ಅದು ಅನೈತಿಕ ಮನಸ್ಥಿತಿಗಳ ವಿಕೃತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಮಾನ ಸೇವೆಯಲ್ಲಿ ವ್ಯತ್ಯಯ : ಇಂಡಿಗೋ ಏರ್‌ಲೈನ್ಸ್‌ಗೆ 22 ಕೋಟಿ ರೂ. ದಂಡ

ಕಳೆದ ತಿಂಗಳು ವಿಮಾನಯಾನ ಸೇವೆಯಲ್ಲಿ ಉಂಟಾದ ಭಾರೀ ವ್ಯತ್ಯಯಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನಗಳ ಮಹಾನಿರ್ದೇಶನಾಲಯ (ಡಿಜಿಸಿಎ) ಇಂಡಿಗೋ ವಿಮಾನಯಾನ ಸಂಸ್ಥೆಗೆ 22.2 ಕೋಟಿ ರೂಪಾಯಿ ದಂಡ ವಿಧಿಸಿದೆ. ಡಿಸೆಂಬರ್ 3 ರಿಂದ 5 ರವರೆಗಿನ...

ತೆಲಂಗಾಣದಲ್ಲಿ ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸುತ್ತೇವೆ: ಭಟ್ಟಿ ವಿಕ್ರಮಾರ್ಕ ಮಲ್ಲು

ರಾಜ್ಯದಲ್ಲಿ ರೋಹಿತ್ ವೇಮುಲಾ ಕಾಯ್ದೆಯನ್ನು ಆದಷ್ಟು ಬೇಗ ಜಾರಿಗೆ ತರಲಾಗುವುದು ಎಂದು ತೆಲಂಗಾಣ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು ಶನಿವಾರ ಹೇಳಿದ್ದಾರೆ. ಪ್ರಜಾ ಭವನದಲ್ಲಿ ಜಸ್ಟೀಸ್ ಫಾರ್ ರೋಹಿತ್ ವೇಮುಲಾ ಅಭಿಯಾನ ಸಮಿತಿಯ...

88 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲು ; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ : ಸಿಎಂ ಸಿದ್ದರಾಮಯ್ಯ

ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶನಿವಾರ (ಜ.17) ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿದ ನಂತರ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಪೋಲೀಸ್ ಇಲಾಖೆ ಕೆಲವು...

ಇಂದೋರ್ ಕಲುಷಿತ ನೀರು ದುರಂತ : ಸಂತ್ರಸ್ತ ಕುಟುಂಬಗಳನ್ನು ಭೇಟಿಯಾದ ರಾಹುಲ್ ಗಾಂಧಿ

ಶನಿವಾರ (ಜ.17) ಮಧ್ಯಪ್ರದೇಶದ ಇಂದೋರ್‌ಗೆ ಭೇಟಿ ನೀಡಿದ ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಇತ್ತೀಚೆಗೆ ಸಂಭವಿಸಿದ ಕಲುಷಿತ ನೀರು ದುರಂತದ ಸಂತ್ರಸ್ತರನ್ನು ಭೇಟಿಯಾದರು. ಕಲುಷಿತ ನೀರು ಕುಡಿದು ವಾಂತಿ ಮತ್ತು...

ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್‌ಡಿಎ ಜೊತೆ ಯಾವುದೇ ಮೈತ್ರಿ ಇಲ್ಲ: ಓವೈಸಿ

ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಥವಾ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಜೊತೆ ಯಾವುದೇ ಮೈತ್ರಿ ಇರುವುದಿಲ್ಲ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ರಾಜ್ಯವಾದ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ...

ರೋಹಿತ್ ವೇಮುಲ ಕಾಯ್ದೆ ಘೋಷಣೆಯಲ್ಲ, ಅಗತ್ಯ : ರಾಹುಲ್ ಗಾಂಧಿ

ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲ ಜಾತಿ ತಾರತಮ್ಯಕ್ಕೆ ಬಲಿಯಾಗಿ ಇಂದಿಗೆ (17 ಜನವರಿ 2026) 10 ವರ್ಷಗಳಾಗಿದ್ದು, ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ರೋಹಿತ್ ಅವರನ್ನು ಸ್ಮರಿಸಿ ಸಾಮಾಜಿಕ...

ದೇವರು-ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ; ಬಿಜೆಪಿ ಕೌನ್ಸಿಲರ್‌ಗಳಿಗೆ ಕೇರಳ ಹೈಕೋರ್ಟ್ ನೋಟಿಸ್

ತಿರುವನಂತಪುರಂ ನಗರಸಭೆಯ ಬಿಜೆಪಿ ಕೌನ್ಸಿಲರ್‌ಗಳು ವಿವಿಧ ದೇವರು, ಹುತಾತ್ಮರು ಮತ್ತು ರಾಜಕೀಯ ಚಳುವಳಿಗಳ ಹೆಸರಿನಲ್ಲಿ ಮಾಡಿದ ಪ್ರಮಾಣವಚನಗಳ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯ ಕುರಿತು ಕೇರಳ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ...

ಮಧ್ಯಪ್ರದೇಶ: ಬುಡಕಟ್ಟು ವಿಶ್ವವಿದ್ಯಾಲಯ ಹಾಸ್ಟೆಲ್ ಒಳಗೆ ಅಸ್ಸಾಮಿ ವಿದ್ಯಾರ್ಥಿ ಮೇಲೆ ಗುಂಪು ಹಲ್ಲೆ

ಮಧ್ಯಪ್ರದೇಶದ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಹಾಸ್ಟೆಲ್ ಕೋಣೆಯೊಳಗೆ ಐದು ಜನ ವಿದ್ಯಾರ್ಥಿಗಳ ತಂಡವು ಅಸ್ಸಾಮಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಗುಂಪು ಆತನಿಗೆ ಇಲ್ಲಿಯೇ ಸಾಯಬೇಕು ಎಂದು...

ಮಹಿಳೆಯರ ಜೊತೆ ಪುರುಷರಿಗೂ ಉಚಿತ ಬಸ್‌ ಪ್ರಯಾಣ, ಗ್ರಾಮೀಣರಿಗೆ 150 ಕೂಲಿ ದಿನ : ಎಐಎಡಿಎಂಕೆ ಚುನಾವಣಾ ಭರವಸೆ

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಶನಿವಾರ (ಜ.17) ಪಕ್ಷದ ಮೊದಲ ಹಂತದ ಪ್ರಣಾಳಿಕೆ (ಚುನಾವಣಾ ಭರವಸೆ) ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯಂತೆ ಎಲ್ಲಾ ಪಡಿತರ...

ಛತ್ತೀಸ್‌ಗಢ| ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಸಾವು

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಕನಿಷ್ಠ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ವಾಯುವ್ಯ ಪ್ರದೇಶದ ಅರಣ್ಯ ಬೆಟ್ಟಗಳಲ್ಲಿ ಶನಿವಾರ ಬೆಳಿಗ್ಗೆ ಗುಂಡಿನ ಚಕಮಕಿ ನಡೆಯಿತು. ಹಿರಿಯ...