ರಾಜ್ಯದಲ್ಲಿ ಶೀಘ್ರವೇ ಎಲೆಕ್ಟ್ರಿಕ್ ಬೈಕ್ (ಇ-ಬೈಕ್) ಟ್ಯಾಕ್ಸಿ ಸೇವೆಗಳು ಪ್ರಾರಂಭವಾಗಿಲಿದ್ದು, ಸಾರಿಗೆ ಇಲಾಖೆಯು ಅದರ ಕಾರ್ಯಾಚರಣೆಗೆ ಅನುಮೋದನೆ ನೀಡಲಿದೆ. ಅಧಿಕಾರಿಗಳ ಪ್ರಕಾರ, ಇ-ಬೈಕನ್ನು ಟ್ಯಾಕ್ಸಿಯಾಗಿ ನೋಂದಾಯಿಸಲು ವ್ಯಕ್ತಿಗಳಿಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಇದರಂತೆ ವೈಯಕ್ತಿಕವಾಗಿ ಅಥವಾ ಒಂದು ಸಂಸ್ಥೆಯಾಗಿ ರಿಜಿಸ್ಟರ್ ಮಾಡಿ ಈ ಸೇವೆಯನ್ನು ನೀಡಬಹುದಾಗಿದೆ.
ಇ-ಬೈಕ್ ಟ್ಯಾಕ್ಸಿಗಳು ಆರಂಭದಲ್ಲಿ ಬೆಂಗಳೂರಿನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತವೆ ಮತ್ತು ನಂತರ ರಾಜ್ಯದಾದ್ಯಂತ ಇತರ ನಗರ ಕೇಂದ್ರಗಳಿಗೆ ವಿಸ್ತರಿಸಲಾಗುವುದು ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಕಾರ್ಪೊರೆಟ್ ಧೃತರಾಷ್ಟ್ರ ಬಾಹುಗಳಿಗೆ ವಾಣಿಜ್ಯ ಬ್ಯಾಂಕುಗಳು!
“ಇ-ಬೈಕ್ ಟ್ಯಾಕ್ಸಿಗಳು ಮೆಟ್ರೋ ಮತ್ತು ಸಿಟಿ ಬಸ್ ಸೇವೆಗಳಿಗೆ ಫೀಡರ್ ಸೇವೆಗಳಾಗಿ ಕಾರ್ಯನಿರ್ವಹಿಸುತ್ತವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇದರ ಸಂಪೂರ್ಣ ಮಾರ್ಗಸೂಚಿಗಳನ್ನು ಬುಧವಾರ ಬಿಡುಗಡೆ ಮಾಡುವ ನಿರೀಕ್ಷೆಯಿದೆ” ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಪ್ರತಿ ವಾಹನದಲ್ಲಿ ಜಿಪಿಎಸ್ ಅಳವಡಿಸಬೇಕಿದ್ದು, ಅವುಗಳ ಮೇಲೆ ‘ಬೈಕು ಟ್ಯಾಕ್ಸಿ’ ಎಂದು ಪ್ರಧಾನವಾಗಿ ಬರೆಯಲ್ಪಟ್ಟಿದ್ದರೆ ಮಾತ್ರ ಸರ್ಕಾರ ಇ-ಬೈಕ್ ಟ್ಯಾಕ್ಸಿಗಳ ಸೇವೆಗಳನ್ನು ಅನುಮತಿಸುವ ಸಾಧ್ಯತೆಯಿದೆ. ಸವಾರ ಮತ್ತು ಗ್ರಾಹಕರಿಗೆ ವಿಮೆ ಮತ್ತು ಹೆಲ್ಮೆಟ್‌ಗಳನ್ನು ಕಡ್ಡಾಯವಾಗಿ ಧರಿಸುವುದು ಇ-ಬೈಕ್ ಟ್ಯಾಕ್ಸಿ ಆಪರೇಟರ್‌ಗಳಿಗೆ ಅನುಸರಿಸಲು ನಿರ್ದೇಶಿಸಲಾಗುವುದು.
“ಆದಾಗ್ಯೂ, ಗ್ರಾಹಕರಿಗೆ ಇ-ಬೈಕ್ ಟ್ಯಾಕ್ಸಿ ಸೇವೆಯನ್ನು ಬಳಸಲು ಅನುಮತಿಸುವ ಗರಿಷ್ಠ ದೂರವು 10 ಕಿಲೋಮೀಟರ್ ಆಗಿರುತ್ತದೆ” ಎಂದು ಅಧಿಕಾರಿ ಹೇಳಿದ್ದಾರೆ. 0-5 ಕಿಲೋಮೀಟರ್ ಮತ್ತು 5-10 ಕಿಲೋಮೀಟರ್ ವ್ಯಾಪ್ತಿಗಾಗಿ ವಿವಿಧ ಶುಲ್ಕಗಳನ್ನು ಘೋಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ಮೇಲೆ ವಾಣಿಜ್ಯ ನಿರ್ಬಂಧ ಹೇರಲು ಮುಂದಾದ ಯುರೋಪಿಯನ್ ಸಂಸತ್ತು


