Homeಮುಖಪುಟಭಾರತದಲ್ಲಿ ಕೋಮು ಗಲಭೆ | 2024 ರಲ್ಲಿ 84% ಏರಿಕೆ - ವರದಿ

ಭಾರತದಲ್ಲಿ ಕೋಮು ಗಲಭೆ | 2024 ರಲ್ಲಿ 84% ಏರಿಕೆ – ವರದಿ

- Advertisement -
- Advertisement -

ಭಾರತದಲ್ಲಿ 2024 ರ ವೇಳೆಗೆ 59 ಕೋಮು ಗಲಭೆಗಳು ಸಂಭವಿಸಿವೆ ಎಂದು ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಅಂಡ್ ಸೆಕ್ಯುಲರಿಸಂನ ಹೊಸ ವರದಿ ತಿಳಿಸಿದೆ. 2023 ರಲ್ಲಿ ದೇಶದಲ್ಲಿ 32 ಅಂತಹ ಘಟನೆಗಳು ವರದಿಯಾಗಿದ್ದವು ಎಂದು ಹೇಳಿದ್ದು, ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಕೋಮುಗಲಭೆಗಳು 84% ಹೆಚ್ಚಾಗಿವೆ ಎಂದು ವರದಿಗಳು ಸೂಚಿಸಿವೆ. ಭಾರತದಲ್ಲಿ ಕೋಮು ಗಲಭೆ

ಹೆಜೆಮನಿ ಅಂಡ್ ಡೆಮೋಲಿಷನ್ಸ್: ದಿ ಟೇಲ್ ಆಫ್ ಕಮ್ಯುನಲ್ ರಾಯಿಟ್ಸ್ ಇನ್ ಇಂಡಿಯಾ ಇನ್ 2024 ಎಂಬ ಶೀರ್ಷಿಕೆಯ ವರದಿಯನ್ನು ಮಾನವ ಹಕ್ಕುಗಳ ಹೋರಾಟಗಾರರಾದ ಇರ್ಫಾನ್ ಎಂಜಿನಿಯರ್, ನೇಹಾ ದಭಾಡೆ ಮತ್ತು ಮಿಥಿಲಾ ರಾವತ್ ಬರೆದಿದ್ದಾರೆ. ಅವರ ಸಂಶೋಧನೆಗಳು ದಿ ಹಿಂದೂ, ದಿ ಟೈಮ್ಸ್ ಆಫ್ ಇಂಡಿಯಾ, ದಿ ಇಂಡಿಯನ್ ಎಕ್ಸ್‌ಪ್ರೆಸ್, ಶಹಾಫತ್ ಮತ್ತು ದಿ ಇಂಕ್ವಿಲಾಬ್ ಎಂಬ ಐದು ಪತ್ರಿಕೆಗಳ ಮುಂಬೈ ಆವೃತ್ತಿಗಳ ವರದಿಗಳನ್ನು ಆಧರಿಸಿವೆ. ಭಾರತದಲ್ಲಿ ಕೋಮು ಗಲಭೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

“ಗೃಹ ವ್ಯವಹಾರಗಳ ಸಚಿವಾಲಯ ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಭಾರತದಲ್ಲಿ ಕೋಮು ಗಲಭೆಗಳ ಸಮಗ್ರ ದಾಖಲೆಗಳನ್ನು ನಿರ್ವಹಿಸುತ್ತವೆ. ಆದರೆ ಅದರ ಡೇಟಾವನ್ನು ನಿಯಮಿತವಾಗಿ ಪ್ರಕಟಿಸುವುದನ್ನು ನಿಲ್ಲಿಸಿವೆ” ಎಂದು ಲೇಖಕರು ಹೇಳಿದ್ದಾರೆ.

ವರದಿಯ ಪ್ರಕಾರ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೋಮು ಗಲಭೆಗಳು ವರದಿಯಾಗಿವೆ. ರಾಜ್ಯದಲ್ಲಿ ಒಟ್ಟು 59 ರಲ್ಲಿ 12 ಕೋಮುಗಲಭೆಗಳು ನಡೆದಿದ್ದರೆ, ಇದರ ನಂತರ ಉತ್ತರ ಪ್ರದೇಶ ಮತ್ತು ಬಿಹಾರ ತಲಾ ಏಳು ಗಲಭೆಗಳು ವರದಿಯಾಗಿವೆ. ಈ ಗಲಭೆಗಳಲ್ಲಿ 13 ಜನರ ಸಾವಿಗೀಡಾಗಿದ್ದು, ಅದರಲ್ಲಿ 10 ಜನರು ಮುಸ್ಲಿಮರು ಮತ್ತು ಮೂವರು ಹಿಂದೂಗಳಾಗಿದ್ದಾರೆ ಎಂದು ವರದಿ ಉಲ್ಲೇಖಿಸಿವೆ.

“2024 ರಲ್ಲಿ ಭಾರತದಲ್ಲಿ ಕೋಮು ಗಲಭೆಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ 2024 ರ ಏಪ್ರಿಲ್/ಮೇ ತಿಂಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳು ಭಾಗಶಃ ಕಾರಣವೆಂದು ಹೇಳಬಹುದು” ಎಂದು ವರದಿ ಎತ್ತತೋರಿಸಿದೆ. ಹೆಚ್ಚಿನ ಕೋಮು ಗಲಭೆಗಳು (59 ಕೋಮುಗಲಭೆಗಳಲ್ಲಿ 26 ಗಲಭೆಗಳು) ಧಾರ್ಮಿಕ ಹಬ್ಬಗಳು ಅಥವಾ ಮೆರವಣಿಗೆಗಳ ಸಮಯದಲ್ಲಿ ಪ್ರಚೋದಿಸಲ್ಪಟ್ಟವು ಎಂದು ಅದು ಹೇಳಿದೆ. ಇದರಲ್ಲಿ ನಾಲ್ಕು ಗಲಭೆಗಳು ಜನವರಿ 2024 ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ದಿನದಂದು ನಡೆದಿದೆ.

ಸರಸ್ವತಿ ಪೂಜೆಯ ವಿಗ್ರಹ ವಿಸರ್ಜನೆಯ ಸಮಯದಲ್ಲಿ ಏಳು ಗಲಭೆಗಳು ನಡೆದಿದ್ದರೆ, ಗಣೇಶ ಹಬ್ಬದ ಸಮಯದಲ್ಲಿ ನಾಲ್ಕು ಮತ್ತು ಬಕ್ರೀದ್ ಸಮಯದಲ್ಲಿ ಎರಡು ಗಲಭೆಗಳು ವರದಿಯಾಗಿವೆ. “ಈ ದತ್ತಾಂಶವು ಧಾರ್ಮಿಕ ಆಚರಣೆಗಳನ್ನು ಕೋಮು ಉದ್ವಿಗ್ನತೆ ಮತ್ತು ರಾಜಕೀಯಗೊಳಿಸುವಿಕೆ ಹೇಗೆ ಹೆಚ್ಚಾಗಿ ಬಳಸಲಾಗುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತದೆ” ಎಂದು ವರದಿಗಳು ತಿಳಿಸಿವೆ.

ಒಟ್ಟು ಆರು ಘಟನೆಗಳು ವಿವಾದಿತ ಪೂಜಾ ಸ್ಥಳಗಳಿಗೆ ಸಂಬಂಧಿಸಿವೆ ಎಂದು ವರದಿ ಹೇಳಿದೆ. ಬಿಜೆಪಿ ಪರ ಉಗ್ರ ಗುಂಪುಗಳು ಮಸೀದಿಗಳು ಮತ್ತು ದರ್ಗಾಗಳನ್ನು ಕಾನೂನುಬಾಹಿರ ಅಥವಾ ಹಿಂದೂ ಧಾರ್ಮಿಕ ಸ್ಥಳಗಳನ್ನು ಕೆಡವಿ ಕಟ್ಟಲಾಗಿದೆ ಎಂಬ ಅರೋಪಗಳು ಬಂದ ನಂತರ ಈ ಗಲಭೆ ನಡೆದಿದೆ ಎಂದು ವರದಿ ಹೇಳಿದೆ.

ವಾರಣಾಸಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹಿ ಈದ್ಗಾ ಮಸೀದಿ ಮತ್ತು ಜೌನ್‌ಪುರದ ಅತಲಾ ಮಸೀದಿ ಸೇರಿದಂತೆ 10 ಮಸೀದಿಗಳು ಮತ್ತು ದೇವಾಲಯಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ ನ್ಯಾಯಾಲಯಗಳಲ್ಲಿ ಕನಿಷ್ಠ 18 ಮೊಕದ್ದಮೆಗಳು ಬಾಕಿ ಉಳಿದಿವೆ. ಪ್ರಾಚೀನ ಹಿಂದೂ ದೇವಾಲಯಗಳನ್ನು ಕೆಡವಿ ಈ ಮಸೀದಿಗಳನ್ನು ನಿರ್ಮಿಸಲಾಗಿದೆ ಎಂದು ಪ್ರಕರಣ ದಾಖಲಿಸಿರುವ ಬಿಜೆಪಿ ಬೆಂಬಲಿಗರು ಹೇಳಿಕೊಂಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕೋಮು ಗಲಭೆಗಳ ಪ್ರಕರಣಗಳಲ್ಲಿ ಸರ್ಕಾರವು “ಮುಸ್ಲಿಂ ಸಮುದಾಯವನ್ನು ಅಸಮಾನವಾಗಿ ಗುರಿಯಾಗಿಸಿಕೊಂಡಿದೆ” ಎಂಬ ಪ್ರವೃತ್ತಿಯನ್ನು ಗಮನಿಸಿದ್ದೇವೆ ಎಂದು ಲೇಖಕರು ಹೇಳಿದ್ದಾರೆ. “ಈ ಕ್ರಮಗಳಲ್ಲಿ ಮುಸ್ಲಿಮರ ಒಡೆತನದ ಆಸ್ತಿಗಳನ್ನು ಕೆಡವಲು ಬುಲ್ಡೋಜರ್‌ಗಳನ್ನು ಬಳಸುವುದು ಗಮನಾರ್ಹ ಆರ್ಥಿಕ ಹಾನಿಯನ್ನುಂಟುಮಾಡುತ್ತದೆ. ಹೆಚ್ಚುವರಿಯಾಗಿ, ರಾಜ್ಯ ಸರ್ಕಾರವು ಪ್ರಕರಣಗಳನ್ನು ದಾಖಲಿಸಿದ್ದು, ಮುಸ್ಲಿಂ ಸಮುದಾಯದ ಸದಸ್ಯರನ್ನು ಕೋಮು ಗಲಭೆಗಳ ಸಮಯದಲ್ಲಿ ಹಿಂಸಾಚಾರಕ್ಕೆ ಬಲಿಯಾದ ಸಂದರ್ಭಗಳಲ್ಲಿಯೂ ಸಹ ಅವರನ್ನು ಸಿಲುಕಿಸಿದೆ.” ಎಂದು ಹೇಳಿದ್ದಾರೆ.

ಸೆಪ್ಟೆಂಬರ್ ವರೆಗೆ, ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂಬ ಹೇಳಿಕೆಗಳನ್ನು ಬಳಸಿಕೊಂಡು ಮಹಾರಾಷ್ಟ್ರದಲ್ಲಿ ಕೋಮು ಘರ್ಷಣೆಗಳು ನಡೆದ ಪ್ರದೇಶದಲ್ಲಿ ಮುಸ್ಲಿಮರಿಗೆ ಸೇರಿದ 19 ಆಸ್ತಿಗಳನ್ನು, ದೆಹಲಿಯಲ್ಲಿ ಮಸೀದಿ, ಉತ್ತರಾಖಂಡದಲ್ಲಿ ಮದರಸಾ, ಅಸ್ಸಾಂನಲ್ಲಿ ಸಾವಿರಾರು ಬಂಗಾಳಿ ಮೂಲದ ಮುಸ್ಲಿಮರ ತಾತ್ಕಾಲಿಕ ಮನೆಗಳನ್ನು, ಮಧ್ಯಪ್ರದೇಶದಲ್ಲಿ ಗೋಮಾಂಸ ಕಳ್ಳಸಾಗಣೆದಾರರೆಂದು ಹೇಳಲಾಗುವ 11 ಮನೆಗಳನ್ನು ಮತ್ತು ರಾಜಸ್ಥಾನದಲ್ಲಿ ತನ್ನ ಹಿಂದೂ ಸಹಪಾಠಿಯನ್ನು ಇರಿದ ಆರೋಪ ಹೊತ್ತಿರುವ ಮುಸ್ಲಿಂ ಹದಿಹರೆಯದವರ ಬಾಡಿಗೆ ಮನೆಯನ್ನು ಕೆಡವಲಾಗಿದೆ ಎಂದು ಸ್ಕ್ರಾಲ್ ವರದಿ ಮಾಡಿದೆ.

ಹೆಚ್ಚುವರಿಯಾಗಿ, 2024 ರಲ್ಲಿ 13 ಗುಂಪು ಹತ್ಯೆ ಪ್ರಕರಣಗಳು ನಡೆದಿದ್ದು, ಇದರಿಂದಾಗಿ 11 ಸಾವುಗಳು ಸಂಭವಿಸಿವೆ – ಒಂದು ಹಿಂದೂ, ಒಂದು ಕ್ರಿಶ್ಚಿಯನ್ ಮತ್ತು ಒಂಬತ್ತು ಮುಸ್ಲಿಮರು. “2023 ರಲ್ಲಿ ದಾಖಲಾದ 21 ಗುಂಪು ಹತ್ಯೆ ಘಟನೆಗಳಿಗೆ ಹೋಲಿಸಿದರೆ ಇದು ಇಳಿಕೆಯನ್ನು ಸೂಚಿಸುತ್ತದೆಯಾದರೂ, ಅಂತಹ ದಾಳಿಗಳು ನಿರಂತರವಾಗಿ ಸಂಭವಿಸುತ್ತಿರುವುದು ಗಂಭೀರ ಕಳವಳಕಾರಿ ಘಟನೆಗಳಾಗಿವೆ” ಎಂದು ವರದಿ ಹೇಳಿದೆ.

ಒಟ್ಟು ಏಳು ಗುಂಪು ಹತ್ಯೆ ಪ್ರಕರಣಗಳು ಗೋ ಜಾಗೃತಿ ಅಥವಾ ಗೋಹತ್ಯೆಯ ಆರೋಪಗಳಿಗೆ ಸಂಬಂಧಿಸಿವೆ. ಆದರೆ ಉಳಿದವುಗಳಿಗೆ ಅಂತರ್ಧರ್ಮ ಸಂಬಂಧಗಳ ಆರೋಪಗಳು ಮತ್ತು ಮುಸ್ಲಿಮರನ್ನು ಅವರ ಧಾರ್ಮಿಕ ಗುರುತಿಗಾಗಿ ಗುರಿಯಾಗಿಸಿಕೊಂಡು ನಡೆದ ಹಲ್ಲೆಗಳು ಕಾರಣ ಎಂದು ವರದಿ ಹೇಳಿದೆ.

ಇದನ್ನೂಓದಿ:  ಕೇರಳ| ಹುಲಿ ದಾಳಿಯಿಂದ ಮಹಿಳೆ ಸಾವು; ಮಾನಂತವಾಡಿಯಲ್ಲಿ 48 ಗಂಟೆಗಳ ಕರ್ಫ್ಯೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...