Homeಮುಖಪುಟಮಸೀದಿ-ಮಂದಿರ ವಿವಾದಗಳಲ್ಲಿ ನ್ಯಾಯಾಲಯಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿವೆಯೇ?

ಮಸೀದಿ-ಮಂದಿರ ವಿವಾದಗಳಲ್ಲಿ ನ್ಯಾಯಾಲಯಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿವೆಯೇ?

- Advertisement -
- Advertisement -

ಕಳೆದ ಕೆಲವು ವಾರಗಳಲ್ಲಿ ಉತ್ತರಪ್ರದೇಶದ ಜ್ಞಾನವಾಪಿ ಮಸೀದಿ, ಶ್ರೀರಂಗಪಟ್ಟಣದ ಮಸ್ಜೀದ್-ಈ-ಆಲಾ, ಮಥುರಾದಲ್ಲಿರುವ ಶಾಹೀ ಈದ್ಗಾ ಮಸೀದಿ, ದಿಲ್ಲಿಯ ಕುತುಬ್ ಮಿನಾರ್ – ಇವೆಲ್ಲೆಡೆ ಹಿಂದುತ್ವ ಸಂಘಟನೆಗಳು ಇಲ್ಲದ ವಿವಾದ ಸೃಷ್ಟಿಸಿವೆ. ಈ ಸಂಘಟನೆಗಳ ಮನುವಾದಿ, ಕೋಮುವಾದಿ ನಡೆ ಬಗ್ಗೆ ನಮಗೆಲ್ಲರಿಗೂ
ಗೊತ್ತಿರುವಂಥದ್ದೇ. ಆದರೆ ನಮಗೆ ಆತಂಕವಾಗಿರಬೇಕಾಗಿರುವ ವಿಷಯವೆಂದರೆ ನಮ್ಮ ನ್ಯಾಯಾಲಯಗಳ ಪ್ರತಿಕ್ರಿಯೆ. ಹಿಂದುತ್ವ ಸಂಘಟನೆಗಳು ಮಸೀದಿಗಳ ಮೇಲೆ ನಡೆಸುತ್ತಿರುವ ದಾಳಿಗಳಿಗೆ ನ್ಯಾಯಾಲಯಗಳು ಕೈ ಜೋಡಿಸಿವೆಯೇ ಎಂಬ ಅನುಮಾನ ಮೂಡುತ್ತದೆ. ಈ ಅನುಮಾನವನ್ನು ಈ ಬರೆಹದಲ್ಲಿ ಪರಿಶೀಲಿಸೋಣ. ಮುಖ್ಯವಾಗಿ ಜ್ಞಾನವಾಪಿ ಮಸೀದಿಯ ವಿಷಯದಲ್ಲಿ ನ್ಯಾಯಾಲಯಗಳ ನಡೆಯನ್ನು ಗಮನಿಸೋಣ.

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಯಿತು ಎಂದು ಹಿಂದೂ ಪರ ಸಂಘಟನೆಗಳು ಹೇಳಿಕೊಂಡ ತಕ್ಷಣ, ವಾರಣಾಸಿಯ ನ್ಯಾಯಾಲಯ, ಅದು ಪತ್ತೆಯಾಗಿದೆ ಎಂದು ಪ್ರತಿಪಾದಿಸಿದ ಜಾಗವನ್ನು ಬಂದ್ ಮಾಡಲು ಅದೇಶಿಸಿತು. ನ್ಯಾಯಾಲಯವೇ ನೇಮಿಸಿದ್ದ ’ಕೋರ್ಟ್ ಕಮಿಷಿನರ್’ ವರದಿ ಸಲ್ಲಿಸುವ ತನಕ ಸಹ ಕಾಯಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಅಸಾದುದ್ದೀನ್ ಒವೈಸಿಯವರು, “ದಿಸ್ ಇಸ್ ಎ ಟೆಕ್ಸ್ಟ್ ಬುಕ್ ರಿಪೀಟ್ ಆಪ್ ಡಿಸೆಂಬರ್ 1949 ಇನ್ ಬಾಬ್ರಿ ಮಸ್ಜಿದ್” ಎಂದರು.

ಬಾಬ್ರಿ ಮಸೀದಿ ಸುತ್ತ ಸೃಷ್ಟಿಸಿದ ವಿವಾದ ಸ್ವತಂತ್ರ ಭಾರತದ ರಾಜಕೀಯ ಹಾಗು ಸಾಮಾಜಿಕ ಇತಿಹಾಸವನ್ನು ಇನ್ನಿಲ್ಲದಂತೆ ಬದಲಿಸಿತು. ಈ ಪ್ರಕರಣದ ಅಂತಿಮ ತೀರ್ಪು ಹಾಗು ಅದರಲ್ಲಿ ಅಡಗಿದ ಅನ್ಯಾಯದ ಬಗ್ಗೆ ಸಾಕಷ್ಟು ಬರೆದಾಗಿದೆ. ಆದರೆ ಈ ಪ್ರಕರಣ ಈ ಮಟ್ಟಕ್ಕೆ ಬೆಳೆದಿದ್ದು ನ್ಯಾಯಾಲಯಗಳು ತಮ್ಮ ಸಂವಿಧಾನಿಕ ಜವಾಬ್ದಾರಿ ಮರೆತು, ಹಿಂದುತ್ವವಾದಿಗಳಿಗೆ ನೀಡಿದ ನೆರವಿನಿಂದಲೇ.

1949ರಲ್ಲಿ ಅಯೋಧ್ಯೆಯಲ್ಲಿ ನಡೆದಿದ್ದೇನು ಹಾಗು ಅದಕ್ಕೆ ನ್ಯಾಯಾಲಯಗಳು ಹೇಗೆ ಸ್ಪಂದಿಸಿದವು ಎಂಬುದನ್ನು ವಕೀಲರಾದ ಮೊಹಮ್ಮದ್ ಅಫೀಫ್ ಅವರು ವಿವರಿಸಿದ್ದಾರೆ. ಮೊದಲನೆಯದಾಗಿ ಡಿಸೆಂಬರ್ 23, 1949ರ ರಾತ್ರಿ, ಮಸೀದಿಯಲ್ಲಿ ಯಾರೂ ಇಲ್ಲದಿರುವ ಸಮಯದಲ್ಲಿ, ಕೆಲವರು ಮಸೀದಿಯೊಳಗೆ ನುಗ್ಗಿ ಅಲ್ಲಿ ಕಳ್ಳತನದಿಂದ ಹಿಂದೂ ದೇವರ ವಿಗ್ರಹ ಇಟ್ಟರು. ಅಲ್ಲಿಗೆ ನಂತರ ಹೋದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಮಸೀದಿಗೆ ಬೀಗ ಹಾಕಿ, ಆ ಸ್ಥಳವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವಂತೆ ಮಾಡಿದರು. ಆದರೆ, ಕಾನೂನುಬಾಹಿರವಾಗಿ ಅಲ್ಲಿಟ್ಟ ವಿಗ್ರಹಗಳನ್ನು ಮಾತ್ರ ತೆಗೆಸುವುದಿಲ್ಲ. ನಂತರ 1950ರಲ್ಲಿ ಇಬ್ಬರು ಹಿಂದೂ ಅರ್ಜಿದಾರರು ಸಿವಿಲ್ ನ್ಯಾಯಾಲಯದ ಮೊರೆಹೋಗಿ, ಮಸೀದಿ ಇರುವ ಸ್ಥಳ ಅವರದ್ದು ಎಂದು ಅರ್ಜಿ ಹಾಕುತ್ತಾರೆ. ಆ ಪ್ರಕರಣದಲ್ಲಿ ನ್ಯಾಯಾಲಯವು, ಮಧ್ಯಂತರ ಆದೇಶ ನೀಡಿ, ಮಸೀದಿಯಲ್ಲಿಟ್ಟ ವಿಗ್ರಹಗಳನ್ನು ಯಾರೂ ಜರಿಗಿಸಬಾರದೆಂದು ತೀರ್ಪು ನೀಡುತ್ತದೆ. ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರದ ನಿಲುವು, ಆ ಸ್ಥಳವನ್ನು 1949ರಲ್ಲಿ ಮಸೀದಿಯಾಗಿ ಉಪಯೋಗಿಸಲಾಗುತ್ತಿತ್ತು ಎಂಬುದು. ಹಾಗಿದ್ದರೂ ಸಹ ನ್ಯಾಯಾಲಯವು ಮಸೀದಿಯನ್ನು ಬಂದ್ ಮಾಡಿ, ಯಾರಿಗೂ ಪ್ರವೇಶ ನೀಡದಂತೆ ಆದೇಶಿಸುತ್ತದೆ. ನಂತರ ಉತ್ತರ ಪ್ರದೇಶ ಉಚ್ಚ ನ್ಯಾಯಾಲಯವು ಸಿವಿಲ್ ಕೋರ್ಟ್‌ನ ತೀರ್ಪನ್ನು ಎತ್ತಿಹಿಡಿಯುತ್ತದೆ. ಹಾಗಾಗಿ, 1949ರಲ್ಲಿ ಮಸೀದಿಗೆ ನುಗ್ಗಿ ಅಲ್ಲಿ ವಿಗ್ರಹಗಳನ್ನು ಇಟ್ಟ ಕಾನೂನುಬಾಹಿರ ಕಾರ್ಯವನ್ನು ನ್ಯಾಯಾಲಯವೆ ನ್ಯಾಯಸಮ್ಮತಗೊಳಿಸುತ್ತದೆ. ಅದು ಅಲ್ಲಿಗೆ ನಿಲ್ಲುವುದಿಲ್ಲ. ಈ ಸಿವಿಲ್ ಪ್ರಕರಣಗಳು ದಶಕಗಳ ಕಾಲ ನಡೆಯುತಿದ್ದವು. 1989ರಲ್ಲಿ ದಿಢೀರ್ ಎಂದು ಒಂದು ದಿನ, ಈ ಪ್ರಕರಣದ ಭಾಗವೇ ಅಲ್ಲದ ಹಿಂದೂ ವ್ಯಕ್ತಿಯೊಬ್ಬರು, ಸಿವಿಲ್ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸುತ್ತಾರೆ. ಪ್ರಕರಣದಲ್ಲಿ ಪಾರ್ಟಿಯಾಗಿರುವ ಮುಸ್ಲಿಂ ಅರ್ಜಿದಾರರಿಗೆ ತಿಳಿಸದೆ, ಅದರ ಬಗ್ಗೆ ಹಿಯರಿಂಗ್ ಮಾಡಿ, ಮಸೀದಿಯ ಬಾಗಿಲುಗಳನ್ನು ತೆಗೆದು ಅಲ್ಲಿ ಹಿಂದೂಗಳಿಗೆ 1949ರಲ್ಲಿ ಇಟ್ಟ ವಿಗ್ರಹಗಳಿಗೆ ಪೂಜೆ ಮಾಡಲು ಅವಕಾಶ ನೀಡಲಾಗುತ್ತದೆ. ದಿಢೀರೆಂದು ನೂರಾರು ವರ್ಷಗಳಿಂದ ನಡೆದುಕೊಂಡಂತ ಮಸೀದಿ, ನ್ಯಾಯಾಲಯದ ಈ ತೀರ್ಪಿನಿಂದ ದೇವಾಲಯವಾಗಿ ಪರಿವರ್ತನೆಯಾಯಿತು. ಪ್ರಕರಣದ ಭಾಗವೇ ಆಗದಿದ್ದವರಿಗೆ ಪ್ರಕರಣದಲ್ಲಿ ಅರ್ಜಿ ಹಾಕಲು ’ಲೋಕಸ್ ಸ್ಟಾಂಡಿ’ ಇಲ್ಲ (ಎಂದರೆ ಅಧಿಕಾರ ಇಲ್ಲ). ಇಂತಹ ವ್ಯಕ್ತಿಯ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡು, ಪ್ರಕರಣದಲ್ಲಿ ಭಾಗಿಯಾಗಿದ್ದ ಮುಸ್ಲಿಂ ಸಂಘಟನೆಗಳ ವಾದವನ್ನೂ ಕೇಳಿಸಿಕೊಳ್ಳದೆ ನೀಡಿದ ತೀರ್ಪು, ’ಪ್ರಿನ್ಸಿಪಲ್ಸ್ ಆಫ್ ನ್ಯಾಚುರಲ್ ಜಸ್ಟಿಸ್’ಗೆ ವಿರುದ್ಧವಾಗಿದೆ.

ಅಸಾದುದ್ದೀನ್ ಒವೈಸಿ

ಈ ಸಮಯದಲ್ಲಿ ಇದನ್ನು ಏಕೆ ನೆನೆಯಬೇಕೆಂದರೆ ಜ್ಞಾನವಾಪಿ ಮಸೀದಿಯಲ್ಲಿ ಸಹ ಇದೇ ನಡೆಯುತ್ತಿದೆ. ಜ್ಞಾನವಾಪಿ ಮಸೀದಿಯ ಸುತ್ತ ಸೃಷ್ಟಿಸಿರುವ ವಿವಾದದ ಲೀಗಲ್ ಕಾಲಾನುಕ್ರಮ-ಇತಿಹಾಸ ಹೀಗಿದೆ:


ಎಲ್ಲದಕ್ಕಿಂತ ಆತಂಕಕಾರಿ ವಿಷಯವೆಂದರೆ, ಸುಪ್ರೀಂ ಕೋರ್ಟ್‌ನ ಸದರಿ ಪ್ರಕರಣವನ್ನು ಆಲಿಸುತ್ತಿರುವ ಬೆಂಚ್‌ನಲ್ಲಿ ಇರುವ ಜಸ್ಟಿಸ್ ಚಂದ್ರಚೂಡ್ ಬಾಬ್ರಿ ತೀರ್ಪಿನಲ್ಲಿ ಪ್ಲೇಸಸ್ ಆಫ್ ವರ್ಷಿಪ್ ಕಾಯ್ದೆ ಬಹು ಮುಖ್ಯ, ಅದನ್ನು ಉಲ್ಲಂಘಿಸಬಾರದೆಂದು ಹೇಳಿದ್ದರು; ಆದರೆ ಈ ಪ್ರಕರಣದಲ್ಲಿ ಅದರ ಉಲ್ಲಂಘನೆಯಾಗಿರುವುದನ್ನು ಗಣನೆಗೇ ತೆಗೆದುಕೊಳ್ಳದಿರುವುದು ಮತ್ತು ಆ ಉಲ್ಲಂಘನೆಯನ್ನು ಸಮರ್ಥಿಸುವಂತೆ ಮಾತನಾಡಿರುವುದು.

ವಿಚಾರಣೆ ನಡೆಯಬೇಕಾದರೆ, ಮಸೀದಿ ಸಮಿತಿ ಪರ ವಕೀಲರು, ಸಮೀಕ್ಷೆಗೆ ಆದೇಶಿಸಿದ್ದು ಕಾಯ್ದೆಯ ಕಲಂ 3ರ ಉಲ್ಲಂಘನೆ ಎಂದಾಗ, “ದೇಶದಲ್ಲಿ ಅನೇಕ ಧಾರ್ಮಿಕ ಸ್ಥಳಗಳಲ್ಲಿ ಎರಡು ಧರ್ಮಗಳು ಗುರುತು ಇರುತ್ತವೆ, ಹಾಗಾಗಿ ಅದು ಯಾವ ಧರ್ಮಕ್ಕೆ ಸೇರಿದೆ ಎಂದು ಪರಿಶೀಲಿಸುವುದು ಕಾಯ್ದೆಯ ಉಲ್ಲಂಘನೆಯಲ್ಲ” ಎಂದು ಸಮರ್ಥಿಸಿಕೊಳ್ಳುತ್ತಾರೆ!

ಇದು ಅಪಾಯಕಾರಿ ಸಂಗತಿ. ಏಕೆಂದರೆ ಈಗ ಯಾವುದೋ ಒಂದು ಮಸೀದಿಯಲ್ಲಿ ಹಿಂದೂ ವಿಗ್ರಹಗಳು ಇವೆಯೆಂದು ಅನೇಕ ಜನ ನ್ಯಾಯಾಲಯಕ್ಕೆ ಮೊರೆ ಹೋಗಬಹುದು. ಹಾಗಾಗಿ, 1947ರ ಸಮಯದಲ್ಲಿ ಯಾವುದಾದರು ಸ್ಥಳಗಳು ಮಸೀದಿಯಾಗಿದ್ದರೆ ಅದು ಮಸೀದಿಯಾಗಿ ಉಳಿಯಬೇಕು, ದೇವಾಲಯವಾಗಿದ್ದುದು ದೇವಾಲಯವಾಗಿ ಉಳಿಯಬೇಕು, ಆಗಲೆ ದೇಶದಲ್ಲಿ ಶಾಂತಿ ನೆಲೆಸುತ್ತದೆ ಹಾಗು ಸಮಾಜ ಒಗ್ಗಟ್ಟಾಗಿರುತ್ತದೆ ಎಂಬ ಉದ್ದೇಶವನ್ನು ಎತ್ತಿಹಿಡಿಯುವ ಪ್ಲೇಸಸ್ ಆಫ್ ವರ್ಶಿಪ್ ಕಾಯ್ದೆ ಅಪಾಯದಲ್ಲಿದೆ.

ಹೀಗೆ ನ್ಯಾಯಾಲಯಗಳೇ ಹಿಂದುತ್ವವಾದಿ ಸಂಘಟನೆಗಳ ಕೋಮುವಾದಿ ದಾಳಿಗಳಿಗೆ ನೆರವಾಗಿ ನಿಂತಿವೆ. ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಅದು ದೇವಾಲಯವಾಗಿತ್ತೇ ಎಂಬ ವಿಚಾರಣೆಗಿಂತಲೂ, ಇಲ್ಲಿ ನ್ಯಾಯಾಲಯಗಳು ಸಂವಿಧಾನ ಬದ್ಧವಾಗಿವೆಯೇ ಎಂಬ ವಿಚಾರಣೆ ನಡೆಯುತ್ತಿದೆ.

ವಿನಯ್ ಕೂರಗಾಯಲ ಶ್ರೀನಿವಾಸ

ವಿನಯ್ ಕೂರಗಾಯಲ ಶ್ರೀನಿವಾಸ
ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು. ಆಲ್ಟರ್‍ನೇಟಿವ್ ಲಾ ಫೋರಂನಲ್ಲಿ ತೊಡಗಿಸಿಕೊಂಡಿರುವ ವಿನಯ್ ಹಲವು ಹೋರಾಟಗಳಲ್ಲಿ ಭಾಗಿಯಾಗಿರುವುದಲ್ಲದೆ, ಸಂವಿಧಾನದ ಪ್ರಚಾರಕ್ಕಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others



ಇದನ್ನೂ ಓದಿ: ಜ್ಞಾನವಾಪಿ ಮಸೀದಿ: ಶಿವಲಿಂಗ ಎಲ್ಲಿ ಕಂಡು ಬಂದಿದೆ ಎಂಬ ಸುಪ್ರೀಂ ಪ್ರಶ್ನೆಗೆ, ವರದಿ ನೋಡಿಲ್ಲ ಎಂದ ಯುಪಿ ಸರ್ಕಾರ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಕ್ರಮ ಮಸೀದಿಗಳ ಬಿಟ್ಟು ಎಲ್ಲಾ ನಗರ ನಕ್ಸಲ್ ಕಮ್ಯೂನಿಸ್ಟ್ ರ ಮನೆಗಳನ್ನು ಕೋರ್ಟ್ ಮುಟ್ಟುಗೋಲು ಹಾಕಿದರೆ ನ್ಯಾಯ ಸಮ್ಮತ ಆಗಬಹುದು ಅನಿಸುತ್ತೆ ಸಮಾಜದಲ್ಲಿ ಏಕೆಂದರೆ ಸಮಾಜದ ದಿಕ್ಕು ತಪ್ಪಿಸುವ ಕೆಲಸ ಇವರಿಂದಲೇ ನಡಿತಿರುವ ಕಾರಣ

LEAVE A REPLY

Please enter your comment!
Please enter your name here

- Advertisment -

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...