Homeಮುಖಪುಟಮಹಿಳಾ ಮೀಸಲಾತಿ ಬಿಲ್‌: ಮೋದಿ ಸರಕಾರದ ದ್ರೋಹ ಬಯಲುಗೊಳಿಸಲು 21 ನಗರಗಳಲ್ಲಿ ಪತ್ರಿಕಾಗೋಷ್ಟಿ; ಕಾಂಗ್ರೆಸ್

ಮಹಿಳಾ ಮೀಸಲಾತಿ ಬಿಲ್‌: ಮೋದಿ ಸರಕಾರದ ದ್ರೋಹ ಬಯಲುಗೊಳಿಸಲು 21 ನಗರಗಳಲ್ಲಿ ಪತ್ರಿಕಾಗೋಷ್ಟಿ; ಕಾಂಗ್ರೆಸ್

- Advertisement -
- Advertisement -

ಕಳೆದ ವಾರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಜಾರಿಗೆ ತರುವಂತೆ ಆಗ್ರಹಿಸಿ ಕಾಂಗ್ರೆಸ್ 21 ನಗರಗಳಲ್ಲಿ 21 ಪತ್ರಿಕಾಗೋಷ್ಠಿಗಳನ್ನು ನಡೆಸಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ದ್ರೋಹವನ್ನು ಬಯಲಿಗೆಳೆಯಲಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯ ಪವನ್ ಖೇರಾ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, 21 ನಗರಗಳಲ್ಲಿ, 21 ಮಹಿಳಾ ನಾಯಕರು ಒಂದೇ ಅಜೆಂಡಾದಲ್ಲಿ ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಮೋದಿ ಸರ್ಕಾರದ ದ್ರೋಹವನ್ನು ಬಹಿರಂಗಪಡಿಸಲಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ ಕಾಂಗ್ರೆಸ್‌ ಮಹಿಳಾ ಮೀಸಲಾತಿ ಬಿಲ್‌ನ್ನು ಯಾವುದೇ ತಡೆಯಿಲ್ಲದೆ ಶೀಘ್ರ ಜಾರಿಗೆ ಆಗ್ರಹಿಸಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈ ಕುರಿತು ಮಾತನಾಡಿದ್ದು, ಮಹಿಳೆಯರಿಗೆ 33% ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಬಿಲ್‌ನ್ನು ನಾಳೆಯಿಂದಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದು, ಮಹಿಳಾ ಮೀಸಲಾತಿ ಮಸೂದೆ, ಜಾತಿಜನಗಣತಿ, ಕ್ಷೇತ್ರವಿಂಗಡನೆಗೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ.

ಭಾರತೀಯ ಮಹಿಳೆಯರು ರಾಜಕೀಯದಲ್ಲಿ ಭಾಗವಹಿಸಲು ಅವಕಾಶವನ್ನು  ಪಂಚಾಯತಿ ರಾಜ್‌ನಲ್ಲಿ 33% ಮೀಸಲಾತಿ ನೀಡುವ ಮೂಲಕ ಕಾಂಗ್ರೆಸ್ ಮಾಡಿದೆ. ನಾವು ಪಂಚಾಯತ್ ರಾಜ್‌ನಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವಾಗ ಆರ್‌ಎಸ್‌ಎಸ್ ಮಹಿಳೆಯರನ್ನು ಅನುಮತಿಸುವುದಿಲ್ಲ ಎನ್ನುವ ಅಂಶವನ್ನು ಅರ್ಥೈಸಿಕೊಳ್ಳಬೇಕಿದೆ. ಮಹಿಳಾ ಸಬಲೀಕರಣದಲ್ಲಿ ಯಾರು ಆಸಕ್ತಿ ಹೊಂದಿದ್ದಾರೆ ಎಂಬುವುದು ಇದರಿಂದ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮೊದಲು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ರಾಹುಲ್ ಗಾಂಧಿ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬವಾದ ಬಗ್ಗೆ ಸರ್ಕಾರವನ್ನು ಟೀಕಿಸಿದ್ದಾರೆ. ಕ್ಷೇತ್ರವಾರು ವಿಂಗಡನೆ ಮತ್ತು ಜನಗಣತಿ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಎಂದು ಹೇಳಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಒಳ್ಳೆಯದೇ ಆಗಿದೆ. ಅದರಲ್ಲಿ ಜನಗಣತಿ ಮತ್ತು ಕ್ಷೇತ್ರ ವಿಂಗಡನೆ ಮಾಡಬೇಕಾಗಿದೆ ಎಂದು ನಮಗೆ ಎರಡು ಅಡಿಟಿಪ್ಪಣಿಗಳು ಕಾಣಿಸಿಕೊಂಡವು. ಇವೆರಡಕ್ಕೂ ವರ್ಷಗಳು ಬೇಕಾಗುತ್ತವೆ. ನಿಜವೆಂದರೆ ಮೀಸಲಾತಿ ಇಂದು ಜಾರಿಗೆ ತರಬಹುದು. ಇದು ಸಂಕೀರ್ಣವಾದ ವಿಷಯವಲ್ಲ ಆದರೆ ಸರ್ಕಾರವು ಅದನ್ನು ಮಾಡಲು ಬಯಸುವುದಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಸರ್ಕಾರ  ಮಸೂದೆ ಅಂಗೀಕರಿಸಿದೆ. ಆದರೆ ಇದು ಇನ್ನು 10 ವರ್ಷಗಳ ನಂತರ ಜಾರಿಗೆ ಬರಲಿದೆ. ಇದು ಜಾರಿಗೆ ಬರುತ್ತದೋ, ಇಲ್ಲವೋ ಎಂದು  ಯಾರಿಗೂ ತಿಳಿದಿಲ್ಲ. ಇದು ಗೊಂದಲದ ಮತ್ತು ಜನರ ಗಮನ ಬೇರೆಡೆ ಸೆಳೆಯುವ ತಂತ್ರ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

 

ಇದನ್ನು ಓದಿ: ಉತ್ತರಪ್ರದೇಶ: ಲೋಕಸಭೆ, ವಿಧಾನಸಭೆಗಳಲ್ಲಿ SC, ST, OBCಗಳಿಗಿಂತ ಹೆಚ್ಚು ಪ್ರಾತಿನಿಧ್ಯ ಪಡೆದ ಬ್ರಾಹ್ಮಣ, ಠಾಕೂರ್‌ ಮಹಿಳೆಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅನಧಿಕೃತ ಬುದ್ಧಿಮಾಂದ್ಯ ಶಾಲೆಯಲ್ಲಿ ಬುದ್ಧಿಮಾಂದ್ಯ ಬಾಲಕನ ಮೇಲೆ ಅಮಾನವೀಯ ಹಲ್ಲೆ: ದಂಪತಿಯನ್ನು ವಶಕ್ಕೆ ಪಡೆದ ಪೊಲೀಸರು

ಬಾಗಲಕೋಟೆ: ಬಾಗಲಕೋಟೆಯ ಅನಧಿಕೃತ ದಿವ್ಯಜ್ಯೋತಿ ಬುದ್ಧಿಮಾಂದ್ಯ ಶಾಲೆಯಲ್ಲಿ ಶಿಕ್ಷಕ ದಂಪತಿ ಬುದ್ಧಿಮಾಂದ್ಯನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ವೀಡಿಯೋ ವೈರಲ್ ಆದ ಬೆನ್ನಲ್ಲೇ ಘಟನೆಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಮುಧೋಳ ತಾಲೂಕಿನ ಮಂಟೂರು ಗ್ರಾಮದ 16...

ಜೆಫ್ರಿ ಎಪ್‌ಸ್ಟೀನ್ ಫೈಲ್ಸ್: ನ್ಯಾಯಾಂಗ ಇಲಾಖೆಯ ವೆಬ್ ಪುಟದಿಂದ ಟ್ರಂಪ್ ಫೋಟೋ ಸೇರಿದಂತೆ 16 ದಾಖಲೆಗಳು ಕಣ್ಮರೆ 

ನ್ಯೂಯಾರ್ಕ್: ಜೆಫ್ರಿ ಎಪ್‌ಸ್ಟೀನ್ ಗೆ ಸಂಬಂಧಿಸಿದ ದಾಖಲೆಗಳಿರುವ ಅಮೆರಿಕದ ನ್ಯಾಯ ಇಲಾಖೆಯ (Justice Department) ಸಾರ್ವಜನಿಕ ವೆಬ್‌ಪುಟದಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಸೇರಿದಂತೆ ಕನಿಷ್ಟ 16 ದಾಖಲೆಗಳು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಅಪ್ರಾಪ್ತ...

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂಸಾಚಾರ| ಬಿಎನ್‌ಪಿ ನಾಯಕನ ಮನೆಗೆ ಬೆಂಕಿ : 7 ವರ್ಷದ ಮಗಳು ಸಜೀವ ದಹನ

ವಿದ್ಯಾರ್ಥಿ ನಾಯಕ ಹಾಗೂ ಸ್ವತಂತ್ರ ರಾಜಕಾರಣಿ ಷರೀಫ್ ಉಸ್ಮಾನ್ ಹಾದಿ ಅವರ ಸಾವಿನ ಬಳಿಕ ಬಾಂಗ್ಲಾ ದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಿಂಸಾತ್ಮಕ ಪ್ರತಿಭಟನೆಯ ಮೂರನೇ ದಿನವಾದ ಶನಿವಾರ, ಪ್ರತಿಭಟನಾಕಾರರು ಬಾಂಗ್ಲಾದೇಶ್...

ದಕ್ಷಿಣ ಆಫ್ರಿಕಾದಲ್ಲಿ ಸಾರ್ವಜನಿಕರ ಮೇಲೆ ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ 9 ಜನರ ಸಾವು 

ಜೋಹಾನ್ಸ್‌ಬರ್ಗ್‌ನ ಹೊರಗಿನ ಬಾರ್‌ನಲ್ಲಿ ಭಾನುವಾರ ಮುಂಜಾನೆ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೇ ಗುಂಡಿನ ದಾಳಿ...

ಬೆಂಗಳೂರು : ಜಿಬಿಎ ಅಧಿಕಾರಿಗಳಿಂದ 200ರಷ್ಟು ಮನೆಗಳ ನೆಲಸಮ : ಬೀದಿಗೆ ಬಿದ್ದ ಬಡ ಜನರು

ಅತಿಕ್ರಮಣ ಆರೋಪದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಬಂಡೆ ಬಳಿಯ 5 ಎಕರೆ ಜಾಗದಲ್ಲಿದ್ದ ಸುಮಾರು 200ರಷ್ಟು ಮನೆಗಳನ್ನು ಶನಿವಾರ (ಡಿ.20)...

ಕೇರಳ ದಲಿತ ಕಾರ್ಮಿಕನ ಗುಂಪುಹತ್ಯೆ: ನನ್ನ ವೃತ್ತಿ ಬದುಕಿನಲ್ಲೇ ಇಂತಹ ಹಿಂಸಾಚಾರ ನೋಡಿಲ್ಲ ಎಂದ ವೈದ್ಯರು

ಕೇರಳದ ಪಾಲಕ್ಕಾಡ್ ಜಿಲ್ಲೆಯ ವಲಯಾರ್‌ನಲ್ಲಿ ಗುಂಪೊಂದು ಹಲ್ಲೆ ನಡೆಸಿ ಹತ್ಯೆ ಮಾಡಿದ ಛತ್ತೀಸ್‌ಗಢದ ದಲಿತ ವಲಸೆ ಕಾರ್ಮಿಕ ರಾಮ್ ನಾರಾಯಣ್ ಅವರ ಮರಣೋತ್ತರ ಪರೀಕ್ಷೆಯು ದಾಳಿಯ ತೀವ್ರ ಕ್ರೌರ್ಯವನ್ನು ಬಹಿರಂಗಪಡಿಸಿದೆ, ದೇಹದ ಒಂದು...

ಪೊಲೀಸ್ ಕಾರ್ಯಾಚರಣೆ ತಡೆದು ಕೋಳಿ ಅಂಕ : ಪುತ್ತೂರು ಶಾಸಕ ಅಶೋಕ್ ರೈ ಸೇರಿ 17 ಮಂದಿ ವಿರುದ್ಧ ಪ್ರಕರಣ ದಾಖಲು

ಶಾಸಕರೇ ಮುಂದೆ ನಿಂತು ಕಾನೂನುಬಾಹಿರ ಚಟುವಟಿಕೆ ನಡೆಸಲು ಜನರನ್ನು ಪ್ರೋತ್ಸಾಹಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಬಳಿ ಶನಿವಾರ (ಡಿ.20) ನಡೆದಿದೆ. ಕೇಪು ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ನಡೆಯುತ್ತಿದ್ದ...

ನಾಲ್ವರು ಬಾಲಕರಿಂದ ಬಾಲಕಿಗೆ ಕಿರುಕುಳ ಆರೋಪ : ‘ಉತ್ತಮ ಸಂಸ್ಕಾರ ಕಲಿಸಿಲ್ಲ’ ಎಂದು ತಾಯಂದಿರನ್ನು ಬಂಧಿಸಿದ ಪೊಲೀಸರು!

ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಾಲ್ವರು ಬಾಲಕರ ವಿರುದ್ಧ ಬಾಲಕಿಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಪೊಲೀಸರು ಬಾಲಕರ ತಾಯಂದಿರನ್ನು 'ಪ್ರಿವೆಂಟಿವ್ ಅರೆಸ್ಟ್' ಮಾಡಿದ್ದಾರೆ ಎಂದು indianexpress.com ಶನಿವಾರ (ಡಿ.20) ವರದಿ...

ಎಸ್‌ಐಆರ್‌: ಸ್ಟಾಲಿನ್ ಅವರ ಕೊಳತ್ತೂರು ಕ್ಷೇತ್ರದಲ್ಲಿ 1 ಲಕ್ಷ ಮತದಾರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಡಿಲೀಟ್

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಕೊಳತ್ತೂರು ಕ್ಷೇತ್ರದಿಂದ 1,03,812 ಕ್ಕೂ ಹೆಚ್ಚು ಮತದಾರರ ಹೆಸರು ತೆಗೆದುಹಾಕಲಾಗಿದೆ. ಇದು ತಮಿಳುನಾಡಿನಲ್ಲಿ ರಾಜ್ಯಾದ್ಯಂತ ನಡೆದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಮತದಾರರ ಪಟ್ಟಿಯಲ್ಲಿನ ಅತಿದೊಡ್ಡ ಮತದಾರರ...

ಅಸ್ಸಾಂ : 15 ಮಂದಿಗೆ 24 ಗಂಟೆಯೊಳಗೆ ದೇಶ ತೊರೆಯಲು ಆದೇಶ : ಮಾಧ್ಯಮಗಳ ಮೂಲಕ ವಿಷಯ ತಿಳಿದುಕೊಂಡ ಕುಟುಂಬಸ್ಥರು

ಅಸ್ಸಾಂನ ನಾಗಾಂವ್ ಜಿಲ್ಲಾಡಳಿತವು 15 ಘೋಷಿತ ವಿದೇಶಿಯರಿಗೆ 24 ಗಂಟೆಗಳ ಒಳಗೆ ರಾಜ್ಯ ತೊರೆಯುವಂತೆ ಆದೇಶಿಸಿದ ಬಗ್ಗೆ ವರದಿಯಾಗಿದೆ. ಬುಧವಾರ (ಡಿ.17) ಜಿಲ್ಲಾಡಳಿತ ಈ ಆದೇಶ ನೀಡಿತ್ತು. ಆದರೆ, ಇದುವರೆಗೆ (ಡಿ.20) ಈ 15...