Homeಕರ್ನಾಟಕನಾಳೆ ಬೆಂಗಳೂರು, ಶುಕ್ರವಾರ ಅಖಂಡ ಕರ್ನಾಟಕ ಬಂದ್‌ಗೆ ಕರೆ: ಯಾವ ಸೌಲಭ್ಯ ಇರಲಿದೆ, ಏನಿರಲ್ಲ- ಮಾಹಿತಿ...

ನಾಳೆ ಬೆಂಗಳೂರು, ಶುಕ್ರವಾರ ಅಖಂಡ ಕರ್ನಾಟಕ ಬಂದ್‌ಗೆ ಕರೆ: ಯಾವ ಸೌಲಭ್ಯ ಇರಲಿದೆ, ಏನಿರಲ್ಲ- ಮಾಹಿತಿ ಇಲ್ಲಿದೆ…

- Advertisement -
- Advertisement -

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರುನಾಡಿನಲ್ಲಿ ಹೋರಾಟಗಳು ತೀವ್ರ ಸ್ವರೂಪಕ್ಕೆ ತಿರುಗಿದೆ. ಈಗಾಗಲೇ ಮಂಡ್ಯ ಮದ್ದೂರು ಬಂದ್ ಸಕ್ಸಸ್ ಆಗಿದ್ದು, ನಾಳೆ(ಸೆಪ್ಟೆಂಬರ್ 26) ರಾಜಧಾನಿ ಬೆಂಗಳೂರು ಬಂದ್​ಗೆ ಕರೆ ನೀಡಲಾಗಿದೆ. ಈ ಮಧ್ಯೆ ಸೆಪ್ಟೆಂಬರ್ 29 ರಂದು ಅಖಂಡ ಕರ್ನಾಟಕ ಬಂದ್  ಮಾಡಲು ತೀರ್ಮಾನಿಸಲಾಗಿದೆ.

ರವಿವಾರ ವಾಟಾಳ್ ನಾಗರಾಜ್ ಹಾಗೂ ಕರವೇ ಪ್ರವೀಣ್ ಶೆಟ್ಟಿ ಬಣದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಕರಾಳ ದಿನ ಅಂತಾ ಆಕ್ರೋಶ ಹೊರಹಾಕಲಾಯ್ತು. ಇದೇ ಪ್ರತಿಭಟನೆ ವೇಳೆಯೇ ವಾಟಾಳ್ ನಾಗರಾಜ್, ಶುಕ್ರವಾರ ಅಖಂಡ ಕರ್ನಾಟಕ ಬಂದ್ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಸೆಪ್ಟೆಂಬರ್ 29ಕ್ಕೆ ಕರೆ ನೀಡಲಾಗಿರುವ ಅಖಂಡ ಕರ್ನಾಟಕ ಬಂದ್ ಸಂಬಂಧ ಇಂದು(ಸೆ.25) ವಾಟಾಳ್ ನಾಗರಾಜ್ ಮತ್ತು ಕನ್ನಡ ಸಂಘಟನೆಗಳು ಮತ್ತೊಂದು ಸುತ್ತಿನ ಸಭೆ ನಡೆಸಿದವು. ಈ ಸಭೆಯಲ್ಲಿ ಹೋರಾಟದ ರೂಪುರೇಷೆ ನಿರ್ಧಾರ ಮಾಡಲಾಗಿದೆ.

ಇನ್ನು ಮಂಗಳವಾರ ನಡೆಯುವ ಬೆಂಗಳೂರು ಬಂದ್ ವಿಚಾರವಾಗಿ ರವಿವಾರ ಪ್ರತಿಕ್ರಿಯೆ ನೀಡಿದ್ದ ವಾಟಾಳ್ ನಾಗಾರಾಜ್, ”ಅವರಿಗೆ ಬಂದ್ ಮಾಡಿ ಅಂತಾನೂ ಹೇಳಲ್ಲ, ಬಿಡಿ ಅಂತಾನೂ ಹೇಳಲ್ಲ. ಒಟ್ಟಿನಲ್ಲಿ ಶುಕ್ರವಾರ ಕರ್ನಾಟಕ ಬಂದ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾವೇರಿ ನದಿ ನೀರು ಹಂಚಿಕೆ ವಿವಾದ: ಸೆ.26ಕ್ಕೆ ಬೆಂಗಳೂರು ಬಂದ್‌

ಮಂಗಳವಾರ ಬೆಂಗಳೂರು ಬಂದ್; ಯಾವ ಸೇವೆ ಇರತ್ತೆ, ಯಾವುದು ಇರಲ್ಲ…

ಸುಪ್ರೀಂ ಕೋರ್ಟ್‌ ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ಸ್‌ ನೀರು ಹರಿಸುವುದನ್ನು ಖಂಡಿಸಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಮಂಗಳವಾರದಂದು ಬೆಂಗಳೂರು ಬಂದ್‌ಗೆ ಕರೆ ನೀಡಿವೆ.

ನಾಳೆ ನಗರದ ಹಲವು ಕಾರ್ಯಕ್ರಮಗಳು ಸ್ಥಗಿತಗೊಳ್ಳುವ ನಿರೀಕ್ಷೆಯಿದೆ. ರಾಜ್ಯಾದ್ಯಂತ 175 ಕ್ಕೂ ಹೆಚ್ಚು ಗುಂಪುಗಳು ಬಂದ್‌ಗೆ ಬೆಂಬಲ ನೀಡಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸುವ ರೈತ ಸಂಘಟನೆಗಳನ್ನು ಬೆಂಬಲಿಸುವುದಾಗಿ ಹೇಳಿಕೊಂಡಿವೆ.

1. ಕ್ಯಾಬ್ ಸೇವೆಗಳು (ಓಲಾ, ಉಬರ್) ಇರಲ್ಲ: ಓಲಾ ಉಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಅವರು ಕಾವೇರಿ ಪರ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.

2. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ ಸೇವೆ ವ್ಯತ್ಯಯ: ಬೆಂಗಳೂರು ಬಂದ್‌ಗೆ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಬೆಂಬಲ ನೀಡಿದ್ದು, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಎರಡೂ ಸೇವೆಗಳು ಇರಲ್ಲ ಎಂದು ತಿಳಿದು ಬಂದಿದೆ.

3. ವಿಮಾನ ನಿಲ್ದಾಣ ಟ್ಯಾಕ್ಸಿ ಸೇವೆಗಳು ಇರುವುದಿಲ್ಲ ಎನ್ನಲಾಗಿದ್ದು, ಆದರೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಿಯಮಿತವಾದ ನಮ್ಮ ಮೆಟ್ರೋ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದೆ.

4. ಶಾಲಾ-ಕಾಲೇಜುಗಳಿಗೆ ರಜೆ: ಕಾವೇರಿ ಪರ ಕಪ್ಪು ಪಟ್ಟಿ ಕಟ್ಟಿಕೊಂಡು ಬೆಂಬಲ ಸೂಚಿಸುವುದಾಗಿ ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದು, ಹಲವು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿವೆ.

5. ರೆಸ್ಟೋರೆಂಟ್‌ಗಳು: ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳು ಬಂದ್‌ಗೆ ತಮ್ಮ ಬೆಂಬಲವನ್ನು ನೀಡಿವೆ ಮತ್ತು ಅವರು ತಮ್ಮ ಔಟ್‌ಲೆಟ್ ಅನ್ನು ಮುಚ್ಚುವುದಾಗಿ ಹೇಳಿವೆ. 6. ಆಸ್ಪತ್ರೆಗಳು: ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ಫಾರ್ಮಸಿಗಳು ಮತ್ತು ಸರ್ಕಾರಿ ಕಚೇರಿಗಳು ಅಗತ್ಯ ಸೇವೆಗಳಲ್ಲಿ ಲಭ್ಯವಿರುತ್ತವೆ. 7. ಚಿತ್ರಮಂದಿರಗಳು: ನಗರದಲ್ಲಿ ಚಿತ್ರಮಂದಿರಗಳು ಮುಚ್ಚುತ್ತವೆ.

ಯಾವ ಯಾವ ಸೇವೆ/ಸೌಲಭ್ಯ ಇರಲಿದೆ..

1 ಆಸ್ಪತ್ರೆ

2 ಮೆಡಿಕಲ್‌ ಶಾಪ್‌ಗಳು

3 ತರಕಾರಿ ಅಂಗಡಿಗಳು

4 ದಿನಸಿ ಅಂಗಡಿಗಳು

5 ಮೆಟ್ರೋ

6 ಅಂಚೆ ಕಚೇರಿ

ಲಭ್ಯವಿಲ್ಲದಿರುವ ಸೇವೆಗಳು:

1 ಸರ್ಕಾರಿ ಬಸ್‌, ಖಾಸಗಿ ಬಸ್‌

2 ಬಿಎಂಟಿಸಿ ಬಸ್‌

3 ಹೋಟೆಲ್‌ಗಳು

4 ಕೆಲವು ಕೈಗಾರಿಕೆಗಳು

5 ಶಾಲೆ, ಕಾಲೇಜು

6 ಐಟಿ ಕಂಪೆನಿಗಳು (ವರ್ಕ್‌ ಫ್ರಮ್‌ ಹೋಂ ಸಾಧ್ಯತೆ)

7 ಆಟೋ ರಿಕ್ಷಾ

8 ಕ್ಯಾಬ್‌ (ಓಲಾ, ಉಬರ್)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...