ಮುಂಬರುವ ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಿದ್ದತೆ ಆರಂಭಿಸಿದ್ದು, ಕರ್ನಾಟಕ ತೆಲಂಗಾಣದಂತೆ ಮೊದಲ ಗ್ಯಾರಂಟಿಯನ್ನೂ ಘೋಷಿಸಿದೆ.
ನಿನ್ನೆ(ಫೆ.26) ಅನಂತಪುರದಲ್ಲಿ ನಡೆದ ‘ನ್ಯಾಯ ಸಾಧನ ಸಭೆ’ ಎಂಬ ಬೃಹತ್ ಸಮಾವೇಶದಲ್ಲಿ ಪ್ರತಿ ಬಡ ಕುಟುಂಬಕ್ಕೆ ತಿಂಗಳಿಗೆ ರೂ 5,000 ಧನ ಸಹಾಯ ನೀಡುವ ಮೊದಲ ಗ್ಯಾರಂಟಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಿದ್ದಾರೆ.
𝐈𝐭'𝐬 𝐂𝐨𝐧𝐠𝐫𝐞𝐬𝐬' 𝐠𝐮𝐚𝐫𝐚𝐧𝐭𝐞𝐞!
ఆంధ్రప్రదేశ్లోని ప్రతి పేద కుటుంబానికి నెలకు ₹5,000 హామీ
Indiramma Universal Basic Income Support
✨ Rs. 5,000 per month to every poor family in Andhra Pradesh. ✨ pic.twitter.com/sZKDdQLtw8
— Congress For AndhraPradesh (@Congress4AP_) February 26, 2024
ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ಆಂಧ್ರ ಪ್ರದೇಶದಲ್ಲಿ ಪ್ರಸ್ತುತ ಪಕ್ಷ ನೆಲ ಕಚ್ಚಿದೆ. ಅದನ್ನು ಮತ್ತೆ ಬಲಪಡಿಸಲು ಕಾಂಗ್ರೆಸ್ ಪಣ ತೊಟ್ಟಿದ್ದು, ವಿಧಾನಸಭೆ ಚುನಾವಣೆಯ ಚಟುವಟಿಕೆಗಳು ಆರಂಭಗೊಳ್ಳುವ ಮುನ್ನವೇ ಗ್ಯಾರಂಟಿ ಘೋಷಿಸಿ ಬಹಳ ಉತ್ಸಾಹದಲ್ಲಿದೆ.
‘ಇಂದಿರಮ್ಮ ಸಾರ್ವತ್ರಿಕ ಮೂಲ ಆದಾಯ ಬೆಂಬಲ’ (Indiramma Universal Basic Income support) ಎಂಬ ಹೆಸರಿನಲ್ಲಿ ಪ್ರತಿ ತಿಂಗಳು ಮನೆಯ ಯಜಮಾನಿಯ ಖಾತೆಗೆ ನೇರವಾಗಿ 5 ಸಾವಿರ ರೂ. ಜಮೆ ಮಾಡುವುದಾಗಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. “ನಮ್ಮ ಗ್ಯಾರಂಟಿ ಮೋದಿಯವರ ಗ್ಯಾರಂಟಿಯಂತಲ್ಲ. ನಾವು ಭರವಸೆ ನೀಡುತ್ತೇವೆ ಮತ್ತು ಅದನ್ನು ಈಡೇರಿಸುತ್ತೇವೆ” ಎಂದು ಖರ್ಗೆ ಹೇಳಿದ್ದಾರೆ.
ಸಿಎಂ ಜಗನ್ ಮೋಹನ್ ರೆಡ್ಡಿಯವರ ಸಹೋದರಿ ವೈಎಸ್ ಶರ್ಮಿಳಾ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಅನಂತಪುರದಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಸಭೆಯನ್ನು ಕಾಂಗ್ರೆಸ್ ಆಯೋಜಿಸಿತ್ತು. ಆಂಧ್ರ ಪ್ರದೇಶದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಾಣಿಕ್ಕಂ ಟ್ಯಾಗೋರ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯ ಎನ್‌ವಿ ರಘುವೀರಾ ರೆಡ್ಡಿ ಮತ್ತು ಇತರ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಈ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ ಎಂದ ಮಲ್ಲಿಕಾರ್ಜುನ ಖರ್ಗೆ, ಸಮಾಜದ ಎಲ್ಲ ವರ್ಗದ ಜನರನ್ನು ಒಳಗೊಳ್ಳುವ ಅಭಿವೃದ್ಧಿ ಮಾಡುವುದಾಗಿ ಹೇಳಿದರು. “ಪ್ರಧಾನಿ ಮೋದಿ ಯಾವಾಗಲೂ ‘ಯೇ ತು ಮೋದಿ ಕಿ ಗ್ಯಾರಂಟಿ ಹೈ’ ಎಂದು ಹೇಳುತ್ತಾರೆ. ಮೋದಿಯವರ ಗ್ಯಾರಂಟಿ ಎಲ್ಲಿದೆ? ನಿಮ್ಮ ಬ್ಯಾಂಕ್ ಖಾತೆಗೆ 15 ಲಕ್ಷ ಹಣ ಬಂದಿದೆಯಾ? ರೈತರ ಆದಾಯ ದ್ವಿಗುಣಗೊಂಡಿದೆಯಾ? 2 ಕೋಟಿ ಉದ್ಯೋಗ ಒದಗಿಸಿದ್ದಾರಾ?” ಎಂದು ಖರ್ಗೆ ಪ್ರಶ್ನಿಸಿದರು.
PM Modi always says, "Yeh to Modi ki guarantee hai." Where is Modi's guarantee?
👉Have you received 15 lakhs in your bank accounts?
👉Have the farmers' incomes doubled?
👉Has he provided 2 crore jobs?: Congress President Shri @kharge
📍Ananthapuram
#NyayaSadhanaSabha pic.twitter.com/vXkWE7KLi5— Indian Youth Congress (@IYC) February 26, 2024
“ಪ್ರಧಾನಿ ಮೋದಿಯವರು ಯಾವಾಗಲೂ ನಮ್ಮ ಪಕ್ಷದ ಮೇಲೆ ಯಾಕೆ ದಾಳಿ ಮಾಡುತ್ತಾರೆ? ಅವರು ನಮ್ಮ ಶಾಸಕರು, ಸಂಸದರ ಮೇಲೆ ದಾಳಿ ಮಾಡಿ, ದುರುಪಯೋಗಪಡಿಸಿಕೊಳ್ಳುತ್ತಿರುವುದು ಮತ್ತು ಅವರನ್ನು ಖರೀದಿಸುತ್ತಿರುವುದು ಯಾಕೆ?” ಎಂದು ಖರ್ಗೆ ಕೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನದ ಪ್ರಕಾರ ‘ಪೋಲವರಂ’ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಕಾಂಗ್ರೆಸ್ ಆಡಳಿತಾವಧಿಯಲ್ಲಿಯೇ ಈ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಮುಖ್ಯಮಂತ್ರಿ ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್‌ಸಿಪಿ) ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ, ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ನಾಯಕ ಪವನ್ ಕಲ್ಯಾಣ್ ವಿರುದ್ಧ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.
“ಆಂಧ್ರಪ್ರದೇಶದಲ್ಲಿ ಬಿಜೆಪಿ ಇದೆ. ಬಿ ಫಾರ್ ಬಾಬು, ಜೆ ಫಾರ್ ಜಗನ್ ಮತ್ತು ಪಿ ಫಾರ್ ಪವನ್, ಅವರು ಮೋದಿ ‘ಜಿ’ಗೆ ಹೆದರಿ ಮತ್ತು ಜನರ ಹಿತವನ್ನು ಗೌರವಿಸದ ಕಾರಣ ಬಿಜೆಪಿಯೊಂದಿಗಿದ್ದಾರೆ” ಎಂದು ಹೇಳಿದರು
2014ರಲ್ಲಿ ಆಂಧ್ರ ಪ್ರದೇಶಕ್ಕೆ ನೀಡಿದ್ದ ಬದ್ಧತೆಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಪುನರುಚ್ಚರಿಸಿದೆ. ರಾಯಲಸೀಮಾ ಮತ್ತು ಉತ್ತರ ಆಂಧ್ರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ಗಳನ್ನು ನೀಡುವುದು, ದುಗರಾಜಪಟ್ಟಣಂ ಸಮುದ್ರ ಬಂದರು ನಿರ್ಮಾಣ, ಕಡಪ ಉಕ್ಕಿನ ಸ್ಥಾವರ ಇವುಗಳಲ್ಲಿ ಸೇರಿವೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ತೆಲಂಗಾಣ ನಂತರ ಆಂಧ್ರ ಪ್ರದೇಶವೂ ಕಾಂಗ್ರೆಸ್‌ನತ್ತ ಭರವಸೆಯಿಂದ ನೋಡುತ್ತಿದೆ” ಎಂದಿದ್ದಾರೆ.
INC President Sh. Mallikarjun @kharge ji addressed a massive Nyay Sadhana Sabha in Ananthapuram, Andhra Pradesh, where he launched the Indiramma Universal Basic Income of Rs. 5,000 for every poor family!
After Telangana, AP is also looking towards the Congress with hope and… pic.twitter.com/pQL2tqoqLP
— K C Venugopal (@kcvenugopalmp) February 26, 2024
ಈ ವರ್ಷದ ಮೇ ತಿಂಗಳಿಗಿಂತ ಮುನ್ನ ಆಂಧ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಇದೇ ಸಮಯದಲ್ಲಿ ಲೋಕಸಭೆ ಚುನಾವಣೆಯೂ ನಡೆಯಬಹುದು. ಆಂಧ್ರದಲ್ಲಿ ಈ ಬಾರಿ ವೈಎಸ್‌ಆರ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ನಡೆಯು ನಿರೀಕ್ಷೆಯಿದೆ.
ಇದನ್ನೂ ಓದಿ : ಲೋಕಸಭಾ ಚುನಾವಣೆ: ಕರ್ನಾಟಕದಿಂದ ಸ್ಪರ್ಧಿಸುತ್ತಾರಾ ಕೇಂದ್ರ ಸಚಿವರಾದ ಜೈಶಂಕರ್, ಸೀತಾರಾಮನ್?


