ಕೊರೊನಾ ಸಾಂಕ್ರಾಮಿಕ ರೋಗದ ನಡುವೆ ಜನರ ಸಹಾಯಕ್ಕೆ ನಿಂತ ಕೊರೊನಾ ವಾರಿಯರ್ಸ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ವಿಶೇಷ ಗೌರವ ಸಲ್ಲಿಸುತ್ತಿದೆ. ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ತಮ್ಮ ತಮ್ಮ ಹೆಸರಿಗೆ ಬದಲಾಗಿ ಕೊರೊನಾ ವಾರಿಯರ್ಸ್ ಹೆಸರಿರುವ ಜೆರ್ಸಿಗಳನ್ನು ತೊಟ್ಟು ಕಣಕ್ಕಿಳಿದಿದ್ದಾರೆ.
ಆರ್‌ಸಿಬಿ ತಂಡ ಈ ಬಾರಿಯ ಐಪಿಎಲ್ ಪ್ರಾರಂಭವಾಗುವ ಮೊದಲೇ, ಕೊರೊನಾ ಯೋಧರ ಶ್ರಮ ಮತ್ತು ತ್ಯಾಗವನ್ನು ಗೌರವಿಸುವುದಾಗಿ ಘೋಷಿಸಿತ್ತು. ಹಾಗೇಯೇ ತರಬೇತಿ ಸಮಯದಲ್ಲಿ ಮತ್ತು ಪಂದ್ಯಗಳ ಸಮಯದಲ್ಲೂ ತಮ್ಮ ಜರ್ಸಿಯ ಹಿಂಭಾಗದಲ್ಲಿ ‘ಮೈ ಕೋವಿಡ್ ಹೀರೋಸ್’ ಎಂಬ ಸಾಲುಗಳು ಇರಲಿವೆ ಎಂದು ಆರ್‌ಸಿಬಿ ಹೇಳಿತ್ತು.
ಇದನ್ನೂ ಓದಿ: ಕ್ರಿಕೆಟ್ ದಕ್ಷಿಣ ಆಫ್ರಿಕಾವನ್ನು ಅಮಾನತು ಮಾಡಿದ ದಕ್ಷಿಣ ಆಫ್ರಿಕಾ ಸರ್ಕಾರ
ಆರ್‌ಸಿಬಿ ಅಭಿಯಾನದ ಭಾಗವಾಗಿ ಸ್ಪೋಟಕ ಬ್ಯಾಟ್ಸ್‌ಮನ್ ಎಬಿಡಿ ಕೊರೊನಾ ವಾರಿಯರ್ ಪಾರಿತೋಶ್ ಪಂತ್ ಜೊತೆ ಮಾತನಾಡಿ ಅವರ ಕೆಲಸವನ್ನು ಗೌರವಿಸಲು, ತಮ್ಮ ಜರ್ಸಿ ಮೇಲೆ ಪಾರಿತೋಶ್ ಎಂದು ಮತ್ತು ತಮ್ಮ ಟ್ವಿಟ್ಟರ್ ಖಾತೆ, ಇನ್ಸ್‌ಸ್ಟ್ರಾಗ್ರಾಮ್ ಖಾತೆಯ ಹೆಸರನ್ನು ಪಾರಿತೋಷ್ ಪಂತ್ ಎಂದು ಬದಲಿಸಿದ್ದಾರೆ.

29 ವರ್ಷದ ಪಾರಿತೋಶ್ ಪಂತ್ ಮುಂಬೈನಲ್ಲಿ ಬಾರ್ಬಿಕ್ಯೂ ಕೆಫೆ ನಡೆಸುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ಫೀಡಿಂಗ್ ಫ್ರಮ್ ಫಾರ್ ಮೂಲಕ ಬಡವರಿಗೆ ಮತ್ತು ಕೊರೊನಾದಿಂದ ಕೆಲಸ ಕಳೆದುಕೊಂಡ ಸಾವಿರಾರು ನಿರುದ್ಯೋಗಿಗಳಿಗೆ ಆಹಾರ ಒದಗಿಸಿದ್ದರು. ಇವರಿಗೆ ಗೌರವ ಸಲ್ಲಿಸಲು ಎಬಿಡಿ ತಮ್ಮ ಜರ್ಸಿ ಮೇಲೆ ಪಾರಿತೋಶ್ ಎಂದು ಬದಲಿಸಿದ್ದಾರೆ. ಜೊತೆಗೆ ಜರ್ಸಿ ಧರಿಸಿದ ಪೋಟೋ ಮತ್ತು ಪಾರಿತೋಶ್‌ಗೆ ಗೌರವ ಸಲ್ಲಿಸುವ ಸಾಲುಗಳನ್ನು ಬರೆದು ಟ್ವೀಟ್ ಮಾಡಿದ್ದಾರೆ
I salute Paritosh,who started ‘Project Feeding from Far’ with Pooja & fed meals 2 needy during the lockdown. I wear his name on my back this season 2 appreciate their challenger spirit
Share your #MyCovidHeroes story with us#WeAreChallengers #RealChallengers#ChallengeAccepted
— Paritosh Pant (@ABdeVilliers17) September 20, 2020

(ಕೊರೊನಾ ವಾರಿಯರ್ ಪಾರಿತೋಶ್ ಪಂತ್)
ಇದನ್ನೂ ಓದಿ: ಬ್ಯಾಟ್ಸ್‌ಮನ್ ಎಬಿಡಿ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ ಕೆಫೆ ಮಾಲೀಕ ಪಾರಿತೋಶ್ ಪಂತ್ ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.
Thank you so much @ABdeVilliers17 ❤️
The journey from bringing an idea to reality and now THIS. To constantly see the world believing in you is heartening TBH
Still can't thank enough the off & on ground volunteers, donors, well-wishers of @FeedingFromFar. We've made it guys ❤️ https://t.co/fZMie913yE
— Paritosh Pant (@pantparitosh) September 21, 2020
’ಈ ತಿಂಗಳ ಆರಂಭದಲ್ಲಿ ನಾನು ಎಬಿಡಿ ಅವರ ಜೊತೆಗೆ ವಿಡಿಯೋ ಮುಖಾಂತರ ಮಾತನಾಡಿದೆ. ಅವರು ನಮ್ಮ ಕೆಲಸವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ನಾವು ಮಾಡಿದ ಕೆಲಸವನ್ನು ವಿವರವಾಗಿ ಕೇಳಿದರು’ ಎಂದು ಪಾರಿತೋಶ್ ದಿ ಟೆಲಿಗ್ರಾಫ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ನೌಕಾಪಡೆಯ ಐತಿಹಾಸಿಕ ಕ್ರಮ: ಯುದ್ಧನೌಕೆಗೆ ಮಹಿಳಾ ಅಧಿಕಾರಿಗಳ ನಿಯೋಜನೆ
ನಮ್ಮ ಕೆಲಸದಲ್ಲಿ ಬಂದ ಸವಾಲುಗಳ ಬಗ್ಗೆ , ಅವುಗಳನ್ನು ನಾವು ಎದುರಿಸಿದ ಬಗ್ಗೆ ಕೇಳಿದರು. ನಾನು ಮತ್ತು ನಮ್ಮ ವಾಲೆಂಟಿಯರ್ಸ್ ಗೋವಂಡಿ ಕೊಳೆಗೆರಿಯಲ್ಲಿ ಕೆಲಸ ಮಾಡಿದ ರೀತಿಯನ್ನು ವಿವರಿಸಿದೆ. ಎಲ್ಲವನ್ನು ಕೇಳಿದ ಎಬಿಡಿ ನಿಮ್ಮ ಕಾರ್ಯ ಸ್ಪೂರ್ತಿದಾಯಕ ಮತ್ತು ಅದ್ಭುತ ಎಂದರು ಎಂದು ಪಾರಿತೋಶ್ ವಿವರಿಸಿದ್ದಾರೆ.
ಇನ್ನು ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಶ್ರವಣದೋಷಿಯಾಗಿದ್ದರೂ ಜನರ ನೆರವಿಗಾಗಿ ನಿಂತ ಸಿಮ್ರನ್‌ಜೀತ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಸಿಮ್ರನ್‌ಜೀತ್ ಎಂಬ ಜರ್ಸಿ ತೊಟ್ಟು ಪಂದ್ಯ ಆಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯ ಹೆಸರನ್ನು ಸಿಮ್ರನ್‌ಜೀತ್ ಸಿಂಗ್ ಎಂದು ಬದಲಿಸಿದ್ದರು.

ಸಿಮ್ರನ್‌ಜೀತ್ ಸಿಂಗ್ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದವರಿಗಾಗಿ ದೇಣಿಗೆ ಸಂಗ್ರಹಿಸಿದ್ದರು. ತಮ್ಮ ಇತರ ಶ್ರವಣದೋಷಿ ಸ್ನೇಹಿತರ ಜೊತೆಗೂಡಿ 98 ಸಾವಿರ ದೇಣಿಗೆ ಸಂಗ್ರಹಿಸಿ ಬಡವರಿಗೆ ನೆರವಾಗಿದ್ದರು ಎಂದು ಆರ್‌ಸಿಬಿ ಹೇಳಿದೆ.
ಆರ್‌ಸಿಬಿಯು ಈ ಬಾರಿಯ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು 10 ರನ್‌ಗಳಿಂದ ಜಯಿಸಿದೆ.


