Homeದಿಟನಾಗರಫ್ಯಾಕ್ಟ್‌ಚೆಕ್: ಎಡಿಟೆಡ್‌ ವಿಡಿಯೋ ಹಂಚಿದ ಮಧ್ಯಪ್ರದೇಶ ಕಾಂಗ್ರೆಸ್‌!

ಫ್ಯಾಕ್ಟ್‌ಚೆಕ್: ಎಡಿಟೆಡ್‌ ವಿಡಿಯೋ ಹಂಚಿದ ಮಧ್ಯಪ್ರದೇಶ ಕಾಂಗ್ರೆಸ್‌!

ಮಧ್ಯಪ್ರದೇಶದ ಜನರು ಕಾಂಗ್ರೆಸಿನ ಕಮಲ್‌ನಾಥ್‌ ಅವರ ಪರವಾಗಿದ್ದಾರೆ ಎಂದು ಈ ವೈರಲ್ ವಿಡಿಯೋ ಮೂಲಕ ಉಲ್ಲೇಖಿಸಲಾಗಿತ್ತು.

- Advertisement -
- Advertisement -

ಮಧ್ಯಪ್ರದೇಶ ಕಾಂಗ್ರೆಸ್‌, ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ರಾಜ್ಯದ ಮುಖ್ಯಮಂತ್ರಿ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾನ್ ಅವರ ವಿಡಿಯೋವನ್ನು ಹಂಚಿಕೊಂಡಿದೆ. ಅದರಲ್ಲಿ ಶಿವರಾಜ್ ತಾನು ಹಾಗೂ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್,‌ ಈ ಇಬ್ಬರಲ್ಲಿ ಮುಖ್ಯಮಂತ್ರಿಯಾಗಿ ಯಾರು ಉತ್ತಮ ಎಂದು ಸಾರ್ವಜನಿಕರಲ್ಲಿ ಕೇಳಿದ್ದು, ಆಗ ಜನಸಮೂಹವು ಕಮಲ್ ನಾಥ್ ಅವರ ಹೆಸರನ್ನು ಹೇಳುತ್ತಿರುವಂತೆ ತೋರಿಸಲಾಗಿದೆ.

ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯ ಹಿನ್ನಲೆಯಲ್ಲಿ ಈ ವಿಡಿಯೋವನ್ನು ಕಾಂಗ್ರೆಸ್‌ ಅಪ್ಲೋಡ್ ಮಾಡಿದ್ದು, ರಾಜ್ಯದಲ್ಲಿ ಜನರು ಕಮಲ್‌ನಾಥ್‌ ಅವರ ಪರವಾಗಿದ್ದಾರೆ ಎಂದು ಈ ವಿಡಿಯೋ ಮೂಲಕ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ನಟ ಅಮಿತಾಬ್ ಬಚ್ಚನ್‌ ದಾವೂದ್ ಇಬ್ರಾಹಿಂನನ್ನು ಭೇಟಿ ಆಗಿದ್ದು ನಿಜವೆ?

ಮಧ್ಯಪ್ರದೇಶ ಕಾಂಗ್ರೆಸ್‌ನ ಟ್ವಿಟ್ಟರ್‌ ಹ್ಯಾಂಡಲ್ ಹಂಚಿಕೊಂಡಿರುವ ಈ ವಿಡಿಯೋ ತುಣುಕನ್ನು ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದಾರೆ.

ಇದರ ಆರ್ಕೈವ್ ಇಲ್ಲಿದೆ.

ಅಲ್ಲದೆ, ವೀಡಿಯೊ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಒಂದೇ ರೀತಿಯ ಪ್ರತಿಪಾದನೆಯೊಂದಿಗೆ ಹರಿದಾಡುತ್ತಿದೆ.

ಇದರ ಆರ್ಕೈವ್ ಇಲ್ಲಿದೆ.

ಫ್ಯಾಕ್ಟ್‌‌ಚೆಕ್

ಸೆಪ್ಟೆಂಬರ್ 20 ರಂದು ಮಾಂಡ್‌ಸೌರ್‌ನ ಸೀತಾಮೌದಲ್ಲಿ ಶಿವರಾಜ್ ಸಿಂಗ್ ಚೌಹಾನ್ ಅವರ ಭಾಷಣದ ಲೈವ್ ಸ್ಟ್ರೀಮ್‌‌ನಿಂದ ಈ ವಿಡಿಯೋವನ್ನು ಎತ್ತಿಕೊಳ್ಳಲಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಮುಸ್ಲಿಂ ಮದುವೆಯಲ್ಲಿ ಪಾಲ್ಗೊಂಡಿದ್ದಕ್ಕೆ ಕೇರಳದ RSS ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಯಿತೇ?

ಈ ವಿಡಿಯೋದ 34:26 ನಿಮಿಷಗಳಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಗಳಲ್ಲಿ ಯಾರು ಉತ್ತಮ ಮುಖ್ಯಮಂತ್ರಿ ಎಂದು ಶಿವರಾಜ್ ಚವಾನ್ ಕೇಳುತ್ತಾರೆ. ಆಗ ಪ್ರೇಕ್ಷಕರು “ಶಿವರಾಜ್” ಎಂದು ಹೇಳುವುದನ್ನು ಕೇಳಬಹುದು.

ಅಷ್ಟೇ ಅಲ್ಲದೆ, ಅವರು ಮತ್ತೆ ಸಾರ್ವಜನಿಕರೊಂದಿಗೆ ಹೆಸರನ್ನು ಜೋರಾಗಿ ಹೇಳುವಂತೆ ಕೇಳುತ್ತಾರೆ, ಆಗ ಕೂಡಾ ಸಭಿಕರು ಶಿವರಾಜ್ ಅವರ ಹೆಸರನ್ನೇ ಹೇಳುತ್ತಾರೆಯೆ ಹೊರತು ಕಾಂಗ್ರೆಸ್‌ನ ಟ್ವಿಟ್ಟರ್‌ ಹ್ಯಾಂಡಲ್ ಹಂಚಿದಂತೆ ಕಮಲ್‌‌ನಾಥ್‌ ಅವರ ಹೆಸರನ್ನಲ್ಲ.

ವೈರಲ್ ವೀಡಿಯೊದಲ್ಲಿ, ‘ಕಮಲ್ ನಾಥ್’ ಹೆಸರು ಸ್ಪಷ್ಟವಾಗಿ ಕೇಳಬಹುದಾದರೂ, ಬಿಜೆಪಿ ಪ್ರಸಾರ ಮಾಡಿರುವ ಲೈವ್ ಸ್ಟ್ರೀಮ್‌ನಲ್ಲಿ, ‘ಕಮಲ್ ನಾಥ್’ ಹೆಸರು ಕೇಳಿಬಂದಿಲ್ಲ.

ಈ ಬಗ್ಗೆ ಬಿಜೆಪಿಯ ಟ್ವಿಟರ್ ಹ್ಯಾಂಡಲ್‌, ರಾಜ್ಯದ ಕಾಂಗ್ರೆಸ್ ಹ್ಯಾಂಡಲ್‌ನ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ಮೂಲ ವಿಡಿಯೋವನ್ನು ಹಂಚಿಕೊಂಡಿದೆ.

ಒಟ್ಟಿನಲ್ಲಿ, ಮಧ್ಯಪ್ರದೇಶ ಕಾಂಗ್ರೆಸ್ ಎಡಿಟ್ ಮಾಡಿರುವ ವಿಡಿಯೋವನ್ನು ತನ್ನ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ  ಹಂಚಿಕೊಂಡಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ವೈರಲ್ ಚಿತ್ರದಲ್ಲಿರುವ ಮಹಿಳೆ ’ಲವ್‌ ಜಿಹಾದ್’ ಪ್ರಕರಣದಲ್ಲಿ ಹತ್ಯೆ ಆಗಿದ್ದು ನಿಜವೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...