ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ಚಿತ್ರೋದ್ಯಮವನ್ನು ಗುರಿಯಾಗಿಸಿಕೊಂಡಿರುವ ಬಲಪಂಥೀಯ ಗುಂಪುಗಳು, ನಟ ಅಮಿತಾಬ್ ಬಚ್ಚನ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿದ್ದಾರೆ ಎಂದು ಪ್ರತಿಪಾದಿಸಿ ಫೋಟೋವೊಂದನ್ನು ವೈರಲ್ ಮಾಡಿದ್ದಾರೆ.
ಡ್ರಗ್ಸ್ ವಿಚಾರದಲ್ಲಿ ಬಾಲಿವುಡ್ ಚಿತ್ರೋದ್ಯಮವನ್ನು ಗುರಿಯಾಗಿಸಿಕೊಂಡಿರುವುದರ ವಿರುದ್ದ, ಸಂಸತ್ತಿನಲ್ಲಿ ಜಯ ಬಚ್ಚನ್ ಭಾಷಣ ಮಾಡಿದ ನಂತರ ಇದು ವೈರಲಾಗಿದ್ದು, ಹಲವಾರು ಸಾಮಾಜಿಕ ಜಾಲತಾಣದ ಬಳಕೆದಾರರು ಇದನ್ನು ಹಂಚಿಕೊಂಡಿದ್ದಾರೆ.
ಸ್ಪ್ರೀಹಾ ರಾಯ್ ಚೌದರಿ ಎನ್ನುವವರು, “ಅಮಿತಾಬ್ ಅವರೊಂದಿಗೆ ಇರುವುದು ಯಾರು? ಯಾರು ಇದು ದಾವೂದ್ ಇಬ್ರಾಹಿಂ ಅಲ್ಲ ಎಂದು ಬೊಬ್ಬೆ ಹೊಡೆಯುತ್ತೀರೋ ಅವರು ತಮ್ಮ ಸ್ವಂತ ಮೊಬೈಲ್ ಮೂಲಕ ಗೂಗಲ್‌ನಲ್ಲಿ ಹುಡುಕಿ” ಎಂದು ಬರೆದಿದ್ದರು.
ಇದನ್ನೂ ಓದಿ: ಕಂಗನಾ ರಾಣಾವತ್ ಚುನಾವಣೆಯಲ್ಲಿ ಬಲವಂತವಾಗಿ ಶಿವಸೇನೆಗೆ ಮತ ಚಲಾಯಿಸಿದರೆ?

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಕಾಳಿ ದೇವಿಯ ಮೂರ್ತಿ ಸುಟ್ಟರೆ?

ಫ್ಯಾಕ್ಟ್‌ಚೆಕ್
ವೈರಲಾಗುತ್ತಿರುವ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಇದು 2010 ರಲ್ಲಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಚಿತ್ರ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಪತ್ರಿಕೆಯು, “ರಾಜೀವ್ ಗಾಂಧಿ ಸೀ ಲಿಂಕ್‌ನ ಆಯೋಗದ ಸಮಾರಂಭದಲ್ಲಿ ಅಮಿತಾನ್ ಬಚ್ಚನ್ ಅವರೊಂದಿಗೆ ಅಶೋಕ್ ಚವಾಣ್” ಎಂದು ಅಡಿ ಬರಹ ನೀಡಿದೆ. ಇದನ್ನು ಪಿಟಿಐ ಕ್ಲಿಕ್ಕಿಸಿದೆ. ಅಶೋಕ್ ಚವಾಣ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ.

ಅಷ್ಟೇ ಅಲ್ಲದೆ ಪಿಟಿಐ ಆರ್ಕೈವ್‌ಗಳಲ್ಲಿ ಕೂಡಾ ಇದನ್ನು ಕಾಣಬಹುದಾಗಿದೆ.
ಇಷ್ಟೇ ಅಲ್ಲದೆ, ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಕೂಡ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಸ್ಫಷ್ಟೀಕರಣ ನೀಡಿ, ಈ ಚಿತ್ರದಲ್ಲಿ ತನ್ನ ತಂದೆಯ ಜೊತೆ ಇರುವುದು ಅಶೋಕ್ ಚವಾಣ್, ದಾವೂದ್ ಇಬ್ರಾಹಿಂ ಅಲ್ಲ ಎಂದು ಹೇಳಿದ್ದಾರೆ.
भईसाहब, यह फ़ोटो मेरे पिताजी और महाराष्ट्र के पूर्व मुख्य मंत्री श्री अशोक शंकरराव चव्हाण की हैं।
🙏🏽— Abhishek Bachchan (@juniorbachchan) September 18, 2020
ಸಂಸತ್ತಿನಲ್ಲಿ ಜಯ ಬಚ್ಚನ್ ಅವರ ಭಾಷಣದ ಹಿನ್ನೆಲೆಯಲ್ಲಿ ಹಳೆಯ, ಸಂಬಂಧವಿಲ್ಲದ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಚಿತ್ರದಲ್ಲಿ ಇರುವುದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಆಗಿದ್ದಾರೆಯೆ ವಿನಃ ದಾವೂದ್ ಇಬ್ರಾಹಿಂ ಅಲ್ಲ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜಿಡಿಪಿ ಪಾತಾಳದಲ್ಲಿದ್ದರೂ ಸುಳ್ಳು ಹೇಳುತ್ತಿರುವ ಕರ್ನಾಟಕ ಬಿಜೆಪಿ